ರವಿಚಂದ್ರನ್ ಕಿಡ್ನಾಪ್.. ನಿಜಕ್ಕೂ ನಡೆದದ್ದೇನು ಗೊತ್ತಾ.. ಅಸಲಿ ಕತೆ ನೋಡಿ..

ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಈ ವರ್ಷ ಅದ್ಭುತವಾಗಿ ಶುರುವಾಯಿತು. ಕಳೆದ ವರ್ಷಾಂತ್ಯದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಭಿನಯಿಸಿರುವ ಕನ್ನಡಿಗ ಸಿನಿಮಾ ಜೀ5 ನಲ್ಲಿ ಬಿಡುಗಡೆಯಾಗಿ ಎಲ್ಲರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಗೆಯೇ ದೃಶ್ಯ2 ಸಿನಿಮಾ ಕೂಡ ಕಳೆದ ವರ್ಷ ಬಿಡುಗಡೆಯಾಗಿ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿತು. ಇದೆ ಸಂತೋಷದಲ್ಲಿ ರವಿಚಂದ್ರನ್ ಅವರು ಈ ವರ್ಷ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ರವಿಚಂದ್ರನ್ ಅವರು ರಮ್ಯ ರಾಮಸ್ವಾಮಿ ಹೆಸರಿನ ಹೊಸ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಕೊಟ್ಟಿರುವ ಸುದ್ದಿ ವೈರಲ್ ಆಗಿತ್ತು. ಇದೀಗ ರವಿಚಂದ್ರನ್ ಅವರು ಕಿಡ್ನ್ಯಾಪ್ ಆಗಿರುವ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿದೆ. ಚಿತ್ರೀಕರಣ ಸ್ಥಳದಿಂದ ರವಿಚಂದ್ರನ್ ಅವರನ್ನು ಯಾರೋ ಅಪಹರಣ ಮಾಡಿರುವ ವಿಚಾರ ಈಗ ದೊಡ್ಡದಾಗಿ ಚರ್ಚೆಯಾಗುತ್ತಿದೆ. ಆದರೆ ನಿಜಕ್ಕೂ ನಡೆದಿರುವುದೇನು ಗೊತ್ತಾ?

ರವಿಚಂದ್ರನ್ ಅವರು ನಿಜವಾಗಿಯೂ ಕಿಡ್ನ್ಯಾಪ್ ಆಗಿದ್ದಾರಾ ಎನ್ನುವ ಪ್ರಶ್ನೆ, ಊಹಾಪೋಹಗಳು ನಿಮ್ಮಲ್ಲಿ ಮೂಡಬಹುದು. ರವಿಚಂದ್ರನ್ ಅವರು ಕಿಡ್ನ್ಯಾಪ್ ಆಗಿರುವ ಹಾಗೆ, ಅದು ಬ್ರೇಕಿಂಗ್ ನ್ಯೂಸ್ ಆಗಿರುವ ಹಾಗೆ ಜೀಕನ್ನಡ ವಾಹಿನಿಯಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿರುವುದಂತೂ ನಿಜ. ಆದರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಿಜ ಜೀವನದಲ್ಲಿ ಕಿಡ್ನ್ಯಾಪ್ ಆಗಿಲ್ಲ. ಬದಲಾಗಿ ರವಿಚಂದ್ರನ್ ಅವರು ಕಿಡ್ನ್ಯಾಪ್ ಆಗಿರುವ ಪ್ರೋಮೋ ಒಂದನ್ನು ಜೀಕನ್ನಡ ವಾಹಿನಿಯವರು ಶೇರ್ ಮಾಡಿದ್ದಾರೆ. ಈ ಪ್ರೋಮೋದಲ್ಲಿ ರವಿಚಂದ್ರನ್ ಅವರು ಬೆಳಗ್ಗೆ ಎದ್ದು ವಾಕಿಂಗ್ ಹೋಗುತ್ತಾರೆ.. ಆಗ ಕೆಲವರು ಇಲ್ಲಿ ರಿಸ್ಕ್ ಇದೆ ಕೆಲಸ ಆಗುವುದಿಲ್ಲ ಎಂದು ವಾಕಿ ಟಾಕಿಯಲ್ಲಿ ಮಾತನಾಡಿಕೊಳ್ಳುತ್ತಾರೆ.

ನಂತರ ರವಿಚಂದ್ರನ್ ಅವರು ಮನೆಯಿಂದ ಚಿತ್ರೀಕರಣ ಸ್ಥಳಕ್ಕೆ ಕಾರ್ ನಲ್ಲಿ ಹೋಗುತ್ತಿರುತ್ತಾರೆ. ಅಲ್ಲಿಯೂ ಕಿಡ್ನ್ಯಾಪ್ ಪ್ಲಾನ್ ಸಾಧ್ಯ ಆಗುವುದಿಲ್ಲ. ಚಿತ್ರೀಕರಣ ಮುಗಿಸಿದ ನಂತರ ರವಿಚಂದ್ರನ್ ಅವರು ಒಂದು ನಿಮಿಷ ಬರುತ್ತೇನೆ ಎಂದು ಫೋನ್ ನಲ್ಲಿ ಮಾತನಾಡುತ್ತಾ ಇರುವಾಗ, ಅವರ ಮುಂದೆ ಒಂದು ಓಮ್ನಿ ಕಾರ್ ಬಂದು, ರವಿಚಂದ್ರನ್ ಅವರನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತದೆ. ನಂತರ ಈ ವಿಚಾರ ಎಲ್ಲಾ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಹೊರಬರುತ್ತದೆ. ರವಿಚಂದ್ರನ್ ಅವರ ಕೈ ಕಾಲುಗಳನ್ನು ಕಟ್ಟಿ ಒಂದು ಚೇರ್ ಮೇಲೆ ಕೂರಿಸಿರುವ ಹಾಗೆ ತೋರಿಸುತ್ತಾರೆ.

ಆದರೆ ಈ ಕಿಡ್ನ್ಯಾಪ್ ಮಾಡಿದ್ದು ಯಾರು? ಅವರ ಉದ್ದೇಶ ಏನು? ಇದ್ಯಾವುದಕ್ಕೂ ಪ್ರೋಮೋದಲ್ಲಿ ಉತ್ತರ ಸಿಕ್ಕಿಲ್ಲ. ಇಷ್ಟಕ್ಕೆ ನಿಲ್ಲಿಸಿ, ಮುಂದುವರೆಯುತ್ತದೆ ಎಂದು ತೋರಿಸಿದ್ದಾರೆ. ಶೀಘ್ರದಲ್ಲೇ ಬಿಡುಗಡೆಯಾಗುವ ಮತ್ತೊಂದು ಪ್ರೋಮೋದಲ್ಲಿ ಕಿಡ್ನ್ಯಾಪ್ ಮಾಡಿದ್ದು ಯಾರು? ಮಾಡಿದ್ದು ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ, ಪ್ರೋಮೋವನ್ನು ಕೂಡ ಮುಂದುವರೆಯುತ್ತದೆ ಎಂದು ತೋರಿಸಲಾಗಿದೆ. ಆದರೆ ಇದು ಯಾವ ಕಾರ್ಯಕ್ರಮದ ಪ್ರೋಮೋ ಎನ್ನುವುದನ್ನು ಜೀಕನ್ನಡ ವಾಹಿನಿ ರಿವೀಲ್ ಮಾಡಿಲ್ಲ. ವೀಕ್ಷಕರ ಕುತೂಹಲವನ್ನು ಈ ಪ್ರೋಮೋ ಹೆಚ್ಚಿಸಿದೆ.

ಇತ್ತೀಚೆಗೆ ಸಿಕಿದ್ದ ಮಾಹಿತಿ ಪ್ರಕಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಜೀಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಶೋಗೆ ಜಡ್ಜ್ ಆಗಿ ಬರುತ್ತಾರೆ ಎನ್ನಲಾಗಿತ್ತು. ಮುದ್ದು ಮಕ್ಕಳ ಡ್ರಾಮಾಗಳನ್ನು ನೋಡಿ ಜಡ್ಜ್ ಮಾಡಲು ರವಿಮಾನ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಕೂಡ ಸುದ್ದಿಗಳು ಕೇಳಿಬಂದಿದ್ದವು. ಈ ಪ್ರೋಮೋ ಡ್ರಾಮಾ ಜ್ಯೂನಿಯರ್ಸ್ ಶೋ ಪ್ರೋಮೋ ಆಗಿರಬಹುದು ಎಂದೇ ಹೇಳಲಾಗುತ್ತಿದೆ. ಆದರೆ ನಿಜ ಏನು ಎಂದು ತಿಳಿಯಲು ಮುಂದಿನ ಪ್ರೋಮೋ ವರೆಗೂ ಕಾಯಬೇಕಿದೆ. ಜೀಕನ್ನಡ ವಾಹಿನಿಯ ಫೇಮಸ್ ಶೋಗಳಲ್ಲಿ ಒಂದು ಡ್ರಾಮಾ ಜ್ಯೂನಿಯರ್ಸ್.

ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಈ ಶೋ ನಡೆದಿರಲಿಲ್ಲ. ಈಗ ಮತ್ತೆ ವೀಕ್ಷಕರನ್ನು ರಂಜಿಸಲು ಮಕ್ಕಳು ಬರುತ್ತಿದ್ದಾರೆ. ಕೊನೆಯ ಹಂತದ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಶೋ ಶುರುವಾಗಲಿದೆ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಹಿಂದೆ ಡ್ಯಾನ್ಸ್ ಶೋ ಒಂದನ್ನು ಜಡ್ಜ್ ಮಾಡಿದ್ದರು. ಈ ಬಾರಿ ಮುದ್ದು ಮಕ್ಕಳನ್ನು ಜಡ್ಜ್ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ರವಿಚಂದ್ರನ್ ಅವರ ರಮ್ಯಾ ರಾಮಸ್ವಾಮಿ ಸಿನಿಮಾ ಟೈಟಲ್ ಮೂಲಕವೇ ಹೊಸ ಕ್ರೇಜ್ ಸೃಷ್ಟಿಸಿದೆ. ಸಿನಿಮಾ ಬಗ್ಗೆ ಇನ್ನು ಹೆಚಿನ ಮಾಹಿತಿಗಾಗಿ ಕಾಯಬೇಕಿದೆ.