120 ಅಡಿ ಕೊಳವೆ ಬಾವಿಗೆ ಬಿದ್ದ ಮಗು.. ಕಾಪಾಡಲು ಸೀರೆ ಬಿಚ್ಚಿ ಕೊಟ್ಟ ತಾಯಿ.. ಆದರೆ ಕೊನೆಗೆ ಏನಾಯಿತು ಗೊತ್ತಾ?

ಕೊಳವೆ ಬಾವಿ ಕೊರೆಸುವ ಕೆಲವರ ಬೇಜವಾಬ್ದಾರಿತನದಿಂದ ಇದುವರೆಗೂ ಅದೆಷ್ಟೋ ಪುಟ್ಟ ಮಕ್ಕಳು ಆಡಲು ಹೋಗಿ ಬಿದ್ದು ಜೀವ ಕಳೆದುಕೊಂಡ ಉದಾಹರಣೆಗಳಿವೆ.. ಆದರೂ ಕೂಡ ಬುದ್ಧಿ ಬಾರದ ಕೆಲವರು ಈಗಲೂ ಸಹ ಕೊಳವೆ ಬಾವಿ ಕೊರೆಸಿ ಅದನ್ನು ಕನಿಷ್ಠ ಪಕ್ಷ ಕಲ್ಲಿನಿಂದಲೂ ಮುಚ್ಚದೇ ಹಾಗೆ ತೆರಳುತ್ತಾರೆ..

ಇದೀಗ ಅಂತಹುದೇ ಒಂದು ಮುಚ್ಚದ ಕೊಳವೆ ಬಾವಿಯಲ್ಲಿ ಪುಟ್ಟ ಕಂದನೊಂದು ಬಿದ್ದ ಘಟನೆ ನಿನ್ನೆ ರಾತ್ರಿ ನಡೆದಿತ್ತು.. ಸಾಯಿ ವರ್ಧನ್ ಎಂಬ 3 ವರ್ಷದ ಮಗು ಬುಧವಾರ ರಾತ್ರಿ ತೆಲಂಗಾಣದ ಮೆಡಕ್ ಜಿಲ್ಲೆಯ ಪಪನ್ನಪೆಟ್ ಮಂಡಲ್ ಸಮೀಪ ಪೊಡ್ಚನಂಪಲ್ಲಿ ಗ್ರಾಮದಲ್ಲಿ ಹೊಸದಾಗಿ ಕೊರೆಸಿದ್ದ ಬೋರ್‌ವೆಲ್‌ಗೆ ಬಿದ್ದಿತ್ತು.. ಹೌದು ಇತ್ತೀಚೆಗೆ ಸಾಯಿ ವರ್ಧನ್ ಎಂಬ ಮಗುವಿನ ತಾತ ಕೊಳವೆ ಬಾವಿಗಳನ್ನು ಕೊರೆಸಿದ್ದರು. ನೀರು ಸಿಗದಿದ್ದಾಗ ಬುಧವಾರ ಮತ್ತೊಂದು ಬೋರ್‌ವೆಲ್‌ ಕೊರೆಸಿದ್ದರು. ಆದರೆ ಅದರಲ್ಲಿಯೂ ನೀರು ಸಿಗಲಿಲ್ಲವೆಂದು ಬೇಸರಗೊಂಡು ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಟ್ಟುಬಿಟ್ಟಿದ್ದರು.. ಆದರೆ ತನ್ನ ಮೊಮ್ಮಗನೇ ಆ ಕೊಳವೇ ಬಾವಿಗೆ ಬೀಳುತ್ತಾನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎನಿಸುತ್ತದೆ‌‌.. ಗದ್ದೆ ಪಕ್ಕದ ಮನೆಯಲ್ಲಿ ಸಾಯಿ ವರ್ಧನ್ ತಂದೆ ಮತ್ತು ತಾಯಿ ಮತ್ತಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.

ನಿನ್ನೆ ಸಂಜೆ 5 ಗಂಟೆಗೆ ಬಾಲಕ ತನ್ನ ಅಜ್ಜ ಮತ್ತು ತಂದೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ.. ಅಲ್ಲಿಯೇ ಇದ್ದ ತಾಯಿ ಓಡಿ ಬಂದು ತಕ್ಷಣ ತಾನು ಉಟ್ಟಿದ್ದ ಸೀರೆಯನ್ನು ಬಿಚ್ಚಿ ಕೊಳವೆ ಬಾವಿಯೊಳಗೆ ಇಳಿಸಿದ್ದಾರೆ. ಅದನ್ನು ಹಿಡಿದುಕೊಂಡಾದರೂ ನನ್ನ ಮಗು ಮೇಲಕ್ಕೆ ಬರಬಹುದು ಎಂಬ ಸಣ್ಣ ಭರವಸೆಯಲ್ಲಿ.. ಆದರೆ ಆ ಮಗುವಿಗೆ ಅಮ್ಮನ ಸೀರೆ ಸಿಗಲೇ ಇಲ್ಲ.. ಮೇಲೆ ಬರುವುದು ಎಂಬ ಸಣ್ಣ ಭರವಸೆ ಕಣ್ಣೀರಾಯಿತಷ್ಟೇ..

ನಂತರ ಮಾಹಿತಿ ತಿಳಿದು ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಬಂದು 120 ಅಡಿ ತೆರೆದ ಬೋರ್‌ವೆಲ್‌ಗೆ ಆಮ್ಲಜನಕ ಸರಬರಾಜು ಮಾಡಿದೆ. ಅಲ್ಲದೇ ಬಾಲಕನನ್ನು ರಕ್ಷಿಸಲು ಪಕ್ಕದಲ್ಲಿ ಮಣ್ಣನ್ನು ಅಗೆಯಲಾಗಿತ್ತು. ಆದರೆ ಬಾಲಕನಿಗೆ ಸರಿಯಾಗಿ ಆಮ್ಲಜನಕ ಸಿಗದೆ ಜೀವ ಕಳೆದುಕೊಂಡಿತು..‌ ಸತತ ಕಾರ್ಯಚರಣೆಯ ಬಳಿಕ ಇಂದು ಬೆಳಗ್ಗೆ ಮಗುವಿನ ದೇಹವನ್ನು ಹೊರತೆಗೆದಿದ್ದಾರೆ.. ನಿನ್ನೆಯಷ್ಟೇ ಆಡಿಕೊಂಡು ಇದ್ದ ಮಗು ಸಣ್ಣ ಬೇಜವಾಬ್ದರಿತನದಿಂದ ಇಂದು ಇಲ್ಲದಂತಾಯಿತು….

ಮಕ್ಕಳ ಮೇಲೆ ನೂರಾರು ಕನಸು ಕಂಡಿರ್ತಾರೆ.. ಆದರೆ ಅಂತಹ ಮಕ್ಕಳೇ ಕಣ್ಣ ಮುಂದೆ ಇಲ್ಲವಾದಾಗ ಆ ತಾಯಿಯ ನೋವು ಅನುಭವಿಸಿದವರಿಗಷ್ಟೇ ಗೊತ್ತು.. ಇನ್ನಾದರೂ ಇಂತಹ ಅನಾಹುತಗಳು ನಡೆಯದಿರಲಿ.. ಕೊಳವೆ ಬಾವಿ ತೆಗೆಸುವವರು ದಯವಿಟ್ಟು ಸರಿಗಾಗಿ ಅದನ್ನು ಮುಚ್ಚಿ.. ನಿಮ್ಮ ಮನೆಯಲ್ಲೂ ಈ ರೀತಿ ಘಟನೆ ಆಗುವವರೆಗೆ ಕಾಯಬೇಡಿ‌‌..