ರವಿಶಂಕರ್ ಗೌಡ ಕುಟುಂಬಕ್ಕೆ ಕೊರೊನಾ ಆತಂಕ.. ದೊಡ್ಡತನ ತೋರಿದ ಸುದೀಪ್, ಗಣೇಶ್, ಸೃಜನ್.. ಇದು ನಿಜವಾದ ಸ್ನೇಹ ಎಂದರೆ..

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.. ಅದರಲ್ಲೂ ಬೆಂಗಳೂರಿನಲ್ಲಿ ಎಗ್ಗಿಲ್ಲದೇ ಕಂಟೈನ್ಮೆಂಟ್ ಜೋನ್ ಗಳು ಹೆಚ್ಚಾಗುತ್ತಲೇ ಇದೆ.. ಇನ್ನು ಈ ಕೊರೊನಾ ಆತಂಕ ಸೆಲಿಬ್ರೆಟಿಗಳಿಗೆ ಹೊರತಾಗಿಲ್ಲ..

ಹೌದು ನಟ ರವಿಶಂಕರ್ ಗೌಡ ನೆಲೆಸಿರುವ ಪ್ರೆಸ್ಟಿಜ್ ಅಪಾರ್ಟ್ಮೆಂಟ್ ನಲ್ಲಿ ಇದೀಗ ಕೊರೊನಾ ಕಾಣಿಸಿಕೊಂಡಿದೆ.. ಹೌದು ಅದೇ ಅಪಾರ್ಟ್ಮೆಂಟ್ ನಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ನಟಿ ಪೂಜಾ ಗಾಂಧಿ ಅವರೂ ಸಹ ಪ್ರೆಸ್ಟಿಜ್ ಅಪಾರ್ಟ್ಮೆಂಟ್ ನಲ್ಲಿಯೇ ವಾಸವಿದ್ದಾರೆ.. ರವಿಶಂಕರ್ ಗೌಡ ಅವರ ಮನೆಯ ಎದುರಿನ ಮನೆಯವರಿಗೇ ಕೊರೊನಾ ಬಂದಿರುವುದರಿಂದ ರವಿಶಂಕರ್ ಕೊಂಚ ಆತಂಕಕ್ಕೊಳಗಾಗಿದ್ದು, 15 ದಿನ ಮನೆ ಬಾಗಿಲು ತೆರೆಯುವಂತಿಲ್ಲ ಎಂದಿದ್ದಾರೆ.. ಇಬ್ಬರು ಚಿಕ್ಕ ಮಕ್ಕಳಿರುವುದರಿಂದ ರವಿಶಂಕರ್ ಹೆಚ್ಚು ಆತಂಕಕ್ಕೊಳಗಾಗಿದ್ದರು..

ಆದರೆ ಈ ವಿಚಾರ ತಿಳಿಯುತ್ತಿದ್ದಂತೆ ನಟ ಸುದೀಪ್, ಗಣೇಶ್ ಹಾಗೂ ಸೃಜನ್ ಅವರು ದೊಡ್ಡತನ ತೋರಿದ್ದಾರೆ.. ಹೌದು ಆ ತಕ್ಷಣ ರವಿಶಂಕರ್ ಅವರಿಗೆ ಫೋನ್ ಮಾಡಿ ಈ ಕೂಡಲೇ ಮಕ್ಕಳನ್ನು ಕರೆದುಕೊಂಡು ನಮ್ಮ ಮನೆಗೆ ಬಂದು ಬಿಡು ಎಂದು ಈ ಮೂವರೂ ಫೋನ್ ಮಾಡಿದ್ದಾರೆ.. ದುಡ್ಡಿದ್ದಾಗ ಬರುವ ಸಂಬಂಧಿಕರಿಗಿಂತ ಕಷ್ಟದಲ್ಲಿ ಆಗುವ ಸ್ನೇಹಿತರು ಎಷ್ಟೋ ಪಾಲು ದೊಡ್ಡವರೆಂಬುದು ಸತ್ಯದ ಮಾತು‌..

ಸುದೀಪ್, ಗಣೇಶ್ ಹಾಗೂ ಸೃಜನ್ ಲೋಕೇಶ್ ಮಾತ್ರವಲ್ಲದೇ ನಿರ್ದೇಶಕ ಸಂತೋಷ್ ಆನಂದರಾಮ್ ಹಾಗೂ ರಘುರಾಮ್ ಅವರು ರವಿಶಂಕರ್ ಅವರಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.. ಈ ಬಗ್ಗೆ ಸಾಮಾಜಿಕ‌ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರವಿಶಂಕರ್ ಅವರು “ನಮ್ಮ ಅಪಾರ್ಟ್ಮೆಂಟ್ ನಲ್ಲಿ ನನ್ನ ಎದುರುಗಡೆಯ ಮನೆಗೆ
ವಕ್ಕರಿಸಿತು ಕರೋನಾ.. ನನ್ನ ಮಕ್ಕಳಿರುವ ಮನೆಯನ್ನು ದೇವರೆ ಕಾಪಾಡಬೇಕು.. ಎಚ್ಚರ ಸ್ನೇಹಿತರೆ ಎಚ್ಚರ..

ನಾವೀಗ ನಮ್ಮನೆ ಬಾಗಿಲನ್ನು 14 ದಿನ ತೆಗೆಯುವಂತೆಯೆ ಇಲ್ಲಾ.. ದಿಗ್ಬಂಧನ (ಕ್ವಾರಂಟೈನ್).. ಸುದೀಪ , ಗಣಪ , ಸೃಜನ್, ಮಕ್ಕಳನ್ನು ಕರೆದುಕೊಂಡು ನಮ್ಮ ಮನೆಗೆ ಬಂದುಬಿಡು ಅಂದರು. ವಾವ್.. ಇದಲ್ಲವೆ ಗೆಳೆತನ ಅಂದರೆ… ಹಾಗೆ ಕುಟುಂಬವನ್ನು ವಿಚಾರಿಸಿದ , ಸಂತೋಷ್ ಆನಂದ್ ರಾಮ್ , ರಘುರಾಮ್ , ಧನ್ಯವಾದಗಳು..‌ ರಾಜೇಶ್ ನಟರಂಗ , ಅಲಕನಂದ , ಚಂದ್ರ ಮಯೂರ. ಶ್ರೀಕಾಂತ್ ಹೆಬ್ಳೀಕರ್ , ರಾಕಿ‌ , ಸೌಂದರ್ಯ ಜಗದೀಶ್” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..