ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಮಗನ ಮದುವೆ ಸಂಭ್ರಮ..

ಕ್ರೇಜಿಸ್ಟಾರ್ ರವಿಚಂದ್ರನ್ ಇವರು ಏನೇ ಮಾಡಿದರೂ ಸ್ಪೆಷಲ್. ಸಿನಿಮಾಗಳ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ ಕ್ರೇಜಿಸ್ಟಾರ್. ಇದೀಗ ಇವರ ಕುಟುಂಬದ ವಿಚಾರವೊಂದು ಭಾರಿ ಕುತೂಹಲ ಮೂಡಿಸಿದೆ ಹಾಗೂ ಎಲ್ಲರಲ್ಲೂ ಹೊಸ ಪ್ರಶ್ನೆ ಮೂಡಿಸಿದೆ. ಸಧ್ಯಕ್ಕೆ ಅಭಿಮಾನಿ ವಲಯದಲ್ಲಿ ಕ್ರೇಜಿಸ್ಟಾರ್ ಫ್ಯಾಮಿಲಿ ಬಗ್ಗೆ ಮುಖ್ಯವಾದ ವಿಚಾರವೇ ಚರ್ಚೆಯಾಗುತ್ತಿದೆ. ಅದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೊದಲ ಮಗ ಮನೋರಂಜನ್ ಅವರ ಮದುವೆಯ ಬಗ್ಗೆ. ಹೌದು! ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಮದುವೆ ಸಿದ್ಧತೆಗಳು ಶುರುವಾಗಿದ್ದು ಶೀಘ್ರದಲ್ಲೇ ಮನೋರಂಜನ್ ಕಲ್ಯಾಣ ನಡೆಯಲಿದೆ ಎನ್ನುವ ಸುದ್ದಿ ಸ್ಟ್ರಾಂಗ್ ಆಗಿ ಕೇಳಿ ಬರುತ್ತಿದೆ. ಹಾಗಿದ್ರೆ ಮನೋರಂಜನ್ ಮದುವೆ ಯಾವಾಗ? ಹುಡುಗಿ ಯಾರು ? ಎಲ್ಲಾ ಪ್ರಶ್ನೆಗು ಉತ್ತರ ಕೊಡುತ್ತೇವೆ ನೋಡಿ..

ನಮಗೆಲ್ಲ ಗೊತ್ತಿರುವ ಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಅವರ ಪತ್ನಿ ಸುಮತಿ ದಂಪತಿಗೆ ಮೂವರು ಮಕ್ಕಳು. ಗಂಡುಮಕ್ಳಳು ಮನೋರಂಜನ್ ಮತ್ತು ವಿಕ್ರಂ. ಹೆಣ್ಣುಮಗಳು ಗೀತಾಂಜಲಿ. ಕ್ರೇಜಿಸ್ಟಾರ್ ಗೆ ಮಕ್ಕಳೆಂದರೆ ಎಷ್ಟು ಪ್ರೀತಿ ಇದೆ ಎನ್ನುವುದನ್ನು ಹಲವು ಕಾರ್ಯಕ್ರಮಗಳಲ್ಲಿ ಅವರು ತಮ್ಮ ಮಕ್ಕಳ ಬಗ್ಗೆ ಮಾತನಾಡುವುದನ್ನು ಕೇಳಿದರೆ ಗೊತ್ತಾಗುತ್ತದೆ. ರವಿಚಂದ್ರನ್ ಅವರ ಮೊದಲ ಮಗ ಮನೋರಂಜನ್ ಅವರ ಮದುವೆ ವಿಚಾರ ಕಳೆದ ವರ್ಷದಿಂದಲೂ ಕೇಳಿ ಬರುತ್ತಿದೆ. ಕಳೆದ ವರ್ಷವೇ ಮನೋರಂಜನ್ ಮದುವೆಗೆ ಸಿದ್ಧರಿದ್ದರು. ಆದರೆ ಕರೊನಾ ಇಂದ ಇವರ ಮದುವೆ ಮುಂದಕ್ಕೆ ಹೋಗಿತ್ತು.

ಮನೋರಂಜನ್ ಅವರು ಸಾಹೇಬ ಸಿನಿಮಾ ಮೂಲಕ ನಟನೆ ಶುರುಮಾಡಿ, ಈಗ ಮುಗಿಲ್ ಪೇಟೆ, ಪ್ರಾರಂಭ ಸಿನಿಮಾವರೆಗು ಮುಂದುವರೆಸಿಕೊಂಡು ಬಂದಿದ್ದಾರೆ. ಮನೋರಂಜನ್ ಅಭಿನಯದ ಮುಗಿಲ್ ಪೇಟೆ ಮತ್ತು ಪ್ರಾರಂಭ ಸಿನಿಮಾ ಕಳೆದ ವರ್ಷ ತೆರೆಕಂಡಿತು, ಹೆಚ್ಚಿನ ಯಶಸ್ಸು ಕಾಣದೆ ಇದ್ದರು, ಮನೋರಂಜನ್ ಅಭಿನಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದರು. ಸಧ್ಯಕ್ಕೆ ಸ್ಯಾಂಡಲ್ ವುಡ್ ನ ಭರವಸೆಯ ನಾಯಕನಾಗಿ ಮನೋರಂಜನ್ ಗುರುತಿಸಿಕೊಂಡಿದ್ದಾರೆ, ಹಾಗೂ ಅವರಿಗಿದ್ದ ಜವಾಬ್ದಾರಿ ಸಹ ಕಳೆದಿದೆ, ಹಾಗಾಗಿ ಮನು ಮದುವೆಗೆ ಸಿದ್ಧರಾಗಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.

ಕಳೆದ ವರ್ಷ ಸಿನಿಮಾಗಳು ತೆರೆಕಂಡಿದ್ದರೆ, ಕಳೆದ ವರ್ಷವೇ ಮನೋರಂಜನ್ ಮದುವೆ ಸಹ ಆಗುತ್ತಿತ್ತು. ಮದುವೆಗೆ ಸಿದ್ಧ ಇರುವುದಾಗಿ ತಿಳಿಸಿದ್ದ ಮನೋರಂಜನ್ ಅವರು, ತಂದೆ ತಾಯಿ ನೋಡಿದ ಹುಡುಗಿಯನ್ನೇ ಮದುವೆಯಾಗಿ ಹೇಳಿದ್ದರು. ಇದೀಗ ಆ ಸಮಯ ಹತ್ತಿರ ಬಂದಿದೆ. 2 ವರ್ಷಗಳ ಹಿಂದೆ ರವಿಚಂದ್ರನ್ ಅವರು ಮಗಳು ಗೀತಾಂಜಲಿ ಅವರ ಮದುವೆಯನ್ನು ಇಡೀ ಊರೇ ತಿರುಗಿ ನೋಡುವ ಹಾಗೆ ಅದ್ಭುತವಾಗಿ ಮಾಡಿದ್ದರು. ಎಲ್ಲಾ ಹೆಣ್ಣುಮಕ್ಕಳ ಕನಸಿನ ಮದುವೆಯಂತೆ ನಡೆಯಿತು ಗೀತಾಂಜಲಿ ಅವರ ಮದುವೆ. ಇದೀಗ ಮಗನ ಮದುವೆಗೆ ಕ್ರೇಜಿಸ್ಟಾರ್ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹುಡುಗಿ ಹುಡುಕುವ ಪ್ರಕ್ರಿಯೆ ಇನ್ನುಮುಂದಕ್ಕೆ ಶುರುವಾಗಬೇಕಿದೆ. ಮಗಳಿಗೆ ಒಳ್ಳೆಯ ಸಂಬಂಧ ಹುಡುಕಿದ ಹಾಗೆ ಮಗನಿಗೂ ಒಳ್ಳೆಯ ಸೊಸೆಯನ್ನೇ ಆರಿಸಲಿದ್ದಾರೆ ಕ್ರೇಜಿಸ್ಟಾರ್. ಹುಡುಗಿ ಚಿತ್ರರಂಗದವರಾಗಿರುತ್ತಾರಾ ಅಥವಾ ಬೇರೆ ಕುಟುಂಬದ ಹೆಣ್ಣುಮಗಳಾಗಿರುತ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ. ಈ ವರ್ಷ ಬೇಸಿಗೆ ಕಳೆದ ನಂತರ ಮದುವೆ ನಡೆಯುವ ಸೂಚನೆ ಇದೆ ಎಂದು ಮೂಲಗಳು ತಿಳಿಸಿವೆ. ಈ ವರ್ಷ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಕುಟುಂಬದಲ್ಲಿ ಡಬಲ್ ಖುಷಿ. ಒಂದು ಮನೋರಂಜನ್ ಮದುವೆ. ಮತ್ತೊಂದು ಎರಡನೇ ಮಗನ ಸ್ಯಾಂಡಲ್ ವುಡ್ ಎಂಟ್ರಿ.

ರವಿಚಂದ್ರನ್ ಅವರ ಎರಡನೇ ಮಗ ವಿಕ್ರಂ ಅಭಿನಯದ ಮೊದಲ ಸಿನಿಮಾ ಕೆಲಸಗಳು ಬಹುತೇಕ ಪೂರ್ತಿಯಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದೆ. ಮೇ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ವಿಕ್ರಂ ಸಿನಿಮಾ ಮೇ ತಿಂಗಳಿನಲ್ಲಿ ಬಿಡುಗಡೆ ಆದರೆ ಜೂನ್ ತಿಂಗಳಿನಲ್ಲಿ ಮನೋರಂಜನ್ ಮದುವೆ ಮಾಡುವ ಪ್ಲಾನ್ ಕ್ರೇಜಿಸ್ಟಾರ್ ಮನೆಯಲ್ಲಿ ನಡೆಯುತ್ತಿರುವ ಹಾಗಿದೆ. ಕ್ರೇಜಿಸ್ಟಾರ್ ಕುಟುಂಬದಿಂದ ಅಧಿಕೃತವಾಗಿ ಯಾವಾಗ ವಿಚಾರ ತಿಳಿಸುತ್ತಾರೆ ಎಂದು ಕಾದು ನೋಡಬೇಕಿದ್ದ.