ಹೆಸರು ಬದಲಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ..‌ ಯಾರಿಗಾಗಿ ಗೊತ್ತಾ?

ರಶ್ಮಿಕಾ ಮಂದಣ್ಣ.. ಸದ್ಯ ತೆಲುಗು ಇಂಡಸ್ಟ್ರಿಯ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರು.. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ‌ಆಗಿದ್ದು ಸದ್ಯ ಲಾಕ್ ಡೌನ್ ಕಾರಣ ಸಂಪೂರ್ಣ ಬ್ರೇಕ್ ಪಡೆದು ಹುಟ್ಟೂರಿನಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ..‌ ಮೊನ್ನೆ ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬವಿದ್ದು, ಸಾಮಾಜಿಕ ಜಾಲತಾಣದ ಮೂಲಕವೇ ನನ್ನ ಕಾಮ್ರೆಡ್ ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದರು.. ಅತ್ತ ವಿಜಯ್ ಕೂಡ ನಿನ್ನನ್ನ ಮಿಸ್ ಮಾಡಿಕೊಳ್ತಿದ್ದೇನೆ ಬೇಗ ಬಂದು ಹೈದರಾಬಾದ್ ಗ್ಯಾಂಗ್ ಸೇರಿಕೋ ಎಂದು ಪೋಸ್ಟ್ ಮಾಡಿದ್ದರು..

ಇದೀಗ ಈ ನಡುವೆ ರಶ್ಮಿಕಾ ತಮ್ಮ ಹೆಸರು ಬದಲಿಸಿಕೊಳ್ಳಲು ಮುಂದಾಗಿದ್ದಾರೆ.. ಹೌದು ಸದ್ಯ ತೆಲುಗಿನ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಅವರ ಕನ್ನಡದ ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.. ಅತ್ತ ತಮಿಳಿನಲ್ಲಿಯೂ ಸಿನಿಮಾಗೆ ಸಹಿ‌ ಮಾಡಿದ್ದು, ಪುಷ್ಪ ಸಿನಿಮಾದ ಬಳಿಕ ಶೂಟಿಂಗ್ ಶುರು ಆಗಲಿದೆ..

ಸದ್ಯ ರಶ್ಮಿಕಾ ಅವರು ಹುಟ್ಟೂರಿನಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅಭಿಮಾನಿಗಳೊಂದಿಗೆ ಮಾತನಾಡುತ್ತಿರುತ್ತಾರೆ.. ಮೊನ್ನೆ ಮೊನ್ನೆಯಷ್ಟೇ ಅಭಿಮಾನಿಗಳಿಗಾಗಿ ಸಂಪೂರ್ಣ ದಿನವನ್ನು ಮೀಸಲಾಗಿರಿಸಿ ಅಭಿಮಾನಿಗಳು ಹೇಳಿದ ಕೆಲಸ ಮಾಡುತ್ತೇನೆ ಎಂದು ಪೋಸ್ಟ್ ಮಾಡಿದ್ದು.. ಅದರಂತೆ ಅಭಿಮಾನಿಗಳು ಹೇಳಿದಂತೆ ಡ್ರೆಸ್ ಮಾಡಿಕೊಂಡಿದ್ದರು..

ಇದೀಗ ಮತ್ತೊಮ್ಮೆ ಹೆಸರು ಬದಲಿಸಿಕೊಳ್ಳಲು ಮುಂದಾಗಿದ್ದು ಅಭಿಮಾನಿಗಳಿಗೆ ಯಾವ ಹೆಸರು ಇಟ್ಟುಕೊಳ್ಳಲಿ ಎಂದು ಪ್ರಶ್ನೆ ಕೇಳಿದ್ದಾರೆ.. ಹೌದು ತಮಾಷೆಗಾಗಿ ಈ ಪ್ರಶ್ನೆ.. ನಾನು ರಶ್ಮಿಕಾ ಹೆಸರನ್ನು ಬದಲಿಸಿದರೆ ಯಾವ ಹೆಸರು ಇಟ್ಟುಕೊಳ್ಳಲಿ ಸಜೆಸ್ಟ್ ಮಾಡಿ ಎಂದು ಕೇಳಿದ್ದಾರೆ..

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು ಬಹುತೇಕರು ಲಿಲ್ಲಿ ಹೆಸರು ಸೂಟ್ ಆಗತ್ತೆ ಎಂದರೆ ಇತ್ತ ನಮ್ಮ ಕನ್ನಡದ ಅಭಿಮಾನಿಗಳು ಸಾನ್ವಿ ಹೆಸರು ಸೂಟ್ ಆಗತ್ತೆ ಎಂದಿದ್ದಾರೆ.. ಇನ್ನೂ ಕೆಲವರು ಗೀತಾ ಹೆಸರು ಇಟ್ಟುಕೊಳ್ಳಿ ಎಂದರೆ ಅವರ ಕಟ್ಟಾ ಫಾಲೋವರ್ಸ್ ಮಾತ್ರ ರಶ್ಮಿಕಾ ಅನ್ನೋ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸಬೇಡಿ ಎಂದಿದ್ದಾರೆ.. ತಮಾಷೆಯೋ ಅಥವಾ ನಿಜವಾಗಿ ರಶ್ಮಿಕಾ ತಮ್ಮ ಅಭಿಮಾನಿಗಳು ಕೊಟ್ಟ ಹೆಸರನ್ನೇ ಬದಲಿಸಿಕೊಳ್ಳುವರೋ ಕಾದು ನೋಡಬೇಕಿದೆ.. ಒಟ್ಟಿನಲ್ಲಿ ಶೂಟಿಂಗ್ ಸಮಯದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಲು ಸಮಯವಿಲ್ಲ ಎನ್ನುತ್ತಿದ್ದವರೆಲ್ಲಾ ಇದೀಗ ಲಾಕ್ ಡೌನ್ ನಲ್ಲಿ ಅಭಿಮಾನಿಗಳು ಹೇಳಿದ ಕೆಲಸಗಳನ್ನು ಮಾಡುವಂತಾಯ್ತು ಪರಿಸ್ಥಿತಿ..‌