ಟಿಕ್ ಟಾಕ್ ಬ್ಯಾನ್ ಮಾಡಬೇಡಿ ಎನ್ನುತ್ತಿರುವ ಸಂಯುಕ್ತ ಹೆಗ್ಡೆ.. ಕಾರಣವೇನು ಗೊತ್ತಾ?

ಒಂದು ಕಡೆ ಟಿಕ್ ಟಾಕ್ ಬ್ಯಾನ್ ಮಾಡಿಸುವ ಸಲುವಾಗಿ ಪಣ ತೊಟ್ಟಿರುವ ಬಹುತೇಕ ನೆಟ್ಟಿಗರು ಈಗಾಗಲೇ 4.6 ಇದ್ದ ಟಿಕ್ ಟಾಕ್ ರೇಟಿಂಗ್ ಅನ್ನು 1.4 ಗೆ ತಂದು ನಿಲ್ಲಿಸಿದ್ದಾರೆ.. ಅತ್ತ ಸ್ಯಾಂಡಲ್ವುಡ್ ನ ಸ್ಟಾರ್ ನಿರ್ದೇಶಕರು ಕೂಡ ಟಿಕ್ ಟಾಕ್ ಬ್ಯಾನ್ ಆಗಲೆಂದು ಬೆಂಬಲ ಸೂಚಿಸಿದ್ದಾರೆ.. ಆದರೆ ನಮ್ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಗಡೆ ಮಾತ್ರ ಅದ್ಯಾಕೋ ಟಿಕ್ ಟಾಕ್ ಕಡೆಗೆ ಒಲವು ತೋರಿದ್ದಾರೆ..

ಹೌದು ಮೊನ್ನೆ ಮೊನ್ನೆಯಷ್ಟೇ ಸ್ಯಾಂಡಲ್ವುಡ್ ನ ಸ್ಟಾರ್ ನಿರ್ದೇಶಕರುಗಳಾದ ಸಂತೋಷ್ ಆನಂದ್ ರಾಮ್.. ಎ ಪಿ ಅರ್ಜುನ್, ಪವನ್ ಒಡೆಯರ್ ಅವರು ಬ್ಯಾನ್ ಟಿಕ್ ಟಾಕ್ ಎಂದು ಬರೆದು ಟಿಕ್ ಟಾಕ್ ಬ್ಯಾನ್ ಮಾಡಿಸುವ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು.. ಅವರ ಈ ನಡೆಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.. ಆದರೀಗ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಗಡೆ ಅವರು ಟಿಕ್ ಟಾಕ್ ಬ್ಯಾನ್ ಮಾಡಿದ್ರೆ ಜನರ ಮನಸ್ಥಿತಿ ಬದಲಾಗಲ್ಲ.‌ ಎಂದು ಟ್ವೀಟ್ ಮಾಡುವ ಮೂಲಕ ಟಿಕ್ ಟಾಕ್ ಬ್ಯಾನ್ ಮಾಡಬೇಡಿ ಎಂದಿದ್ದಾರೆ..

ಒಂದು ಪ್ಲಾಟ್‍ಫಾರ್ಮ್ ಅನ್ನು ಬ್ಯಾನ್ ಮಾಡುವುದರಿಂದ ಅದನ್ನು ಬಳಸುತ್ತಿರುವ ಜನರ ಮನಸ್ಥಿತಿ ಬದಲಾಗುವುದಿಲ್ಲ. ಈ ಪ್ಲಾಟ್‍ಫಾರ್ಮ್ ಅನ್ನು ಬ್ಯಾನ್ ಮಾಡಿದರೆ ಜನರು ಅವರ ವಿಷಯಗಳನ್ನು ಆಪ್ಲೋಡ್ ಮಾಡಲು ಬೇರೆ ಇನ್ನೊಂದು ಆ್ಯಪ್ ಅನ್ನು ಹುಡುಕಿಕೊಳ್ಳುತ್ತಾರೆ. ಆದರೆ ಟಿಕ್‍ಟಾಕ್‍ಗೆ ಏನಾದರೂ ವೈಯಕ್ತಿಕವಾಗಿ ನನಗೆ ಏನೂ ಆಗಬೇಕಿಲ್ಲ ಎಂದು ಬರೆದುಕೊಂಡಿದ್ದಾರೆ…

ಸದ್ಯ ಸಂಯುಕ್ತ ಅವರ ಮಾತಿಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದು, ಮೊದಲು ನಿನ್ನ ಮನಸ್ಥಿತಿ ಬದಲಿಸಿಕೊ.. ನಿನ್ನ ಅಭಿಪ್ರಾಯ ಇಲ್ಲಿ ಯಾರಿಗೂ ಬೇಡ.. ಎಂದೆಲ್ಲಾ ಕಮೆಂಟ್ ಗಳನ್ನು ಮಾಡಿದ್ದಾರೆ.. ಅಲ್ಲದೇ ಟಿಕ್ ಟಾಕ್ ಬ್ಯಾನ್ ಮಾಡಿಸಲು ಈಗಾಗಲೇ ಬಹಳಷ್ಟು ಸಂಘಟನೆಗಳು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದೆ ಎನ್ನಲಾಗಿದೆ.. ಇನ್ನು ಅಧ್ಯಯನ ಒಂದರ ಪ್ರಕಾರ ಟಿಕ್ ಟಾಕ್ ನಲ್ಲಿ ಹಾಕುವ ವೀಡಿಯೋಗಳು ಮಿಸ್ ಯೂಸ್ ಆಗುವ ಸಂಭವ ಹೆಚ್ಚಿದ್ದು.. ಇದರಿಂದ ಯುವ ಸಮೂಹ ಕೂಡ ದಿಕ್ಕು ತಪ್ಪುತ್ತಿದೆ ಎನ್ನಲಾಗಿದೆ..