ಮದುವೆಯಾದ ಎರಡೇ ದಿನಕ್ಕೆ ಪತ್ನಿ ಬಗ್ಗೆ ಮನೋರಂಜನ್ ಆಡಿದ ಮಾತು ನೋಡಿ..

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೊದಲನೇ ಮಗ ನಟ ಮನೋರಂಜನ್ ಸಧ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಕ್ರೇಜಿ ಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.. ಹೌದು ಕಳೆದ ಮೂರು ವರ್ಷಗಳ ಹಿಂದೆ ಮಗಳು ಗೀತಾಂಜಲಿ ಮದುವೆಯನ್ನು ಅದ್ಧೂರಿಯಾಗಿ ಯಾರೂ ಮಾಡಿರದಂತೆ ಮಾಡಿದ್ದ ರವಿಚಂದ್ರನ್ ಅವರು ಮಗನ ಮದುವೆಯನ್ನು ಹುಡುಗಿಯ ಕುಟುಂಬಕ್ಕೆ ಹೊರೆಯಾಗದಂತೆ ಸರಳವಾಗಿ ಮಾಡಿ ಮುಗಿಸಿದ್ದಾರೆ.. ಇನ್ನು ಸಿನಿಮಾ ಮಂದಿ ಸ್ನೇಹಿತರಿಗಾಗಿ ಪ್ರತ್ಯೇಕವಾಗಿ ಅರತಕ್ಷತೆ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದು ರವಿಚಂದ್ರನ್ ಅವರ ಎಲ್ಲಾ ಆಪ್ತರು.. ಸ್ಯಾಂಡಲ್ವುಡ್ ನ ಬಹುತೇಕ ಎಲ್ಲಾ ಕಲಾವಿದರು ತಂತ್ರಜ್ಞರು ಆಗಮಿಸಿ ಮನೋರಂಜನ್ ದಂಪತಿಗೆ ಶುಭ ಹಾರೈಸಿದರು.. ಇನ್ನೂ ಮನೋರಂಜನ್ ಅವರು ಕೈ ಹಿಡಿದ ಹೆಣ್ಣು ಮಗಳ ಹೆಸರು ಸಂಗೀತಾ.. ವೈದ್ಯಕೀಯ ಸಂಬಂಧಪಟ್ಟ ಪದವಿ ವ್ಯಾಸಂಗ ಮಾಡಿದ್ದು ತಮ್ಮದೇ ಆದ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದಾರೆ.. ಸಧ್ಯ ಇದೀಗ ಮನೋರಂಜನ್ ಕೈಹಿಡಿದಿದ್ದು ಹೊಸ ಜೀವನ ಆರಂಭಿಸಿದ್ದಾರೆ..

ಇತ್ತ ಮದುವೆಯಾದ ಕೆಲ ದಿನಗಳ ಬಳಿಕ ಮಡದಿ ಸಂಗೀತಾ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ ಮನೋರಂಜನ್.. ಹೌದು ಸಾಮಾನ್ಯವಾಗಿ ಹೆಚ್ಚು ಮಾತನಾಡದ ಮನೋರಂಜನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಡದಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದು ಅಭಿಮಾನಿಗಳು ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.. ಹೌದು ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಕಳೆದ ಕೆಲವು ದಿನಗಳಿಂದ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಸ್ವತ: ರವಿಚಂದ್ರನ್ ಪುತ್ರನ ಮದುವೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು.

ಎರಡು ದಿನ ಕ್ರೇಜಿ ಪುತ್ರ ಮನೋರಂಜನ್ ಮದುವೆ ನಡೆಯುತ್ತಿದೆ. ಆಗಸ್ಟ್ 20ರಂದು ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಆಗಸ್ಟ್ 21 ಮನೋರಂಜನ್ ರವಿಚಂದ್ರನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತಾರೊಂದಿಗೆ ಹೊಸ ಜೀವನ ಆರಂಭ ಆಗಿದೆ. ಆಗಸ್ಟ್ 20 ನಡೆದಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ಡಾ. ಶಿವರಾಜ್‌ಕುಮಾರ್, ಅಕುಲ್ ಬಾಲಾಜಿ, ರಾಘವೇಂದ್ರ ರಾಜ್‌ಕುಮಾರ್, ಹಂಸಲೇಖ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಿದ್ದರು. ಇಂದು ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಮನೋರಂಜನ್ ಹಾಗೂ ಸಂಗೀತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪತ್ನಿ ಬಗ್ಗೆ ಮನೋರಂಜನ್ ಪೋಸ್ಟ್.. ನಟ ಮನೋರಂಜನ್ ವೈವಾಹಿಕ ಬಾಳಿಗೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕ ಮನೋರಂಜನ್ ಟ್ವಿಟ್ಟರ್‌ನಲ್ಲಿ ಮದುವೆ ವಿಡಿಯೋವನ್ನು ಹಂಚಿಕೊಂಡಿದ್ದರು. ಈಗ ತಮ್ಮ ಪತ್ನಿ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಫೋಟೊ ಹಂಚಿಕೊಂಡ ಮನೋರಂಜನ್, ನಮ್ಮ ಕಥೆ ಈಗಷ್ಟೇ ಪ್ರಾರಂಭವಾಗಿದೆ… ಪ್ರೀತಿ, ನಗು, ಸಂತಸ ಇನ್ನು ಮುಂದೆ ಎಂದೆಂದಿಗೂ ಎಂದು ಬರೆದುಕೊಂಡಿದ್ದಾರೆ.

ಮನೋರಂಜನ್ ಮನೆಯಲ್ಲಿ ಹುಡುಕಿದ ಹುಡುಗಿಯನ್ನೇ ಮದುವೆಯಾಗಿದ್ದಾರೆ. ಕೆಲವು ದಿನಗಳ ಹಿಂದೆನೇ ರವಿಚಂದ್ರನ್ ದಂಪತಿ ಮನೋರಂಜನ್‌ಗೆ ಹುಡುಗಿ ಹುಡುಕಿದ್ದರು. ಕಳೆದ ವರ್ಷವೇ ಮನೋರಂಜನ್ ಮದುವೆ ನಡೆಯುತ್ತೆ ಅನ್ನೋ ಮಾತು ಕೂಡ ಕೇಳಿ ಬಂದಿತ್ತು. ಆದರೆ, ಹೆಚ್ಚು ಕಡಿಮೆ ಒಂದು ವರ್ಷ ತಡವಾಗಿ ಮದುವೆಯಾಗಿದ್ದಾರೆ. ಅರೇಂಜ್ಡ್ ಮ್ಯಾರೇಜ್ ಆಗಿದ್ದರೂ, ಒಬ್ಬರನ್ನೊಬ್ಬರು ಅರಿತುಕೊಂಡ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಂಗೀತಾ ಕೈ ಹಿಡಿದ ಮನೋರಂಜನ್.. ಮನೋರಂಜನ್ ಮದುವೆಯಾಗಿರುವ ಹುಡುಗಿ ಸಂಗೀತಾ ದೂರದ ಸಂಬಂಧಿ. ಮನೆಯವರೇ ನೋಡಿ ಇಬ್ಬರ ಮದುವೆ ನಿಶ್ಚಯ ಮಾಡಿದ್ದರು. ಅವರ ಇಚ್ಚೆಯಂತೆ ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹುಡುಗಿ ಒಪ್ಪಿಗೆಯಾದ ಬಳಿಕ ಮನೋರಂಜನ್ ಮದುವೆ ಸ್ವಲ್ಪ ಸಮಯ ತೆಗೆದುಕೊಂಡಿದ್ದರು. ಸಿನಿಮಾರಂಗದಲ್ಲಿ ಇರೋದ್ರಿಂದ ಅವರಿಗೆ ಅರ್ಥ ಮಾಡಿಕೊಳ್ಳಲು ಸಮಯ ನೀಡಿದ್ರು. ಅವರಿಗೂ ಮನೋರಂಜನ್ ಓಕೆ ಅಂತ ಅನಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಗಸ್ಟ್ 21 ಮನೋರಂಜನ್ ಹಾಗೂ ದೀಪಿಕಾ ಜೋಡಿಯ ರಿಸೆಪ್ಷನ್ ಬಹಳ ಅದ್ಧೂರಿಯಾಗಿ ನೆರವೇರಿದೆ. ವೇದಿಕೆಯಲ್ಲಿ ಮನೋರಂಜನ್ ಕಪ್ಪು ಬಣ್ಣದ ಸೂಟ್‌ ಧರಿಸಿದ್ರೆ, ದೀಪಿಕಾ ಪಿಂಕ್‌ ಕಲರ್ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಶಿವರಾಜ್‌ಕುಮಾರ್ ದಂಪತಿ, ರಾಘವೇಂದ್ರ ರಾಜ್‌ಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ ದಂಪತಿ, ಬಹುಭಾಷಾ ನಟಿ ಖುಷ್ಬೂ, ನಿರೂಪಕ, ನಟ ಮಾಸ್ಟರ್ ಆನಂದ್, ನಿರೂಪಕ ಅಕುಲ್ ಬಾಲಾಜಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ನಾಗಾಭರಣ, ಹಿರಿಯ ನಟ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಉಮಾಶ್ರೀ, ನಿರ್ಮಾಪಕ ಕೆ. ಮಂಜು, ಬಿಜೆಪಿ ಹಿರಿಯ ಮುಖಂಡ ಕಟ್ಟಾ ಸುಬ್ರಮಣ್ಯ ನಾಯ್ಡು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಸೇರಿದಂತೆ ಸಾಕಷ್ಟು ಗಣ್ಯರು ರಿಸೆಪ್ಷನ್‌ನಲ್ಲಿ ಭಾಗಿಯಾಗಿದ್ದರು. ಇಂದು ಇರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಮನೋರಂಜನ್ ಹಾಗೂ ಸಂಗೀತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಮಗನ ಮದುವೆಯನ್ನು ಸಿಂಪಲ್ ಆಗಿ ಮಾಡುವ ಬಗ್ಗೆ ಈ ಹಿಂದೆ ಹಲವು ಬಾರಿ ಮಾತಾಡಿದ್ದರು. ಅದರಂತೆ ಹೆಚ್ಚು ಆಡಂಬರವಿಲ್ಲದೆ ಮದುವೆ ಮಾಡಿದ್ದಾರೆ. ಬೆಂಗಳೂರಿನ ಪ್ಯಾಲೇಜ್‌ ಗ್ರೌಂಡ್‌ನಲ್ಲಿ ಸರಳವಾಗಿ ಮನೋರಂಜನ್ ರವಿಚಂದ್ರನ್ ವೈವಾಹಿಕ ಜೀವನಕ್ಕೆ ಇಂದು ಕಾಲಿಟ್ಟಿದ್ದಾರೆ. ಕೆಲವು ವರ್ಷಗಳ ಹಿಂದಷ್ಟೇ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಆದರೆ, ಸೊಸೆ ಮನೆಯವರಿಗೆ ಆಡಂಬರ ಇಷ್ಟವಿಲ್ಲದ ಕಾರಣ ಸಿಂಪಲ್ ಮದುವೆಗೆ ಮುಂದಾಗಿರೋದಾಗಿ ತಿಳಿಸಿದ್ದರು. ಸಿಂಪಲ್ ಆಗಿದ್ದರೂ, ಕಣ್ಣಿಗೆ ಖುಷಿ ಕೊಡುವ ಹಾಗೆ ಮಗನ ಮದುವೆ ಮಾಡಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಮನೋರಂಜನ್ ಕೆಲವು ದಿನ ಸಿನಿಮಾಗೆ ಬ್ರೇಕ್ ನೀಡುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ಮನೋರಂಜನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರಲ್ಲಿ ಒಂದು ಸಿನಿಮಾವನ್ನು ತಮ್ಮ ವಿಕ್ರಮ್ ಮನೋರಂಜನ್ ಅವರೇ ಹ್ಯಾಂಡಲ್ ಮಾಡಲಿದ್ದಾರೆ. ಹೀಗಾಗಿ ವಿವಾಹದ ಬಳಿಕ ಮತ್ತೆ ಎರಡು ವಿಭಿನ್ನ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಆಕ್ಟಿವ್ ಆಗಲಿದ್ದಾರೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622