ಹೊಸ ಜೀವನ ಆರಂಭಿಸುತ್ತಿರುವ ರಶ್ಮಿಕಾ ಮಂದಣ್ಣ.. ನಟನೆ ಬಿಡುವ ಸಾಧ್ಯತೆ..

ರಶ್ಮಿಕಾ ಮಂದಣ್ಣ ಸದ್ಯ ಕನ್ನಡ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ನಟಿ.. ಸಿನಿಮಾ ರಂಗಕ್ಕೆ ಬಂದ ಕೆಲ ವರ್ಷಗಳಲ್ಲಿಯೇ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾದರು.. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಆನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ಸಾಲು ಸಾಲು ಸ್ಟಾರ್ ನಟರ ಜೊತೆ ಅಭಿನಯಿಸಿದರು.. ಜೊತೆಗೆ ಇದೀಗ ತೆಲುಗಿನ ಸೂಪರ್ ಸ್ಟಾರ್ ಗಳ ಜೊತೆಯೂ ಅಭಿನಯಿಸುತ್ತಿದ್ದು, ಗೀತಾ ಗೋವಿಂದಂ ನಂತರ ಮಹೇಶ್ ಬಾಬು ಜೊತೆಗಿನ ಸರಿಲೇರು ನಿಕ್ಕೆವರು ಸಿನಿಮಾ ಹಿಟ್ ಆಗಿದ್ದು ರಶ್ಮಿಕಾ ತೆಲುಗಿನಲ್ಲಿ ಭದ್ರವಾಗಿ ನೆಲೆಯೂರಲು ಅನುಕೂಲವಾಯಿತು.. ಇದೀಗ ಅಲ್ಲು ಅರ್ಜುನ್ ಜೊತೆಗೆ ಪುಷ್ಪ ಸಿನಿಮಾದಲ್ಲಿಯೂ ಸಹ ಕಾಣಿಸಿಕೊಳ್ಳಲಿದ್ದಾರೆ..

ಕೊರೊನಾ ಕಾರಣದಿಂದಾಗಿ ಸದ್ಯ ಯಾವುದೇ ಶೂಟಿಂಗ್ ಇಲ್ಲದ ಕಾರಣ ರಶ್ಮಿಕಾ ತಮ್ಮ ಹುಟ್ಟೂರು ವಿರಾಜಪೇಟೆಯಲ್ಲಿ ಅಪ್ಪ ಅಮ್ಮನೊಂದಿಗೆ ಸೆಟಲ್ ಆಗಿದ್ದಾರೆ.. ಈ ನಡುವೆ ಹೊಸ ಸುದ್ದಿಯೊಂದ ಹೊರಬಿದ್ದಿದೆ.. ಹೌದು ರಶ್ಮಿಕಾ ಮಂದಣ್ಣ ಇದೀಗ ಹೊಸ ವೃತ್ತಿಯೊಂದನ್ನು ಆರಂಭಿಸಿದ್ದಾರೆ.. ರಶ್ಮಿಕಾ ಇನ್ನು ಮುಂದೆ ತಮ್ಮ ತಂದೆಯ ಉದ್ಯಮವನ್ನು‌ ನೋಡಿಕೊಳ್ಳಲಿದ್ದು ನಟಿಯ ಜೊತೆಗೆ ಉದ್ಯಮಿಯಾಗಿ ನೂತನ ಜೀವನ ಆರಂಭಿಸುತ್ತಿದ್ದಾರೆ..

ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಅವರೇ ವಿಶ್ವ ತಂದೆಯಂದಿರ ದಿನದಂದು ಪೋಸ್ಟ್ ಮಾಡಿದ್ದು, ಅಪ್ಪನ ಬಗ್ಗೆ ಒಂದಷ್ಟು ಸಾಲುಗಳ ಬರೆದು ಜೊತೆಗೆ ಇನ್ನು ಮುಂದೆ ಅಪ್ಪನ ಉದ್ಯಮವನ್ನು ನಾನು ಸಹ ನೋಡಿಕೊಳ್ತೇನೆ ಎಂದಿದ್ದಾರೆ..

ಎಲ್ಲರಿಗೂ ತಿಳಿದಿರುವಂತೆ ವಿರಾಜಪೇಟೆಯಲ್ಲಿ ರಶ್ಮಿಕಾ ಮಂದಣ್ಣ ಅವರ ತಂದೆ ದೊಡ್ಡ ಉದ್ಯಮಿಯಾಗಿದ್ದು, ಕನ್ವೆನ್ಷನ್ ಹಾಲ್ ಕಾಫಿ ಎಸ್ಟೇಟ್ ಸೇರಿದಂತೆ ಬಹಳಷ್ಟು ಉದ್ಯಮಗಳಿವೆ.. ಕೆಲ ತಿಂಗಳ ಹಿಂದಷ್ಟೇ ಐ ಟಿ ದಾಳಿ ನಡೆದದ್ದೂ ಸಹ ರಶ್ಮಿಕಾ ಅವರ ಆದಾಯದ ವಿಚಾರವಾಗಿಯಲ್ಲ‌. ಬದಲಿಗೆ ರಶ್ಮಿಕಾ ತಂದೆ ಉದ್ಯಮದ ವಿಚಾರವಾಗಿ.. ಇದೀಗ ಅಪ್ಪನ ಬ್ಯುಸಿನೆಸ್ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ರಶ್ಮಿಕಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ..

ಆದರೆ ಸದ್ಯ ಕೆಲವೊಂದಿಷ್ಟು ಸಿನಿಮಾಗಳಿಗೆ ಸಹಿ ಮಾಡಿರುವ ರಶ್ಮಿಕಾ.. ಇನ್ನು ಕೆಲವು ವರ್ಷಗಳು ಸಿನಿಮಾ ಇಂಡಸ್ಟ್ರಿಯಲ್ಲಿ ಮುಂದುವರೆದು ನಂತರ ಸಿನಿಮಾ ಬಿಟ್ಟು ಫುಲ್ ಟೈಮ್ ತಮ್ಮ ಉದ್ಯಮವನ್ನು ನೋಡಿಕೊಂಡರೂ ಆಶ್ವರ್ಯ ಪಡಬೇಕಿಲ್ಲ..