ನಾನು ನನ್ನ ಗಂಡನೇ ನೋಡ್ಕೋತಾ ಇರೋದು. ನಮಗೆ ಯಾರು ಏನು ಕೊಟ್ಟಿಲ್ಲ. ಪ್ರಮಿಳಾ ಸುಂದರ್ ನೇರ ಮಾತು

ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬದಲ್ಲಿ ಇಂದು ಸಂಭ್ರಮ ಮನೆ ಮಾಡಿತ್ತು.. ಹೌದು ಇಂದು ಪುಟ್ಟ ಚಿರುವಿನ ನಾಮಕರಣ ಸಮಾರಂಭ ಅದ್ಧೂರಿಯಾಗಿ ನೆರವೇರಿದ್ದು ಪುಟ್ಟ ಕಂದನಿಗೆ ವಿಶೇಷ ಹೆಸರನ್ನಿಟ್ಟು ಎರಡೂ ಕುಟುಂಬ ಸಂಭ್ರಮ ಪಟ್ಟಿದೆ.. ಹೌದು ಪುಟಾಣಿ ಚಿರು ಹುಟ್ಟಿದ ಹನ್ನೊಂದು ತಿಂಗಳಿಗೆ ಇದೀಗ ನಾಮಕರಣ ಸಮಾರಂಭವನ್ನು ನೆರವೇರಿಸಲಾಗಿದ್ದು ಮೇಘನಾ ರಾಜ್ ಅವರೇ ಮಗನಿಗೆ ಹೆಸರನ್ನು ಆಯ್ಕೆ ಮಾಡಿದ್ದು ರಾಯನ್ ರಾಜ್ ಸರ್ಜಾ ಎಂಬ ಹೆಸರನ್ನಿಟ್ಟರು..

ನಾಮಕರಣ ಸಮಾರಂಭದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುದ ಕುಟುಂಬ ಕೆಲವೊಂದು ವಿಚಾರಗಳನ್ನು ಹಂಚಿಕೊಂಡರು. ಅದರಲ್ಲೂ ಪ್ರಮಿಳಾ ಸುಂದರ್ ಅವರ ನೇರ ಮಾತುಗಳು ಆಶ್ಚರ್ಯವನ್ನುಂಟು ಮಾಡಿದವು.. ಹೌದು ಇಂತು ಪುಟ್ಟ ಚಿರುವಿಗೆ ನಾಮಕರಣ ಸಮಾರಂಭ ನೆರವೇರಿತು.. ಮೊದಲು ಚರ್ಚ್ ನಲ್ಲಿ ಪ್ರಮಿಳಾ ಸುಂದರ್ ಅವರ ಸಂಪ್ರದಾಯದಂತೆ ನಾಮಕರಣವನ್ನು ನೆರವೇರಿಸಲಾಗಿತ್ತು..

ಆ ಬಳಿಕ ಇತ್ತ ಸರ್ಜಾ ಅವರ ಕುಟುಂಬದ ಸಂಪ್ರದಾಯದಂತೆ ಶಾಸ್ತ್ರಗಳನ್ನು ನೆರವೇರಿಸಿ ಮಗುವಿಗೆ ಹೆಸರಿಡಲಾಯಿತು.. ಪೂಜೆಯಲ್ಲಿ ಧೃವ ಸರ್ಜಾ ಅವರ ತಂದೆ ತಾಯಿ ಕೂತು ಮಗುವಿನ ಕಿವಿಯಲ್ಲಿ ಹೆಸರನ್ನು ಹೇಳುವ ಮೂಲಕ ನಾಮಕರಣ ಮಾಡಿ ತೊಟ್ಟಿಲಿಗೆ ಮಗುವನ್ನು ಹಾಕಿದರು.. ಎಲ್ಲಾ ಶಾಸ್ತ್ರಗಳು ಮುಗಿದ ಬಳಿಕ ಮಾದ್ಯಮದ ಜೊತೆ ಸಂಪೂರ್ಣ ಕುಟುಂಬ ಮಾತನಾಡಿತು..

ಹೌದು ಸುಂದರ್ ರಾಜ್ ಅವರು ಪ್ರಮಿಳಾ ಸುಂದರ್ ಅವರು ಮೇಘನಾ ರಾಜ್, ಧೃವ ಸರ್ಜಾ ಪ್ರೇರಣಾ ಸರ್ಜಾ ಹಾಗೂ ಸೂರಜ್ ಸರ್ಜಾ ಮಾದ್ಯಮದ ಮುಂದೆ ಮಾತನಾಡಿ ಸಂತೋಷ ಹಂಚಿಕೊಂಡರು.. ಆದರೆ ಇದೇ ಸಮಯದಲ್ಲಿ ಪ್ರಮಿಳಾ ಸುಂದರ್ ಅವರು ಹಣಕಾಸಿನ ಬಗ್ಗೆ ಮಾತನಾಡಿದ್ದು ಕುತೂಹಲವನ್ನುಂಟು ಮಾಡಿತ್ತು..

ಹೌದು ಮೊದಲಿಗೆ ಸುಂದರ್ ರಾಜ್ ಅವರು ಮಾತನಾಡಿ ಎಲ್ಲಾ ಮಾದ್ಯಮದವರಿಗೆ ಹಾಗೂ ಈ ಒಂದೂ ವರೆ ವರ್ಷ ತಮಗೆ ಬೆನ್ನೆಲುಬಾಗಿ ನಿಂತ ತಮ್ಮ ಜೊತೆಯಾಗಿ ಸಾಗಿದ ಚಿತ್ರರಂಗದವರಿಗೆ ಹಾಗೂ ಮೇಘನಾ ಹಾಗೂ ಮಗುವಿಗೆ ಆಶೀರ್ವಾದ ಮಾಡಿದ ಎಲ್ಲಾ ಜನರಿಗೂ ಧನ್ಯವಾದಗಳನ್ನು ತಿಳಿಸಿದರು.. ನಂತರ ಮೇಘನಾ ರಾಜ್ ಅವರು ಮಾತನಾಡಿ ರಾಯನ್ ನಮ್ಮ ಜೀವನಕ್ಕೆ ಬೆಳಕಾಗಿ ಬಂದಿದ್ದಾನೆ.. ನಮಗೆ ಸ್ವರ್ಗದ ಬಾಗಿಲನ್ನು ತೆರೆದವ ರಾಯನ್ ಎಂದರೆ ಯುವರಾಜ ಎಂಬ ಅರ್ಥವಿದೆ.. ನಮ್ಮ ಮಂಗೆ ಚಿರಂಜೀವಿ ಸರ್ಜಾ ಸದಾ ಮಹಾರಾಜನಾಗಿರುತ್ತಾರೆ.. ರಾಯನ್ ಯುವರಾಜನಾಗಿರುತ್ತಾನೆ ಎಂದು ಸಂತೋಷ ಹಂಚಿಕೊಂಡರು..

ಇದರ ನಂತರ ಮೇಘನಾ ರಾಜ್ ಅವರ ತಾಯಿ ಪ್ರಮಿಳಾ ಸುಂದರ್ ಅವರು ಮಾತನಾಡಿ “ಎಲ್ರಿಗೂ ನಮಸ್ಕಾರ.. ಒಂದೂವರೆ ವರ್ಷದಿಂದ ಏನಾಯ್ತು ಎಲ್ಲರಿಗೂ ಗೊತ್ತಿದೆ.. ಮೇಘನಾಗೆ ಮಗು ಬಂದ ಮೇಲೆ ಒಂದು ದಾರಿ ಬೆಳಕಾಯಿತು.. ಮೇಘನಾ ಎಲ್ಲಾ ನೋವುಗಳನ್ನು ಮರೆತಳು.. ಏನಪ್ಪಾ ಅಂದರೆ ನನ್ನ ಮೊಮ್ಮಗನಿಂದ ನನ್ನ ಮಗಳಿಗೆ ಒಂದು ಬೆಳಕು ತಂದ ಅನ್ನೋದೇ ಖುಷಿ.. ನಮ್ಮ ಕುಟುಂಬಕ್ಕೆ ದಾರಿ ತೋರಿದ್ದಾನೆ.. ನಮಗೆ ಯಾರು ಏನು ಹಣ ಕೊಟ್ಟಿಲ್ಲ.. ಅವತ್ತು ನನ್ನ ಮಗಳು ಯಾವಾಗ ಹುಟ್ಟಿದಾಳೋ ಅವತ್ತಿಂದ ನಾನು ಅವರ ಅಪ್ಪ ಇಬ್ಬರೇ ನೋಡಿಕೊಂಡಿರೋದು ಇನ್ಯಾರೂ ನೋಡಿಕೊಳ್ಳೋದು ಬೇಕಾಗಿಲ್ಲ.. ಅವತ್ತಿಂದ ಆ ಜವಾಬ್ದಾರಿ ನಾವೇ ಮಾಡ್ತಾ ಇರೋದು.. ಹುಟ್ಟಿದಾಗಿನಿಂದ ಈವರೆಗೂ ಎಲ್ಲವೂ ನಾವೇ ಮಾಡಿರೋದು.. ಯಾಕ್ ಈ ರೀತಿ ಹೇಳ್ತಾ ಇದೀನಿ ಅಂದರೆ ಅವರು ಅದು ಕೊಟ್ಟರು.. ಇದು ಕೊಟ್ಟರು ಅಷ್ಟು ಹಣ ಕೊಟ್ಟರು ಅಂತ ಪ್ರಚಾರ ಆಗ್ತಾ ಇದೆ.‌ ಅದೇ ಕಾರಣಕ್ಕೆ ನಾನು ಈ ಮಾತನ್ನು ಹೇಳ್ತಾ ಇದೀನಿ.. ನಮಗೆ ಯಾರು ಏನೂ ಕೊಟ್ಟಿಲ್ಲ.. ಕೊಡೋದು ಬೇಡ.. ಮುಂದೆಯೂ ಸಹ ನಾವೇ ನೋಡಿಕೊಳ್ತೇವೆ.. ನಮಗೆ ಅದು ಮನಸ್ಸು ನೋವಾಯ್ತು.. ಎಂದು ನೇರವಾಗಿಯೇ ಮಾತನಾಡಿದರು..

ಈ ಎಲ್ಲವನ್ನು ಯಾಕೆ ಈ ಸಂದರ್ಭದಲ್ಲಿ ಹೇಳಿದರು ಎಂದು ಹಲವಾರು ಜನರು ಕುತೂಹಲ ವ್ಯಕ್ತಪಡಿಸಿದರು.. ಸರ್ಜಾ ಕುಟುಂಬ ಹಾಗೂ ಸುಂದರ್ ರಾಜ್ ಅವರ ಕುಟುಂಬದ ನಡುವೆ ಮನಸ್ತಾಪವಿದೆಯಾ ಎಂಬ ಹತ್ತು ಹಲವು ಪ್ರಶ್ನೆಗಳು ಕಾಡಿದವು‌‌. ಆದರೆ ಪ್ರಮಿಳಾ ಸುಂದರ್ ಅವರು ಈ ರೀತಿ ಮಾತನಾಡಲು ಬೇರೆಯೇ ಕಾರಣವೇ ಇದೆ. ಹೌದು ಇದಕ್ಕೆಲ್ಲಾ ಕಾರಣ ಯೂಟ್ಯೂಬ್ ನಲ್ಲಿ ಹರಿದಾಡುವ ಕೆಲ ವೀಡಿಯೋಗಳು.. ಹೌದು ಯೂಟ್ಯೂಬ್ ನಲ್ಲಿ ಮೇಘನಾ ರಾಜ್ ಅವರಿಗೆ ಅವರು ಅಷ್ಟು ಕೊಟ್ಟು ಸಹಾಯ ಮಾಡಿದರು.. ಇವರು ಇಷ್ಟು ಕೊಟ್ಟು ಸಹಾಯ ಮಾಡಿದರು ಈ ರೀತಿ ಇಲ್ಲಸಲ್ಲದ ವೀಡಿಯೋಗಳನ್ನು ಕೆಲವರು ಮಾಡಿದ ಕಾರಣಕ್ಕೆ ಪ್ರಮಿಳಾ ಸುಂದರ್ ಅವರು ನೇರವಾಗಿ ಈ ರೀತಿ ಮಾತನಾಡಿದ್ದಾರೆ..

ಇನ್ನು ಇದಾದ ಬಳಿಕ ಧೃವ ಸರ್ಜಾ ಅವರು ಸಹ ಮಾತನಾಡಿ ಮಗುವಿಗೆ ಮುಂದೆ ಕೊನೆವರೆಗೂ ನಾವು ಜೊತೆಯಾಗಿರ್ತೀವಿ ಸರ್ಜಾ ಹಾಗೂ ಸುಂದರ್ ರಾಜ್ ಅವರ ಕುಟುಂಬ ಯಾವತ್ತಿದ್ದರೂ ಒಂದೆನೇ.. ಕೆಲವರು ಯೂಟ್ಯೂಬ್ ನಲ್ಲಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ತರಲು ಪ್ರಯತ್ನ ಮಾಡ್ತಾರೆ ಆದರೆ ಅದೆಲ್ಲಾ ಅಗದ ವಿಚಾರ.. ನಾವು ಸದಾ ಒಟ್ಟಿಗೆ ಇರ್ತೇವೆ ಎಂದಿದ್ದಾರೆ..