ಮಾಜಿ ಮಾವನಿಗೆ ದೊಡ್ಡ ಮಟ್ಟದಲ್ಲಿ ಏಟು ಕೊಟ್ಟ ಮಾಜಿ ಸೊಸೆ ಸಮಂತಾ.. ಬೆಚ್ಚಿಬಿದ್ದ ಟಾಲಿವುಡ್

ಟಾಲಿವುಡ್ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇಧನದ ಬಳಿಕ ಅವರು ಏನೇ ಮಾಡಿದರು ಸುದ್ದಿಯಾಗುತ್ತಿದೆ. ಈ ಜೋಡಿ ಮತ್ತೆ ಒಂದಾಗಲಿ ಎಂದು ಇಂದಿಗೂ ಸಹ ಸಾಕಷ್ಟು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಾರೆ. ಈ ಜೋಡಿಯನ್ನು ಒಂದು ಮಾಡಲು ಅವರ ಕುಟುಂಬ ಸಹ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ ಎನ್ನಲಾಗುತ್ತಿದೆ. ವಿಚ್ಛೇಧನದ ಬಳಿಕ ನಟಿ ಸಮಂತಾ ಒಂದೆಲ್ಲಾ ಒಂದು ರೀತಿ ಸದಾ ಸುದ್ದಿಯಲ್ಲಿದ್ದಾರೆ. ಇದೀಗ ನಟಿ ಸಮಂತಾ ತಮ್ಮ ಮಾಜಿ ಮಾವ ನಾಗರ್ಜುನ್ ಅವರಿಗೆ ಒಂದು ದೊಡ್ಡ ಶಾಕ್ ನೀಡಿದ್ದಾರೆ. ಏನಿದು ಸುದ್ದಿ? ಸಮಂತಾ ಮಾಡಿದ್ದಾದರೂ ಏನು? ಎಂದು ತಿಳಿಯುವ ಕುತೂಹಲ ನಿಮಗೂ ಇದ್ದರೆ, ಮುಂದಕ್ಕೆ ಓದಿ…

ನಾಗಚೈತನ್ಯ ಜೊತೆ ವಿಚ್ಛೇಧನದ ಬಳಿಕ ನಟಿ ಸಮಂತಾ ಒಂದೆಲ್ಲಾ ಒಂದು ರೀತಿಯಿಂದ ಸದಾ ಸುದ್ದಿಯಾಗುತ್ತಿದ್ದಾರೆ. ವಿಚ್ಛೇಧನದ ಬಳಿಕ ಇಬ್ಬರೂ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಮಂತಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಇರುವ ನಟಿ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟಿ ಸಮಂತಾ ಹೊಸ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳು ಸಕತ್ ವೈರಲ್ ಆಗಿದ್ದವು.

ಇನ್ನು ಸಮಂತಾ ದಕ್ಷಿಣ ಭಾರತ ಸಿನಿಮಾರಂಗದ ಟಾಪ್ ನಟಿಯರಲ್ಲಿ ಒಬ್ಬರು, ಇದೀಗ ನಟಿ ತೆಲುಗು ಹಾಗೂ ತಮಿಳಿನ ಹಲವಾರು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ ಶಾಕುಂತಲಂ ಹಾಗೂ ನಟ ವಿಜಯ್ ದೇವರಕೊಂಡ ಜೊತೆಗಿನ ಖುಷಿ ಸಿನಿಮಾದ ಶೂಟಿಂಗ್ ನಲ್ಲಿ ನಟಿ ಸಮಂತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನಟಿ ಸಮಂತಾ ತಮ್ಮ ಶಾಕುಂತಲಂ ಸಿನಿಮಾದ ಫರ್ಸ್ಟ್ ಲುಕ್ ಅನ್ನು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ನಟಿ ಸಮಂತಾ ಶಾಕುಂತಲೇ ಗೆಟಪ್ ನಲ್ಲಿ ಅಪ್ಸರೆಯಂತೆ ಕಾಣುತ್ತಿದ್ದರು. ಈ ಫೋಟೋ ನೋಡಿ ನೆಟ್ಟುಗರು, ಸಮಂತಾ ಅವರ ಸೌಂದರ್ಯವನ್ನು ಹಾಡಿ ಹೋಗಳಿದ್ದರು. ಬೆಳ್ಳಿತೆರೆಯಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನಟಿ ಸಮಂತಾ ಇದೀಗ ಕಿರುತೆರೆಗೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಹೌದು ನಟಿ ಸಮಂತಾ ಇದೀಗ ಕಿರುತೆರೆ ಲೋಕಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನುವ ಮಾತುಗಳು ಇದೀಗ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ತೆಲುಗಿನ ಸೂಪರ್ ಹಿಟ್ ಕಾರ್ಯಕ್ರಮ ಬಿಗ್ ಬಾಸ್ ರಿಯಾಲಿಟಿ ಶೋ ಗೆ ನಟಿ ಸಮಂತಾ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಹೌದು ನಟಿ ಸಮಂತಾ ಬಿಗ್ ಬಾಸ್ ತೆಲುಗು ಸೀಸನ್ 6 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ಸ್ಪರ್ಧಿಯಾಗಿ ಅಲ್ಲ ಬದಲಿಗೆ ಬಿಗ್ ಬಾಸ್ ಸೀಸನ್ 6ರ ಹೋಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಇದೀಗ ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಈ ಮೂಲಕ ನಟಿ ಸಮಂತಾ ತಮ್ಮ ಮಾಜಿ ಮಾವ ನಾಗಾರ್ಜುನ ಅವರಿಗೆ ದೊಡ್ಡ ಶಾಕ್ ನೀಡಿದ್ದಾರೆ.

ಕಳೆದ ಬಿಗ್ ಬಾಸ್ 3 ಸೀಸನ್ ಗಳನ್ನು ನಟ ನಾಗರ್ಜುನ ಹೋಸ್ಟ್ ಮಾಡಿದ್ದರು. ಬಿಗ್ ಬಾಸ್ ಸೀಸನ್ 4 ರಲಿ ನಟ ನಾಗರ್ಜುನ ಜೊತೆಗೆ ನಟಿ ಸಮಂತಾ ಕೂಡ ಒಂದು ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಗ್ ಬಾಸ್ ನ ಹೊಸ ಸೀಸನ್ ಬರುತ್ತಿದ್ದು, ಈ ಸೀಸನ್ ನ ಹೋಸ್ಟ್ ಆಗಿ ನಾಗಾರ್ಜುನ ಬದಲಿಗೆ ಸಮಂತಾ ಇರಲಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ತಂಡ ಈ ಬಾರಿ ಬಿಗ್ ಬಾಸ್ ಸೀಸನ್ ನಡೆಸಿಕೊಡಲು ನಟಿ ಸಮಂತಾ ಅವರನ್ನು ಕರೆತರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಸೀಸನ್ ಗಾಗಿ ಸಮಂತಾ ಅವರಿಗೆ ಬಾರಿ ದೊಡ್ಡ ಮೊತ್ತಡ ಸಂಭಾವನೆಯನ್ನೇ ಆಫ್ಹರ್ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತವಾದ ಮಾಹಿತಿ ದೊರೆಕಿಲ್ಲ.