ನಾಗ ಚೈತನ್ಯ ನಿಂದ ದೂರವಾದ ಸಮಂತಾ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ದಶಕಕ್ಕಿಂತ ಹೆಚಿನ ಸಮಯದಿಂದ ಸಕ್ರಿಯವಾಗಿದ್ದು, ತಮಗಿರುವ ಬೇಡಿಕೆಯನ್ನು ಆಗಿನಿಂದ ಈಗಿನವರೆಗೂ ಅದೇ ರೀತಿ ಉಳಿಸಿಕೊಂಡು ಬಂದಿರುವವರು ನಟಿ ಸಮಂತಾ. ಈಗಲೂ ಕೂಡ ಸಮಂತಾ ಅಂದ್ರೆ ಅಭಿಮಾನಿಗಳಿಗೆ ಅಷ್ಟೇ ಅಭಿಮಾನ ಮತ್ತು ಪ್ರೀತಿ. 4 ವರ್ಷಗಳ ಹಿಂದೆ ಮದುವೆಯಾದ ನಟಿ ಸಮಂತಾ,ಕಳೆದ ವರ್ಷ ಪತಿ ನಾಗಚೈತನ್ಯ ಅವರಿಂದ ದೂರವಾಗಿ ಒಂಟಿಯಾಗಿದ್ದಾರೆ. ವಿಚ್ಛೇದನದ ವಿಚಾರ ಹೊರಬಂದಾಗಿನಿಂದಲೂ ಸಮಂತಾ ಬಗ್ಗೆ ಹಲವು ವಿಚಾರಗಳು ಸುದ್ದಿಯಾಗಿದ್ದವು. ಹೆಚ್ಚಾಗಿ ಜನರ ಬಾಯಿಗೆ ಸಿಕ್ಕಿದ್ದು ಸಮಂತಾ ಆಸ್ತಿ ವಿಚಾರ, 200 ಕೋಟಿ ಜೀವನಾಂಶ ಪಡೆದಿದ್ದಾರೆ, ಸಮಂತಾ ಬಳಿ ಅಷ್ಟು ಆಸ್ತಿ ಇದೆ, ಇಷ್ಟು ಆಸ್ತಿ ಇದೆ ಎನ್ನುವ ಸುದ್ದಿಗಳು ಜೋರಾಗಿಯೇ ಸದ್ದು ಮಾಡಿದ್ದವು, ಆದರೆ ಕೆಲವು ತೆಲುಗು ಮಾಧ್ಯಮಗಳು ಹೇಳುವ ಪ್ರಕಾರ ಸಮಂತಾ ಬಳಿ ಎಲ್ಲರೂ ಅಂದುಕೊಂಡಿರುವಷ್ಟು ಆಸ್ತಿ ಇಲ್ಲ ಎನ್ನಲಾಗುತ್ತಿದೆ. ಹಾಗಿದ್ದರೆ ಸಮಂತಾ ಬಳಿ ನಿಜಕ್ಕೂ ಎಷ್ಟು ಆಸ್ತಿ ಇದೆ ಗೊತ್ತಾ?

ನಟಿ ಸಮಂತಾ ಹುಟ್ಟಿ ಬೆಳೆದಿದ್ದು ಮಧ್ಯಮವರ್ಗದ ಕುಟುಂಬದಲ್ಲಿ. ಪಾಕೆಟ್ ಮನಿಗಾಗಿ ಮಾಡೆಲಿಂಗ್ ಶುರು ಮಾಡಿದ್ದರು ಈ ನಟಿ. ಚೆನ್ನಾಗಿ ಓದಿ, ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಕೆಲಸ ಪಡೆದು, ವಿದೇಶದಲ್ಲೇ ಸೆಟ್ಲ್ ಅಗಬೇಕು ಎಂದು ಜೀವನದ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದವರು ನಟಿ ಸಮಂತಾ. ಆದರೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲದ ಕಾರಣ ಉನ್ನತ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ. ಸಮಂತಾ ಮಾಡೆಲಿಂಗ್ ಮಾಡುತ್ತಿದ್ದ ಕಾರಣ ಸಿನಿಮಾ ಅವಕಾಶಗಳು ಕೂಡ ಸುಲಭವಾಗಿ ಸಿಕ್ಕವು. ಮೊದಲು ತಮಿಳು ಸಿನಿಮಾದಲ್ಲಿ ಅಭಿನಯಿಸಿದ ಸಮಂತಾ ನಂತರ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು.

ಆರಂಭದಿಂದಲೇ ಹಿಟ್ ಸಿನಿಮಾಗಳಲ್ಲಿ ನಟಿಸಿ, ತೆಲುಗು ಮತ್ತು ತಮಿಳು ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡರು ಸಮಂತಾ. ಸಮಂತಾ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಆದ ಕಾರಣ ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡರು. ಇವರಿಗೆ ಇರುವ ಫ್ಯಾನ್ ಬೇಸ್ ಸಹ ಹೆಚ್ಚಾಗುತ್ತಾ ಹೋಯಿತು. ಸಮಂತಾ ಅಂದ್ರೆ ಅಭಿಮಾನಿಗಳಲ್ಲಿ ದೊಡ್ಡ ಕ್ರೇಜ್. ಸಮಂತಾ ಸಿನಿಮಾದಲ್ಲಿ ನಟಿಸಿದ್ದಾರೆ ಆ ಸಿನಿಮಾ ಸೂಪರ್ ಹಿಟ್, ಎಲ್ಲಾ ಸ್ಟಾರ್ ನಟರಿಗೂ ಸಮಂತಾ ಲಕ್ಕಿ ಹೀರೋಯಿನ್ ಎನ್ನುವ ಮಾತುಗಳು ಸಹ ಕೇಳಿಬರುತ್ತಿದ್ದವು. ಹೀಗೆ ಚಿತ್ರರಂಗದಲ್ಲಿ ಸಮಂತಾಗೆ ಇದ್ದ ಜನಪ್ರಿಯತೆ ಹೆಚ್ಚಾಗುತ್ತಲೇ ಹೋಯಿತು.

ಅಕ್ಕಿನೇನಿ ಕುಟುಂಬದ ಕುಡಿ ನಾಗಚೈತನ್ಯ ಅವರನ್ನು ಸುಮಾರು 8 ರಿಂದ 9 ವರ್ಷಗಳ ಕಾಲ ಪ್ರೀತಿ ಮಾಡಿ, 2017ರಲ್ಲಿ ಮದುವೆಯಾದರು ನಟಿ ಸಮಂತಾ. ಈ ಜೋಡಿ ಬಹಳ ಮುದ್ದಾಗಿದ್ದು, ಒಬ್ಬರನ್ನೊಬ್ಬರು ತುಂಬಾ ಪ್ರೀತಿ ಮಾಡುತ್ತಿದ್ದರು. ಇಬ್ಬರು ಜೊತೆಯಾಗಿ ವಾಸ ಮಾಡಲು ಒಂದು ಡ್ಯುಪ್ಲೆಕ್ಸ್ ಫ್ಲ್ಯಾಟ್ ಖರೀದಿ ಮಾಡಿದ್ದರು ನಾಗಚೈತನ್ಯ, ಅದೇ ಮನೆಯಲ್ಲಿ ಅದೇ ಮನೆಯಲ್ಲಿ ನಾಲ್ಕು ವರ್ಷಗಳ ಕಾಲ ಸಮಂತಾ ಮತ್ತು ನಾಗಚೈತನ್ಯ ವಾಸವಾಗಿದ್ದರು. ವಿಚ್ಛೇದನದ ವಿಚಾರದಲ್ಲಿ ಹಲವು ಮಾತುಗಳು ಸಹ ಕೇಳಿಬಂದಿದ್ದವ.

ಸಮಂತಾ 200 ಕೋಟಿ ಹಣ ಪಡೆದು ವಿಚ್ಛೇದನ ಪಡೆದುಕೊಂಡಿದ್ದಾರೆ, ಸಮಂತಾ ಮತ್ತು ಚೈತನ್ಯ ಇದ್ದ ಫ್ಲ್ಯಾಟ್ ಅನ್ನು ಸಮಂತಾ ಅವರೇ ಇಟ್ಟುಕೊಳ್ಳಲಿದ್ದಾರೆ, ಸಮಂತಾ ಹಣಕ್ಕಾಗಿಯೇ ದಾಂಪತ್ಯ ಜೀವನ ಮುರಿದುಕೊಂಡಿದ್ದಾರೆ ಎಂದೆಲ್ಲಾ ಹಲವು ಸುದ್ದಿಗಳು ಕೇಳಿಬಂದಿದ್ದವು. ಆದರೆ ಅದೆಲ್ಲವೂ ಸುಳ್ಳಾಗಿದೆ. ವಿಚ್ಛೇದನದ ನಂತರ ಸಮಂತಾ ನಾಗಚೈತನ್ಯ ಅವರ ಫ್ಲ್ಯಾಟ್ ಇಂದ ಹೊರಬಂದು, ಬಾಡಿಗೆ ಫ್ಲ್ಯಾಟ್ ನಲ್ಲಿದ್ದಾರೆ ಎನ್ನಲಾಗುತ್ತಿದೆ. ಹಾಗೂ ಈ ಜೋಡಿ ಜೊತೆಯಾಗಿ ನಾಲ್ಕು ವರ್ಷಗಳ ಕಾಲ ಇದ್ದ ಆ ಫ್ಲ್ಯಾಟ್ ಅನ್ನು ನಾಗಚೈತನ್ಯ ಮಾರಿದ್ದಾರಂತೆ.

ಹೀಗಾಗಿ ಸಮಂತಾ ಯಾವುದೇ ರೀತಿಯ ಜೀವನಾಂಶ ಪಡೆದಿಲ್ಲ ಎನ್ನುವುದು ಗೊತ್ತಾಗುತ್ತಿದೆ. ನಟಿ ಸಮಂತಾಗೆ ಆರಂಭದ ದಿನಗಳಲ್ಲಿ ಹೊಸ ನಟಿ ಎನ್ನುವ ಕಾರಣಕ್ಕೆ ಹೆಚಿನ ಸಂಭಾವನೆ ಸಿಗುತ್ತಿರಲಿಲ್ಲ, ಈಗಷ್ಟೇ ಅವರಿಗೆ ದುಬಾರಿ ಸಂಭಾವನೆ ಸಿಗುತ್ತಿದೆ. ಸಮಂತಾ ಬಳಿ, ಹೈದರಾಬಾದ್ ನಲ್ಲಿ ಒಂದು ಫ್ಲ್ಯಾಟ್ ಹಾಗೂ ಚೆನ್ನೈನಲ್ಲಿ ಒಂದು ಫ್ಲ್ಯಾಟ್ ಮತ್ತು ಹೈದರಾಬಾದ್ ನ ಎಸ್.ಎನ್.ಎಸ್ ಟರ್ಮಿನಸ್ ಬಳಿ ಒಂದು ಕಮರ್ಷಿಯಲ್ ಪ್ರಾಪರ್ಟಿ ಇದೆ, ಇದಿಷ್ಟೇ ಸಮಂತಾ ಬಳಿ ಇರುವ ಆಸ್ತಿ ಎನ್ನಲಾಗುತ್ತಿದೆ. ಇಷ್ಟು ವರ್ಷ ದುಡಿದ ಹಣದಲ್ಲಿ ಸಮಂತಾ ಖರೀದಿ ಮಾಡಿರುವುದು ಇಷ್ಟು, ಇವುಗಳಿಂದ ಪ್ರತಿ ತಿಂಗಳು ಸಾವಿರಗಟ್ಟಲೆ ಬಾಡಿಗೆ ಬರುತ್ತದೆಯಂತೆ. ಸಮಂತಾ ತನ್ನ ಕುಟುಂಬವನ್ನು ನೀಡಿಕೊಳ್ಳಬೇಕಾದ ಕಾರಣ, ಅದೆಲ್ಲದಕ್ಕೂ ಹೆಚ್ಚಿನ ಹಣ ಖರ್ಚಾಗುತ್ತಿತ್ತು ಎಂದು ತೆಲುಗು ಮಾಧ್ಯಮಗಳು ನೀಡಿರುವ ಮಾಹಿತಿಗಳ ಪ್ರಕಾರ ತಿಳಿದುಬಂದಿದೆ. ಎಲ್ಲರೂ ಅಂದುಕೊಂಡಿರುವಷ್ಟು ಶ್ರೀಮಂತೆ ಇವರಲ್ಲಿ, ಪುಷ್ಪ ಸಿನಿಮಾದ ಹಾದಿಗಾಗಿ 5 ಕೋಟಿ ಸಂಭಾವನೆ ಪಡೆದಿರುವ ಸಮಂತಾ ಈಗ ಸಾಲು ಸಾಲು ಸಿನಿಮಾಗಳಿಗೆ ಒಪ್ಪಿಗೆ ನೀಡುತ್ತಿದ್ದಾರೆ. ಇನ್ನುಮುಂದೆ ಒಳ್ಳೆಯ ರೀತಿಯಲ್ಲಿ ಜೀವನ ರೂಪಿಸಿಕೊಳ್ಳುವ ಪ್ಲಾನ್ ಸಮಂತಾ ಅವರದ್ದು.