ಪತ್ನಿಗೆ ಕೊಟ್ಟ ಮಾತು ನೆರವೇರಿಸಿದ ನಿಖಿಲ್.. ಸೀಮಂತದಲ್ಲಿ ರೇವತಿಗಾಗಿ..

ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಸಧ್ಯ ಇನ್ನು ಕೆಲವೇ ದಿನಗಳಲ್ಲಿ ತಂದೆಯಾಗುವ ಸಂಭ್ರಮದಲ್ಲಿದ್ದು ನಿನ್ನೆಯಷ್ಟೇ ಮಡದಿ ರೇವತಿಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.. ಹೌದು ನಿಖಿಲ್ ಹಾಗೂ ರೇವತಿ ಜೋಡಿ ಕಳೆದ ವರ್ಷ ಏಪ್ರಿಲ್ ಹದಿನೇಳರಂದು ಸರಳವಾಗಿ ರಾಮನಗರದ ತಮ್ಮ ತೋಟದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಅದ್ಧೂರಿಯಾಗಿ ಸಾವಿರಾರು ಜನರ ನಡುವೆ ನೆರವೇರಬೇಕಿದ್ದ ಮದುವೆ ಸಮಾರಂಭ ಕೊರೊನಾ ಕಾರಣದಿಂದಾಗಿ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತ್ತು.. ಆ ಬಳಿಕ ಅರತಕ್ಷತೆ ಕಾರ್ಯಕ್ರಮ ಮಾಡಬೇಕು ಎಂದುಕೊಂಡರೂ ಸಹ ಕೊರೊನಾ ನಿಯಮಾವಳಿಗಳಿಂದ ಯಾವುದೂ ಸಹ ಕೈಗೂಡಲಿಲ್ಲ..

ಅಭಿಮಾನಿಗಳು ಸ್ನೇಹಿತರು ಆಪ್ತರು ಎಲ್ಲರೂ ಸಹ ಸಾಮಾಜಿಕ ಜಾಲತಾಣದಲ್ಲಿಯೇ ನಿಖಿಲ್ ಹಾಗೂ ರೇವತಿ ಜೋಡಿಗೆ ಶುಭಾಶಯ ತಿಳಿಸಿ ಶುಭ ಹಾರೈಸಿದ್ದರು‌.. ನೋಡುನೋಡುತ್ತಿದ್ದಂತೆ ವರ್ಷ ಕಳೆದು ಹೋಯಿತು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸಿಹಿ ಸುದ್ದಿ ಕೇಳುತ್ತಿದ್ದಂತೆ ಇತ್ತ ಕುಮಾರಸ್ವಾಮಿ ಅವರು ಸೊಸೆ ರೇವತಿ ಅವರ ಹುಟ್ಟುಹಬ್ಬದ ದಿನ ತಮ್ಮ ಕುಟುಂಬಕ್ಕೆ ಮೊಮ್ಮಗುವಿನ ಆಗಮನದ ಸಂತೋಷವನ್ನು ಹಂಚಿಕೊಂಡಿದ್ದರು.. ಆ ಬಳಿಕ ನಿಖಿಲ್ ಅವರೂ ಸಹ ರಾಜಕೀಯದ ಸಭೆಯೊಂದರಲ್ಲಿ ಮಾದ್ಯಮದವರ ಜೊತೆ ಮಾತನಾಡಿ ತಂದೆಯಾಗುತ್ತಿರುವ ಸಂತೋಷ ಹಂಚಿಕೊಂಡಿದ್ದರು..

ಇನ್ನು ಇದೀಗ ಪತ್ನಿ ರೇವತಿ ಅವರಿಗೆ ಎಂಟು ತಿಂಗಳು ತುಂಬಿದ್ದು ಅದ್ಧೂರೊಯಾಗಿ ತನ್ನ ಪತ್ನಿಯ ಕನಸಿನಂತೆ ಸೀಮಂತ ಶಾಸ್ತ್ರವನ್ನು ನಿಖಿಲ್ ನೆರವೇರಿಸಿದ್ದಾರೆ.. ಹೌದು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿನ ಮಾನ್ವಿ ಕನ್ವೆನ್ಷನ್ ಹಾಲ್ ನಲ್ಲಿ ತಮ್ಮ ಮಡದಿಯ ಕನಸಿನಂತೆ ಎಲ್ಲವನ್ನೂ ಖುದ್ದು ನಿಖಿಲ್ ಅವರೇ ಮುಂದೆ ನಿಂತು ವ್ಯವಸ್ಥೆ ಮಾಡಿ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಕುಟುಂಬಸ್ಥರು ಸ್ನೇಹಿತರು ಹಾಗೂ ರಾಜಕೀಯ ಮತ್ತು ಸಿನಿಮಾದ ಆಪ್ತರ ನಡುವೆ ನೆರವೇರಿಸಿದ್ದು ಗರ್ಭಿಣಿ ಪತ್ನಿಯನ್ನು ಸಂತೋಷಪಡಿಸಿದ್ದಾರೆ.. ಹೌದು ನಿಖಿಲ್ ಅವರು ರೇವತಿ ಅವರನ್ನು ಮದುವೆಯಾದ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಅವರ ಹಳೆಯ ನಿಶ್ಚಿತಾರ್ಥದ ಫೋಟೋಗಳನ್ನು ಇಟ್ಟು ಕೆಲವರು ಟೀಕಿಸಿದ್ದೂ ಉಂಟು..

ಆದರೆ ಪ್ರತಿಯೊಬ್ಬರ ಜೀವನದಲ್ಲಿಯೂ ಏರು ಪೇರುಗಳು ಸಹಜ ಎನ್ನುವಂತೆ ನಿಖಿಲ್ ಅವರು ಅವರನ್ನು ಮದುವೆಯಾದ ಬಳಿಕ ಅಂಗೈನಲ್ಲಿ‌ ಇಟ್ಟುಕೊಂಡು ಮಡದಿಯನ್ನು ಚೆನ್ನಾಗಿ ನೋಡಿಕೊಂಡರು.. ಸಾಮಾಜಿಕ ಜಾಲತಾಣದಲ್ಲಿ ರೇವತಿ ಅವರೊಟ್ಟಿಗಿನ ಸಾಕಷ್ಟು ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದ ನಿಖಿಲ್ ಅವರು ಮಡದಿಗಾಗಿ ಕವಿಯಾಗಿದ್ದೂ ಉಂಟು.. ಇನ್ನು ಇದೀಗ ರೇವತಿ ಅವರ ಕನಸಿನಂತೆಯೇ ಅವರ ಸೀಮಂತ ಶಾಸ್ತ್ರವನ್ನು ನೆರವೇರಿಸಿ ಪತ್ನಿಯನ್ನು ಸಂತೋಷ ಪಡಿಸಿ ತಾವೂ ಸಹ ಸಂಭ್ರಮ ಪಟ್ಟರು.. ಹೌದು ರೇವತಿ ಅವರಿಗೆ ಇಷ್ಟವಾಗುವಂತೆ ರಾಧಾ ಕೃಷ್ಣರ ಮೂರ್ತಿಯನ್ನು ಇಟ್ಟು ನವಿಲುಗರಿಗಳಲ್ಲಿ ಅಲಂಕಾರಗೊಂಡ ಆಸನದಲ್ಲಿ ರೇವತಿ ಅವರನ್ನು ಕೂರಿಸಿ ಸ್ವತಃ ನಿಖಿಲ್ ಅವರೇ ಶಾಸ್ತ್ರವನ್ನು ನೆರವೇರಿಸಿ ಮಡದಿಗೆ ಬಳೆ ತೊಡಿಸಿ ಹೂ ಮುಡಿಸಿ ಸಂಪ್ರದಾಯ ಬದ್ಧವಾಗಿ ಸೀಮಂತ ಶಾಸ್ತ್ರವನ್ನು ನೆರವೇರಿಸಿದರು..

ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಮಡದಿಗೆ ಕೈ ತುತ್ತು ತಿನ್ನಿಸಿ ತಮ್ಮ ಪ್ರೀತಿ ವ್ಯಕ್ತ ಪಡಿಸಿದ ನಿಖಿಲ್ ಅವರ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಜೋಡಿಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.. ಅತ್ತ ರೇವತಿ ಅವರೂ ಸಹ ತಮ್ಮ ಪ್ರೀತಿಯ ಪತಿಗೆ ತುತ್ತು ತಿನ್ನಿಸಿ ತಮ್ಮ ಪ್ರೀತಿಯನ್ನೂ ಸಹ ವ್ಯಕ್ತ ಪಡಿಸಿದ್ದು ಕಾರ್ಯಕ್ರಮಕ್ಕೆ ಆಗಮಿಸಿದವರು ರೇವರಿ ಹಾಗೂ ಮಗುವಿಗೆ ಶುಭ ಹಾರೈಸಿ ಈ ಜೋಡಿ ಸದಾಕಾಲ ಸಂತೋಷವಾಗಿರಲಿ ಎಂದು ಹಾರೈಸಿದ್ದೂ ಉಂಟು.‌ ಅದು ಯಾರೇ ಆಗಲಿ ಗಂಡ ಹೆಂಡತಿ ನಡುವೆ ಉತ್ತಮವಾದ ಬಾಂಧವ್ಯ ವಿದ್ದು ಪರಸ್ಪರ ಒಬ್ಬರನೊಬ್ಬರು ಪ್ರೀತಿ ಗೌರವದಿಂದ ನೋಡಿದರೆ ಆ ಜೋಡಿಯನ್ನು ನೋಡುವುದೇ ಒಂದು ರೀತಿ ಆನಂದ.. ಸಧ್ಯ ಇನ್ನು ಕೆಲ ದಿನಗಳಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಈ ಜೋಡಿ ಮುಂದೆ ಬರುವ ಪುಟ್ಟ ಕಂದನ ಜೊತೆ ಸದಾಕಾಲ ಹೀಗೆ ಪ್ರೀತಿಯಿಂದಿರಲಿ.. ಇವರ ನಡುವಿನ ಪ್ರೀತಿ ಸದಾಕಾಲ ಹೀಗೆ ಇರಲಿ..