ಇನ್ನು ಮೂರು ದಿನದಲ್ಲಿ ದಾಂಪತ್ಯ ಜೀವನಕ್ಕೆ ಕಲಿಡುತ್ತಿರುವ ಲಕ್ಷ್ಮೀ ಬಾರಮ್ಮ ನಟಿ ರಶ್ಮಿ ಪ್ರಭಾಕರ್.. ಈ ಹುಡುಗ ನಿಜಕ್ಕೂ ಯಾರು ಗೊತ್ತಾ..

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಟಿ ಲಚ್ಚಿ ಪಾತ್ರಧಾರಿ ರಶ್ಮೀ ಪ್ರಭಾಕರ್ ಅವರು ಸಧ್ಯ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ.. ಅದರಲ್ಲೂ ಇನ್ನು ಮೂರೇ ದಿನದಲ್ಲಿ ಮದುವೆ ಸಮಾರಂಭ ನೆರವೇರುತ್ತಿದ್ದು ಎರಡೂ ಕುಟುಂಬದಲ್ಲಿ‌ ಮದುವೆ ತಯಾರಿ ಬರದಿಂದ ಸಾಗಿದೆ.. ಅಷ್ಟಕ್ಕೂ ರಶ್ಮಿ ಮದುವೆಯಾಗುತ್ತಿರುವ ಹುಡುಗ ಯಾರು ಇದೀಗ ರಶ್ಮಿ ಎಲ್ಲಿದ್ದಾರೆ ಗೊತ್ತಾ..

ಹೌದು ಕಳೆದ ಎಂಟತ್ತು ವರ್ಷಗಳ ಹಿಂದೆಯೇ ಶುರುವಾದ ಧಾರಾವಾಹಿ ಲಕ್ಷ್ಮೀ ಬಾರಮ್ಮ.. ಆದರೆ ಈಗಲೂ ಸಹ ಆ ಧಾರಾವಾಹಿಯನ್ನಾಗಲಿ ಆ ಧಾರಾವಾಹಿಯ ಕಲಾವಿದರುಗಳನ್ನಾಗಲಿ ಪ್ರೇಕ್ಷಕರು ಮರೆತಿಲ್ಲ.. ಆ ಧಾರಾವಾಹಿಯ ನಟ ನಟಿಯರನ್ನು ಈಗಲೂ ಧಾರಾವಾಹಿಯ ಹೆಸರಿನಿಂದಲೇ ಗುರುತಿಸೋದುಂಟು..

ಇನ್ನು ಆ ಧಾರಾವಾಹಿಯಲ್ಲಿ ಎಷ್ಟೋಂದು ಪಾತ್ರದ ಪಾತ್ರಧಾರಿಗಳು ಬದಲಾದರೂ ಸಹ ಎಲ್ಲಾ ಕಲಾವಿದರುಗಳಿಗೂ ಖ್ಯಾತಿಯನ್ನು ತಂದುಕೊಟ್ಟಿತ್ತು.. ಚಂದು ಪಾತ್ರಕ್ಕೆ ಮೊದಲಿಗೆ ಚಂದನ್ ಕುಮಾರ್.. ನಂತರ ಶೈನ್ ಶೆಟ್ಟಿ ಆ ಬಳಿಕ ಚಂದು ಗೌಡ ಹೀಗೆ ಮೂವರು ಕಲಾವಿದರು ಬದಲಾದರೂ ಸಹ ಮೂವರಿಗೂ ದೊಡ್ಡ ಮಟ್ಟದ ಯಶಸ್ಸನ್ನು ನೀಡಿತು.. ಇನ್ನು ಇತ್ತ ಲಕ್ಷ್ಮೀ ಪಾತ್ರಕ್ಕೆ ಮೊದಲು ಕವಿತಾ ಗೌಡ ಇದ್ದರೆ ನಂತರ ರಶ್ಮೀ ಪ್ರಭಾಕರ್ ಆಗಮಿಸಿದರು.. ಈ ಇಬ್ಬರೂ ಸಹ ಲಚ್ವಿ ಎಂದೇ ಖ್ಯಾತಿ ಪಡೆದು ಕಿರುತೆರೆಯಲ್ಲಿ ಮುಂದಿನ ಜೀವನ ಕಟ್ಟಿಕೊಂಡರು..

ಇನ್ನು ಕೆಲ ವರ್ಷದ ಹಿಂದೆ ಅದೇ ಧಾರಾವಾಹಿಯ ಬೊಂಬೆ ಪತರಧಾರಿ ನೇಹಾ ಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಜೊತೆ ಮದುವೆಯಾಗಿ ರಾಜಾರಾಣಿ ಶೋನಲ್ಲಿಯೂ ಭಾಗವಹಿಸಿ ವಿಜೇತರಾದರು.. ಇನ್ನು ಕಳೆದ ಮ್ವರ್ಷವಷ್ಟೇ ಅದೇ ಧಾರಾವಾಹಿಯ ಕವಿತಾ ಗೌಡ ಹಾಗೂ ಚಂದನ್ ಇಬ್ಬರೂ ಸಹ ಪ್ರೀತಿಸಿ ನಿಜ ಜೀವನದಲ್ಲಿಯೂ ಒಂದಾದರು..

ಇದೀಗ ಎರಡನೇ ಲಚ್ಚಿ ರಶ್ಮೀ ಪ್ರಭಾಕರ್ ಅವರ ಸರದಿ… ಹೌದು ರಶ್ಮಿ ಪ್ರಭಾಕರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಏಪ್ರಿಲ್ 25 ರಂದು ಮದುವೆ ಸಮಾರಂಭ ನೆರವೇರುತ್ತುದೆ.. ಹೌದು ಬೆಂಗಳೂರಿನ ಬಸವನ ಗುಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ರಶ್ಮಿ ಅವರ ಮದುವೆ ನಡೆಯಲಿದೆ.. ಅಷ್ಟಕ್ಕೂ ರಶ್ಮಿ‌ ಮದುವೆಯಾಗುತ್ತಿರುವ ಹುಡುಗ ಯಾರು..

ರಶ್ಮಿ ಪ್ರಭಾಕರ್ ಮದುವೆಯಾಗುತ್ತಿರುವ ಹುಡುಗನ ಹೆಸರು ನಿಖಿಲ್ ಭಾರ್ಗವ್.. ಮೂಲತಃ ಬೆಂಗಳೂರಿನವರೇ ಆಗಿರುವ ನಿಖಿಲ್ ತಮ್ಮದೇ ಆದ ಉದ್ಯಮವನ್ನು ಹೊಂದಿದ್ದಾರೆ ಎನ್ನಲಾಗಿದೆ.. ಇನ್ನು ರಶ್ಮಿ ಹಾಗೂ ನಿಖಿಲ್ ಭಾರ್ಗವ್ ಕಳೆದ ಹತ್ತು ವರ್ಷದಿಂದಲೂ ಸ್ನೇಹಿತರಾಗಿದ್ದು ನಂತರ ಇಬ್ಬರ ನಡುವೆ ಪ್ರೀತಿ ಮೂಡಿ ಮನೆಯವರಿಗೆ ವಿಚಾರ ತಿಳಿಸಿದ್ದಾರೆ.. ಮನೆಯವರೆಲ್ಲಾ ಒಪ್ಪಿ ಇದೀಗ ಲವ್ ಕಮ್ ಅವೇಂಜ್ಡ್‌ ಮದುವೆ ಎನ್ನುವಂತಾಗಿದ್ದು ರಶ್ಮಿ ಮದುವೆ ಬಗ್ಗೆ ಬಹಳ ಉತ್ಸುಕರಾಗಿದ್ದು ಮದುವೆಯ ಸಕಲ ತಯಾರಿಯ ಸಂಪೂರ್ಣ ಫೋಟೋ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ..

ಇನ್ನು ಬೆಸ್ಟ್ ಫ್ರೆಂಡ್ ನ ಮದುವೆಯಾಗುವುದರಲ್ಲಿ ರುವ ಸಂತೋಷವೇ ಬೇರೆ ಎಂದಿರುವ ರಶ್ಮಿ ಪ್ರಭಾಕರ್ ಸಧ್ಯ ಮದುವೆಗೂ ಮುನ್ನ ನಡೆಯುವ ಶಾಸ್ತ್ರಗಳಲ್ಲಿ ತೊಡಗಿದ್ದಾರೆ.. ಹರಿಷಿಣ ಶಾಸ್ತ್ರ ಮೆಹಂದಿ ಶಾಸ್ತ್ರ ಹೀಗೆ ಸಾಕಷ್ಟು ಶಾಸ್ತ್ರಗಳು ನಡೆಯುತ್ತಿದೆ.. ಆದರೆ ಮದುವೆಯಲ್ಲಿ ಮದುವೆಯ ಶಾಸ್ತ್ರಗಳು ಮಾತ್ರ ನೆರವೇರಲಿದ್ದು ಅರತಕ್ಷತೆ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಕನ್ನಡ ಮಾತ್ರವಲ್ಲ ಇತರ ಭಾಷೆಯ ಕಿರುತೆರೆಯಲ್ಲಿಯೂ ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ರಶ್ಮೀ ಪ್ರಭಾಕರ್ ಸಧ್ಯ ತಮ್ಮ ಬಾಲ್ಯದ ಗೆಳೆಯ ನಿಖಿಲ್ ಭಾರ್ಹವ್ ಜೊತೆಗೆ ನೂತನ ಜೀವನ ಆರಂಭಿಸುತ್ತಿದ್ದು ಅಭಿಮಾನಿಗಳು ಶುಭ ಕೋರಿದ್ದಾರೆ..