ಡಿವೋರ್ಸ್‌ ಆದ ಬಳಿಕ ಹೊಸ ನಿರ್ಧಾರ ಕೈಗೊಂಡ ಸಮಂತಾ..

ನಟಿ ಸಮಂತಾ ರುತ್ ಪ್ರಭು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದ್ದರು ಈಗಲೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಈ ನಟಿಗೆ ತಮಿಳುನಾಡು ಅಥವಾ ಆಂಧ್ರಪ್ರದೇಶ ತೆಲಂಗಾಣದಲ್ಲಿ ಮಾತ್ರವಲ್ಲ, ಕರ್ನಾಟಕ, ಕೇರಳ, ಮುಂಬೈ ಎಲ್ಲಾ ಕಡೆ ದೊಡ್ಡ ಅಭಿಮಾನಿ ಬಳಗ ಇದೆ. ಅದರಲ್ಲೂ ಪುಷ್ಪ ಸಿನಿಮಾದ ಉ ಅಂಟಾವ, ಊಊ ಅಂಟಾವ ಸಾಂಗ್ ನಂತರ ಸಮಂತಾ ಅವರಿಗೆ ಇರುವ ಬೇಡಿಕೆ ಮತ್ತು ಜನಪ್ರಿಯತೆ ದುಪ್ಪಟ್ಟಾಗಿದೆ ಎಂದರೆ ತಪ್ಪಾಗುವುದಿಲ್ಲ. ಆ ಹಾಡು ಅಷ್ಟರ ಮಟ್ಟಿಗೆ ಜನರನ್ನು ತಲುಪಿದೆ. ಪ್ರಸ್ತುತ ಸಮಂತಾ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ, ಇದೇ ಸಮಯದಲ್ಲಿ ಸಮಂತಾ ಅವರು ಮುಂಬೈ ಮಹಾನಗರದಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ನಟಿ ಸಮಂತಾ ಮುಂಬೈನಲ್ಲಿ ಖರೀದಿ ಮಾಡಿರುವ ಮನೆಗಳು ಹೇಗಿದೆ? ಸಮಂತಾ ಮುಂಬೈಗೆ ಹೋಗ್ತಾರಾ? ತಿಳಿಸುತ್ತೇವೆ ನೋಡಿ..

ನಟಿ ಸಮಂತಾ ಹುಟ್ಟಿದಾಗಿನಿಂದ ಶ್ರೀಮಂತೆ ಅಲ್ಲ. ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಮಂತಾ, ತಂದೆ ತಾಯಿಗೆ ಕಷ್ಟ ಕೊಡಬಾರದು ಎನ್ನುವ ಕಾರಣಕ್ಕೆ ವಿದೇಶಕ್ಕೆ ಹೋಗಿ ಓದಬೇಕು ಎಂದುಕೊಂಡಿದ್ದ ಕನಸನ್ನು ಅರ್ಧಕ್ಕೆ ಬಿಟ್ಟರು. ಕಾಲೇಜು ದಿನಗಳಲ್ಲಿ ಪಾರ್ಟ್ ಟೈಮ್ ಕೆಲಸವಾಗಿ ಮಾಡೆಲಿಂಗ್ ಮಾಡುತ್ತಿದ್ದ ಸಮಂತಾ ಅವರ ಮುಖ ಫೋಟೋಜೆನಿಕ್ ಆಗಿತ್ತು ಎಂದು, ನಿರ್ಮಾಪಕರು ಜಾಹಿರಾತುಗಳಿಗೆ ಸಮಂತಾ ಅವರನ್ನು ಹಾಕಿಕೊಳ್ಳಲು ಶುರುಮಾಡಿದರು. ಅದೇ ಸಮಯದಲ್ಲಿ ಸಮಂತಾ ಅವರಿಗೆ ಯೇ ಮಾಯ ಚೇಸಾವೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.

ನಾಗಚೈತನ್ಯ ಅವರ ಪರಿಚಯ ಆಗಿದ್ದು ಸಹ ಇದೇ ಸಿನಿಮಾ ಚಿತ್ರೀಕರಣದಲ್ಲೇ. ಮೊದಲ ಸಿನಿಮಾ ಸೂಪರ್ ಹಿಟ್ ಆಗಿ, ಸಮಂತಾ ಹಿಂದಿರುಗಿ ನೋಡಿದ್ದೇ ಇಲ್ಲ, ಸಾಲು ಸಾಲು ಸಿನಿಮಾ ಅವಕಾಶಗಳು ಬರಲು ಶುರುವಾದವು. ತೆಲುಗಿನ ಎಲ್ಲಾ ಸ್ಟಾರ್ ನಟರಿಗೂ ಜೋಡಿಯಾಗಿ ನಟಿಸಿದರು ಸಮಂತಾ. ತಮಿಳು ಚಿತ್ರರಂಗದಲ್ಲಿ ಸಹ ದೊಡ್ಡ ಹೆಸರು ಮಾಡಿದರು. ಸಮಂತಾ ಒಪ್ಪಿಕೊಳ್ಳುವ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು. ಈಕೆ ನೋಡಲು ಸುಂದರವಾಗಿರುವುದರ ಜೊತೆಗೆ ಒಳ್ಳೆಯ ಅಭಿನೇತ್ರಿ ಕೂಡ ಹೌದು. ತಮ್ಮ ಅಭಿನಯಕ್ಕೆ ಸಾಕಷ್ಟು ಅವಾರ್ಡ್ ಗಳನ್ನು ಸಹ ಪಡೆದುಕೊಂಡಿದ್ದಾರೆ ಸಮಂತಾ.

ನಾಗಚೈತನ್ಯ ಮತ್ತು ಸಮಂತಾ ಇಬ್ಬರಿಗೂ ಬಹಳ ವರ್ಷಗಳ ಹಿಂದಿನ ಪರಿಚಯ, ಇವರಿಬ್ಬರು ಐದಾರು ವರ್ಷಗಳ ಕಾಲ ಡೇಟಿಂಗ್ ಮಾಡಿ, ಎರಡು ಕುಟುಂಬದವರ ಒಪ್ಪಿಗೆ ಪಡೆದು 2017 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮಾದರಿ ದಂಪತಿಗಳಾಗಿ ಬದುಕಬೇಕು ಎಂದುಕೊಂಡಿದ್ದರು. ಆದರೆ ಈ ಮುದ್ದಾದ ಜೋಡಿಯ ದಾಂಪತ್ಯ ಜೀವನದಲ್ಲಿ ಏನಾಯಿತೋ..ನಾಲ್ಕೇ ವರ್ಷಕ್ಕೆ ಇವರ ವೈವಾಹಿಕ ಜೀವನ ಮುರಿದು ಬಿತ್ತು. ಕಳೆದ ವರ್ಷ ಇಬ್ಬರು ಬೇರೆಯಾಗುತ್ತಿರುವ ಬಗ್ಗೆ ಅಧಿಕೃತವಾಗಿ ಎಲ್ಲರಿಗೂ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದರು. ಈ ಸುದ್ದಿ ಇವರಿಬ್ಬರ ಅಭಿಮಾನಿಗಳಿಗೂ ಹಾರ್ಟ್ ಬ್ರೇಕ್ ಮಾಡಿದ್ದಂತೂ ನಿಜವಾಗಿದೆ.

ವಿಚ್ಛೇದನದ ನಂತರ ಸಮಂತಾ ಮತ್ತು ಚೈತನ್ಯ ಇಬ್ಬರು ಸಹ ತಮ್ಮ ತಮ್ಮ ಕೆರಿಯರ್ ಮೇಲೆ ಗಮನ ಹರಿಸುತ್ತಿದ್ದಾರೆ. ಅದರಲ್ಲೂ ಸಮಂತಾ ಅವರಿಗೆ ದೊಡ್ಡ ದೊಡ್ಡ ಅವಕಾಶಗಳೇ ಹುಡುಕಿಕೊಂಡು ಬರುತ್ತಿವೆ. ಪುಷ್ಪ ಸಿನಿಮಾ ಹಾಡು ಹಿಟ್ ಆಗಿ, ಫ್ಯಾಮಿಲಿ ಮ್ಯಾನ್2 ವೆಬ್ ಸೀರೀಸ್ ಸಕ್ಸಸ್ ಇಂದ, ಸಮಂತಾ ಅವರಿಗೆ ಬಾಲಿವುಡ್ ಇಂದ ಕೂಡ ಬಿಗ್ ಆಫರ್ ಗಳು ಬರುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನಟಿ ಸಮಂತಾ ಬಾಲಿವುಡ್ ನಲ್ಲೇ ಹೆಚ್ಚು ಬ್ಯುಸಿ ಆಗಬಹುದು ಎನ್ನಲಾಗುತ್ತಿದೆ. ಹಾಗಾಗಿ ನಟಿ ಸಮಂತಾ ಮುಂಬೈನಲ್ಲೇ ವಾಸ ಮಾಡಲು ಎರಡು ಫ್ಲ್ಯಾಟ್ ಗಳನ್ನು ನೋಡಿ ಫಿಕ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ..

ಸಮಂತಾ ನೋಡಿರುವ ಎರಡು ಫ್ಲ್ಯಾಟ್ ಗಳು ಸಹ ಐಷಾರಾಮಿ ಆಗಿದ್ದು, ಎರಡು ಫ್ಲ್ಯಾಟ್ ಗಳು ಜುಹು ಮತ್ತು ಬಾಂದ್ರಾ ಬೀಚ್ ಸೈಸ್ ಫೇಸಿಂಗ್ ವ್ಯೂ ಇರುವ ಸುಂದರವಾದ ಫ್ಲ್ಯಾಟ್ ಗಳಾಗಿವೆ ಎನ್ನಲಾಗುತ್ತಿದೆ. ಈ ಎರಡು ಫ್ಲ್ಯಾಟ್ ಗಳ ಬೆಲೆ ಸುಮಾರು 3 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಇನ್ನುಮುಂದೆ ನಟಿ ಸಮಂತಾ, ಹೆಚ್ಚಾಗಿ ಬಾಲಿವುಡ್ ನಲ್ಲಿ ಬ್ಯುಸಿ ಆಗಿ, ಮುಂಬೈನಲ್ಲೇ ಹೆಚ್ಚಿನ ಸಮಯ ಉಳಿದುಕೊಳ್ಳುಲಿದ್ದಾರೆ ಎಂದು ಅಂದಾಜು ಮಾಡಿದ್ದಾರೆ ನೆಟ್ಟಿಗರು. ಈ ಊಹೆಗಳೇ ನಿಜವಾಗುತ್ತಾ ಅಥವಾ ಹಿಂದೆ ಹೇಳಿದ ಹಾಗೆ ಸಮಂತಾ ಹೈದರಾಬಾದ್ ನಲ್ಲೇ ಇರುತ್ತಾರಾ ಎಂದು ಕಾದು ನೋಡಬೇಕಿದೆ.