ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ಮತ್ತೊಂದು ಖ್ಯಾತ ಜೋಡಿ..

ಕನ್ನಡ ಕಿರುತೆರೆಯಲ್ಲಿ‌ ಸಧ್ಯ ಕಳೆದ ಎರಡು ವರ್ಷದಿಂದ ಸಾಲು ಸಾಲು ಕಲಾವಿದರುಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು‌ ಇದೀಗ ಆ ಪಟ್ಟಿಗೆ ಮತ್ತೊಂದು ಜೋಡಿ ಸೇರಿಕೊಂಡಿದೆ.. ಹೌದು ಕನ್ನಡ ಕಿರುತೆರೆಯ‌ ಖ್ಯಾತ ನಟಿ ಇದೀಹ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅದ್ಧೂರಿಯಾಗಿ‌ ಮದುವೆ ಸಮಾರಂಭ‌ ನೆರವೇರಿದ್ದು ಕಿರುತೆರೆಯ ಸಾಕಷ್ಟು ಕಲಾವಿದರುಗಳು ಮದುವೆಗೆ ಅಗಾಮಿಸಿ ಶುಭ ಹಾರೈಸಿದ್ದಾರೆ..

ಹೌದು ಕನ್ನಡದ ಖ್ಯಾತ ಧಾರಾವಾಹಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟು ದೊಡ್ಡ ಮಟ್ಟದ ಹೆಸರು ಮಾಡಿ ನಂತರ ಸಾಲು ಸಾಲು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ರಶ್ಮೀ ಪ್ರಭಾಕರ್ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.. ಹೌದು ಬೆಂಗಳೂರಿನ ನಿಖಿಲ್ ಎಂಬುವವರ ಜೊತೆ ಸಪ್ತಪದಿ ತುಳಿದಿರುವ ರಶ್ಮೀ ಪ್ರಭಾಕರ್ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಜೀವನ ಚೈತ್ರ, ಲಕ್ಷ್ಮೀ ಬಾರಮ್ಮ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿರುವ ರಶ್ಮಿ ಪ್ರಭಾಕರ್ ಇಂದು ಬೆಂಗಳೂರಿನಲ್ಲಿ ನಿಖಿಲ್ ಅವರ ಜತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ವಿವಾಹ ಮಹೋತ್ಸವ ಬೆಂಗಳೂರಿನ ಬಸವನಗುಡಿಯಲ್ಲಿ ನೆರವೇರಿತು. ಹೊಸ ಜೋಡಿಗೆ ಶುಭ ಹಾರೈಸಲು ಕಿರುತೆರೆಯ ಅನೇಕ ಕಲಾವಿದರು ಆಗಮಿಸಿದ್ದು ಹೊಸ ದಂಪತಿಗಳಿಗೆ ಶುಭಾಶಯ ತಿಳಿಸಿ ಹಾರೈಸಿದ್ದಾರೆ..

ಮಹಾಭಾರತ, ದರ್ಪಣ, ಮನಸೆಲ್ಲ ನೀನೇ ಶುಭಾ ವಿವಾಹ ಹಾಗೂ ತೆಲುಗಿನಲ್ಲಿ ಪೌರ್ಣಿಮಿ, ಕಾವ್ಯಾಂಜಲಿ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದರೆ ನಿಖಿಲ್ ಕೂಡ ಈ ಹಿಂದೆ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದದ್ರು. ಇದೀಗ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ ಆಗಿದ್ದಾರೆ. ಮೂರು ವರ್ಷಗಳಿಂದ ಸ್ನೇಹಿತರಾಗಿದ್ದವರು ಮೊನ್ನೆ ಗಂಡ ಹೆಂಡತಿಯಾಗಿ ನೂತನ ಜೀವನ ಆರಂಭಿಸಿದ್ದಾರೆ ನಿಖಿಲ್ ಮತ್ತು ರಶ್ಮಿ..

ನವೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ವಿವಾಹ ಅಂದುಕೊಂಡಂತೆ ಆಗಿದ್ದರೆ ಈ ಹಿಂದೆಯೇ ನಡೆಯಬೇಕಿತ್ತು. ಕೊರೊನಾ ಹಾವಳಿ ಕಾರಣದಿಂದಾಗಿ ಮುಂದೂಡಲಾಗಿತ್ತು. ಈಗ ಎರಡೂ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದ್ದಾರೆ..‌ ಇನ್ನು ಮದುವೆ ಸಮಾರಂಭಕ್ಕೆ ಸಾಕಷ್ಟು ಕಿರುತೆರೆ ಕಲಾವಿದರುಗಳು ಆಗಮಿಸಿದ್ದು ಅದೇ ಧಾರಾವಾಹಿಯ‌ ಮತ್ತೊಂದು ಜೋಡಿ ಚಂದನ್ ಹಾಗೂ ಕವಿತಾ ಗೌಡ ಸಹ ಮದುವೆಗೆ ಆಗಮಿಸಿ ಶುಭ ಕೋರಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ..

ಇನ್ನು ಸಧ್ಯ ಕಳೆದ ವರ್ಷವಷ್ಟೇ ಅದೇ ಧಾರಾವಾಹಿಯ ಖ್ಯಾತ ಜೋಡಿ ಚಂದನ್ ಹಾಗೂ ಕವಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನೂತನ ಜೀವನ ಆರಂಭಿಸಿದ್ದರು.. ಮದುವೆಯ ನಂತರವೂ ಚಂದನ್ ತಮ್ಮ ಧಾರಾವಾಹಿಗಳಲ್ಲಿ ಬ್ಯುಸಿ ಆದರೆ ಇತ್ತ ಕವಿತಾ ಗೌಡ ಕೂಡ ಡ್ಯಾಂಸ್ ಶೋ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.. ಸಧ್ಯ ತಮಿಳಿನ ಧಾರಾವಾಹಿಗಳಲ್ಲಿ ಕವಿತಾ ಬ್ಯುಸಿ ಆದರೆ ಇತ್ತ ಚಂದನ್ ತೆಲುಗು ಹಾಗೂ ಕನ್ನಡದ ಧಾರಾವಾಹಿಗಳಲ್ಲಿ ಬ್ಯುಸಿ ಆದರು.. ಇನ್ನು ಇದೀಗ ಇದೇ ಸಾಲಿಗೆ ರಶ್ಮಿ ಪ್ರಭಾಕರ್ ಸಹ ಸೇರಿದ್ದು ಮದುವೆಯ ನಂತರವೂ ತಮ್ಮ ಕಲಾ ಜೀವನವನ್ನು ಮುಂದುವರೆಸಲಿದ್ದಾರೆ ಎಂದು ತಿಳಿದು ಬಂದಿದೆ..