ಮತ್ತೊಂದು ಮನೆ ಖರೀದಿ ಮಾಡಿದ ರಶ್ಮಿಕಾ ಮಂದಣ್ಣ.. ಎಷ್ಟು ಕೋಟಿ ಗೊತ್ತಾ? ಶಾಕ್ ಆಗ್ತೀರಾ

ರಶ್ಮಿಕಾ ಮಂದಣ್ಣ, ನ್ಯಾಷನಲ್ ಕ್ರಶ್ ಎಂದೇ ಹೆಸರು ಪಡೆದುಕೊಂಡಿರುವ ರಶ್ಮಿಕಾ ಮಂದಣ್ಣ, ಕೊಡಗಿನ ಬೆಡಗಿಯಾದರು ಈ ನಟಿ ಕನ್ನಡದಲ್ಲಿ ಮತ್ತೆ ನಟಿಸುವ ಯಾವುದೇ ಸೂಚನೆ ಇಲ್ಲ. ಕನ್ನಡದ ವಿಷಯಕ್ಕೆ ನಟಿ ರಶ್ಮಿಕಾ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಸಧ್ಯಕ್ಕೆ ನಟಿ ರಶ್ಮಿಕಾ ಬಾಲಿವುಡ್ ಟಾಲಿವುಡ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಪುಷ್ಪ ಸಿನಿಮಾ ಸಕ್ಸಸ್ ನಂತರ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಇವರಿಗೆ ಇನ್ನು ಬೇಡಿಕೆ ಹೆಚ್ಚಾಗಿದೆ. ಸಿನಿ ಜರ್ನಿ ಶುರು ಮಾಡಿದ್ದು ಕನ್ನಡದಿಂದಲೇ ಆದರೂ ನಟಿ ರಶ್ಮಿಕಾ ಈಗ ಬೇಡಿಕೆಯಲ್ಲಿರುವುದು ಟಾಲಿವುಡ್ ನಲ್ಲಿ. ತೆಲುಗು ಸಿನಿಮಾಗಳ ಸಾಕಷ್ಟು ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ. ಬಾಲಿವುಡ್ ನಲ್ಲೂ ಬೇಡಿಕೆ ಹೆಚ್ಚಾಗಿದೆ. ಈ ಸಮಯದಲ್ಲಿ ರಶ್ಮಿಕಾ ಮತ್ತೊಂದು ವಿಚಾರದಿಂದ ಸುದ್ದಿಯಾಗಿದ್ದಾರೆ. ಅದೇನೆಂದರೆ ನಟಿ ರಶ್ಮಿಕಾ ಈಗ ಹೈದರಾಬಾದ್ ನಲ್ಲಿ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟಿಯಾಗಿ ಬಣ್ಣದ ಬದುಕು ಶುರು ಮಾಡಿದರು ರಶ್ಮಿಕಾ, ನಂತರ ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿ, ತೆಲುಗು ಚಿತ್ರರಂಗಕ್ಕೆ ಹಾರಿದರು. ಮೊದಲ ತೆಲುಗು ಸಿನಿಮಾದಲ್ಲಿ ಯಶಸ್ಸು ಕಂಡ ಕಾರಣ ತೆಲುಗಿನಲ್ಲಿ ಇವರಿಗೆ ಸಾಲು ಸಾಲು ಆಫರ್ ಗಳು ಬರಲು ಶುರುವಾದವು. ಒಂದಾದಮೇಲೆ ತೆಲುಗಿನಲ್ಲಿ ರಶ್ಮಿಕಾ ಅಭಿನಯಿಸಿದ ಎಲ್ಲಾ ಸಿನಿಮಾಗಳು ಹಿಟ್ ಆಗಿ, ಲಕ್ಕಿ ಹೀರೋಯಿನ್ ಎಂದೇ ಖ್ಯಾತಿಯಾದ ರಶ್ಮಿಕಾ, ಸ್ಟಾರ್ ನಟರ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು. ರಶ್ಮಿಕಾ ನಟಿಸಿದ ಸಿನಿಮಾಗಳೆಲ್ಲವು ಸೂಪರ್ ಹಿಟ್ ಎನ್ನುವ ಹಂತಕ್ಕೆ ತಲುಪಿದರು. ನಂತರ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು.

ಪ್ರಸ್ತುತ ರಶ್ಮಿಕಾ ಬಾಲಿವುಡ್ ನಲ್ಲೂ ಬ್ಯುಸಿ ಆಗಿದ್ದಾರೆ. ಹಿಂದಿಯಲ್ಲಿ ಈಗಾಗಲೇ ಒಂದು ಆಲ್ಬಮ್ ಸಾಂಗ್ ಮತ್ತು ಎರಡು ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆ ಮಿಷನ್ ಮಜ್ನು ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಕೂಡ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಪ್ರಸ್ತುತ ರಶ್ಮಿಕಾ ಅವರು ಹೈದರಾಬಾದ್ ಮತ್ತು ಮುಂಬೈ ನಗರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಈಗ ಪುಷ್ಪ2 ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ಹೈದರಾಬಾದ್ ನಲ್ಲಿ ಹೆಚ್ಚಿನ ಸಮಯ ಇರಬೇಕಾದ ಕಾರಣ ಹೋಟೆಲ್ ನಲ್ಲಿ ಉಳಿದುಕೊಲ್ಲುವುದು ಸೂಕ್ತವಲ್ಲ ಎಂದು ನಟಿ ರಶ್ಮಿಕಾ ಹೈದರಾಬಾದ್ ನಲ್ಲಿ ಹೊಸ ಮನೆಯೊಂದನ್ನು ಖರೀದಿ ಮಾಡಿರುವ ಹಾಗೆ ಸುದ್ದಿ ಸಿಕ್ಕಿದೆ..

ಈ ವಿಚಾರವನ್ನು ಖುದ್ದು ರಶ್ಮಿಕಾ ಅವರೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಮನೆಯ ವಸ್ತುಗಳನ್ನು ರಟ್ಟಿನ ಡಬ್ಬಗಳ ಒಳಗೆ ಪ್ಯಾಕ್ ಮಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿ, “ಮನೆಯ ವಸ್ತುಗಳನ್ನು ಶಿಫ್ಟ್ ಮಾಡುವುದು ಸುಲಭದ ಕೆಲಸವಲ್ಲ..ಆದರೆ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತೇನೆ..”ಎಂದು ಬರೆದುಕೊಂಡಿದ್ದರು ರಶ್ಮಿಕಾ. ಇದನ್ನು ನೋಡಿ ಎಲ್ಲರಿಗೂ ರಶ್ಮಿಕಾ ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ. ಪುಷ್ಪ ಸಿನಿಮಾ ನಂತರ ತಮ್ಮ ಬೇಡಿಕೆ ಹೆಚ್ಚಾಗಿರುವ ಕಾರಣ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ ರಶ್ಮಿಕಾ.

ಈಗ ರಶ್ಮಿಕಾ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಬರೋಬ್ಬರಿ 3 ಕೋಟಿ. ಇತ್ತೀಚೆಗೆ ಗೋವಾದಲ್ಲಿ ಕೂಡ ಒಂದು ಮನೆ ಖರೀದಿ ಮಾಡಿದ್ದರು ರಶ್ಮಿಕಾ, ಹೊಸ ಮನೆಯ ಹೊರಾಂಗಣದ ಫೋಟೋ ಶೇರ್, ಗೋವಾದಲ್ಲಿ ಹೊಸ ಮನೆ ಕೊಂಡುಕೊಂಡಿರುವ ವಿಚಾರ ತಿಳಿಸಿದ್ದರು. ಗೋವಾ ಮಾತ್ರವಲ್ಲದೆ, ಮುಂಬೈನಲ್ಲಿ ಕೂಡ ರಶ್ಮಿಕಾ ಒಂದು ಮನೆ ಖರೀದಿ ಮಾಡಿದ್ದಾರೆ. ಹಿಂದಿ ಸಿನಿಮಾ ಚಿತ್ರೀಕರಣಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದ ಕಾರಣ ಮುಂಬೈನಲ್ಲಿ ಇರಲು ಮನೆಯ ಅವಶ್ಯಕತೆ ಇದ್ದ ಕಾರಣ ಮುಂಬೈನಲ್ಲೂ ಹೊಸ ಮನೆ ಖರೀದಿ ಮಾಡಿದರು. ಇದೀಗ ಹೈದರಾಬಾದ್ ನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮತ್ತೊಂದು ಹೊಸ ಮನೆ ಖರೀದಿ ಮಾಡಿದ್ದಾರೆ. ಈ ವಿಚಾರ ತಿಳಿದು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಪ್ರಸ್ತುತ ತೆಲುಗು ಚಿತ್ರರಂಗದಲ್ಲೇ ಬ್ಯುಸಿ ಆಗಿದ್ದಾರೆ. ಪುಷ್ಪ2 ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ, ಕನ್ನಡ ಸಿನಿಮಾಗಳನ್ನಂತೂ ಒಪ್ಪಿಕೊಂಡಿಲ್ಲ. ಮುಂದೆ ಕನ್ನಡದಲ್ಲಿ ನಟಿಸುತ್ತಾರೋ ಇಲ್ಲವೋ ಎನ್ನುವುದು ಕೂಡ ಸಂಶಯವೇ ಆಗಿದೆ. ಪುಷ್ಪ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಶ್ಮಿಕಾ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ. ಇವರಿಗಿರುವ ಅಭಿಮಾನಿ ಬಳಗ ಕೂಡ ದೊಡ್ಡದಾಗಿದೆ, ಕನ್ನಡ ನಾಡಿನ ಹುಡುಗಿ ಬೇರೆ ರಾಜ್ಯದಲ್ಲಿ ಯಶಸ್ವಿಯಾಗಿರುವುದು ಒಳ್ಳೆಯ ವಿಚಾರವೇ ಆದರೂ, ಕನ್ನಡವನ್ನು ಮರೆತಿರುವುದು ಎಲ್ಲಾ ಕನ್ನಡಿಗರಿಗೂ ಬೇಸರ ತರುವ ವಿಚಾರ.