ಪತಿಗೆ ತಾನೇ ಜಿಮ್ ಟ್ರೈನರ್ ಆದ ರೇವತಿ.. ವೀಡಿಯೋ ನೋಡಿ..

ಸದ್ಯ ಸ್ಯಾಂಡಲ್ವುಡ್ ನಲ್ಲಿ ಯಾವುದೇ ಸಿನಿಮಾ ಚಿತ್ರೀಕರಣವಿಲ್ಲದ ಕಾರಣ ಕಲಾವಿದರು ತಮ್ಮ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.. ಇನ್ನು ಇತ್ತ ನಿಖಿಲ್ ಗೌಡ ಅವರು ಸಧ್ಯ ಬೆಂಗಳೂರಿನಿಂದ ದೂರವಿದ್ದು, ತಮ್ಮ ತೋಟದಲ್ಲಿ ಕೃಷಿ ಮಾಡುವ ನಿರ್ಧಾರ ಕೈಗೊಂಡು ತೋಟದ ಮನೆಯಲ್ಲಿಯೇ ನೆಲೆಸಿದ್ದಾರೆ.. ಈ ಹಿಂದೆ ಅವರೇ ಹೇಳಿದಂತೆ ಯುವ ಜನತೆ ಕೃಷಿ ಕಡೆ ಗಮನ ನೀಡಬೇಕು‌. ರೈತನ ಮಗ ರೈತನಾಗಲು ಯಾವುದೇ ಹಿಂಜರಿಕೆ ಬೇಡ ಎಂದು ಅವರೂ ಸಹ ತನ್ನ ತಾತ ಮಾಡುತ್ತಿದ್ದಂತೆ ಕೃಷಿ ಮಾಡುವತ್ತ ಚಿಂತನೆ ನಡೆಸಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತೋಟದ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ..

ಇನ್ನು ಪಟ್ಟಣದಿಂದ ದೂರವಿರುವ ಕಾರಣಕ್ಕೆ ನಿಖಿಲ್ ತಮ್ಮ ವರ್ಕೌಟ್ ಅನ್ನು ಮರೆತಿಲ್ಲ.. ಇನ್ನು ತೋಟದಲ್ಲಿ‌ ಜಿಮ್ ಟ್ರೈನರ್ ನ ಅವಶ್ಯಕತೆಯೂ ಇಲ್ಲ.. ಖುದ್ದು ರೇವತಿ ಅವರೇ ನಿಖಿಲ್ ಅವರಿಗೆ ಜಿಮ್ ಟ್ರೈನರ್ ಆಗಿದ್ದು ಇಬ್ಬರ ವರ್ಕೌಟ್ ವೀಡಿಯೋವನ್ನು ನಿಖಿಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..

ಹೌದು ಕಳೆದ ಏಪ್ರಿಲ್ 17 ರಂದು ಲಕ ಡೌನ್ ಇದ್ದ ಕಾರಣ ರಾಮನಗರದ ಕೇತೋಗಾನಹಳ್ಳಿ ತೋಟದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಿಖಿಲ್ ಹಾಗೂ ರೇವತಿ ಅವರು ಹೊರ ದೇಶವಾಗಲಿ ಹೊರ ರಾಜ್ಯಗಳ ಪ್ರವಾಸವನ್ನೂ ಸಹ ಹೋಗಲಾಗಿರಲಿಲ್ಲ.. ಇದೇ ಕಾರಣಕ್ಕೆ ಅಂತರ ಜಿಲ್ಲಾ ಸಂಚಾರಕ್ಕೆ ಅನುಮತಿ ಸಿಕ್ಕ ನಂತರ ಕುಮಾರಸ್ವಾಮಿ ಅವರ ಕುಟುಂಬ ಮಡಿಕೇರಿಗೆ ಪ್ರವಾಸ ಕೈಗೊಂಡಿತ್ತು.. ಎರಡು ದಿನಗಳ ಪ್ರವಾಸ ಮುಗಿಸಿ ಮರಳಿದ ನಿಖಿಲ್ ಜೋಡಿ ಮೊನ್ನೆ ಮೊನ್ನೆಯಷ್ಟೇ ತಮ್ಮ ಮಡದಿ ರೇವತಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿ ಅದೇ ದಿನ ವಿಶ್ವ ಅಪ್ಪಂದಿರ ಬಂದ ಕಾರಣ ರೇವತಿ ಅವರ ತಂದೆ ತಾಯಿಯನ್ನು ಕರೆಸಿ ಸರ್ಪ್ರೈಸ್ ನೀಡಿದ್ದರು..

ಆ ಬಳಿಕ ಬೆಂಗಳೂರಿನಿಂದ ತೋಟದ ಮನೆಗೆ ಶಿಫ್ಟ್ ಆಗಿರುವ ನಿಖಿಲ್ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಅದೇ ರೀತಿ ನಿನ್ನೆ ನಿಸರ್ಗದ ನಡುವೆ ನಿಖಿಲ್ ಹಾಗೂ ರೇವತಿ ಅವರು ಜಿಮ್ ಮಾಡುತ್ತಿರುವ ವೀಡಿಯೋವೊಂದನ್ನು ಹಂಚಿಕೊಂಡಿದ್ದು “ಯಾವಾಗಲೂ ಜಿಮ್ ಟ್ರೈನರ್ ಬೇಕೆಂದೇನಿಲ್ಲ.. ಆದರೆ ಜಿಮ್ ಮಾಡಲು ಒಂದು ಮೋಟಿವೇಷನ್ ಬೇಕು.. ನಿಸರ್ಗದ ಮಡಿಲಿನಲ್ಲಿ ನನ್ನ ಬಾಳಸಂಗಾತಿಯೊಂದಿಗೆ ವ್ಯಾಯಾಮದಲ್ಲಿ ತೊಡಗಿಕೊಂಡಿದ್ದು ಖುಷಿ ನೀಡಿದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.‌. ಈ ಮೂಲಕ ತಮ್ಮ ಬಾಳ ಸಂಗಾತಿಯೇ ತಮಗೆ ಟ್ರೈನರ್ ಆಗಿದ್ದು ಸ್ಪೂರ್ತಿ ಎಂದಿದ್ದಾರೆ ನಿಖಿಲ್..