ನೀನ್ ಸೈಲೆಂಟ್ ಆಗಿಲ್ಲ ಅಂದ್ರೆ ನಾನು ವೈಲೆಂಟ್ ಆಗ್ತೀನಿ.. ಖಡಕ್ ವಾರ್ನಿಂಗ್ ಕೊಟ್ಟ ರವಿ ಚನ್ನಣ್ಣನವರ್..

ಕರ್ನಾಟಕದ ಸಿಂಗಂ ಎಂದೇ ಅಣ್ಣಾಮಲೈ ಹಾಗೂ ರವಿ ಚನ್ನಣ್ಣನವರ್ ಖ್ಯಾತಿಯಾಗಿದ್ದರು.. ಆದರೆ ಎಷ್ಟು ದಿನ ಅಂತ ರಕ್ತವನ್ನೇ ನೋಡಲಿ.. ಬಹಳ ಬೇಸರ ವಾಗತ್ತೆ.‌ ಸೊಸೈಟಿಗೆ ಬೇರೆ ರೀತಿಯಲ್ಲಿ ಸೇವೆ ಮಾಡಬೇಕೆಂದು ಅಣ್ಣಾಮಲೈ ತಮ್ಮ ಹುದ್ದೆ ರಾಜಿನಾಮೆ ನೀಡಿದರೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಸದಾ ಸಿಂಗಂ ಆಗಿಯೇ ಉಳಿದಿದ್ದಾರೆ.‌ ಇನ್ನು ರವಿ ಚನ್ನಣ್ಣನವರ್ ಕಷ್ಟಪಟ್ಟು ಬಾರ್ ಗಳಲ್ಲಿ ಕೆಲಸ ಮಾಡಿ ಜೊತೆಗೆ ಐಪಿಎಸ್ ಬರೆದು ಕರ್ನಾಟಕದಲ್ಲಿ ಎಸ್ ಪಿ ಆಗಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಎಷ್ಟೋ ಯುವ ಜನತೆಗೆ ಸ್ಪೂರ್ತಿಯಾಗಿದೆ..

ಇನ್ನು ಕರ್ತವ್ಯದ ವಿಚಾರಕ್ಕೆ ಬಂದರೆ ರವಿ ಚನ್ನಣ್ಣನವರ್ ಎಷ್ಟು ಖಡಕ್ ಎಂಬುದು ಎಲ್ಲರಿಗೂ ತಿಳಿದೇ ಇದೆ.. ಮೊನ್ನೆ ಮೊನ್ನೆಯಷ್ಟೇ ಲಾರಿ ಚಾಲಕನ ವೇಷ ತೊಟ್ಟು ಭ್ರಷ್ಟ ಆರ್ ಟಿ ಓ ಅಧಿಕಾರಿಗಳನ್ನ ಹಿಡಿದಿದ್ದರು..

ಇದೀಗ ಮತ್ತೊಮ್ಮೆ ಗುಡುಗಿದ್ದಾರೆ.. ಹೌದು ಇಂದು ರೌಡಿಗಳಿಗೆ ನೇರವಾಗಿ ನೀನು ಸೈಲೆಂಟ್ ಆಗದಿದ್ದರೆ ನಾನು ವೈಲೆಂಟ್ ಆಗಬೇಕಾಗತ್ತೆ ಎಂದು ವಾರ್ನಿಂಗ್ ನೀಡಿದ್ದಾರೆ.. ಹೌದು ಆನೆಕಲ್ ಪೊಲೀಸ್ ಠಾಣೆಗೆ 28 ಜನ ರೌಡಿಗಳನ್ನು ಕರೆಸಿ ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ.. ಇಲ್ಲಿದೆ ನೋಡಿ ರವಿ ಚನ್ನಣ್ಣನವರ್ ಆಡಿದ ಮಾತುಗಳು..

ಯಾರ್ ಯಾರು ಆನೇಕಲ್ ಗೆ ಕೆಟ್ಟ ಹೆಸರು ತರ್ತಿದ್ದೀರಾ.. ಯಾರ್ ಯಾರು ಪುಡಿ ರಾಜಕಾರಣಿಗಳ ಜೊತೆ ಹಿಂಬಾಲಕರಾಗಿ ಕೆಲಸ ಮಾಡ್ತಿದ್ದೀರಾ.. ಯಾವನೋ ಒಂದ್ ಬಿರಿಯಾನಿ‌ ಕೊಟ್ಟ ತಕ್ಷಣ.. ದುಡ್ಡು ಕೊಟ್ಟ ತಕ್ಷಣ.. ನಾಟಕ್ ಮಾಡ್ಕೊಂಡ್ ಆಟ ಆಡ್ತಿದ್ದೀರಾ.. ನಿಮ್ಮನ್ನ ಬಿಡಲ್ಲ.. ಅರ್ಥ ಆಗ್ತಿದ್ದೀಯಾ.‌. ಮಾತಾಡೋಕೆ ನಿನ್ನ್ ಒಬ್ಬನಿಗೆ ಬರತ್ತಾ? ನನಗೂ ಬರತ್ತೆ..

ರೌಡಿಸಂ ಮಾಡೋದು ಹೆಗ್ಗಳಿಕೆ ಅಲ್ಲ.. ನಾವು ನಿಮ್ಮನ್ನ ಸಾರ್ ಅಂತ ಕರೆದು ಮಾತನಾಡಿಸೋ ರೀತಿ ಜೀವನ ಮಾಡಿ.. ಹುಚ್ಚ ರವಿ.. ಹುಚ್ಚ ಅಂತ ಯಾಕೋ ಕರಿತಾರೆ ನಿನಗೆ? ಹುಷಾರ್.. ಇನ್ನುಮುಂದೆ ಇದೆಲ್ಲಾ ನಡಿಯಲ್ಲಾ.. ದೇಶದಲ್ಲಿ ಇರುವ ಕಾನೂನನ್ನ ಪಾಲಿಸಬೇಕು ಅಷ್ಟೇ.. ಇನ್ಮೇಲೆ ಏನೂ ನಡಿಯಲ್ಲ.. ಯಾವನ್ನೋ ಹೊಡೆದುಬಿಡ್ತೀವಿ ಅಂತ ಆಲೋಚನೆ ಕೂಡ ಹುಟ್ಟಬಾರದು.. ಬಾಲ ಬಿಚ್ಚಬೇಡಿ.. ಬಾಲ ಬಿಚ್ಚಿದ್ರೆ ಕಟ್ ಮಾಡಿಬಿಡ್ತೀವಿ ಎಂದಿದ್ದಾರೆ..