ಮಳೆಯಲಿ‌ ನಿಂತು ನಿಖಿಲ್ ರೇವತಿ‌ ಫೋಟೋ ಶೂಟ್..

ಸದ್ಯ ಸ್ಯಾಂಡಲ್ವುಡ್ ನ ಕ್ಯೂಟ್ ಜೋಡಿ.. ದೊಡ್ಡ ಗೌಡರ ಮೊಮ್ಮಗ ನಿಖಿಲ್ ಹಾಗೂ ಪತ್ನಿ ರೇವತಿ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.. ಹೌದು ಕಳೆದ ಏಪ್ರಿಲ್ 17 ರಂದು ಸರಳವಾಗಿ ರಾಮನಗರದ ಕೇತಗಾನಹಳ್ಳಿಯ ತಒಟದ ಮನೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಹಾಗೂ ರೇವತಿ ಅವರು ಆಗಾಗ ಸಾಮಾಜಿಕ ಜಾಲರಾಣದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ..

ಮದುವೆಯ ನಂತರ ನಿಖಿಲ್ ಎಲ್ಲಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಪ್ರಶ್ನೆಗೆ.. ಬಿಡದಿಯ ತೋಟದಲ್ಲಿ ಮಡದಿಯ ಕೈ ಹಿಡಿದು ಸಾಗುವ ಫೋಟೋವೊಂದನ್ನು ಹಂಚಿಕೊಂಡು ತಮ್ಮದೇ ಸ್ಟೈಲ್ ನಲ್ಲಿ ಉತ್ತರಿಸಿದ್ದರು.. ಫೋಟೋಗಳು ಬಹಳಷ್ಟು ವೈರಲ್ ಆಗಿದ್ದವು..

ಇದೀಗ ಬೆಂಗಳೂರಿನಲ್ಲಿ ಬೀಳುತ್ತಿರುವ ಮಳೆಯಲಿ ನಿಂತು ಫೋಟೋ ಶೂಟ್ ಮಾಡಿಸಿಕೊಂಡಿದ್ದು ಹೃದಯದ ಎಮೋಜಿ ಜೊತೆಗೆ ನಿಖಿಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.. ಎಂದಿನಂತೆ ಈ ಫೋಟೋ ಕೂಡ ನಿಮಿಷಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಈ ನೂತನ ಜೋಡಿಗೆ ಶುಭ ಹಾರೈಸಿದ್ದಾರೆ..

ಫೇಬ್ರವರಿ 10 ರಂದು ಬೆಂಗಳೂರಿನ ಖಾಸಗಿ ಹೊಟೆಲ್ ಒಂದರಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ.. ಲಾಕ್ ಡೌನ್ ಇದ್ದ ಕಾರಣ ರಾಮನಗರದ ಜಾನಪದ ಲೋಕದ ಬಳಿ ಜನರ ನಡುವೆ ನಡೆಯಬೇಕಾದ ಮದುವೆ ಕ್ಯಾನ್ಸಲ್ ಆಗಿ ಸರಳವಾಗಿ ಕುಟುಂಬಸ್ಥರ ನಡುವೆ ನಡೆಯುವಂತಾಯಿತು.. ಲಾಕ್ ಡೌನ್ ಗೂ ಮುನ್ನ ನಿಖಿಲ್ ಅವರ ಹೊಸ ಸಿನಿಮಾವೊಂದು ಅನೌನ್ಸ್ ಆಗಿತ್ತು.. ಆದರೆ ಲಾಕ್ ಡೌನ್ ಇದ್ದ ಕಾರಣ ಯಾವುದೇ ಶೂಟಿಂಗ್ ಇಲ್ಲದ ಕಾರಣ ನೂತನ ಜೋಡಿ ಒಟ್ಟಾಗಿ ಸಮಯ ಕಳೆಯಲು ಅವಕಾಶ ಸಿಕ್ಕಂತಾಯಿತು.. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ನಿಖಿಲ್ ಅವರು ಆಗಾಗ ತಮ್ಮ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ..