ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ ಎಂಟ್ರಿ..

ಕನ್ನಡದ ಕಿರಿಕ್ ಚೆಲುವೆ.. ಸಧ್ಯ ನ್ಯಾಷನಲ್ ಕ್ರಶ್ ಎನಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.. ಕನ್ನಡದ ನಂತರ ಸೌತ್ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿ ಆದ ನಟಿ ಇದೀಗ ಹಿಂದಿಯಲ್ಲಿಯೂ ಸಹ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.. ಆದರೆ ಈ ನಡುವೆಯೇ ರಶ್ಮಿಕಾ ಅವರ ಕುರಿತು ಹೊಸ ವಿಚಾರ ಹೊರ ಬಂದಿದ್ದು ರಶ್ಮಿಕಾ ಮಂದಣ್ಣ ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರಂತೆ.. ಅದರಲ್ಲಿಯೂ ಕರ್ನಾಟಕದಲ್ಲಿಯೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದೆಯೂ ಕೂಡ ಆಗಲಿದ್ದಾರಂತೆ.. ಆಶ್ಚರ್ಯವಾದರೂ ಈ ವಿಚಾರ ಸತ್ಯ..

ಹೌದು ಚಿತ್ರದಂಗದಲ್ಲಿ ಅದೃಷ್ಟದ ನಾಯಕಿ ಎಂದೇ ನಿರ್ಮಾಪಕರು ಕರೆಯುತ್ತಿರುವ ರಶ್ಮಿಕಾ ಮಂದಣ್ಣ ತೆಲುಗು ಮತ್ತು ಹಿಂದಿಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪುಷ್ಪ ಬ್ಯೂಟಿ ಕುರಿತು ಹೊಸ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೂರ್ಗ್ ಬ್ಯೂಟಿ ಚಿತ್ರರಂಗಕ್ಕೆ ಬೈ ಹೇಳಿ, ರಾಜಕೀಯಕ್ಕೆ ಎಂಟ್ರಿ ಆಗಲಿದ್ದಾರೆ..

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ಈಗ ಬಾಲಿವುಡ್ ಮತ್ತು ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿ ನೇಮು ಫೇಮು ಗಿಟ್ಟಿಸಿಕೊಂಡಿದ್ದಾರೆ. ಪುಷ್ಪ ಸೂಪರ್ ಸಕ್ಸಸ್ ನಂತರ ರಶ್ಮಿಕಾ ಸಖತ್ ಡಿಮ್ಯಾಂಡ್ ಶುರುವಾಗಿದೆ. ಹೀಗಿರುವಾಗ ರಶ್ಮಿಕಾ, ರಾಜಕೀಯ ಅಖಾಡಕ್ಕೆ ಧುಮುಖಲಿದ್ದಾರಂತೆ. ಹಾಗಂತ ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಪರವಾಗಿ ರಶ್ಮಿಕಾ ಕರ್ನಾಟಕದಿಂದ ಸಂಸದೆಯಾಗಿ ಅಖಾಡಕ್ಕೆ ಇಳಿಯಲಿದ್ದಾರೆ. ರಶ್ಮಿಕಾ ಬಗ್ಗೆ ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಮಾಡಿರುವ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ..

ಮೇಲಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಲೋಕಸಭೆ ಸಂಸದರಾಗುತ್ತಾರೆ ಎನ್ನುತ್ತಾರೆ. ವೇಣು ಸ್ವಾಮಿ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರು ಸೆಲೆಬ್ರಿಟಿಗಳ ಜಾತಕವನ್ನು ನೋಡಿ ಹೇಳುವುದರಲ್ಲಿ ಎತ್ತಿದ ಕೈ ಈಗ ರಶ್ಮಿಕಾ ಕುರಿತು ಹೇಳಿರುವ ಈ ಭವಿಷ್ಯ ನಿಜವಾಗುತ್ತಾ ಅಂತಾ ಕಾದು ನೋಡಬೇಕಿದೆ. ಸಿನಿಮಾಗೆ ಗುಡ್ ಬೈ ಹೇಳಿ, ರಾಜಕೀಯ ರಂಗಕ್ಕೆ ಬರುತ್ತಾರಾ ಅಂತಾ ಕಾದು ನೋಡಬೇಕಿದೆ..

ಒಟ್ಟಿ‌ನಲ್ಲಿ ಅದಾಗಲೇ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಈಗ ಮತ್ತೆ ಸಿನಿಮಾ ರಂಗಕ್ಕೆ ಮರಳಬೇಕು ಎಂದರೂ ಸಹ ಒಳ್ಳೆಯ ಅವಕಾಶ ಸಿಗದೇ ಸುಮ್ಮನೆ ಕೂರುವಂತಾಗಿದೆ.. ಇದೀಗ ರಶ್ಮಿಕಾ ಅವರ ವಿಚಾರದಲ್ಲಿ ಇದೇ ರಾಜಕೀಯದ ಮಾತು ಕೇಳಿ ಬರುತ್ತಿದ್ದು ಏನಾಗುವುದೋ ಕಾದು ನೋಡಬೇಕಿದೆ..