ಡಿವೋರ್ಸ್ ನಂತರ ನಾಗಚೈತನ್ಯ ಮಾಡಿರೋ ಕೆಲಸ ನೋಡಿ..

ನಾಗಚೈತನ್ಯ ಮತ್ತು ಸಮಂತಾ, ಟಾಲಿವುಡ್ ನ ಈ ಮುದ್ದಾದ ಜೋಡಿ ಈಗ ಜೊತೆಯಾಗಿಲ್ಲ. ಇವರಿಬ್ಬರು ಸುಮಾರು ವರ್ಷಗಳ ಕಾಲ ಒಬ್ಬರನ್ನೊಬ್ಬರು ಇಷ್ಟಪಟ್ಟು, 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ 2021 ರ ಅಕ್ಟೋಬರ್ ತಿಂಗಳಿನಲ್ಲಿ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು. ಎಲ್ಲೆಡೆ ನಗುನಗುತ್ತಾ ತುಂಬಾ ಚೆನ್ನಾಗಿರುತ್ತಿದ್ದ ಈ ಜೋಡಿ ಈ ರೀತಿ ಬೇರೆಯಾಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಇವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಈ ನಿರ್ಧಾರ ದೊಡ್ಡ ಶಾಕ್ ನೀಡಿತ್ತು. ಬೇರೆ ಬೇರೆಯಾದ ನಂತರ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಕೂಡ ತಮ್ಮ ಕೆರಿಯರ್ ಮೇಲೆ ಗಮನ ಹರಿಸುತ್ತಿದ್ದಾರೆ. ಸಧ್ಯಕ್ಕೆ ನಾಗಚೈತನ್ಯ ಅವರು ಥ್ಯಾಂಕ್ ಯೂ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಹಣ ಉಳಿಸುವ ಸಲುವಾಗಿ ನಾಗಚೈತನ್ಯ ಅವರು ತೆಗೆದುಕೊಂಡಿರುವ ಒಂದು ನಿರ್ಧಾರ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ನಾಗಚೈತನ್ಯ ಅವರು ನಿಜಕ್ಕೂ ಮಾಡಿದ್ದೇನು ಗೊತ್ತಾ?

ಸಮಂತಾ ಮತ್ತು ನಾಗಚೈತನ್ಯ ಜೋಡಿಗೆ ದೊಡ್ಡ ಫ್ಯಾನ್ ಬೇಸ್ ಇತ್ತು. ಈ ಜೋಡಿಯ ಕ್ಯೂಟ್ನೆಸ್ ಅನ್ನು ಎಲ್ಲರೂ ಐಷ್ಟಪಡುತ್ತಿದ್ದರು. ಪ್ರೀತಿಸುವ ಎಲ್ಲರಿಗೂ ಸ್ಪೂರ್ತಿಯಂತೆ ಇದ್ದ ಇವರಿಬ್ಬರು ಕಳೆದ ವರ್ಷ ಅಕ್ಟೋಬರ್ 2ರಂದು ತಾವಿಬ್ಬರು ಬೇರೆ ಆಗುತ್ತಿರುವ ಸುದ್ದಿಯನ್ನು ಅಧಿಕೃತವಾಗಿ ತಿಳಿಸಿದ್ದು, ಅವರ ಅಭಿಮಾನಿಗಳಿಗೆ ಹೃದಯಕ್ಕೆ ದೊಡ್ಡ ಶಾಕ್ ನೀಡಿತ್ತು. ಈ ನಿರ್ಧಾರದ ನಂತರ ಇಬ್ಬರು ಬೇರೆ ಬೇರೆ ವಾಸ ಮಾಡಲು ಶುರು ಮಾಡಿದ್ದರು. ಇದನ್ನೇ ಯೋಚನೆ ಮಾಡುತ್ತಾ ಕೂರಲು ಸಾಧ್ಯ ಆಗುವುದಿಲ್ಲ ಎಂದು ಇಬ್ಬರು ತಮ್ಮ ಕೆಲಸಗಳ ಮೇಲೆ ಗಮನ ಹರಿಸಲು ಶುರು ಮಾಡಿದರು.

ನಟಿ ಸಮಂತಾ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಅದರ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತ ನಾಗಚೈತನ್ಯ ಸಹ ಅದೇ ಕೆಲಸದಲ್ಲಿದ್ದಾರೆ. ಸಧ್ಯಕ್ಕೆ ನಾಗಚೈತನ್ಯ ಅವರು ರಷ್ಯಾ ದೇಶದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ರಾಶಿ ಖನ್ನಾ ಜೊತೆಯಾಗಿ ಅಭಿನಯಿಸುತ್ತಿರುವ ‘ಥ್ಯಾಂಕ್ ಯೂ’ ಸಿನಿಮಾ ಚಿತ್ರೀಕರಣ ರಷ್ಯಾದಲ್ಲಿ ನಡೆಯುತ್ತಿದೆ. ರಷ್ಯಾ ದೇಶದಲ್ಲಿ ಈಗ ವಿಪರೀತ ಚಳಿಯಿದ್ದು, -12-18°C ಟೆಂಪರೇಚರ್, ಇಷ್ಟು ಕಡಿಮೆ ಟೆಂಪರೇಚರ್ ಇರುವಾಗ ಎಂಥವರಿಗೆ ಆದರೂ ಅಲ್ಲಿದ್ದು ಚಿತ್ರೀಕರಣ ಮಾಡುವುದು ಬಹಳ ಕಷ್ಟ. ಆ ಮಟ್ಟಗಿನ ಚಳಿಯನ್ನು ಊಹೆ ಮಾಡಿಕೊಳ್ಳುವುದು ಸಹ ಕಷ್ಟವೇ. ಆದರೆ ಪರಿಸ್ಥಿತಿ ಹಾಗಿದ್ದರೂ ಹಣ ಉಳಿಸುವ ಸಲುವಾಗಿ ನಟ ನಾಗಚೈತನ್ಯ ಒಂದು ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಿಕ್ಕಿರುವ ಮಾಹಿತಿಯ ಪ್ರಕಾರ, ರಷ್ಯಾದಲ್ಲಿ ಚಿತ್ರೀಕರಣ ಮಾಡಿದರೆ ಅಲ್ಲಿನ ಸರ್ಕಾರ ಶೇ.90ರಷ್ಟು ಹಣವನ್ನು ಸಿನಿಮಾ ತಂಡಕ್ಕೆ ವಾಪಸ್ ನೀಡುತ್ತದೆ ಎನ್ನಲಾಗಿದೆ. ಸಿನಿಮಾ ತಯಾರಿಕೆ ಪೂರ್ತಿಯಾದ ನಂತರ ಸಿನಿಮಾವನ್ನು ರಷ್ಯಾ ಸರ್ಕಾರಕ್ಕೆ ತೋರಿಸಿದರೆ, ಶೇ.90 ರಷ್ಟು ಹಣವನ್ನು ವಾಪಸ್ ನೀಡುತ್ತಾರೆ. ಇದು ರಷ್ಯಾದ ಟೂರಿಸಮ್ ಹೆಚ್ಚಿಸಲು ಅಲ್ಲಿನ ಸರ್ಕಾರ ಮಾಡಿರುವ ಒಂದು ಸ್ಪೆಷಲ್ ಯೋಜನೆ. ಸಿನಿಮಾ ನೋಡಲು ಬರುವ ವೀಕ್ಷಕರು ತಮ್ಮ ದೇಶವನ್ನು ನೋಡಿ ಇಷ್ಟಪಟ್ಟು ಪ್ರವಾಸಕ್ಕೆ ಬರುತ್ತಾರೆ, ಆ ಮೂಲಕ ಟೂರಿಸಮ್ ಹೆಚ್ಚಾಗುತ್ತದೆ ಎನ್ನುವುದು ರಷ್ಯಾ ಸರ್ಕಾರದ ಲೆಕ್ಕಾಚಾರವಾಗಿದೆ.

ಹಾಗಾಗಿ ಚಿತ್ರತಂಡಕ್ಕೆ ಸಹಾಯ ಆಗುತ್ತದೆ, ಹಣ ಉಳಿಸಬಹುದು ಎನ್ನುವ ಕಾರಣದಿಂದ ನಾಗಚೈತನ್ಯ ಮತ್ತು ನಟಿ ರಾಶಿ ಖನ್ನಾ ಅವರು ಅಷ್ಟು ಚಳಿ ಇರುವ ರಷ್ಯಾ ದೇಶದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ತಮ್ಮ ಸಿನಿಮಾಗೆ ಸಹಾಯ ಅಗಬೇಕು ಎನ್ನುವ ಸಲುವಾಗಿ ಸ್ಟಾರ್ ಕಲಾವಿದರಾದ ಚೈತನ್ಯ ಮತ್ತು ರಾಶಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಚಿತ್ರತಂಡ ಎಲ್ಲಿಯೂ ಹೇಳಿಕೊಂಡಿಲ್ಲ, ಅಥವಾ ಅಧಿಕೃತ ವಿಚಾರವು ಅಲ್ಲ. ಆದರೆ ಹೀಗೆ ನಡೆದಿದೆ ಎನ್ನುವ ಘಟನೆ ಬಹಳ ವೈರಲ್ ಆಗಿದ್ದು. ನಾಗಚೈತನ್ಯ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಚೈತನ್ಯ ಹೀಗೆ ಮಾಡಬೇಕಿರಲಿಲ್ಲ. ಆದರೆ ಸಿನಿಮಾಗೋಸ್ಕರ ರಿಸ್ಕ್ ತೆಗೆದುಕೊಂಡಿದ್ದಾರೆ.

ಇನ್ನು ಈ ವರ್ಷದ ಆರಂಭದಲ್ಲಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ನಟ ನಾಗಚೈತನ್ಯ ಮತ್ತು ಅವರ ತಂದೆ ನಗಾರ್ಜುನ, ಹಿರಿಯನಟಿ ರಮ್ಯಕೃಷ್ಣ, ನಟಿ ಕೃತಿ ಶೆಟ್ಟಿ ಅಭಿನಯದ ಬಂಗಾರ್ರಾಜು ಸಿನಿಮಾ ತೆರೆಕಂಡು ಯಶಸ್ಸು ಗಳಿಸಿದೆ. ಕರೊನಾ 3ನೇ ಅಲೆಯ ಭೀತಿ ಇದ್ದ ಸಮಯದಲ್ಲಿ ಸ್ಟಾರ್ ನಟರು ತಮ್ಮ ಸಿನಿಮಾ ಬಿಡುಗಡೆ ಮಾಡಲು ಭಯ ಪಡುವ ಸಮಯದಲ್ಲಿ ನಾಗಾರ್ಜುನ ಅವರು ಧೈರ್ಯ ಮಾಡಿ ತಮ್ಮ ಸಿನಿಮಾ ಬಿಡುಗಡೆ ಮಾಡಿದ್ದರು. ಆದರೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿ, ಈಗಲೂ ಪ್ರದರ್ಶನ ಮುಂದುವರೆಸುತ್ತಿದೆ. ನಾಗಚೈತನ್ಯ ಅವರು ಕೆರಿಯರ್ ನಲ್ಲಿ ಈ ಸಿನಿಮಾ ಕೂಡ ಒಂದು ದೊಡ್ಡ ಹಿಟ್ ಆಗಿದೆ.