ಇಂತಹ ಬಟ್ಟೆ ಹಾಕಿಕೊಂಡು ಗಣೇಶನನ್ನು ನೋಡಲು ಬಂದ ರಶ್ಮಿಕಾಗೆ ಏನಾಯ್ತು ನೋಡಿ..

ರಶ್ಮಿಕಾ ಮಂದಣ್ಣ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ.. ಅದರಲ್ಲೂ ಕಿರಿಕ್ ಪಾರ್ಟಿ ಚೆಲುವೆ ಸದಾ ಕಿರಿಕ್ ಗಳಿಂದಲೇ ಸದ್ದು ಮಾಡೋದು ಸಾಮಾನ್ಯವಾಗಿದೆ.. ಆದರೆ ಈಗ ರಶ್ಮಿಕಾ ಹಾಕಿದ ಬಟ್ಟೆ ಇಂದಾಗಿ ದೊಡ್ಡ ಯಡವಟ್ಟು ಆಗಿ ಹೋಗಿದೆ.. ಹೌದು ಮಹಿಳಾ ಸೆಲೆಬ್ರಿಟಿಗಳು ಮನೆಯಿಂದ ಹೊರ ಬಿದ್ದರೆ ಸಾಕು, ಗ್ಲಾಮರ್ ಅವತಾರ ತಾಳಲು ಇಷ್ಟಪಡುತ್ತಾರೆ. ಸಿನಿಮಾ ಸೆಲೆಬ್ರಿಟಿ ಶೋ, ಟ್ರೇಲರ್ ಲಾಂಚ್, ಟೀಸರ್ ರಿಲೀಸ್ ಕಾರ್ಯಕ್ರಮಗಳಿಗೆ ಸಖತ್ ಬೋಲ್ಡ್ ಆಗಿ ಬರುವ ಅನೇಕ ನಟಿಯರು ಇದ್ದಾರೆ. ಆದರೆ, ಇದು ಎಲ್ಲ ಸಂದರ್ಭದಲ್ಲಿಯೂ ಜನರಿ​ಗೆ ಇಷ್ಟ ಆಗುವುದಿಲ್ಲ. ದೇವರ ಸನ್ನಿಧಾನಕ್ಕೆ ಹೋಗುವಾಗ ಟ್ರೆಡಿಷನಲ್ ಡ್ರೆಸ್ ಹಾಕಿ ಬಂದರೆ ಉತ್ತಮ. ಅಲ್ಲಿಯೂ ದೇಹ ಕಾಣಿಸುವ ಬಟ್ಟೆ ಧರಿಸಿದರೆ ಜನರು ಆಕ್ರೋಶಗೊಳ್ಳೋದು ಪಕ್ಕಾ. ಈಗ ರಶ್ಮಿಕಾ ಮಂದಣ್ಣ ಕೂಡ ಇದೇ ತಪ್ಪನ್ನು ಮಾಡಿದ್ದಾರೆ. ಇದರಿಂದ ಅವರು ಟೀಕೆ ಅನುಭವಿಸುತ್ತಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ನಟನೆಯ ಗುಡ್​ಬೈ’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಇದರಲ್ಲಿ ರಶ್ಮಿಕಾ ಮಂದಣ್ಣ ಕೂಡ ಭಾಗಿಯಾಗಿದ್ದರು. ಈ ಚಿತ್ರದ ಟ್ರೇಲರ್ ಲಾಂಚ್ ವೇಳೆ ರಶ್ಮಿಕಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಟ್ರೇಲರ್ ಲಾಂಚ್ ಕಾರ್ಯಕ್ರಮದ ಬಳಿಕ ರಶ್ಮಿಕಾ ಮಂದಣ್ಣ ಅವರು ಅಲ್ಲಿಯೇ ಸಮೀಪದಲ್ಲಿ ಇರುವ ಗಣಪತಿ ದರ್ಶನಕ್ಕೆ ತೆರಳಿದ್ದಾರೆ.

ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಶ್ಮಿಕಾ ಅವರ ಉಡುಗೆ ನೋಡಿ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ. ದೇವರನ್ನು ನೋಡಲು ಈ ರೀತಿಯ ಬಟ್ಟೆ ಧರಿಸಿ ಬರುವುದು ಬೇಕಿತ್ತೇ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ.

ಅಮಿತಾಭ್ ಬಚ್ಚನ್ ಹಾಗೂ ರಶ್ಮಿಕಾ ಮಂದಣ್ಣ ಅವರು ಗುಡ್​ಬೈ’ ಚಿತ್ರದಲ್ಲಿ ತಂದೆ ಮಗಳ ಪಾತ್ರ ಮಾಡಿದ್ದಾರೆ. ಕಥಾನಾಯಕಿ ರಶ್ಮಿಕಾ ತಾಯಿ ಏಕಾಏಕಿ ನಿಧನ ಹೊಂದುತ್ತಾಳೆ. ಆ ಬಳಿಕ ಆಗುವ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಈ ಟ್ರೇಲರ್ ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಅಕ್ಟೋಬರ್​ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದ ಬಗ್ಗೆ ರಶ್ಮಿಕಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ಅವರು ಈ ರೀತಿಯ ವಿವಾದಕ್ಕೆ ಗುರಿಯಾಗಿರುವುದು ಫ್ಯಾನ್ಸ್​ಗೆ ಬೇಸರ ತರಿಸಿದೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622