ಸಿನಿಮಾ ಇಂಡಸ್ಟ್ರಿಗೆ ಬಂದ ಹನ್ನೆರೆಡೇ ವರ್ಷಕ್ಕೇ ಸಾಯಿ ಪಲ್ಲವಿ ಮಾಡಿರೋ ಆಸ್ತಿ ನೋಡಿ.. ಶಾಕ್ ಆಗ್ತೀರಾ..

ಇತ್ತೀಚಿನ ದಿನಗಳಲ್ಲಿ ಲೇಡಿ ಪವರ್ ಸ್ಟಾರ್ ಎಂದೇ ಫೇಮಸ್ ಆಗುತ್ತಿರುವ ನಟಿ ಸಾಯಿಪಲ್ಲವಿ ಅವರು. ಸರಳ ಸ್ವಭಾವ ಮತ್ತು ಮೇಕಪ್ ಇಲ್ಲದೆ ನ್ಯಾಚುರಲ್ ಆಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಯಿಪಲ್ಲವಿ ಜನರು ಅಭಿಮಾನಿಗಳಿಗೆ ಬಹಳ ಹತ್ತಿರವಾಗಿದ್ದಾರೆ. ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಸಾಯಿಪಲ್ಲವಿ ಅವರಿಗೆ ದೊಡ್ಡ ಮಟ್ಟದಲ್ಲಿ ಕ್ರೇಜ್ ಇದೆ. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಕೆಲವೇ ವರ್ಷಗಳಾಗಿವೆ. 7 ವರ್ಷದಲ್ಲಿ ಸಾಯಿಪಲ್ಲವಿ ಅವರು ಗಳಿಸಿರುವ ಆಸ್ತಿ ಎಷ್ಟು ಗೊತ್ತಾ? ತಿಳಿದರೆ ನೀವು ಕೂಡ ಶಾಕ್ ಆಗ್ತೀರಾ.

ನಟಿ ಸಾಯಿಪಲ್ಲವಿ ಮೂಲತಃ ಊಟಿ ಬಳಿ ಇರುವ ಕೋಟಗಿರಿ ಎಂಬ ಪುಟ್ಟ ಊರಿನವರು, ಬಡಗ ಸಮುದಾಯಕ್ಕೆ ಸೇರಿದವರು. ಇವರ ತಂದೆ ಸೆಂತಾಮರೈ ಕಣ್ಣನ್ ಮತ್ತು ತಾಯಿ ರಾಧಾ ಅವರು. ಇವರು ಹುಟ್ಟಿಬೆಳೆದದ್ದು ಕೊಯಂಬತ್ತೂರಿನಲ್ಲಿ. ಚಿಕ್ಕ ವಯಸ್ಸಿನಿಂದಲೂ ಡ್ಯಾನ್ಸ್ ಎಂದರೆ ಈಕೆಗೆ ಬಹಳ ಇಷ್ಟವಿತ್ತು. ಯಾವ ಗುರುವು ಇಲ್ಲದೆ, ಡ್ಯಾನ್ಸ್ ಅಭ್ಯಾಸ ಮಾಡಿ, ಕಲಿತವರು ಸಾಯಿಪಲ್ಲವಿ, ಡ್ಯಾನ್ಸ್ ವಿಚಾರದಲ್ಲಿ ಸಾಯಿಪಲ್ಲವಿ ಅವರಿಗೆ ಸಪೋರ್ಟ್ ಮಾಡುತ್ತಾ ಇದ್ದದ್ದು ಅವರ ತಾಯಿ ರಾಧಾ ಅವರು.

ಡ್ಯಾನ್ಸ್ ಪರ್ಫಾರ್ಮೆನ್ಸ್ ಗಳನ್ನು ನೀಡುತ್ತಿದ್ದ ಸಮಯದಲ್ಲಿ, ಸಿನಿಮಾ ನಿರ್ದೇಶಕರೊಬ್ಬರು ಸಾಯಿಪಲ್ಲವಿ ಅವರನ್ನು ನೋಡಿ, ಸಿನಿಮಾ ಒಂದರಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಅವಕಾಶ ನೀಡಿದ್ದರು, ಧಾಮ್ ಧೂಮ್ ಎನ್ನುವ ಸಿನಿಮಾದಲ್ಲಿ ನಟಿ ಕಂಗನಾ ರಣಾವತ್ ಅವರೊಡನೆ ಪುಟ್ಟ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಮತ್ತೊಂದು ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಹೊರತಾಗಿ, ಬಾಲಕಿಯಾಗಿ ಇನ್ಯಾವುದೆ ಸಿನಿಮಾದಲ್ಲಿ ಸಾಯಿಪಲ್ಲವಿ ಕಾಣಿಸಿಕೊಂಡಿರಲಿಲ್ಲ. ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದರು ಸಾಯಿಪಲ್ಲವಿ.

ನಂತರ ಜಾರ್ಜಿಯಾಗೆ ಮೆಡಿಸನ್ ಓದಲು ಹೋದ ಬಳಿಕ, 2015 ರಲ್ಲಿ ಮಲಯಾಳಂ ಸಿನಿಮಾ ಪ್ರೇಮಂ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, 2017ರಲ್ಲಿ ಫಿದಾ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸಾಯಿಪಲ್ಲವಿ ಅವರು ತಾವು ಆಯ್ಕೆಮಾಡಿಕೊಳ್ಳುವ ಪಾತ್ರಗಳ ಮೂಲಕ ಜನರಿಗೆ ಬಹಳ ಹತ್ತಿರವಾಗಿದ್ದಾರೆ. ಇವರು ಆಯ್ಕೆ ಮಾಡಿಕೊಳ್ಳುವ ಒಂದೊಂದು ಪಾತ್ರಗಳು ಸಹ ಜನರನ್ನು ಕಾಡುವಂಥ ಪಾತ್ರಗಳಾಗಿವೆ. ಗಾರ್ಗಿ ಸಿನಿಮಾ ಮೂಲಕ ಕನ್ನಡಕ್ಕೂ ಎಂಟ್ರಿ ಕೊಟ್ಟಿದ್ದಾರೆ ಸಾಯಿಪಲ್ಲವಿ. ಕನ್ನಡದಲ್ಲಿ ಸ್ವತಃ ಅವರೇ ಡಬ್ ಮಾಡಿ, ಪ್ರಶಂಸೆ ಪಡೆದುಕೊಂಡಿದ್ದರು..

ಇನ್ನು ಸಾಯಿಪಲ್ಲವಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ 7 ವರ್ಷಗಳಲ್ಲಿ ಅವರಃ ಗಳಿಸಿರುವ ಆಸ್ತಿಯ ವಿಚಾರ ಜೋರಾಗಿಯೇ ಚರ್ಚೆಯಾಗುತ್ತಿದೆ. ಸಾಯಿಪಲ್ಲವಿ ಅವರು ಸಂಭಾವನೆ ವಿಚಾರಕ್ಕಾಗಿ ಸುದ್ದಿಯಾಗಿರುವುದು ಕಡಿಮೆಯೇ, ಇವರು ಒಂದೊಂದು ಸಿನಿಮಾಗೆ 1.5 ಇಂದ 2 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ ಎನ್ನುವ ಮಾಹಿತಿ ಇದೆ, ಇವರ ಬಳಿ ಆಡಿ ಕ್ಯೂ3, ಮಿಕ್ಸ್ ಬಿ ಶಾಲ್ ಲ್ಯಾನ್ಸರ್ ಇವೊ ಎಕ್ಸ್, ಹಾಗೂ ಸುಜುಕಿ ಕಾರ್ ಇವರ ಬಳಿ ಇದೆ. ಇವರ ಒಟ್ಟು ಆಸ್ತಿ 29 ಕೋಟಿ ರೂಪಾಯಿ ಇದೆ ಎನ್ನಲಾಗುತ್ತಿದೆ.

ಸಾಯಿಪಲ್ಲವಿ ಅವರು ಗ್ಲಾಮರ್ ಇಂದ ದೂರವಿದ್ದು, ನೈಸರ್ಗಿಕವಾಗಿ ಇರಲು ಬಯಸುತ್ತಾರೆ. ನಮ್ಮ ಪಕ್ಕದ ಮನೆಯ ಹುಡುಗಿ, ಅಥವಾ ನಮ್ಮ ಮನೆಯ ಹುಡುಗಿ ಎನ್ನುವ ಹಾಗೆ ಜನರ ಮನಸ್ಸಿಗೆ ಹತ್ತಿರವಾಗುತ್ತಾರೆ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇಷ್ಟು ಕಡಿಮೆ ಸಮಯದಲ್ಲಿ 29 ಕೋಟಿ ಹಣ ಗಳಿಸಲು ಹೇಗೆ ಸಾಧ್ಯವಾಯಿತು ಎನ್ನುವ ಅನುಮಾನ ಸಹ ಹಲವರಲ್ಲಿ ಮೂಡಿದೆ. ನೆಟ್ಟಿಗರು ಮತ್ತು ಅಭಿಮಾನಿಗಳು ಶಾಕ್ ಆಗಿದ್ದಂತೂ ನಿಜ.