ಪೊಲೀಸರಿಗೆ ಸಿಕ್ಕಿಬಿದ್ದ ಖ್ಯಾತ ನಟಿ ರಮ್ಯಾ ಕೃಷ್ಣ..

ಖ್ಯಾತ ನಟಿ ಬಹುಭಾಷಾ ಕಲಾವಿದೆ ರಮ್ಯಾ ಕೃಷ್ಣ ಅವರ ಕಾರಿನಲ್ಲಿ‌ ಮದ್ಯ ಸಾಗಾಣೆ ಮಾಡುತ್ತಿದ್ದು ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ.. 100 ಮದ್ಯದ ಬಾಟಲಿಯನ್ನು ವಶಕ್ಕೆ ಪಡೆಯಲಾಗಿದೆ..

ನಟಿ ರಮ್ಯಾಕೃಷ್ಣ ಅವರು ತಮಿಳುನಾಡಿನ ಚೆನ್ನೈನಲ್ಲಿ ವಾಸವಿದ್ದಾರೆ.. ಆದರೆ ಕೊರೊನಾ ಇರುವ ಕಾರಣ ಲಾಕ್‍ಡೌನ್ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದೆ.. ನಿನ್ನೆ ರಮ್ಯಾಕೃಷ್ಣ ಅವರು ಪ್ರಯಾಣಿಸುತ್ತಿದ್ದ ಟೊಯೊಟಾ ಇನ್ನೋವಾ ಕಾರ್ ಅನ್ನು ಪೊಲೀಸರು ಚೆಕ್ ಪೋಸ್ಟ್ ಬಳಿ ತಡೆದು ಪರಿಶೀಲನೆ ನಡೆಸುವಾಗ ಮದ್ಯ ಸಿಕ್ಕಿದ್ದು ಅದನ್ಮು ವಶ ಪಡಿಸಿಕೊಳ್ಳಲಾಗಿದೆ..

ಆದರೆ ಪೊಲೀಸರು ನಟಿಯ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.. ಕಾರ್ ಚಾಲಕ ಸೆಲ್ವ ಕುಮಾರ್ ಅವರನ್ನು ಬಂಧಿಸಲಾಗಿತ್ತು.. ತದನಂತರ ಸೆಲ್ವ ಕುಮಾರ್ ಜಾಮೀನಿನ ಮೇಲೆ ಹೊರಗೂ ಬಂದಾಯಿತು.. ಕಾರ್ ಪರಿಶೀಲನೆ ವೇಳೆ ರಮ್ಯಾಕೃಷ್ಣ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ವರದಿಯಾಗಿದೆ..

ಆದರೆ ರಮ್ಯಾ ಕೃಷ್ಣಾರಿಂದ ಯಾವುದೇ ಹೇಳಿಕೆ ಪಡೆದುಕೊಂಡಿಲ್ಲ ಎಂಬುದು ತಿಳಿದುಬಂದಿದೆ.. ಡ್ರೈವರ್ ಸಾಗಿಸುತ್ತಿದ್ದರಾ? ಅಥವಾ ಕಾರಿನ ಓನರ್ ಮದ್ಯವನ್ನು ಸಾಗಿಸುತ್ತಿದ್ದರಾ? ಎಂಬುದು ವಿಚಾರಣೆ ವೇಳೆ ತಿಳಿಯಬೇಕಿದೆ.. ಸಾಮಾನ್ಯರಿಗಾದರೆ ಒಂದು.. ಸೆಲಿಬ್ರೆಟಿಗಳಿಗಾದರೆ ಒಂದು ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ‌ ಕೇಳಿ ಬರುತ್ತಿದೆ.‌