ಮನೆಯಲ್ಲೇ ವಿಶೇಷವಾಗಿ ಮಗನ ಹುಟ್ಟುಹಬ್ಬ ಆಚರಿಸಿದ ರಿಷಭ್ ಶೆಟ್ಟಿ.. ಫೋಟೋ ಗ್ಯಾಲರಿ ನೋಡಿ

ಚಂದನವನದ ಕಿಲಾಡಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಪುತ್ರ ರಣ್ವಿತ್ ಶೆಟ್ಟಿ ಹುಟ್ಚು ಹಬ್ಬವನ್ನು ಸಿಂಪಲ್ ಆಗಿ ಮನೆಯಲ್ಲೇ ಆಚರಿಸಲಾಗಿದೆ. ಲಾಕ್‍’ಡೌನ್ ಮಧ್ಯೆಯೂ ಮಗನ ಹುಟ್ಟುಹಬ್ಬಕ್ಕಾಗಿ ವಿಶೇಷವಾಗಿ ವಿಡಿಯೋ ಸಾಂಗ್‍ವೊಂದನ್ನು ತಯಾರಿ ಮಾಡಿರುವ ರಿಷಬ್, ಅದನ್ನು ತಮ್ಮ ಟ್ವಿಟ್ಟರ್’ನಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ.

‘ವರುಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ. ಅಂದಿನಿಂದ ಇಂದಿನವರೆಗೆ ನಿತ್ಯ ಹಬ್ಬದಂತಿರುವ ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶಿರ್ವಾದ ಇವನಿಗಿರಲಿ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಮಗನಿ ಶುಭಕೋರಿದ್ದಾರೆ..

ಗಿಫ್ಟ್ ಕೊಟ್ಚ ವೀಡಿಯೋದಲ್ಲಿ ಒಂದು ವರ್ಷದಲ್ಲಿ ರಿಷಬ್‌ ಅವರೇ ಕ್ಲಿಕ್ಕಿಸಿದ ರಣ್ವಿತ್‌ನ ವಿವಿಧ ಭಂಗಿಗಳ ಚಿತ್ರಗಳು. ಜೊತೆಗೆ ಇದಕ್ಕೆ ಹಿನ್ನೆಲೆಯಾಗಿ ‘ಕಥಾ ಸಂಗಮ’ ಚಿತ್ರದ ‘ಇರುಳ ಚಂದಿರನು …’ ಹಾಡನ್ನು ಬಳಸಿಕೊಂಡಿದ್ದಾರೆ. ಸಿನಿಮಾ ಸಂಕಲನಕಾರ ಪ್ರತೀಕ್‌ ಶೆಟ್ಟಿ ಎಡಿಟ್‌ ಮಾಡಿದ್ದಾರೆ.

ಸದ್ಯ ಕೊರೋನಾದಿಂದಾಗಿ ರಿಷಬ್‌ ಫ್ಯಾಮಿಲಿ ಕುಂದಾಪುರ ಸಮೀಪದ ಕೆರಾಡಿಯಲ್ಲಿದ್ದಾರೆ. ‘ರಣ್ವಿತ್‌ ಮೊದಲ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದುಕೊಂಡಿದ್ದೆ. ಆದರೆ ಕೊರೋನಾದಿಂದಾಗಿ ಯಾರೂ ಹೊರಗೆ ಬರುವಂತಿಲ್ಲ. ನಾವೂ ಈಗ ನಮ್ಮೂರಿನಲ್ಲಿದ್ದೇವೆ. ಹಾಗಾಗಿ ಇಲ್ಲಿಯೇ ಸಿಂಪಲ್‌ ಆಗಿ ಬರ್ತಡೇ ಆಚರಿಸೋಣ ಅಂತ ನಿರ್ಧರಿಸಿದ್ದೆ. ಈ ವಿಡಿಯೋ ಮಾಡುವ ಯೋಚನೆ ಬಂತು. ಮನೆಯಲ್ಲಿ ಅತ್ತಿಗೆ ಕೇಕ್‌ ಮಾಡಿದರು. ಸಿಂಪಲ್‌ ಆಗಿ ಕೇಕ್‌ ಕತ್ತರಿಸಿ ಬತ್‌ರ್‍ಡೇ ಆಚರಿಸಿದೆವು’ ಎಂದು ರಿಷಬ್‌ ಶೆಟ್ಟಿ ಸಂಭ್ರಮ ಹಂಚಿಕೊಂಡಿದ್ದಾರೆ.

ಸಿಂಪಲ್ ಸ್ಟಾರ್ ರಕ್ಷಿತ್ ಅವರು ಕೂಡ ಸ್ನೇಹಿತ ರಿಷಬ್ ಶೆಟ್ಟಿ ಮಗನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು, ರಣ್ವಿತ್ ಜೊತೆ ಇರುವ ಎರಡು ಮುದ್ದು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಹ್ಯಾಪಿ ಬರ್ತ್ ಡೇ ಎಂದು ಬರೆದು ಮೂರು ಮುತ್ತು ಕೊಡುವ ಇಮೋಜಿಗಳನ್ನು ಹಾಕಿದ್ದಾರೆ. ಇದರ ಜೊತೆಗೆ ರಿಷಬ್ ಅವರ ಸಾವಿರಾರು ಅಭಿಮಾನಿಗಳು ರಣ್ವಿತ್ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ಮೂಲಕ ಶುಭ ಕೋರಿ ಆಶೀರ್ವಾದಿಸಿದ್ದಾರೆ.