ಕನ್ನಡದ ಸೂಪರ್ ಹಿಟ್ ಧಾರಾವಾಹಿಯ ನಂತರ ಬೇರೆ ಅವಕಾಶವಿಲ್ಲ.. ಹಣಕ್ಕಾಗಿ ರಾತ್ರಿ ರಸ್ತೆಯಲ್ಲಿ ಟೀ ಮಾರುತ್ತಿದ್ದ ಕನ್ನಡ ಕಿರುತೆರೆಯ ಸ್ಟಾರ್ ನಟ..

ಈ ಜೀವನ ಅನ್ನೋದೆ ಹಾಗೆ ಯಾವಾಗ ಯಾವ ರೀತಿಯ ತಿರುವು ನೀಡುವುದೋ ಹೇಳಲಾಗದು.. ಕನ್ನಡ ಕಿರುತೆರೆ ಲೋಕದ ಅತ್ಯಂತ ಖ್ಯಾತ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸಿದ ನಟ ಯಶಸ್ಸು ಗಳಿಸಿದ ಆದರೆ ಆನಂತರ ಹಣಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿ ಕೊನೆಗೆ ತನ್ನ ಖರ್ಚುಗಳನ್ನು ನೋಡಿಕೊಳ್ಳುವ ಸಲುವಾಗಿ ರಾತ್ರಿ ಸಮಯದಲ್ಲಿ ಯಾರಿಗೂ ತಿಳಿಯದಂತೆ ರಸ್ತೆಗಳಲ್ಲಿ ಟೀ ಮಾರುತ್ತಿದ್ದರು.. ಹೌದು ಕಲಾವಿದರ ಬದುಕು ನೋಡುಗರಿಗೆ ಬಣ್ಣದ ಬದುಕಾಗಿ ಕಾಣುವುದು ಎಷ್ಟು ಸತ್ಯವೋ ಆದರೆ ಆ ಬದುಕನ್ನು ಅನುಭವಿಸುವ ಆ ಕಲಾವಿದರಿಗೆ ಆ ಕಷ್ಟ ಏನೆಂದು ತಿಳಿದಿರುತ್ತದೆ ಎಂಬುದು ಅಷ್ಟೇ ಸತ್ಯ.. ಹೌದು ಕಲಾವಿದರು ಒಮ್ಮೆ ತೆರೆ ಮೇಲೆ ಕಾಣಿಸಿಕೊಂಡರೆ ಸಾಕು ಅವರನ್ನು ಜನರು ಗುರುತಿಸಲು ಶುರು ಮಾಡುತ್ತಾರೆ..

ಆನಂತರ ಅವರು ತಮ್ಮ ಕಲಾ ಬದುಕಲ್ಲಿ ಸೋತರೂ ಸಹ ಅವರು ಮುಂದೆ ಬೇರೆ ಕೆಲಸ ಮಾಡುವುದು ಸಹ ಬಹಳ ಕಷ್ಟವಾಗುತ್ತದೆ.. ಅವಕಾಶಗಳು ಕಡಿಮೆಯಾಗುತ್ತದೆ.. ಆಗಲೇ ಎದುರಾಗೋದು ಆರ್ಥಿಕ ಕಷ್ಟಗಳು.. ಅಂತಹ ಕಷ್ಟಗಳನ್ನು ಎದುರಿಸಲಾಗದೇ ಸಾಕಷ್ಟು ಮಂದಿ ಬೇರೆ ವೃತ್ತಿ ಬದುಕಿಗೆ ಹೋಗಿದ್ದೂ ಉಂಟು.. ಮತ್ತಷ್ಟು ಜನ ದುಡುಕಿನ ನಿರ್ಧಾರ ಮಾಡಿ ಜೀವನ ಮುಗಿಸಿಕೊಂಡದ್ದೂ ಉಂಟು.. ಆದರೆ ಮತ್ತೊಂದಷ್ಟು ಮಂದಿ ಆ ಕಷ್ಟಗಳಿಗೆ ಸವಾಲೆಸೆದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಛಲ ಬಿಡದೆ ಮತ್ತೆ ಕಲಾವಿದನಾಗಿ ಮಿಂಚಿದ್ದೂ ಉಂಟು.. ಅಂತಹ ನಟನ ಜೀವನ ಕತೆ ಇದೆ..

ಹೌದು ಕನ್ನಡ ಕಿರುತೆರೆಯ ಖ್ಯಾತ ನಟ ಗಿಣಿರಾಮ ಧಾರಾವಾಹಿಯ ಹೀರೋ ನಟ ರಿತ್ವಿಕ್ ನೋಡಲು ಬಹಳ ಗಂಭೀರ ಸ್ವಭಾವದವರು.. ಆದರೆ ಆ ಗಂಭೀರ ಸ್ವಭಾವದ ಹಿಂದೆ ಹೇಳಿಕೊಳ್ಳಲಾಗದಷ್ಟು ನೋವಿದೆ.. ತೋರಿಕೊಳ್ಳಲಾಗದಷ್ಟು ಕಷ್ಟಗಳಿತ್ತು ಎಂಬುದು ಕೇಳಿದರೆ ನಿಜಕ್ಕೂ ಕಣ್ಣಂಚಲ್ಲಿ ನೀರು ಜಾರುತ್ತದೆ.. ಹೌದು ಹೆಂಡತಿ ಅಪ್ಪ ಅಮ್ಮ ಯಾರಿಗೂ ತಿಳಿಯದೇ ರಾತ್ರಿ ಸಮಯದಲ್ಲಿ ಸೈಕಲ್ ನಲ್ಲಿ ಟೀ ಮಾರಿ ಹಣ ಸಂಪಾದಿಸುತ್ತಿದ್ದರು ಇದೇ ರಿತ್ವಿಕ್..

ಹೌದು ಏಳು ವರ್ಷದ ಹಿಂದೆ ಅನುರೂಪ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರಿತ್ವಿಕ್ ಯಶಸ್ಸು ಕಂಡು ಹೆಸರು ಮಾಡಿದ್ದರು.. ಅದೇ ಹೆಸರಿನಿಂದಾಗಿ ಅವರಿಗೆ ಸಿನಿಮಾದಲ್ಲಿ ಅವಕಾಶವೂ ದೊರೆಯಿತು.. ಆದರೆ ಆ ಸಿನಿಮಾ ಸೋತಿತು.. ಮುಂದೆ ಯಾವ ಅವಕಾಶವೂ ಇಲ್ಲ.. ಇತ್ತ ಕಿರುತೆರೆಯೂ ಇಲ್ಲ.. ಆಗ ಜೀವನ ಮಾಡುವ ಸಲುವಾಗಿ ಸಾಕಷ್ಟು ಕೆಲಸಕ್ಕೆ ಸೇರಿಕೊಂಡರು.. ಎಲ್ಲಾ ಕಡೆಯೂ ನೀವು ಧಾರಾವಾಹಿಯಲ್ಲಿ ಮಾಡ್ತಿದ್ರಿ ಅಲ್ವಾ.. ನಿಮಗೆ ಇಲ್ಲಿ ಕೆಲಸ ಇಲ್ಲಾ ಅಂದರು.. ನೀವಿದ್ದರೆ ಜನ ಸೆಲ್ಫಿ ತೆಗೆದುಕೊಳ್ಳೋದೆ ಆಗತ್ತೆ ನೀವು ಬೇಡ ಎಂದು ಕೆಲವರು ಹೇಳಿದ್ರು..

ಆದರೆ ಒಮ್ಮೆ ಕಲಾವಿದನಾಗಿ ಗುರುತಿಸಿಕೊಂಡ ನಂತರ ಅದರಲ್ಲೇ ಮುಂದುವರೆಯಬೇಕು.. ಆದರೆ ಅದಕ್ಕೆ ಹಣ ಬೇಕು.. ನಮ್ಮ ಬಾಡಿ ಚೆನ್ನಾಗಿರಬೇಕು.. ನೋಡಲು ಚೆನ್ನಾಗಿರಬೇಕು.. ಇದಕ್ಕೆಲ್ಲಾ ಹಣ ಬೇಕು.. ಕೈಯಲ್ಲಿ ಕೆಲಸ ಇಲ್ಲ.. ಎಲ್ಲಿಂದ ಹಣ ತರಲಿ ಎಂದು ಆಲೋಚನೆ ಮಾಡುವಾಗ ಅವರಿಗೆ ತೋಚಿದ್ದೆ ರಾತ್ರಿ ಸಮಯದಲ್ಲಿ ಟೀ ಮಾರುವ ಕೆಲಸ.. ಹೌದು ರಾತ್ರಿ ಸಮಯದಲ್ಲಿ ನನ್ನ ಮುಖ ಯಾರಿಗೂ ಗೊತ್ತಾಗಲ್ಲ.. ನಾನು ಯಾರು ಅಂತ ಯಾರಿಗೂ ತಿಳಿಯೋದಿಲ್ಲ.. ನನ್ನನ್ನು ಯಾರೂ ಸಹ ಗುರುತಿಸೋದಿಲ್ಲ.. ನಾನು ಚೆನ್ನಾಗಿ ಕೆಲಸ ಮಾಡಬಹುದು.. ಒಂದಷ್ಟು ಹಣ ಸಂಪಾದನೆ ಮಾಡಬಹುದು ಎಂದು ಸಾಕಷ್ಟು ವರ್ಷಗಳ ಕಾಲ ಪ್ರತಿ ದಿನ ರಾತ್ರಿ ಸಮಯದಲ್ಲಿ ಹೈ ವೇ ಗಳಲ್ಲಿ ಟೀ ಮಾರುತ್ತಿದ್ದರು.. ಅದರಿಂದ ಬಂದ ಹಣದಲ್ಲಿ ಜೀವನ ಮಾಡುತ್ತಾ ಹಗಲಿನಲ್ಲಿ ಮತ್ತೆ ಅವಕಾಶ ಹುಡುಕಲು ಪ್ರಯತ್ನ ಮಾಡುತ್ತಿದ್ದರು..

ಇನ್ನು ಈ ಬಗ್ಗೆ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡು ರಿತ್ವಿಕ್ ಭಾವುಕರಾದರು.. ಹೌದು ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಳೆದ ಮೂರು ವರ್ಷದಿಂದಲೂ ಮನೆ ಮೆಚ್ಚಿದ ಮಗನಾಗಿ ಅವಾರ್ಡ್ ಪಡೆಯುತ್ತಿರುವ ರಿತ್ವಿಕ್ ಈ ಬಾರಿಯೂ ಎಲ್ಲರ ನೆಚ್ಚಿನ ಮನೆ ಮಗ ಅವಾರ್ಡ್ ಪಡೆದುಕೊಂಡು ಮಾತನಾಡಿದರು..

ಆ ಸಮಯದಲ್ಲಿ ಸ್ಕ್ರೀನ್ ಮೇಲೆ ರಾತ್ರಿ ಸಮಯದಲ್ಲಿ ಟೀ ಮಾರುತ್ತಿದ್ದ ಹುಡುಗನ ಫೋಟೋವೊಂದು ಬಂದಿತು.. ಅದನ್ನು ನೋಡಿ ತಮ್ಮ ಹಳೆಯ ದಿನಗಳನ್ನು ನೆನೆದ ರಿತ್ವಿಕ್ ಹಣಕ್ಕಾಗಿ ಆ ಕೆಲಸ ಮಾಡುತ್ತಿದ್ದ ವಿಚಾರವನ್ನು ತಿಳಿಸಿದರು.. ಕಷ್ಟ ಎಲ್ಲರಿಗೂ ಇರುತ್ತದೆ.. ಅದರಿಂದ ನನಗೇನೂ ಮುಜುಗರ ಇಲ್ಲ.. ನನಗೆ ಹೆಮ್ಮೆಯೂ ಇದೆ.. ಆದರೆ ಈ ವಿಚಾರ ನನ್ನ ಹೆಂಡತಿ ಅಪ್ಪ ಅಮ್ಮ ಯಾರಿಗೂ ಗೊತ್ತಿರಲಿಲ್ಲ.. ಬಹುಶಃ ಈಗ ಗೊತ್ತಾಗುತ್ತಿದೆ.. ಒಬ್ಬ ನಟನಿಗೆ ಮೊದಲ ಸಿನಿಮಾದ ಸೋಲು ಅನ್ನೋದು ಇದೆಯಲ್ಲಾ ಅದು ಕಲಿಸೋ ಪಾಠ ನಿಜಕ್ಕೂ ಜೀವನದಲ್ಲಿ ಮರೆಯೋಕೆ ಸಾಧ್ಯವಿಲ್ಲ.. ಅವತ್ತು ನಾನು ಅಷ್ಟೆಲ್ಲಾ ಕಷ್ಟ ಪಟ್ಟ ಕಾರಣಕ್ಕೇ ಇಂದು ಈ ಸಂತೋಷವನ್ನು ನಾನು ಅನುಭಬಿಸಲು ಸಾಧ್ಯ ಆಯ್ತು ಅನ್ಸತ್ತೆ.. ನನಗೆ ನನ್ನ ಜೀವನದ ಬಗ್ಗೆ ಹೆಮ್ಮೆ ಇದೆ ಎಂದು ಮತ್ತಷ್ಟು ಜನರಿಗೆ ಸ್ಪೂರ್ತಿಯಾದರು..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321