ದೇವಸ್ಥಾನದ ಸ್ಚೈಲ್ ಸಾರಿನ ಸುಲಭ ರೆಸಿಪಿ..

ಸಾಂಬಾರ್ ಎಲ್ಲರ ಮನೆಯಲ್ಲೂ ಮಾಡುತ್ತೇವೆ. ಆದರೆ ಸಾಂಬಾರ್ ಮಾಡುವ ವಿಧಾನ ಬದಲಾದಂತೆ ರುಚಿಯೂ ಭಿನ್ನವಾಗಿರುತ್ತದೆ. ಸಾರಿಗಾಗಿ ಮಾಡುವ ಸಾಂಬಾರ್’ನ ರುಚಿ, ಇಡ್ಲಿಗೆ ಮಾಡುವ ಸಾಂಬಾರ್’ಗಿಂತ ಭಿನ್ನವಾಗಿರುತ್ತದೆ. ಇನ್ನೂ ದೇವಸ್ಥಾನದಲ್ಲಿ ಮಾಡುವಂಥಾ ಸಾಂಬಾರ್ ಟೇಸ್ಟ್ ಅಂತೂ ಸಖತಾಗಿರತ್ತೆ. ಸಾಂಬಾರ್‌ ಮಾಡುವುದೊಂದು ಕಲೆ, ಇದು ಸರಳವಾದ ರೆಸಿಪಿ ಆಗಿದ್ದರು, ಅದರ ಸ್ವಾದ ಹೆಚ್ಚಲು ಕೆಲವೊಂದು ಟಿಪ್ಸ್‌ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿಗಳು: ತೊಗರಿ ಬೇಳೆ 100 ಗ್ರಾಂ.. 1 ಆಲೂಗಡ್ಡೆ.. 1 ನುಗ್ಗೆ ಕಾಯಿ.. 1 ಸೋರೆಕಾಯಿ.. 2 ಟೊಮೇಟೋ.. 3 ಚಮಚ ತೆಂಗಿನ ಕಾಯಿ.. ಹುರಿಗಡಲೆ ಸ್ವಲ್ಪ..‌ ಹುಣಸೆ ರಸ ಸ್ವಲ್ಪ.. 1 ಚಮಚ ಕೊತ್ತಂಬರಿ ಬೀಜಗಳು.. ¼ ಚಮಚ ಜೀರಿಗೆ..15-20 ಕೆಂಪು ಮೆಣಸಿನಕಾಯಿ(ಗುಂಟೂರು ಹಾಗೂ ಬ್ಯಾಡಗಿ ಮಿಕ್ಸ್ ಮಾಡಿ).. ಒಂದು ಮುಷ್ಠಿ ಕರಿಬೇವಿನ ಎಲೆಗಳು.. 6 ಚಮಚ ಎಣ್ಣೆ.. ಸಾಸಿವೆ.. ಚಿಟಿಕೆ ಇಂಗು.. ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ: ಮೊದಲಿಗೆ ತೊಗರಿ ಬೇಳೆಯನ್ನು ತೊಳೆದು, ಮೂರು ವಿಜಿಲ್ ಕೂಗಿಸಿ ಬೇಯಿಸಬೇಕು. ನಂತರ ಬಾಣಲೆಗೆ ಎಣ್ಣೆ ಬಿಟ್ಟು ಧನ್ಯಾ, ಜೀರಿಗೆ, ಕರಿಬೇವು, ಒಣಮೆಣಸಿನಕಾಯಿ ಹುರಿದುಕೊಳ್ಳಿ. ಇದು ತಣ್ಣಗಾದ ಮೇಲೆ. ಮಿಕ್ಸಿ ಜಾರಿಗೆ ಇವನ್ನು ಹಾಕಿ, ಸ್ವಲ್ಪ ಕಾಯಿ, ಹುರಿಗಡಲೆ ಮತ್ತು ನೀರು ಸೇರಿಸಿ ರುಬ್ಬಿಕೊಳ್ಳಿ.

ಈಗ ಅದೇ ಬಾಣಲೆಗೆ ಇನ್ನೂ ಸ್ವಲ್ಪ ಎಣ್ಣೆ ಬಿಟ್ಟು ದಪ್ಪಗೆ ಹೆಚ್ಚಿದ ಟೊಮೇಟೋ ಹಾಕಿ ಮೆತ್ತಗೆ ಆಗುವವರೆಗೆ ಹುರಿದುಕೊಳ್ಳಿ. ನಂತರ ಆಲೂಗಡ್ಜೆ, ಸೋರೇಕಾಯಿ, ನುಗ್ಗೆಕಾಯಿ ಹಾಕಿ ಎಣ್ಣೆಯಲ್ಲಿ 5 ನಿಮಿಷ ಹುರಿಯಿರಿ. ಸ್ವಲ್ಪ ಬೆಂದಮೇಲೆ ರುಬ್ಬಿದ ಖಾರ ಹಾಕಿಕೊಂಡು ನಿಮಗೆ ಬೇಕಾವಷ್ಟು ನೀರು ಸೇರಿಸಿ ಬೇಯಲು ಬಿಡಿ. ತರಕಾರಿಗಳೆಲ್ಲಾ ಬೆಂದ ನಂತರ ಅದಕ್ಕೆ ಹುಣಸೆ ರಸ, ಬೆಲ್ಲ ಹಾಗೂ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಕುದಿಸಿ. ಸಾಂಬಾರ್ ರೆಡಿ ಆದ ಮೇಲೆ ಎಣ್ಣೆ, ಸಾಸಿವೆ, ಇಂಗು, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಈಗ ಬಿಸಿ ಬಿಸಿಯಾದ ದೇವಸ್ಥಾನದಲ್ಲಿ ಮಾಡುವಂಥಾ ಸಾಂಬಾರ್ ರೆಡಿ.