ಆಗಾಗ ಬಟ್ಟೆ ಬದಲಿಸಬೇಕಲ್ಲಾ ಎನ್ನುವ ಕಾರಣಕ್ಕೆ ತನ್ನ ಮನಸ್ಸಿನ ವಿಚಿತ್ರ ಆಸೆಯನ್ನು ವ್ಯಕ್ತಪಡಿಸಿದ ರಶ್ಮಿಕಾ ಮಂದಣ್ಣ..

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಈಗ ಮೂರು ತಿಂಗಳ ಅಂತರದಲ್ಲಿ ರಶ್ಮಿಕಾ ಮಂದಣ್ಣ ರಶ್ಮಿಕಾ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಯಾಗಿ, ಒಂದು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ ಮತ್ತೊಂದು ಸಿನಿಮಾ ಕೂಡ ಹಿಟ್ ಲಿಸ್ಟ್ ಗೆ ಸೇರಿಕೊಂಡಿದೆ. ಪುಷ್ಪಾ ಸಿನಿಮಾದಲ್ಲಿ ಶ್ರೀವಲ್ಲಿಯಾಗಿ ಫೇಮಸ್ ಆಗಿದ್ದ ರಶ್ಮಿಕಾ ಮಂದಣ್ಣ ಈಗ ಆಡವಾಳ್ಳು ಮೀಕು ಜೊಹ್ರಲು ಸಿನಿಮಾ ಮೂಲಕ ಸುದ್ದಿಯಲ್ಲಿದ್ದಾರೆ. ಮಾರ್ಚ್ 4 ರಂದ್ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ತೊಡಗಿದ್ದ ರಶ್ಮಿಕಾ ಮಂದಣ್ಣ, ಸಂದರ್ಶನ ಒಂದರಲ್ಲಿ ನೀಡಿರುವ ಹೇಳಿಕೆ ಈಗ ಭಾರಿ ವೈರಲ್ ಆಗಿದೆ. ರಶ್ಮಿಕಾ ನೀಡಿದ ಅಂತಹ ಹೇಳಿಕೆ ಏನು ಗೊತ್ತಾ? ತಿಳಿಸುತ್ತೇವೆ ನೋಡಿ..

ನಟಿ ರಶ್ಮಿಕಾ ಮಂದಣ್ಣ ತಾವು ನಟಿಸುವ ಸಿನಿಮಾಗಳ ಪ್ರೊಮೋಷನ್ ನಲ್ಲಿ ಪಾಲ್ಗೊಳ್ಳುತ್ತಾರೆ, ಒಂದು ವಾರಗಳಿಂದ ನಟಿ ರಶ್ಮಿಕಾ ಮಂದಣ್ಣ ಅವರು ಆಡವಾಳ್ಳು ಮೀಕು ಜೊಹ್ರಲು ಸಿನಿಮಾ ಸಿನಿಮಾ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಸಮಯದಲ್ಲಿ ನೀಡಿರುವ ಒಂದು ಹೇಳಿಕೆ ಭಾರಿ ವೈರಲ್ ಆಗಿದೆ. “ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಲು ಬಯಸುತ್ತೇನೆ..” ಎಂದು ಹೇಳಿಕೆ ನೀಡಿದ್ದಾರೆ ರಶ್ಮಿಕಾ. ರಶ್ಮಿಕಾ ಅವರ ಈ ಆಸೆ ಕೇಳಿ ಅಲ್ಲಿದ್ದವರು ಸಹ ಶಾಕ್ ಆಗಿದ್ದರು. ಈ ರೀತಿ ಹೇಳಿದ್ದಕ್ಕೆ ಕಾರಣ ಏನು ಎಂದು ಸಹ ತಿಳಿಸಿದ್ದಾರೆ..

ರಶ್ಮಿಕಾ ಅವರಿಗೆ ಹೀರೋಯಿನ್ ಆಗಿ ಪುಷ್ಪ ಸಿನಿಮಾದಲ್ಲಿ ಮತ್ತು
ಆಡವಾಳ್ಳು ಮೀಕು ಜೊಹ್ರಲು ಸಿನಿಮಾದಲ್ಲಿ ಅಭಿನಯಿಸುವಾಗ ಕಾಸ್ಟ್ಯೂಮ್ ಬದಲಾಯಿಸಿ ಬದಲಾಯಿಸಿ ಸಾಕಾಗಿದೆಯಂತೆ. ಅರ್ಧ ಕಾಸ್ಟ್ಯೂಮ್ ಗಳ ವಿಚಾರದಿಂದ ಬೇಸರವಾಗಿ ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಬೇಕು ಎಂದು ಅನ್ನಿಸಿದೆಯಂತೆ. ಹೀರೋಗಳಿಗೆ ಕಾಸ್ಟ್ಯೂಮ್ ಚೇಂಜ್ ಮಾಡುವ ಕೆಲಸ ಜಾಸ್ತಿ ಇರುವುದಿಲ್ಲ, ಇದ್ದರೂ ಆರಾಮವಾಗಿ ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕೆ ತಾವು ಕೂಡ ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಬೇಕು ಎಂದಿದ್ದಾರೆ ರಶ್ಮಿಕಾ..

ಈ ರೀತಿ ಒಂದಲ್ಲಾ ಒಂದು ಹೇಳಿಕೆಯಿಂದ ಸದಾ ಸುದ್ದಿಯಲ್ಲಿರುತ್ತಾರೆ ರಶ್ಮಿಕಾ. ಕೆಲ ದಿನಗಳ ಹಿಂದೆ ಮದುವೆ ವಿಚಾರದಿಂದ ಸುದ್ದಿಯಲ್ಲಿದ್ದರು, ನಾನು ಇಷ್ಟು ಬೇಗ ಮದುವೆ ಆಗುವುದಿಲ್ಲ, ಅದಕ್ಕೆ ಇನ್ನು ತುಂಬಾ ಟೈಮ್ ಇದೆ ಎಂದಿದ್ದರು ರಶ್ಮಿಕಾ. ಹಾಗೆಯೇ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಈ ವರ್ಷಾಂತ್ಯದಲ್ಲಿ ನಡೆಯಲಿದೆ ಎನ್ನುವ ಸುದ್ಧಿಯೊಂದು ತೆಲುಗು ವಾಹಿನಿಯಲ್ಲಿ ಕೇಳಿ ಬಂದಿತ್ತು, ಅದಕ್ಕೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಇಬ್ಬರು ಪ್ರತಿಕ್ರಿಯೆ ನೀಡಿ ಇದೆಲ್ಲವು ಸುಳ್ಳು ಸುದ್ದಿ ಎಂದು ಹೇಳಿದ್ದರು.

ಇದೀಗ ಮುಂದಿನ ಜನ್ಮದ ಬಗ್ಗೆ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ರಶ್ಮಿಕಾ. ಇನ್ನಿ ರಶ್ಮಿಕಾ ಅವರ ಕೆರಿಯರ್ ವಿಚಾರಕ್ಕೆ ಬರುವುದಾದರೆ, ಎಂದಿನಂತೆ ರಶ್ಮಿಕಾ ಅಭಿನಯದ ಎಲ್ಲಾ ಸಿನಿಮಾಗಳು ಗೆಲ್ಲುತ್ತಿವೆ, ಲಕ್ಕಿ ಹೀರೋಯಿನ್ ಎನ್ನಿಸಿಕೊಂಡಿದ್ದಾರೆ ರಶ್ಮಿಕಾ. ತೆಲುಗಿನಲ್ಲಿ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿ, ಪುಷ್ಪ 2 ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಮಾರ್ಚ್ 4ರಂದು ಆಡವಾಳ್ಳು ಮೀಕು ಜೊಹ್ರಲು ಸಿನಿಮಾ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇನ್ನುಳಿದ ಹಾಗೆ ರಶ್ಮಿಕಾ ಅಭಿನಯದ ಹಿಂದಿ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಹಿಂದಿ ಸಿನಿಮಾ ಕೆಲಸಗಳಿಂದ ಆಗಾಗ ಮುಂಬೈನಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ ರಶ್ಮಿಕಾ. ತೆಲುಗಿನಲ್ಲಿ ಸಾಲು ಸಾಲು ಸಿನಿಮಾ ಆಫರ್ ಗಳು ರಶ್ಮಿಕಾ ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಪೊಗರು ನಂತರ ಕನ್ನಡದಲ್ಲಿ ಇನ್ಯಾವುದೇ ಸಿನಿಮಾವನ್ನು ರಶ್ಮಿಕಾ ಅವರು ಒಪ್ಪಿಕೊಂಡಿಲ್ಲ. ಈಗ ಸಂಭಾವನೆಯನ್ನು ಕೂಡ ಜಾಸ್ತಿ ಮಾಡಿಕೊಂಡಿರುವ ರಶ್ಮಿಕಾ ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾರಾ ಎಂದು ಕಾದು ನೋಡಬೇಕಿದೆ.