ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರಿಗೆ ಏನಾಗಿ ಹೋಯ್ತು?

ಒಂದು ಕಾಲದಲ್ಲಿ ಅಭಿಮಾನಿಗಳಿಗೆ ಮಾತ್ರವಲ್ಲ ಸ್ಯಾಂಡಲ್ವುಡ್ ನ ಅದೆಷ್ಟೋ ಯಂಗ್ ಹೀರೋಗಳ ನೆಚ್ಚಿನ ಹೀರೋಯಿನ್ ಆಗಿದ್ದ ಸ್ಯಾಂಡಲ್ವುಡ್ ಕ್ವೀನ್ ಎಂದೇ ಕರೆಯಲ್ಪಡುವ ನಟಿ ರಮ್ಯಾ ಅವರು ರಾಜಕೀಯದಲ್ಲಿ ಸಕ್ರಿಯರಾದ ಬಳಿಕ ಬಣ್ಣದ ಲೋಕದಿಂದ ಮರೆಯಾಗಿ ಹೋದರು.. ಆದರೀಗ ಅದ್ಯಾಕೋ ರಾಜಕೀಯ ಬೇಡವೆನಿಸಿ ಅದರಿಂದ ದೂರಾದಂತೆ ಕಾಣುತ್ತಿದೆ.. ಆದ್ಯಾತ್ಮದತ್ತ ಒಲವು ತೋರುತ್ತಿರುವ ರಮ್ಯಾ ಅವರ ಕೆಲ ಫೋಟೋಗಳನ್ನು ನೋಡಿ ಅವರಿಗೆ ಏನಾಗಿ ಹೋಯ್ತು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ..

ಹೌದು ಸಿನಿಮಾರಂಗದಲ್ಲಿ ದಶಕದ ಕಾಲ ಮಿಂಚಿದ ನಟಿ ಸ್ಯಾಂಡಲ್ವುಡ್ ಕ್ವೀನ್ ಎನಿಸಿಕೊಂಡರು.. ಟಾಪ್ ಹೀರೋಯಿನ್ ಆಗಿದ್ದಾಗಲೇ ಮಂಡ್ಯ ಲೋಕ ಸಭಾ ಉಪಚುನಾವಣೆಯಲ್ಲಿ ಭಾಗಿಯಾಗಿ ಜಯಗಳಿಸಿ ಎಂಪಿ ಕೂಡ ಆದರು.. ಆದರೆ ಆನಂತರ ಅವರಂದುಕೊಂಡಂತೆ ಏನೂ ನಡೆಯಲಿಲ್ಲ.. ಅತ್ತ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹೆಡ್ ಆಗಿದ್ದಾಗ ಸಾಕಷ್ಟು ಟ್ರೋಲ್ ಗಳಿಗೂ ಸಹ ಆಹಾರವಾದರು..

ಇದೀಗ ಅದೆಲ್ಲದರಿಂದ ದೂರಾಗಿದ್ದಾರೆ.‌ ಈ ನಡುವೆ ರಮ್ಯಾ ಅವರ ಮದುವೆ ಸುದ್ದಿ ಮಾತ್ರ ಆಗಿಂದ್ದಾಗೆ ಸುದ್ದಿಯಾಗುತ್ತಲೇ ಇರುತ್ತದೆ.. ಆದರೆ ಖುದ್ದು ರಮ್ಯಾ ಅವರಿಂದ ಮಾತ್ರ ಯಾವುದೇ ಅಧಿಕೃತ ಮಾಹಿತಿ ಹೊರ ಬರಲಿಲ್ಲ‌..

ಇನ್ನು ರಮ್ಯಾ ಅವರು ವರ್ಷಗಳ ಬಳಿಕ ಇದೀಗ ಮತ್ತೆ ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದು ಆಗಾಗ ಅಭಿಮಾನಿಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ‌‌‌.. ಆದರೆ ಅವರ ಫೋಟೋಗಳನ್ನು ನೋಡಿದ ಕೆಲ ಅಭಿಮಾನಿಗಳೇಕೋ ರಮ್ಯಾ ಅವರಿಗೆ ಏನಾಗಿದೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ..

ಹೌದು ರಮ್ಯಾ ಅವರು ಚಿತ್ರವಿಚಿತ್ರವಾದ ಸೆಲ್ಫಿಗಳನ್ನು ಹಂಚಿಕೊಳ್ಳುತ್ತಿದ್ದು, ಚೆಂದದ ಪೋಸ್ ಕೊಡೋದಕ್ಕೆ ಟ್ರೈ ಮಾಡಿದರೂ ಸಹ ನನ್ನ ಬಳಿ‌ ಇರುವ ಫೋಟೋಗಳು ಹೀಗೆ ಇವೆ ಎಂದಿದ್ದಾರೆ.. ಸಾಮಾನ್ಯವಾಗಿ ಯಾವ ನಟಿಯರು ಸಹ ಟ್ರೋಲ್ ಆಗಬಹುದೆಂದು ಈ ರೀತಿಯಾದ ಬೋಲ್ಡ್ ಸೆಲ್ಫಿಗಳನ್ನು ಶೇರ್ ಮಾಡಿಕೊಳ್ಳುವುದಿಲ್ಲ.. ಆದರೆ ರಮ್ಯಾ ಮಾತ್ರ ಯಾವುದಕ್ಕೂ ಕೇರ್ ಮಾಡದೆ ತಮಗಿಷ್ಟವಾದ ಸೆಲ್ಫಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ..

ಇನ್ನ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಮ್ಯಾರನ್ನು‌ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದು ಮತ್ತೆ ಸಿನಿಮಾದಲ್ಲಿ‌ ಕಾಣಿಸಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ.. ಅಭಿಮಾನಿಗಳಿಗೆ ಮಾತ್ರವಲ್ಲ ಒಂದು ಕಾಲದಲ್ಲಿ‌ ಆಗಿನ ಯಂಗ್ ಹೀರೋಗಳಿಗೂ ಸಹ ರಮ್ಯಾ ಅಚ್ಚುಮೆಚ್ಚಾಗಿದ್ದ ನಟಿ.. ಮತ್ತೆ ತೆರೆ ಮೇಲೆ ಬರುವಂತಾಗಲಿ..