ಡ್ರಾಮಾ ಜ್ಯೂನಿಯರ್ಸ್ ಶೋಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ?

ಜೀ ಕನ್ನಡ ವಾಹಿನಿ ವೀಕ್ಷಕರಿಗೆ ಮನರಂಜನೆಯ ಮಹಾಪೂರ ನೀಡುವಲ್ಲಿ ನಂಬರ್ 1 ಸ್ಥಾನದಲ್ಲಿದೆ. ಧಾರಾವಾಹಿಗಳು, ಕಲರ್ ಫುಲ್ ಕಾರ್ಯಕ್ರಮಗಳು, ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳು, ಹೀಗೆ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಜನರಿಗೆ ಪ್ರತಿದಿನ ಮನರಂಜನೆ ನೀಡುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಮಕ್ಕಳಿಂದ ದೊಡ್ಡವರ ವರೆಗೂ ಎಲ್ಲರೂ ಇಷ್ಟಪಟ್ಟು ನೋಡುವ ಒಂದು ಶೋ, ಡ್ರಾಮಾ ಜ್ಯೂನಿಯರ್ಸ್, ಮುದ್ದು ಮಕ್ಕಳಿಂದ ಕೂಡಿರುವ ಈ ಶೋ ಯಾರಿಗೆ ತಾನೆ ಇಷ್ಟವಾಗುವುದಿಲ್ಲ. ಮನೆಮಂದಿಯೆಲ್ಲಾ ಜೊತೆಯಾಗಿ ಕೂತು, ಮಕ್ಕಳ ಮುಗ್ಧತೆಯನ್ನು ಎಂಜಾಯ್ ಮಾಡುವ ಶೋ ಇದು. ಈ ಸೀಸನ್ ನಲ್ಲಿ, ಡ್ರಾಮಾ ಜ್ಯೂನಿಯರ್ಸ್ ಶೋಗೆ ಜಡ್ಜ್ ಗಳಾಗಿ ಘಟಾನುಘಟಿಗಳು ಬಂದಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಜಡ್ಜ್ ಆಗಿರುವ ನಟ ರವಿಚಂದ್ರನ್ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಡ್ರಾಮಾ ಜ್ಯೂನಿಯರ್ಸ್ ಶೋ 4ನೇ ಸೀಸನ್ ಕಳೆದ
ಎರಡು ವಾರಗಳ ಹಿಂದೆಯಷ್ಟೇ ಶುರುವಾಗಿದೆ. ಮೊದಲ ಆವೃತ್ತಿಯಲ್ಲಿ ಜಡ್ಜ್ ಗಳಾಗಿ ಚಂದನವನದ ಹಿರಿಯನಟಿ ಲಕ್ಷ್ಮಿ ಅವರು, ಹಿರಿಯ ನಿರ್ದೇಶಕ ಟಿ.ಎನ್.ಸೀತಾರಾಂ ಅವರು ಹಾಗೂ ನಟ ವಿಜಯ್ ರಾಘವೇಂದ್ರ ಬರುತ್ತಿದ್ದರು. ಡ್ರಾಮಾ ಜ್ಯೂನಿಯರ್ಸ್ ಮೂರು ಸೀಸನ್ ಗಳಿಗು ಈ ಮೂವರು ಜಡ್ಜ್ ಗಳಾಗಿದ್ದರು. 3 ಸೀಸನ್ ಗಳಲ್ಲಿ ಬಂದ ಮಕ್ಕಳು ಹಾಗು ಜಡ್ಜ್ ಗಳು ನೀಡಿದ ಜಡ್ಜ್ಮೆಂಟ್ ಎಲ್ಲವೂ ಸಹ ವೀಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಮಕ್ಕಳು ನೀಡುವ ಮನರಂಜನೆಯನ್ನು ಎಂಜಾಯ್ ಮಾಡದೆ ಇರುವವರು ಇಲ್ಲ ಎಂದರೆ ತಪ್ಪಾಗುವುದಿಲ್ಲ.

3 ಸೀಸನ್ ಗಳ ನಂತರ ಕೋವಿಡ್ ಇಂದಾಗಿ 4ನೇ ಸೀಸನ್ ಶುರುವಾಗಲು ಹೆಚ್ಚಿನ ಸಮಯ ತೆಗೆದುಕೊಂಡಿತು. 2 ವರ್ಷಗಳಿಂದ ಡ್ರಾಮಾ ಜ್ಯೂನಿಯರ್ಸ್ ಶೋ ಇಲ್ಲದೆ, ವೀಕ್ಷಕರಿಗೂ ಬೇಸರವಾಗಿತ್ತು. ಆದರೆ ಈಗ ಕೊನೆಗೂ ಡ್ರಾಮಾ ಜ್ಯೂನಿಯರ್ಸ್ ನಾಲ್ಕನೇ ಸೀಸನ್ ಶುರುವಾಗಿದೆ. ಎರಡು ವಾರಗಳು ಮೆಗಾ ಆಡಿಷನ್ ನಡೆದಿದ್ದು, ಈ ವಾರದಿಂದ ಕಾರ್ಯಕ್ರಮ ಶುರುವಾಗುತ್ತಿದೆ. ಈ ಬಾರಿ ನಾಲ್ಕನೇ ಸೀಸನ್ ನಲ್ಲಿ ಜಡ್ಜ್ ಗಳು ಬದಲಾಗಿದ್ದಾರೆ. ಹಿರಿಯನಟಿ ಲಕ್ಷ್ಮಿ ಅವರು ಜಡ್ಜ್ ಆಗಿ ಉಳಿದುಕೊಂಡಿದ್ದು, ಇಬ್ಬರು ಹೊಸ ಜಡ್ಜ್ ಗಳಾಗಿ ಚಂದನವನದ ಕನಸುಗಾರ ಹಿರಿಯನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಂದಿದ್ದು, ಗುಳಿಕೆನ್ನೆ ಚೆಲುವ ರಚಿತಾ ರಾಮ್ ಮತ್ತೊಬ್ಬ ಜಡ್ಜ್ ಆಗಿದ್ದರೆ.

ಈ ಮೂವರು ಜಡ್ಜ್ ಗಳು ಮೊದಲ ಎಪಿಸೋಡ್ ನಲ್ಲೇ ವೀಕ್ಷಕರ ಮನಗೆದ್ದಿದ್ದಾರೆ. ರವಿಚಂದ್ರನ್ ಅವರಿಗೆ ಮಕ್ಕಳು ಎಂದರೆ ತುಂಬಾ ಇಷ್ಟ, ಹಾಗಾಗಿ ಡ್ರಾಮಾ ಜ್ಯೂನಿಯರ್ಸ್ ಶೋ ಅನ್ನು ತುಂಬಾ ಎಂಜಾಯ್ ಮಾಡುತ್ತಿದ್ದರು. ಈ ಸೀಸನ್ ನಲ್ಲಿ ಬಂದಿರುವ ಮಕ್ಕಳು ಸಹ ಒಬ್ಬರಿಗಿಂತ ಮತ್ತೊಬ್ಬರು ವಿಶೇಷ ಟ್ಯಾಲೆಂಟ್ ಗಳನ್ನು ಹೊಂದಿದ್ದಾರೆ. ಹೋಮ್ ವರ್ಕ್ ತೆಗೆದುಕೊಂಡು ಮನೆಗೆ ಹೋದವರಿಗಿಂತ ಗ್ರೀನ್ ಸಿಗ್ನಲ್ ಪಡೆದು ಶೋನಲ್ಲಿ ಉಳಿದುಕೊಂಡವರೇ ಹೆಚ್ಚು. ಎಲ್ಲಾ ಮಕ್ಳಳು ವಿಭಿನ್ನವಾಗಿ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿ, ಜಡ್ಜ್ ಗಳನ್ನು ಇಂಪ್ರೆಸ್ ಮಾಡಿದ್ದಾರೆ.

ಇನ್ನು ಮಾಸ್ಟರ್ ಆನಂದ್ ಅವರು ಎಂದಿನ ಹಾಗೆ ಹಾಸ್ಯಮಯವಾಗಿ ನಿರೂಪಣೆ ಮಾಡುತ್ತಿದ್ದಾರೆ. ಮಕ್ಕಳ ಜೊತೆ ತಮಾಷೆ ಮಾಡುತ್ತಾ, ಜಡ್ಜ್ ಗಳನ್ನು ರೇಗಿಸುತ್ತಾ, ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿದ್ದರೆ. ಇನ್ನು ಜಡ್ಜ್ ಗಳು ಸಹ ಎಲ್ಲವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಬಾರಿ ಡ್ರಾಮಾ ಜ್ಯೂನಿಯರ್ಸ್ ನಾಲ್ಕನೆ ಸೀಸನ್ ಗೆ, ಭಾರಿ ಬೇಡಿಕೆ ಇರುವ ಸೆಲೆಬ್ರಿಟಿಗಳನ್ನೆ ಜಡ್ಜ್ ಗಳಾಗಿ ಕರೆತರಲಾಗಿದೆ, ಹಾಗಾಗಿ ಅವರಿಗೆ ದುಬಾರಿ ಸಂಭಾವನೆಯನ್ನೇ ಕೊಡಲಾಗುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಒಂದು ಎಪಿಸೋಡ್ ಗೆ ಸುಮಾರು 3 ಲಕ್ಷ ರೂಪಾಯಿ ಸಂಭಾವನೆ ಕೊಡಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ.

ಇನ್ನುಳಿದ ಜಡ್ಜ್ ಗಳಿಗೆ ಎಷ್ಟು ಸಂಭಾವನೆ ಕೊಡಲಾಗುತ್ತಿದೆ ಎಂದು ಸರಿಯಾಗಿ ತಿಳಿದುಬಂದಿಲ್ಲ. ಎರಡು ವಾರಗಳ ಕಾಲ ಪ್ರಸಾರ ಆಗಿರುವ ಡ್ರಾಮಾ ಜ್ಯೂನಿಯರ್ಸ್ ಶೋ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಟಿ.ಆರ್.ಪಿ ರೇಟಿಂಗ್ ಸಹ ಒಳ್ಳೆಯ ರೀತಿಯಲ್ಲಿ ಬಂದಿದೆ. ಇನ್ನು ಮುಂದಿನ ಸಂಚಿಕೆಗಳಲ್ಲಿ ಮೆಂಟರ್ ಗಳ ಮಾರ್ಗದರ್ಶನದ ಜೊತೆಗೆ ಮಕ್ಕಳು ಇನ್ನು ಚೆನ್ನಾಗಿ ಅಭಿನಯಿಸಿ, ಜಡ್ಜ್ ಗಳಿಗೆ ಮತ್ತು ವೀಕ್ಷಕರಿಗೆ ಇನ್ನು ಹೆಚ್ಚಿನ ಮನರಂಜನೆ ನೀಡುವುದರಲ್ಲಿ ಯಾವುದೇ ಸಂಶಯ ಇಲ್ಲ ಎನ್ನಲಾಗುತ್ತಿದೆ.