ನಾಗ ಚೈತನ್ಯರ ಮೊದಲ ಪತ್ನಿ ಬಗ್ಗೆ ಮಾತನಾಡಿದ ಸಮಂತಾ.. ನಾಗ ಚೈತನ್ಯನ ಮೊದಲ ಪತ್ನಿ ಯಾರು ಗೊತ್ತಾ?

ಟಾಲಿವುಡ್ ನ ಮುದ್ದಾದ ಜೋಡಿ ಎಂದೇ ಕರೆಸಿಕೊಂಡಿದ್ದ ನಟ ನಾಗಚೈತನ್ಯ ಮತ್ತು ನಟಿ ಸಮಂತಾ 4 ವರ್ಷಗಳ ದಾಂಪತ್ಯ ಜೀವನಕ್ಕೆ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಅಂತ್ಯ ಹಾಡಿದರು. ಇವರಿಬ್ಬರನ್ನು, ಇವರ ಜೋಡಿಯನ್ನು ಇಷ್ಟಪಡುತ್ತಿದ್ದ ಎಲ್ಲಾ ಅಭಿಮಾನಿಗಳು ಈ ವಿಚಾರದಿಂದ ಬಹಳ ಬೇಸರ ಮತ್ತು ನಿರಾಸೆ ಆಗಿತ್ತು. ಈ ಜೋಡಿ ಮತ್ತು ಅವರ ನಡುವೆ ಇದ್ದ ಪ್ರೀತಿ ನೋಡಿದ್ದ ಎಲ್ಲರೂ, ಜೀವನದ ಕೊನೆಯವರೆಗೂ ಇವರಿಬ್ಬರು ಜೊತೆಯಾಗಿರುತ್ತಾರೆ ಎಂದೇ ಭಾವಿಸಿದ್ದರು. ಆದರೆ ಹಾಗಾಗಲಿಲ್ಲ.. ಇವರಿಬ್ಬರ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ, ಅಷ್ಟು ಪ್ರೀತಿ ಮಾಡುತ್ತಿದ್ದ ಜೋಡಿ, 2021 ರ ಹೊಸವರ್ಷವನ್ನು ಜೊತೆಯಾಗಿ ಆಚರಿಸಿದ್ದ ಜೋಡಿ ಇದ್ದಕ್ಕಿದ್ದ ಹಾಗೆ ಬೇರೆ ಆಗುವ ವಿಚಾರ ತಿಳಿಸಿದರು. ಆದರೆ ಈಗಲೂ ಕೂಡ ಇವರ ಅಭಿಮಾನಿಗಳಿಗೆ ಇದನ್ನು ಪೂರ್ತಿಯಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಆಗಾಗ ಸಮಂತಾ ನಾಗಚೈತನ್ಯ ಬಗ್ಗೆ ಮಾತನಾಡಿರುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ..ಅದರಲ್ಲಿ ಒಂದು ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಅದರಲ್ಲಿ ನಾಗಚೈತನ್ಯ ಅವರ ಮೊದಲ ಪತ್ನಿ ಬಗ್ಗೆ ತಿಳಿಸಿದ್ದಾರೆ ಸಮಂತಾ. ನಿಜಕ್ಕೂ ನಾಗಚೈತನ್ಯ ಮೊದಲ ಪತ್ನಿ ಯಾರು ಗೊತ್ತಾ?

ಅಕ್ಕಿನೇನಿ ಕುಟುಂಬದ ಕುಡಿ ನಾಗಚೈತನ್ಯ, ದೊಡ್ಡ ಮನೆತನದಲ್ಲಿ ಹುಟ್ಟಿ, ಹುಟ್ಟಿದಾಗಿನಿಂದಲೇ ಬಹಳ ಚೆನ್ನಾಗಿ, ಅನುಕೂಲವಾಗಿ ಬೆಳೆದ ಹುಡುಗ, ಚೈತನ್ಯ ಅವರಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಾಗಲಿ ಅಥವಾ ಇನ್ಯಾವುದೇ ಕಷ್ಟಗಳಾಗಲಿ ಇರಲಿಲ್ಲ. ಆದರೆ ಸಮಂತಾ ಹಾಗಲ್ಲ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವರು ಸಮಂತಾ. ಚೆನ್ನಾಗಿ ಓದಿ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಅಲ್ಲಿಯೇ ಕೆಲಸ ಮಾಡಿಕೊಂಡಿರಬೇಕು ಎಂದು ಅಂದುಕೊಂಡಿದ್ದರು ಸಮಂತಾ, ಪಾಕೆಟ್ ಮನಿಗಾಗಿ ಶುರು ಮಾಡಿದ ಮಾಡೆಲಿಂಗ್ ಕೆಲಸ ಅವರನ್ನು ಸಿನಿಮಾ ರಂಗಕ್ಕೆ ಕರೆತಂದಿತು. ಮುಂದಿನದು ಇತಿಹಾಸ, ಇಂದು ಸಮಂತಾ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಸಮಂತಾ ಆರಂಭದ ದಿನಗಳಿಂದಲು ಆಕೆಯನ್ನು ನೋಡಿದ್ದಾರೆ ಚೈತನ್ಯ. ಸಮಂತಾ ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾದಲ್ಲಿ ನಾಯಕನಾಗಿದ್ದವರು ನಾಗಚೈತನ್ಯ. ಆ ಸಮಯದಲ್ಲಿ ಸಮಂತಾ ಹೊಸಮುಖ. ಆಗಿನಿಂದಲೇ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಮೊದಲಿಗೆ ಬೆಸ್ಟ್ ಫ್ರೆಂಡ್ಸ್ ಆಗಿದ್ದ ಇವರಿಬ್ಬರು ನಂತರ ಪ್ರೀತಿಸಿ, ಎಂಟು ವರ್ಷಗಳ ಪರಿಚಯ, ಐದಾರು ವರ್ಷಗಳ ಪ್ರೀತಿ ಇದೆಲ್ಲವನ್ನು ಇಬ್ಬರು ತಮ್ಮಿಬ್ಬರ ಕುಟುಂಬಕ್ಕೆ ತಿಳಿಸಿ, 2017ರಲ್ಲಿ ಮದುವೆಯಾದರು. ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಸಂಪ್ರದಾಯದ ಪ್ರಕಾರ ನಡೆದಿತ್ತು ಈ ಮದುವೆ. ಯಾರಿಗೆ ಆದರೂ ಕನಸಿನ ಮದುವೆ ಎನ್ನುವ ಹಾಗಿತ್ತು.

ಆದರೆ ಈ ದಾಂಪತ್ಯ ಜೀವನ ನಾಲ್ಕೇ ವರ್ಷಕ್ಕೆ ಅಂತ್ಯವಾಗುತ್ತದೆ ಎಂದು ಯಾರು ಭಾವಿಸಿರಲಿಲ್ಲ. ಈಗಲೂ ಈ ಜೋಡಿಯ ಅಭಿಮಾನಿಗಳು ಸಮಂತಾ ಮತ್ತು ನಾಗಚೈತನ್ಯ ಇಬ್ಬರ ಹಳೆಯ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅವುಗಳು ವೈರಲ್ ಸಹ ಆಗುತ್ತವೆ. ಹೀಗೆ ಸಮಂತಾ ಅವರು ನಾಗಚೈತನ್ಯ ಬಗ್ಗೆ ಹೇಳಿದ್ದ ಹಳೆಯ ಮಾತುಗಳು ಈಗ ವೈರಲ್ ಆಗಿದೆ. ಇದರಲ್ಲಿ ನಾಗಚೈತನ್ಯ ಮೊದಲ ಪತ್ನಿ ಬಗ್ಗೆ ಮಾತನಾಡಿದ್ದರು ಸಮಂತಾ, ಅರೆ ನಾಗಚೈತನ್ಯ ಅವರಿಗೆ ಅದಾಗಲೇ ಮದುವೆ ಆಗಿತ್ತಾ ಎಂದು ನಿಮಗೆ ಪ್ರಶ್ನೆ ಬರಬಹುದು, ಆದರೆ ಸಮಂತಾ ಹೇಳಿದ್ದು ಹೀಗೆ..

2019ರಲ್ಲಿ ಫೀಟ್ ಅಪ್ ವಿತ್ ದಿ ಸ್ಟಾರ್ಸ್ ಎನ್ನುವ ಶೋನಲ್ಲಿ ಸಮಂತಾ ಭಾಗವಹಿಸಿದ್ದರು. ಇದನ್ನು ನಿರೂಪಣೆ ಮಾಡುತ್ತಿದ್ದವರು ನಟಿ ಮಂಚು ಲಕ್ಷ್ಮಿ. ಈ ಶೋನಲ್ಲಿ ನಾಗಚೈತನ್ಯ ಮೊದಲ ಪತ್ನಿ ಬಗ್ಗೆ ಮಾತನಾಡಿದ್ದರು ಸಮಂತಾ, “ಪಿಲ್ಲೋನೆ ನಾಗಚೈತನ್ಯ ಮೊದಲ ಪತ್ನಿ, ನಾನು ಕಿಸ್ ಮಾಡಬೇಕು ಎಂದುಕೊಂಡರೆ ಆ ಪಿಲ್ಲೋ ನಮ್ಮ ನಡುವೆ ಇರುತ್ತಿತ್ತು. ಬಹುಶಃ ಇದರಿಂದ ನಿಮಗೆ ಎಲ್ಲವೂ ಅರ್ಥವಾಗಿರುತ್ತದೆ..” ಎಂದು ಹೇಳುವ ಸಮಂತಾ, “ನಾಗಚೈತನ್ಯ ಗಂಡ ಆಗಲು ಹೇಳಿ ಮಾಡಿಸಿದ ಹಾಗಿದ್ದಾರೆ..” ಎಂದು ಗಂಡನ ಬಗ್ಗೆ ಸಂತೋಷವಾಗಿ ಹೇಳಿದ್ದರು.

ಹಾಗೆಯೇ ಈ ಶೋನಲ್ಲೆ ಸಮಂತಾ ಮತ್ತು ನಾಗಚೈತನ್ಯ ವಿಲಿನ್ ರಿಲೇಶನ್ಷಿಪ್ ನಲ್ಲಿದ್ದ ವಿಚಾರ ಸಹ ತಿಳಿದುಬಂದಿತ್ತು. ಚೈತನ್ಯ ಬಗ್ಗೆ ಇನ್ನೂ ಕೆಲವು ವಿಚಾರಗಳನ್ನು ತಿಳಿಸಿದ ಸಮಂತಾ..”ನಾನು ಜೀರೋ ಆಗಿದ್ದಾಗಿಂದಲೂ ಚೈತನ್ಯ ನನ್ನನ್ನು ನೋಡಿದ್ದಾರೆ. ಅಮೆರಿಕಾದಲ್ಲಿದ್ದಾಗ ಮನೆಗೆ ಫೋನ್ ಮಾಡಲು ನನ್ನ ಬಳಿ ಹಣ ಇರಲಿಲ್ಲ, ಆಗ ನಾನು ಚೈತನ್ಯ ಫೋನ್ ಇಂದಲೇ ಕರೆಮಾಡುತ್ತಿದ್ದೆ. ಆ ಸಮಯದಿಂದ ಈಗಿನವರೆಗೂ ನನ್ನನ್ನು ನೋಡಿದ್ದಾರೆ. ಬೇರೆ ಎಲ್ಲರೂ ನನ್ನ ಜೀವನದ ಸಕ್ಸಸ್ ಹಾದಿಯಿಂದ ಮಾತ್ರ ನನ್ನನ್ನು ನೋಡಿದ್ದಾರೆ..” ಎಂದು ಗಂಡನ ಬಗ್ಗೆ ಮಾತನಾಡಿದ್ದರು ಸಮಂತಾ. ಆದರೆ ಈಗ ಇದೆಲ್ಲವೂ ನೆನಪುಗಳು ಮಾತ್ರ.