ಚಿತ್ರರಂಗ ಕೊಟ್ಟ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟ ರವಿಚಂದ್ರನ್..

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡದ ಕನಸುಗಾರಜ್ ಇವರ ಕನಸುಗಳು ಸಿನಿಮಾ ರೂಪದಲ್ಲಿ ಬಂದು ಸಿನಿಪ್ರಿಯರನ್ನು ರಂಜಿಸುತ್ತಗೆ. ರವಿಚಂದ್ರನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 38 ವರ್ಷ ಕಳೆಯುತ್ತಿದೆ. ಇಷ್ಟು ವರ್ಷಗಳಲ್ಲಿ ರವಿಚಂದ್ರನ್ ಅವರು ಸಾಕಷ್ಟು ಅನುಭವ ಪಡೆದಿದ್ದಾರೆ. ಅವರ ಅನುಭವಗಳು ಒಂದೊಂದು ಕಥೆ ಹೇಳುತ್ತದೆ. ಸಿನಿಮಾ ರಂಗದಲ್ಲಿ ಯಶಸ್ಸಿನ ಜೊತೆಗೆ ಅತ್ಯಂತ ಕಷ್ಟಪಟ್ಟ ಜೀವ ಅವರದ್ದು. ಬಹಳ ಆಸೆಪಟ್ಟು ಕನಸ್ಸಿನಿಂದ, ಹೆಚ್ಚಿನ ಹಣ ಖರ್ಚು ಮಾಡಿ, ರವಿಚಂದ್ರನ್ ಅವರು ನಿರ್ಮಾಣ, ನಿರ್ದೇಶನ ಮಾಡಿ ನಟಿಸಿದ ಸಿನಿಮಾ ಶಾಂತಿ ಕ್ರಾಂತಿ. ಆಗಿನ ಕಾಲದಲ್ಲಿಯೇ ಶಾಂತಿ ಕ್ರಾಂತಿ ಸಿನಿಮಾಗೆ ಬಹುಕೋಟಿ ಹಣ ಖರ್ಚು ಮಾಡಿದ್ದರು ಕ್ರೇಜಿಸ್ಟಾರ್. ನಾಲ್ಕು ಭಾಷೆಗಳಲ್ಲಿ ಸಿನಿಮಾ ತಯಾರಿಸಿದ್ದರು.

ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ತಯಾರಾಗಿತ್ತು. ಶಾಂತಿ ಕ್ರಾಂತಿ ಸಿನಿಮಾಗೆ ಸ್ಟಾರ್ ನಟರಾಗಿದ್ದ ನಾಗಾರ್ಜುನ, ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಕರೆತಂದರು ಕ್ರೇಜಿಸ್ಟಾರ್. ಜೊತೆಗೆ ನಟಿಯರಾಗಿ ಜೂಹಿ ಚಾವ್ಲಾ ಮತ್ತು ಖುಷ್ಬೂ ಅವರು ನಟಿಸಿದ್ದರು. ಇಂದು ಶಾಂತಿ ಕ್ರಾಂತಿ ಸಿನಿಮಾ ನೋಡಿದರೆ ಅದೊಂದು ಮಾಸ್ಟರ್ ಪೀಸ್ ಎನ್ನಿಸುತ್ತದೆ. ಆದರೆ ಅಂದು ರವಿಚಂದ್ರನ್ ಅವರಿಗೆ ಈ ಸಿನಿಮಾ ನೀಡಿದ್ದು ನೋವು ಮಾತ್ರ, ಬಾಕ್ಸ್ ಆಫೀಸ್ ಸಿನಿಮಾ ಸೋತಿತು. ಅದರ ಜೊತೆಗೆ ಶಾಂತಿ ಕ್ರಾಂತಿ ಸಿನಿಮಾಗೆ ಇಂಡಸ್ಟ್ರಿಯವರಿಂದ ಆದ ತೊಂದರೆಗಳು ಒಂದೆರಡಲ್ಲ. ಸಿನಿಮಾ ಚಿತ್ರೀಕರಣ ಸಮಯದಲ್ಲಿ ಆಗುತ್ತಿದ್ದ ತೊಂದರೆಗಳ ಬಗ್ಗೆ ಕೇಳಿದರೆ, ನಮ್ಮ ಕನ್ನಡ ಚಿತ್ರರಂಗ ಈ ರೀತಿನ ಎಂದು ಅನ್ನಿಸುವುದು ಖಂಡಿತ.

ಶಾಂತಿ ಕ್ರಾಂತಿ ಸಿನಿಮಾ ಚಿತ್ರೀಕರಣ ಸಮಯ ಮತ್ತು ಅದರ ನಂತರದ ಸಮಯದಲ್ಲಿ ರವಿಚಂದ್ರನ್ ಅವರು ಇತ್ತೀಚೆಗೆ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ನ, ಅಪೂರ್ವ ಸಂಗಮ ಯೂಟ್ಯೂಬ್ ಶೋನಲ್ಲಿ ಮನಬಿಚ್ಚು ತಿಳಿಸಿದ್ದಾರೆ.. “ಇಂಡಸ್ಟ್ರಿಯವರಿಂದ ಶಾಂತಿ ಕ್ರಾಂತಿ ಸಿನಿಮಾಗೆ ಆದ ತೊಂದರೆಗಳನ್ನು ನೆನೆದರೆ ಅದು ಅತಿ ಎನ್ನಿಸುತ್ತದೆ. ನಾವು ಶಾಂತಿ ಕ್ರಾಂತಿ ಸಿನಿಮಾವನ್ನು ನಾಲ್ಕು ಭಾಷೆಯಲ್ಲಿ ತಯಾರಿಸುತ್ತಿದ್ದೆವು, ಚಿತ್ರೀಕರಣ ನಿಲ್ಲಿಸಲು, ಶುರುವಾದ ಸಮಯಕ್ಕೆ ಪ್ರತಿಭಟನೆ ಶುರುಮಾಡಿಬಿಡುತ್ತಿದ್ದರು, ದಯವಿಟ್ಟು ನಿಲ್ಲಿಸಿ ನಮ್ಮ ಚಿತ್ರೀಕರಣಕ್ಕೆ ತೊಂದರೆ ಆಗುತ್ತಡ ಎಂದು ಎಷ್ಟು ಕೇಳಿಕೊಂಡರು ಸಹ ನಿಲ್ಲಿಸುತ್ತಿದ್ದರು, ಏನಾದರೂ ಆಗಲಿ ಸತ್ತರೆ ಸಾಯಲಿ ಎನ್ನುವಂತಿತ್ತು ಅವರುಗಳ ವರ್ತನೆ.

ಶಾಂತಿ ಕ್ರಾಂತಿ ಸಿನಿಮಾ ಚಿತ್ರೀಕರಣಕ್ಕೆ ಒಂದು ದಿನ ತೊಂದರೆಯಾದರು ಸಹ ಸಿನಿಮಾ ಚಿತ್ರೀಕರಣ ಒಂದು ವರ್ಷ ಪೋಸ್ಟ್ ಪೋನ್ ಆಗುವ ಹಾಗಿತ್ತು. ಯಾಕಂದ್ರೆ ನಾಗಾರ್ಜುನ, ರಜನಿಕಾಂತ್, ಜೂಹಿ ಚಾವ್ಲಾ ಅವತ ಡೇಟ್ಸ್ ಸಿಗುವುದೇ ಕಷ್ಟ, ಅವರನ್ನು ನಾನು ಮತ್ತೆ ಕರೆತರಬೇಕಿತ್ತು. ಶಾಂತಿ ಕ್ರಾಂತಿ ಸಿನಿಮಾಗಾಗಿ ನಾನು ಪಟ್ಟ ಕಷ್ಟ ಒಂದೆರಡಲ್ಲ, ಸಿನಿಮಾದ ಪ್ರತಿ ಹಂತದಲ್ಲೂ ನನಗೆ ತೊಂದರೆ ನೀಡಿದ್ದಾರೆ, ಅಸಹಕಾರ ತೋರಿದ್ದಾರೆ. ಸಿನಿಮಾ ಶುರುವಿನಲ್ಲೇ ನಾನಂದುಕೊಂಡ ಹಾಗೆ ಸಿನಿಮಾ ಬರುತ್ತಿಲ್ಲ ಅಂತ ನನಗೆ ಗೊತ್ತಾಯ್ತು. ಸಿನಿಮಾ ನಿಲ್ಲಿಸಿಬಿಡೋಣ ಎಂದುಕೊಂಡಿದ್ದೆ. ಆದರೆ ನಮ್ಮ ತಂದೆ ಒಪ್ಪಲಿಲ್ಲ.

ನಾಗಾರ್ಜುನ, ರಜನಿಕಾಂತ್ ನಿನ್ನ ನಂಬಿ ಡೇಟ್ಸ್ ಕೊಟ್ಟಿದ್ದಾರೆ, ಸಿನಿಮಾ ನಿಲ್ಲಿಸಿದರೆ ಅವರ ಗೌರವಕ್ಕೆ ಧಕ್ಕೆ ತಂದ ಹಾಗೆ ಆಗುತ್ತದೆ, ಏನೇ ಆದರೂ ಸಿನಿಮಾ ಮಾಡಿ ಮುಗಿಸು ಎಂದರು. ಸಿನಿಮಾ ಪೂರ್ತಿಯಾದ ಮೇಲು ನನಗೆ ಸಿಕ್ಕಿದ್ದು ತೊಂದರೆಗಳೇ. ಶಾಂತಿ ಕ್ರಾಂತಿ ಸಿನಿಮಾಗೆ ಕೋಟಿ ಖರ್ಚು ಮಾಡಿದ್ದೆ, ನನ್ನ ಸಿನಿಮಾಗೆ 2 ರೂಪಾಯಿ ಟಿಕೆಟ್ ಮಾಡಿದ್ದರು. 10 ಲಕ್ಷ ರೂಪಾಯಿ ಹಾಕಿ ಸಿನಿಮಾ ಮಾಡಿದವರಿಗೆ ಅಷ್ಟೇ ಟಿಕೆಟ್ ದರ, ನಾನು 10 ಕೋಟಿ ಹಾಕಿ ಸಿನಿಮಾ ಮಾಡಿದರು 2 ರೂಪಾಯಿ ಟಿಕೆಟ್ ಅಂದ್ರೆ ಕಷ್ಟ ಆಗುತ್ತದೆ ಎಂದು 5 ರೂಪಾಯಿ ಟಿಕೆಟ್ ಮಾಡಿ ಎಂದು ಕೇಳಿಕೊಂಡೇ..

ನನ್ನ ಮಾತಿಗೆ ಯಾರು ಪ್ರೋತ್ಸಾಹ ಕೊಡಲಿಲ್ಲ. 2 ರೂಪಾಯಿ ಟಿಕೆಟ್ ಗೆ ನನ್ನ ಸಿನಿಮಾ ತೋರಿಸಿದರು. ಅಂದು ಅವರು ಸಹಕಾರ ಕೊಟ್ಟಿದ್ದರೆ, ಶಾಂತಿ ಕ್ರಾಂತಿ ಸಿನಿಮಾಗೆ ಮಾಡಿದ ಸಾಲ ಐದು ವರ್ಷ ಬೇಗ ಮುಗಿಯಿತ್ತಿತ್ತು..” ಎಂದು ಹೇಳಿದ್ದಾರೆ ಕ್ರೇಜಿಸ್ಟಾರ್. ಅನುಶ್ರೀ ಅವರ ಸಂದರ್ಶನದಲ್ಲಿ ತಮ್ಮ ಕರಾಳ ದಿನಗಳ ಅನುಭವವನ್ನು ಹಂಚಿಕೊಂಡಿದ್ದಾರೆ ಕ್ರೇಜಿಸ್ಟಾರ್.