ರಶ್ಮಿಕಾ ಹಾಕಿದ ತುಂಡು ಬಟ್ಟೆ ನೋಡಿ ಕ್ಯಾಮರಾ ಮ್ಯಾನ್ ಮಾಡಿರೋ ಕೆಲಸ ನೋಡಿ..

ಸ್ಯಾಂಡಲ್​ವುಡ್ ಸಾನ್ವಿ ರಶ್ಮಿಕಾ ಮಂದಣ್ಣ ಅಭಿನಯಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗುತ್ತಿವೆ. ಕಿರಿಕ್ ಬೆಡಗಿ ಚಿತ್ರದಲ್ಲಿದ್ದರೆ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತದೆ ಎನ್ನುತ್ತಿದ್ದಾರೆ ನಿರ್ಮಾಪಕರು.ಕಿರಿಕ್ ಪಾರ್ಟಿ ಮೂಲಕ ಸಿನಿರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಆ ಬಳಿಕ ಟಾಲಿವುಡ್​ನತ್ತ ಮುಖ ಮಾಡಿದ್ದರು. ಚಲೋ, ಗೀತಾ ಗೋವಿಂದಂ ಚಿತ್ರಗಳು ಹಿಟ್​ ಲಿಸ್ಟ್​ಗೆ ಸೇರುತ್ತಿದ್ದಂತೆ ಟಾಲಿವುಡ್​ನಲ್ಲಿ ರಶ್ಮಿಕಾ ಬಹು ಬೇಡಿಕೆಯ ನಟಿಯಾದರು. ತೆಲುಗಿನ ಸೂಪರ್ ಸ್ಟಾರ್ ಚಿತ್ರಗಳಿಗೆ ಆಫರ್​ಗಳು ಇವರಿಗೆ ಬರಲಾರಂಭಿಸಿತು. 

ಇತ್ತ ಕನ್ನಡದಲ್ಲಿ ನಟಿಸಿದ್ದು ಕೆಲವು ಸಿನಿಮಾಗಳಲ್ಲಿ ಆದರೂ, ಪರಭಾಷೆಗಳಲ್ಲಿ ಬ್ಯುಸಿ ಆಗಿಬಿಟ್ಟರು ರಶ್ಮಿಕಾ. ತೆಲುಗು, ತಮಿಳು ಹಾಗೂ ಬಾಲಿವುಡ್ ನಲ್ಲಿ ಸಹ ಮಿಂಚುತ್ತಿದ್ದಾರೆ. ಅದರಿಂದಲೇ ಇವರನ್ನು ನ್ಯಾಷನಲ್ ಕ್ರಶ್ ಎಂದು ಕರೆಯುತ್ತಾರೆ. ರಶ್ಮಿಕಾ ಅವರಿಗೆ ಪುಷ್ಪ ಸಿನಿಮಾ ಬಿಗ್ ಸಕ್ಸಸ್ ತಂದುಕೊಟ್ಟಿದೆ, ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡಿತ್ತು. ಇದೀಗ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಪಾಪ್ಯುಲಾರಿಟಿ ಮತ್ತು ಅವಕಾಶಗಳು ಎಲ್ಲವೂ ಸಹ ಇದರಿಂದಾಗಿ ಹೆಚ್ಚಾಗುತ್ತಿದೆ.

ರಶ್ಮಿಕಾ ಅವರು ಈಗ ಬಾಲಿವುಡ್ ನಲ್ಲೇ ಹೆಚ್ಚು ಬ್ಯುಸಿ ಆಗುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ರಶ್ಮಿಕಾ ಅವರು ಹಿಂದಿಯಲ್ಲಿ ಈಗಾಗಲೇ, ಮಿಷನ್ ಮಜ್ನು ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ನಾಯಕಿಯಾಗಿ ನಟಿಸಿ ಆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ, ಜೊತೆಗೆ ಅಮಿತಾಬ್ ಬಚ್ಚನ್ ಅವರೊಡನೆ ಗುಡ್ ಬೈ ಸಿನಿಮಾದಲ್ಲಿ ನಟಿಸಿ, ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ರಣಬೀರ್ ಕಪೂರ್ ಅವರ ಅನಿಮಲ್ ಸಿನಿಮಾಗು ನಾಯಕಿಯಾಗಿದ್ದಾರೆ ರಶ್ಮಿಕಾ. ಒಂದರ ಹಿಂದೆ ಒಂದು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ರಶ್ಮಿಕಾ ಅವರಿಗೆ ಹಿಂದಿ ಇಂದ ದೊಡ್ಡ ದೊಡ್ಡ ಆಫರ್ ಗಳೇ ಸಿಗುತ್ತಿವೆ. ಸೌತ್ ನಲ್ಲಿ ಸಹ ಬಿಗ್ ಆಫರ್ ಗಳನ್ನೇ ಪಡೆದುಕೊಳ್ಳುತ್ತಿದ್ದಾರೆ. ದಳಪತಿ ವಿಜಯ್ ಅವರೊಡನೆ ಒಂದು ಸಿನಿಮಾದಲ್ಲಿ ಹಾಗೂ ಡುಲ್ಕರ್ ಸಲ್ಮಾನ್ ಅವರೊಡನೆ ಸಹ ನಟಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ. ಇನ್ನು ಬಾಲಿವುಡ್ ನಲ್ಲಿ ಇವರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಸಿನಿಮಾಗಳ ಜೊತೆಗೆ, ಬಾಲಿವುಡ್ ಅಂಗಳಲ್ಲಿ ಪಾರ್ಟಿಗಳಲ್ಲಿ ಸಹ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರು ತಮ್ಮ ಹುಟ್ಟುಹಬ್ಬದ ಸ್ಪೆಷಲ್ ಪಾರ್ಟಿಗೆ, ಖುದ್ದಾಗಿ ರಶ್ಮಿಕಾ ಅವರನ್ನು ಇಂವೈಟ್ ಮಾಡಿದ್ದರು.

ಇದನ್ನು ನೋಡಿ, ಕರಣ್ ಅವರೊಡನೆ ರಶ್ಮಿಕಾ ಸಿನಿಮಾ ಮಾಡುವುದು ಖಂಡಿತ ಎನ್ನುವ ಮಾತುಗಳು ಸಹ ಕೇಳಿಬರುತ್ತಲಿದ್ದವು. ಈಗೆಲ್ಲಾ ಬಾಲಿವುಡ್ ನಲ್ಲಿ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ, ಇತ್ತೀಚೆಗೆ ಒಂದು ಫ್ಯಾಶನ್ ಶೋನಲ್ಲಿ, ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಡಿಸೈನರ್ ಡ್ರೆಸ್ ಧರಿಸಿ ಕಾಣಿಸಿಕೊಂಡಿರುವ ರಶ್ಮಿಕಾ ಅವರು ಸ್ಟೇಜ್ ಮೇಲೆ ರಾಂಪ್ ವಾಕ್ ಮಾಡಿ, ನೋಡುಗರನ್ನು ಆಕರ್ಷಿಸಿದ್ದಾರೆ. ಈ ಶೋಗೆ ರಶ್ಮಿಕಾ ಧರಿಸಿ ಬಂದಿದ್ದ ಕಾಸ್ಟ್ಯೂಮ್ ಎಲ್ಲರ ಕಣ್ಣು ಕುಕ್ಕುವ ಹಾಗಿತ್ತು.

ಕೆಂಪು ಬಣ್ಣದ ಡಿಸೈನರ್ ಶಾರ್ಟ್ ಡ್ರೆಸ್ ನಲ್ಲಿ ಬಹಳ ಚೆನ್ನಾಗಿ ಕಾಣಿಸುತ್ತಿದ್ದರು ರಶ್ಮಿಕಾ ಮಂದಣ್ಣ. ರಶ್ಮಿಕಾ ಅವರನ್ನು ಈ ರೀತಿ ನೋಡಿ, ಬಾಲಿವುಡ್ ನ ಫೋಟೋಗ್ರಾಫರ್ ಗಳು, ಅವರೊಡನೆ ಫೋಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದರು. ಒಟ್ಟಿನಲ್ಲಿ ರಶ್ಮಿಕಾ ಅವರು ಇನ್ನುಮುಂದೆ ಬಾಲಿವುಡ್ ನಲ್ಲೇ ಬ್ಯುಸಿ ಆಗಿ, ಸೌತ್ ಕಡೆಗೆ ಬರುವುದು ಕಡಿಮೆ ಮಾಡಿದರೆ ಆಶ್ಚರ್ಯ ಪಡಬೇಕಾದ ಹಾಗಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.