ನನ್ನನ್ನು ತುಂಬಾ ಪ್ರೀತಿಸಿದ ಅವರನ್ನು ನಾನು ನೋಯಿಸಿ, ದೂರ ತಳ್ಳಿಬಿಟ್ಟೆ.. ರಮ್ಯಾ ಹೇಳಿದ್ದು ಯಾರ ಬಗ್ಗೆ?

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಕಾಲದಲ್ಲಿ‌ ಅಂದರೆ ಕೆಲವೇ ವರ್ಷಗಳ ಹಿಂದಷ್ಟೇ ಸ್ಯಾಂಡಲ್ವುಡ್ ಕ್ವೀನ್ ಎನಿಸಿಕೊಂಡಿದ್ದ ರಮ್ಯಾ ಅವರು ರಾಜಕೀಯ ಪ್ರವೇಶದ ನಂತರ ಸಿನಿಮಾರಂಗದಿಂದ ಬಹುದೂರ ಉಳಿದುಬಿಟ್ಟರು.. ರಾಜಕೀಯ ದಲ್ಲಿ ಸಕ್ರೀಯರಾದರು.. ಆಬಳಿಕ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಜವಾಬ್ದಾರಿ ಹೊತ್ತರು.. ಮೋದಿಯವರನ್ನು ಟೀಕಿಸುವ ಬರದಲ್ಲಿ ಕೆಲ ಎಡವಟ್ಟುಗಳನ್ನು ಮಾಡಿಕೊಂಡರು.. ಆನಂತರ ರಾಜಕೀಯದಿಂದಲೂ ದೂರಾದ ರಮ್ಯ ಅವರು ಸದ್ಯ ಎಲ್ಲಿಯೂ ಕಾಣಸಿಗಲಿಲ್ಲ..‌ ಸಾಮಾಜಿಕ ಜಾಲತಾಣದಿಂದಲೂ ದೂರ ಉಳಿದರು..

ಆದರೆ ಹಲವು ವರ್ಷದ ಬಳಿಕ ಇದೀಗ ಮತ್ತೊಮ್ಮೆ ಅದೇ ಹಳೆ ಸ್ಯಾಂಡಲ್ವುಡ್ ನಟಿ ರಮ್ಯ ಆಗಿ ಮರಳಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದು ಅಭಿಮಾನಿಗಳಿಗಾಗಿ ಆಗಿಂದ್ದಾಗೆ ಪೋಸ್ಟ್ ಹಾಕುತ್ತಿರುತ್ತಾರೆ.. ಕೇರಳದ ಗರ್ಭಿಣಿ ಆನೆಯ ಕುರಿತಾಗಿ ಹಾಗೂ ಮೊನ್ನೆ ಮೊನ್ನೆಯಷ್ಟೇ ಚಿರು ಸರ್ಜಾ ಅವರ ಕುರಿತಾಗಿ ಪೋಸ್ಟ್ ಮಾಡಿದ್ದರು..

ಇದೀಗ ತಮ್ಮನ್ನು ಇಷ್ಟ ಪಟ್ಟವರನ್ನು ನೋಯಿಸಿಬಿಟ್ಟೆ ಎಂದಿದ್ದಾರೆ.. ಹೌದು ಮಾದ್ಯಮವೊಂದರ ಜೊತೆ ಮಾತನಾಡಿರುವ ರಮ್ಯಾ ಅವರು ಜೀವನದಲ್ಲಿ ಸುಖ ದುಃಖ ಬರುತ್ತವೆ ಅದನ್ನು ಬ್ಯಾಲೆನ್ಸ್ ಮಾಡಬೇಕೆಂದು ತಿಳಿಸಿದ್ದಾರೆ..

ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವ ವ್ಯಕ್ತಿಗಳು ಪ್ರಪಂಚದ ಹಾಗು ಹೋಗುಗಳಿಗೆ ಬೇಸರ ಪಟ್ಟುಕೊಳ್ಳುತ್ತೇವೆ.. ಆನಂತರ ಸಮಾಜದಿಂದ ದೂರ ಸರಿದು ಬಿಡುತ್ತೇವೆ.. ಆತ್ಮಾವಲೋಕನದಲ್ಲಿಯೇ ಹೆಚ್ಚು ಕಾಲ ಕಳೆಯುವ ನಾವುಗಳು ಸಮಾಜದಿಂದ ಪ್ರತ್ಯೇಕವಾಗಿ ಬಿಡುತ್ತೇವೆ.. ಜೀವನದಲ್ಲಿ ಕಷ್ಟದ ಸಮಯಗಳು ಬರುವುದು ಕಾಮನ್.. ಆ ಸಮಯವನ್ನು ಹಾಗೂ ಜೀವನ ಎಂಜಾಯ್ ಮಾಡುವುದನ್ನು ಬ್ಯಾಲೆನ್ಸ್ ಮಾಡಬೇಕು..

ನಮ್ಮ ಬದುಕಿಗೆ ಕೃತಜ್ಞರಾಗಿರಬೇಕು.. ಜೀವನ ಅನ್ನೋದು ಒಂದು ನಿಜವಾದ ಹೋರಾಟ.. ನಾನು ಈಗಾಗಲೇ ನನ್ನನ್ನು ಇಷ್ಟ ಪಟ್ಟವರನ್ನು ಬಹಳ ನೋಯಿಸಿದ್ದೇನೆ.. ಅವರು ನನ್ನ ಬಳಿ ಇದನ್ನೆಲ್ಲಾ ಬ್ಯಾಲೆನ್ಸ್ ಮಾಡುವುದನ್ನು ತಿಳಿಸಲು ಬಂದಾಗ ಕೂಡ ಅವರನ್ನು ದೂರ ತಳ್ಳಿ ಬಿಟ್ಟಿದ್ದೇನೆ.. ಆದರೀಗ ಎಲ್ಲವೂ ಅರ್ಥವಾಗಿದೆ.‌ ಜೀವನದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಬೇಕು.. ಯಾವುದಕ್ಕೂ ಅಂಟಿಕೊಳ್ಳದೇ ಈಗಿರುವ ಜೀವನವನ್ನು ಜೀವಿಸಬೇಕು ಎಂದಿದ್ದಾರೆ..