ರವಿಚಂದ್ರನ್ ಅವರು ಮನೆ ಮಾರಲು ನಿಜವಾದ ಕಾರಣ ಬೇರೆಯೇ ಇದೆ.. ನಿಜಕ್ಕೂ ಬೇಸರದ ಸಂಗತಿ..

ಸ್ಯಾಂಡಲ್ವುಡ್ ಎಂದೊಡನೆ ನಮಗೆ ರಾಜ್ ಕುಮಾರ್ ಅವರು ವಿಷ್ಣುವರ್ಧನ್ ಅವರು ಶಂಕರ್ ನಾಗ್ ಅವರು ಅಂಬರೀಶ್ ಅವರು ಹೇಗೆ ನೆನಪಾಗ್ತಾರೋ ಹಾಗೆಯೇ ಎರಡನೇ ಜನರೇಶನ್ನಿನ ಕಲಾವಿದರುಗಳು ನೆನಪಾಗುತ್ತಾರೆ.. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇವರ ಕೊಡುಗೆಗಳು ಅಪಾರ.. ಅದರಲ್ಲೂ ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಶೋ ಮ್ಯಾನ್ ಎನಿಸಿಕೊಂಡಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕಳೆದ ಹದಿನೈದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದರು.. ಇದಕ್ಕೆ ಕಾರಣ ರವಿಚಂದ್ರನ್ ಅವರು ಮನೆ ಮಾರಿದ್ದಾರೆ ಎಂಬ ಸುದ್ದಿ.. ಹೌದು ರವಿಚಂದ್ರನ್ ಅವರು ಇಷ್ಟು ದಿನ ವಾಸವಿದ್ದ ರಾಜಾಜಿನಗರದ ಮನೆಯನ್ನು ಖಾಲಿ ಮಾಡಿದ್ದರು..‌ ಸಾಮಾನ್ಯವಾಗಿ‌ ಮನೆ ಖಾಲಿ‌ ಮಾಡುತ್ತಿದ್ದಂತೆ ಅವರ ಬಗ್ಗೆ ಒಂದಷ್ಟು ಸುದ್ದಿಯಾಯಿತು.. ಕೆಲವೊಂದು ಕಡೆ ರವಿಚಂದ್ರನ್ ಅವರು ಸಾಲ ತೀರಿಸುವ ಸಲುವಾಗಿ ಮನೆ ಮಾರಿಕೊಂಡಿದ್ದಾರೆ ಎಂದು ಸುದ್ದಿಯಾದರೆ ಮತ್ತಷ್ಟು ಕಡೆ ಮನೆ ರಿನೋವೇಶನ್ ಗಾಗಿ ಮನೆ ಖಾಲಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.. ಆದರೆ ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ನೇರವಾಗಿ ರವಿಚಂದ್ರನ್ ಅವರೇ ಉತ್ತರ ನೀಡಿದ್ದಾರೆ.. ಹೌದು ಮನೆಯಿಂದ ಹೊರ ನಡೆದ ವಿಚಾರವಾಗಿ ರವಿಚಂದ್ರನ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.‌.

ಹೌದು ರವಿಚಂದ್ರನ್ ಅವರ ಹೆಸರು ಕೇಳಿದ ಕೂಡಲೇ ಕ್ರೇಜಿಸ್ಟಾರ್ ಎಂದೋ ಅಥವಾ ಸ್ಯಾಂಡಲ್ವುಡ್ ನ ಶೋ ಮ್ಯಾನ್ ಎಂದೋ ನಾವು ಹೊಗಳುತ್ತೇವೆ.. ದಶಕಗಳ ಹಿಂದಿನ ಅವರ ಸಿನಿಮಾಗಳನ್ನು ಅವರ ಸಿನಿಮಾದಲ್ಲಿನ ಶ್ರೀಮಂತಿಕೆಯನ್ನು ನೆನಪಿಸಿಕೊಳ್ಳುತ್ತೇವೆ.. ಆದರೆ ಆ ಶ್ರೀಮಂತಿಕೆ ಬರಿ ಸಿನಿಮಾದಲ್ಲಿ ಮಾತ್ರವಲ್ಲ ರವಿಚಂದ್ರನ್ ಅವರೂ ಸಹ ಅಷ್ಟೇ ಸಿರಿವಂತರಾಗಿ ಹುಟ್ಟಿ ಬದುಕಿ ಬಾಳಿದವರು.. ವೀರಸ್ವಾಮಿ ಅವರು ಸಿನಿಮಾ ಇಂಡಸ್ಟ್ರಿಯ ಸಾವಿರಾರು ಜನರಿಗೆ ಅನ್ನ ನೀಡಿದವರು.. ಅವರಿಂದ ಬದುಕು ಕಟ್ಟಿಕೊಂಡವರು ನೂರಾರು ಮಂದಿ.. ಕನ್ನಡದ ಸಾಕಷ್ಟು ಸೂಪರ್ ಸ್ಟಾರ್ ಗಳು ವೀರಸ್ವಾಮಿ ಅವರ ಬ್ಯಾನರ್ ನಿಂದಲೇ ಬಂದವರು.. ಇನ್ನು ರವಿಚಂದ್ರನ್ ಅವರೂ ಸಹ ತನ್ನ ತಂದೆಯ ದುಡ್ಡಿನಿಂದಲೇ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಸಿನಿಮಾ ಮಾಡಿದವರು..

ನಟನೆ ಮಾತ್ರವಲ್ಲ ನಿರ್ದೇಶನ ನಿರ್ಮಾಣ ಎಲ್ಲವನ್ನೂ ಸಹ ತಮ್ಮ ತಂದೆಯ ಬ್ಯಾನರ್ ನಲ್ಲಿಯೇ ಶುರು ಮಾಡಿದವರು.. ಶುರುವಿನಲ್ಲಿ ಸಕ್ಸಸ್.. ಮತ್ತೆ ಶಾಂತಿ ಕ್ರಾಂತಿ ಇಂದಾಗಿ ದೊಡ್ಡ ಮಟ್ಟದ ನಷ್ಟ..‌ ಅದರ ಸಾಲಗಳನ್ನು ತೀರಿಸಲು ಮತ್ತೆ ರಾಮಾಚಾರಿ ಸಿನಿಮಾ.. ಹೀಗೆ ಹತ್ತು ವರ್ಷಗಳ ಕಾಲ ದುಡಿದು ಶಾಂತಿ ಕ್ರಾಂತಿ ಸಿನಿಮಾದ ಸಾಲವನ್ನು ತೀರಿಸಿದರು.. ಆದರೆ ಮತ್ತೆ ಕೈ ಕೊಟ್ಟದ್ದು ಏಕಾಂಗಿ ಸಿನಿಮಾ.. ಹೌದು ಮತ್ತೊಂದು ಹೊಸ ಪ್ರಯೋಗದ ಜೊತೆಗೆ ತೆರೆ ಮೇಲೆ ಬಂದ ರವಿಚಂದ್ರನ್ ಅವರಿಗೆ ಏಕಾಂಗಿ ಕೈ ಕೊಟ್ಟಿತು.. ಆರ್ಥವಾಗಿ ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಲಾಸ್ ಆಯಿತು.. ಮತ್ತೆ ಆ ಸಿನಿಮಾದ ಸಾಲ ತೀರಿಸಲು ಸಿಕ್ಕ ಸಿಕ್ಕ್ ಸಿನಿಮಾಗಳಲ್ಲಿ ಅಭಿನಯಿಸಿದರು.. ಒಂದಷ್ಟು ಆಸ್ತಿಯನ್ನು ಮಾರಬೇಕಾಗಿಯೂ ಬಂತು.. ಕೊನೆಗೆ ಹಟವಾದಿ ಮಲ್ಲ ಸಿನಿಮಾಗಳು ಕೈ ಹಿಡಿದು ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು..

ಆದರೆ ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಅಥವಾ ಹೊಸ ಹೊಸ ರೀತಿಯ ಸಿನಿಮಾಗಳನ್ನು ತರಬೇಕು ಎನ್ನುವ ಸಲುವಾಗಿ ರವಿಚಂದ್ರನ್ ಅವರು ಮತ್ತೆ ನಿರ್ಮಾಣ ಮಾಡಲು ಶುರು ಮಾಡಿದರು.. ಅಹಂ ಪ್ರೇಮಾಸ್ಮಿ ಸಿನಿಮಾ ಕೂಡ ಹೇಳಿಕೊಳ್ಳುವ ಯಶಸ್ಸು ನೀಡಿರಲಿಲ್ಲ.. ಇನ್ನು ಇತ್ತೀಚೆಗೆ ಬಂದ ಅಪೂರ್ವ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಲಾಸ್ ಆಯಿತು.. ಜೊತೆಗೆ ಮಂಜಿನ ಹನಿ ಸಿನಿಮಾಗಾಗಿ ಸಾಕಷ್ಟು ಹಣ ಸುರಿದಿದ್ದರು.. ಮೊನ್ನೆ ಮೊನ್ನೆ ಬಿಡುಗಡೆಯಾದ ಅವರದ್ದೇ ಪ್ರೊಡಕ್ಷನ್ ನ ರವಿ ಬೋಪ್ಪಣ್ಣ ಸಿನಿಮಾ ಕೂಡ ಸಕ್ಸಸ್ ಕಾಣಲಿಲ್ಲ.. ಹೀಗೆ ಸಾಲು ಸಾಲು ಸಿನಿಮಾಗಳು ರವಿಚಂದ್ರನ್ ಅವರಿಗೆ ಆರ್ಥಿಕವಾಗಿ ಪೆಟ್ಟು ಕೊಟ್ಟಿತು..

ಇನ್ನು ಇದರ ನಡುವೆ ಒಬ್ಬ ತಂದೆಯಾಗಿಯೂ ವ್ಯಯಕ್ತಿಕ ಜೀವನದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸಲೇ ಬೇಕಿತ್ತು.. ಮಗಳ ಮದುವೆ ಮಾಡಿದರು.. ಮೊನ್ನೆ ಮೊನ್ನೆಯಷ್ಟೇ ಮಗನ ಮದುವೆಯನ್ನೂ ಸಹ ಮಾಡಿದರು.. ಇನ್ನು ಮಗನ ಮದುವೆಯಾದ ಕೆಲ ದಿನಗಳಲ್ಲಿಯೇ ಇದೀಗ ತಾವು ಇಷ್ಟು ವರ್ಷಗಳ ಕಾಲ ವಾಸವಿದ್ದ ರಾಜಾಜಿನಗರದ ಮನೆಯನ್ನು ಖಾಲಿ ಮಾಡಿದ ವಿಚಾರ ಸುದ್ದಿಯಾಯಿತು..

ಇನ್ನು ಈ ಬಗ್ಗೆ ಮೊನ್ನೆ ಜೀ ಕನ್ನಡದ ಶೋನಲ್ಲಿ ನೇರವಾಗಿ ಹಂಚಿಕೊಂಡಿರುವ ರವಿಚಂದ್ರನ್ ನಾನು ದುಡ್ಡು ಕಳೆದುಕೊಂಡಿರೀದು ನಿಜ.. ಎಂದಿದ್ದಾರೆ.. ಹೌದು ಸದಾ ನೇರವಾಗಿ ಮಾತನಾಡುವ ರವಿಚಂದ್ರನ್ ಅವರು ಈ ವಿಚಾರವನ್ನೂ ಸಹ ನೇರವಾಗಿಯೇ ಹೇಳಿಕೊಂಡಿದ್ದು “ಒಂದು ತಿಂಗಳ ಹಿಂದೆ ನಾನು ಮನೆ ಖಾಲಿ ಮಾಡಿದೆ.. ಎಲ್ಲಾರೂ ಹೇಳಿದ್ರು ಇವನು ಮನೆ ಖಾಲಿ ಮಾಡಿದ.. ದುಡ್ಡು ಕಳ್ಕೊಂಡ.. ಅದಕ್ಕೆ ಮನೆ ಮಾರಿದ ಅಂತೆಲ್ಲಾ ಹೇಳಿದ್ರು.. ಅರೆ ದುಡ್ಡ್ ಇವತ್ತು ಕಳ್ದಿಲ್ಲಾ ರೀ ನಾನು.. ಮೂವತ್ತು ವರ್ಷದಿಂದ ಬರಿ ಕಳ್ಕೊಂಡೇ ಬಂದಿರೋದು ನಾನು.. ನಾನ್ ಕಳ್ಕೊಂಡೇ ನಗ್ತಾ ಬಂದಿರೋದು.. ಆದರೆ ಕಳ್ಕೊಂಡಿರೋದ್ ಎಲ್ಲಾ ನಿಮ್ ಯಾರಿಗೂ ಅರ್ಥ ಆಗ್ದೆ ಇರೋದು ಅಂದ್ರೆ.. ಕಳ್ಕೊಂಡಿರೋದೆಲ್ಲಾ ಬರಿ ನಿಮ್ಮಗಳಿಗೋಸ್ಕರ ಅಷ್ಟೇ..

ನಿಮ್ಮ ಮನಸ್ಸು ಗೆಲ್ಲೋದಕ್ಕೆ ಎಲ್ಲಾ ಕಳ್ಕೊಂಡ್ ಬಿಟ್ಟಿದ್ದೀನಿ ನಾನು.. ಆದರೆ ನನಗೆ ಬೇಸರ ಇಲ್ವೂ ಇಲ್ಲ.. ಮತ್ತೆ ಗೆಲ್ತೀನಿ ಅನ್ನೋ ಆವೇಶ ಇದಿಯಲ್ಲಾ ನನ್ನಲ್ಲಿ.. ಆ ಆಸೆ ಯಾವತ್ತೂ ಕಡಿಮೆಯಾಗಿಲ್ಲ ನನಗೆ.. ಯಾರ್ ಏನೇ ಮಾಡ್ಲಿ ರೀ.. ರವಿಚಂದ್ರನ್ ರವಿಚಂದ್ರನ್ ನ ಗೆಲ್ಲೋದಕ್ಕೆ ಆಗ್ತಿಲ್ಲ.. ನಾನ್ ಇನ್ಯಾವನಿಗೂ ಕಾಂಪಿಟೇಟರ್ ಅಲ್ಲ.. ಇನ್ಯಾರನ್ನೋ ಗೆಲ್ಲಬೇಕಾಗೂ ಇಲ್ಲ ನಾನು.. ನಾನ್ ನನ್ನನ್ನ ಗೆಲ್ಬೇಕು ಇವಾಗ ವಾಪಸ್.. ಎಂದಿದಾರೆ.. ಇನ್ನು ಮೂಲಗಳ ಪ್ರಕಾರ ರವಿಚಂದ್ರನ್ ಅವರು ಸಧ್ಯ ರಾಜಾಜಿ ನಗರದ ಮನೆ ಖಾಲಿ ಮಾಡಿ ಹೊಸಕೆರೆ ಹಳ್ಳಿಯ ಮತ್ತೊಂದು ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.. ರಾಜಾಜಿ ನಗರದ ಮನೆ ವಾಸ್ತು ರೀತಿಯಾಗಿಯೂ ಸರಿ ಇರಲಿಲ್ಲ ಎಂದು ರವಿಚಂದ್ರನ್ ಅವರ ಹಿತೈಷಿಗಳು ಹೇಳಿದ್ದು ಆ ಕಾರಣದಿಂದಲೇ ಕೆಲವೊಂದು ಸೋಲುಗಳಾಗುತ್ತಿದೆ ಎಂದು ಸಹ ಹೇಳಿದ್ದರಂತೆ.. ಆ ಕಾರಣದಿಂದಲೇ ರವಿಚಂದ್ರನ್ ಅವರ ಕುಟುಂಬ ರಾಜಾಜಿನಗರದ ಮನೆ ಖಾಲಿ ಮಾಡಿ ಹೊಸಕೆರೆಹಳ್ಳಿಯ ಮನೆಗೆ ತೆರಳಿದ್ದಾರೆ..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321