ತನ್ನ ಬಗ್ಗೆ ಬೇರೆ ರೀತಿ ಮಾತನಾಡಿದವರಿಗೆ ತಿರುಗೇಟು ಕೊಟ್ಟ ಮೇಘನಾ ರಾಜ್..

ನಿನ್ನೆಯಷ್ಟೇ ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮಗ ರಾಯನ್ ರಾಜ್ ಸರ್ಜಾ ನ ನಾಮಕರಣ ಸಮಾರಂಭ ನೆರವೇರಿದ್ದು ಎರಡೂ ಕುಟುಂಬಗಳು ಮೊಮ್ಮಗನ ನಾಮಕರಣದಲ್ಲಿ ಪಾಲ್ಗೊಂಡು ಸಂಭ್ರಮ ಪಟ್ಟಿದ್ದಾರೆ.. ರಾಯನ್ ಯುವರಾಜ ಎಂಬ ಹೆಸರಿನ ಜೊತೆಗೆ ಸುಂದರ್ ರಾಜ್ ಅವರ ಹೆಸರಿನಿಂದ ರಾಜ್ ಹಾಗೂ ಸರ್ಜಾ ಕುಟುಂಬದಿಂದ ಸರ್ಜಾ ಎಂಬ ಹೆಸರನ್ನು ಸೇರಿಸಿ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟರು.. ಚಿರು ಇಲ್ಲದ ಕಾರಣ ಚಿರು ಅವರ ತಂದೆ ತಾಯಿ ಶಾಸ್ತ್ರಗಳನ್ನು ನೆರವೇರಿಸಿ ಮೊಮ್ಮಗನ ಕಿವಿಯಲ್ಲಿ ಹೆಸರನ್ನು ಹೇಳಿದರು.. ಆದರೆ ನಿನ್ನೆ ನಾಮಕರಣ ಸಮಾರಂಭ ನೆರವೇರಿದ ನಂತರ ಅನೇಕರು ಮೇಘನಾ ರಾಜ್ ಅವರ ಬಗ್ಗೆ ನಾನಾ ರೀತಿಯಲ್ಲಿ ಕಮೆಂಟ್ ಹಾಕಿದ್ದು ಇದೀಗ ಅದೆಲ್ಲದಕ್ಕೂ ಮೇಘನಾ ರಾಜ್ ತಿರುಗೇಟು ನೀಡಿದ್ದಾರೆ..

ಹೌದು ನಾಮಕರಣ ಸಮಾರಂಭದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಕುಟುಂಬ ಮಾತನಾಡಿತ್ತು. ಆ ಸಮಯದಲ್ಲಿ ಅನೇಕ ವಿಚಾರಗಳು ಹೊರ ಬಂದವು.. ಮೇಘನಾ ರಾಜ್ ಧೃವ ಸರ್ಜಾ ಸುಂದರ್ ರಾಜ್ ಅವರು ಪ್ರಮಿಳಾ ಸುಂದರ್ ಅವರು ಪ್ರೇರಣಾ ಸರ್ಜಾ ಹಾಗೂ ಸೂರಜ್ ಸರ್ಜಾ ಮಾದ್ಯಮದ ಮುಂದೆ ಮಾತನಾಡಿದರು.. ಆದರೆ ಮೇಘನಾ ರಾಜ್ ಅವರ ತಾಯಿ‌ ಪ್ರಮಿಳಾ ಸುಂದರ್ ಅವರು ಮಾತನಾಡುವ ಸಮಯದಲ್ಲಿ ಜವಾಬ್ದಾರಿಗಳ ಬಗ್ಗೆ ಮಾತನಾಡಿ ನಮ್ಮ ಮಗಳು ಹುಟ್ಟಿದಾಗಿನಿಂದ ಈಗಿನವರೆಗೂ ನಾನು ಹಾಗೂ ಅವಳ ತಂದೆಯೇ ಅವಳ ಜವಾಬ್ದಾರಿಯನ್ನು ನೋಡುತ್ತಿರುವುದು.. ಯಾರೂ ಸಹ ನಮಗೇನೂ ಕೊಟ್ಟಿಲ್ಲ.. ಮುಂದೆಯೂ ಸಹ ಅವಳ ಬೇಕು ಬೇಡಗಳನ್ನು ನಾವೇ ನೋಡುತ್ತೇವೆ.. ಅವರು ಅಷ್ಟು ಕೊಟ್ರು.. ಇವರು ಇಷ್ಟು ಕೊಟ್ರು ಅಂತ ಪ್ರಚಾರ ಆಗ್ತಾ ಇದೆ.. ಆ ಪ್ರಚಾರ ದಯವಿಟ್ಟು ಬೇಡ. ಅದರಿಂದ ಮನಸ್ಸಿಗೆ ನೋವಾಗತ್ತೆ ಎಂದಿದ್ದರು.. ಇನ್ನು ಇವರ ಮಾತು ಕೇಳಿ ಹೀಗ್ಯಾಕೆ ಹೇಳಿದ್ರು ಸರ್ಜಾ ಕುಟುಂಬಕ್ಕೂ ಹಾಗೂ ಸುಂದರ್ ರಾಜ್ ಅವರ ಕುಟುಂಬಕ್ಕೂ ಮನಸ್ತಾಪವಿದೆಯಾ ಎನ್ನುವ ಪ್ರಶ್ನೆ ಮೂಡಿತ್ತು. ಆದರೆ ವಾಸ್ತವ ಬೇರೆಯೇ ಇತ್ತು..

ಯೂಟ್ಯೂಬ್ ನಲ್ಲಿ ಕೆಲವೊಂದು ವೀಡಿಯೀಗಳಲ್ಲಿ ಇಲ್ಲ ಸಲ್ಲದ ವಿಚಾರಗಳ ಬಗ್ಗೆ ಹಾಕಲಾಗಿತ್ತು.. ಮೇಘನಾರಾಜ್ ಅವರಿಗೆ ಅವರು ಅಷ್ಟು ಕೊಟ್ರು.. ಇವರು ಅಷ್ಟು ಕೊಟ್ರು ಅಂತ ಸುದ್ದಿಯಾಗಿತ್ತು.. ಅದರ ಬಗ್ಗೆ ಪ್ರಮಿಳಾ ಸುಂದರ್ ಅವರು ಮಾತನಾಡಿದ್ದು.. ಜೊತೆಗೆ ದೃವ ಸರ್ಜಾ ಅವರೂಸಹ ಈ ಬಗ್ಗೆ ಮಾತನಾಡಿ ಕೆಲವೊಬ್ಬರು ಯೂಟ್ಯೂಬ್ ಗಳಲ್ಲಿ ನಮ್ಮ ಇಬ್ಬರ ಕುಟುಂಬದ ನಡುವೆ ಮನಸ್ತಾಪ ಉಂಟು ಮಾಡಲು ಪ್ರಯತ್ನ ಮಾಡ್ತಿದ್ದಾರೆ.. ದಯವಿಟ್ಟು ಅಂತಹ ಕೆಲಸ ಮಾಡಬೇಡಿ ನಮ್ಮಿಬ್ಬರ ಕುಟುಂಬ ಯಾವಾಗಲೂ ಒಂದಾಗಿರುತ್ತದೆ ಎಂದಿದ್ದರು.. ಇನ್ನು ನಾಮಕರಣವಾದ ನಂತರ ಹಲವಾರು ಮಂದಿ ಮೇಘನಾ ರಾಜ್ ಅವರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು..

ಹೌದು ರಾಯನ್ ರಾಜ್ ಸರ್ಜಾ ನ ನಾಮಕರಣವನ್ನು ಮೇಘನಾ ರಾಜ್ ಅವರು ಪ್ರಮಿಳಾ ಸುಂದರ್ ಅವರ ಸಂಪ್ರದಾಯದಂತೆ ಚರ್ಚ್ ನಲ್ಲಿ ಹಾಗೂ ಸರ್ಜಾ ಕುಟುಂಬದ ಸಂಪ್ರದಾಯದಂತೆ ಪುರೋಹಿತರ ಸಮ್ಮುಖದಲ್ಲಿ ಎರಡೂ ರೀತಿಯಲ್ಲಿ ನೆರವೇರಿಸಿದ್ದರು.. ಈ ಬಗ್ಗೆ ಮೇಘನಾ ರಾಜ್ ಅವರಿಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದರು.. ಈ ಹಿಂದೆ ಮದುವೆಯನ್ನು ಎರಡೂ ರೀತಿಯಲ್ಲಿ ಆಗಿ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ.. ಈಗ ಮಗುವಿನ ವಿಚಾರದಲ್ಲಿಯೂ ಹೀಗ್ಯಾಕೆ ಮಾಡ್ತಿದ್ದೀರಾ.. ಒಂದು ಸಂಪ್ರದಾಯದಂತೆ ಮಗುವಿನ ನಾಮಕರಣ ಮಾಡಿದ್ದರೆ ಸಾಕಾಗಿತ್ತು ಎಂದೆಲ್ಲಾ ಹೇಳಿದ್ದರು.. ಆದರೆ ಇದೀಗ ಆ ರೀತಿ ಕಮೆಂಟ್ ಮಾಡಿದವರಿಗೆಲ್ಲಾ ಮೇಘನಾ ರಾಜ್ ತಿರುಗೇಟು ನೀಡಿದ್ದಾರೆ.. ಹೌದು ಮೇಘನಾ ರಾಜ್ ಅವರು ಈ ಬಗ್ಗೆ ಸುಧೀರ್ಘವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.. ಒಬ್ಬ ತಾಯಿಯಾಗಿ ಮಗನಿಗೆ ಯಾವುದು ಬೆಸ್ಟ್ ಅದನ್ನು ನಾನು ಮಾಡಬೇಕಿತ್ತು.. ಅದೇ ರೀತಿ ಮಾಡಿದ್ದೇನೆ. ತಂದೆ ತಾಯಿ ಸಂಭ್ರಮಿಸಿದಂತೆ ಎರಡೂ ಪ್ರಪಂಚದಲ್ಲಿ ಆತನೂ ಯಾಕೆ ಸಂಭ್ರಮ ಪಡಬಾರದು..

ಯಾವುದೇ ಸಮುದಾಯವನ್ನು ನೋಡದೇ ಜನರು ಅವನಿಗಾಗಿ ಪ್ರಾರ್ಥಿಸಿದ್ದರು.. ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ್ದರು.. ನಾವು ಎಲ್ಲಾ ದೇವರುಗಳಿಂದ ಆತನ ಒಳಿತಿಗಾಗಿ ಮಾತ್ರವೇ ಪ್ರಾರ್ಥನೆ ಮಾಡಿದ್ದೇವೆ.. ಎರಡೂ ರೀತಿಯಲ್ಲಿ ಮಾಡುವುದು ನನಗೆ ಮುಖ್ಯವಾಗಿತ್ತು.. ಯಾಕೆಂದರೆ ಆತನ ತಂದೆ ಎಲ್ಲದಕ್ಕಿಂತ ಮನುಷ್ಯತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟವರು.. ಎರಡೂ ಸಂಪ್ರದಾಯವನ್ನು ಸಂಭ್ರಮಿಸಿದವರು.. ನನ್ನ ಮಗ ಆತನ ತಂದೆ ಇದ್ದ ರೀತಿಯಲ್ಲಿಯೇ ಬೆಳೆಯುತ್ತಾನೆ.. ಅವರು ಎಂದೂ ಸಹ ಮಮುಷ್ಯತ್ವವನ್ನು ನೋಡಿ ಮಾತ್ರ ಜನರನ್ನು ಪ್ರೀತಿಸುತ್ತಿದ್ದರು.. ಅವರು ಯಾವುದಕ್ಕೆ ಸೇರಿದ್ದಾರೆ ಎಂಬುದನ್ನು ನೋಡುತ್ತಿರಲಿಲ್ಲ.. ಹೌದು ರಾಯನ್ ಎಂಬ ಹೆಸರು ಎಲ್ಲಾ ಸಮುದಾಯಕ್ಕೂ ಸೇರುತ್ತದೆ.. ನಿನ್ನ ತಂದೆ ಈಗಾಗಲೇ ನಿನ್ನ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.. ನಿನ್ನ ಅಪ್ಪ ಅಮ್ಮ ನಿನ್ನನ್ನು ಸದಾ ಪ್ರೀತಿಸುತ್ತಾರೆ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ..