ನಿಶ್ಚಿತಾರ್ಥವಾಗಿದ್ದ ರಮ್ಯಾ ರಾಜಕೀಯಕ್ಕೆ ಹೋದರು.. ಈಗ ಇದ್ದಕಿದ್ದ ಹಾಗೆ ಗಂಡನ ಸಾವಿನ ಬಗ್ಗೆ ಮಾತನಾಡಿದ ರಮ್ಯಾ.. ಶಾಕ್ ಆದ ಅಭಿಮಾನಿಗಳು..

ರಮ್ಯಾ ಸ್ಯಾಂಡಲ್ವುಡ್ ನ ಖ್ಯಾತ ನಟಿ ಅನ್ನೋದಕ್ಕಿಂತ ಎವರ್ ಗ್ರೀನ್ ನಟಿ ಎಂದರೆ ತಪ್ಪಾಗಲಾರದು.. ಸ್ಯಾಂಡಲ್ವುಡ್ ನಲ್ಲಿ ದಶಕಗಳ ಕಾಲ ನಟಿಯಾಗಿ ಕಾಣಿಸಿಕೊಂಡು ಅವರದ್ದೇ ಅದಾ ಅಭಿಮನೈ ಬಳಗಗಳನ್ನು ಹೊಂದಿದ್ದ ಕೆಲವೇ ನಟಿಯರಲ್ಲಿ ರಮ್ಯಾ ಕೂಡ ಒಬ್ಬರು.. ಆದರೆ ಇದ್ದಕಿದ್ದ ಹಾಗೆ ರಾಜಕೀಯಕ್ಕೆ ತೆರಳುವ ನಿರ್ಧಾರ ಮಾಡಿ ಎಂಪಿ ಕೂಡ ಆದರು.. ಚಿತ್ರರಂಗದಿಂದಲೂ ದೂರಾದ ರಮ್ಯಾ ಅವರು ಬೆಂಗಳೂರನ್ನು ತೊರೆದಿದ್ದರು.. ರಾಜಕೀಯಕ್ಕೆ ಎಂಟ್ರಿ ನೀಡುವ ಮೊದಲು ಅಮೇರಿಕಾ ಮೂಲದ ವ್ಯಕ್ತಿಯೊಬ್ಬರ ಜೊತೆ ನೊಶ್ಚಿತಾರ್ಥವೂ ಆಗಿತ್ತು.. ಆದರೆ ರಾಜಕೀಯದ ಕಾರಣದಿಂದಾಗಿ ಆ ಮದುವೆ ಸಹ ಮುರಿದು ಬಿದ್ದಿತ್ತು..

ನಂತರ ರಮ್ಯಾ ಅವರು ಅದ್ಯಾಕೋ ಮದುವೆ ಕಡೆ ಮನಸ್ಸೇ ಮಾಡಲಿಲ್ಲ.. ಇತ್ತ ರಮ್ಯಾ ಅವರು ಆದ್ಯಾತ್ಮದ ಕಡೆಗೂ ಒಲವಿಟ್ಟುಕೊಂಡು ಅದರ ಕುರಿತು ಪದವಿಯನ್ನೂ ಸಹ ಪಡೆದು ಬಂದರು.. ಇದೀಗ ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಮರಳಿ ಬಂದು ನೆಲೆಸಿದ ರಮ್ಯಾ ಅವರು ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವ ಒಲವು ತೋರಿದ್ದು ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಸಿನಿಮಾದಲ್ಲಿ ಬಣ್ಣ ಹಚ್ಚೋದು ಖಚಿತ ಎನ್ನಲಾಗಿದೆ..

ಆದರೆ ಏನೇ ಆದರೂ ಅವರನ್ನು ಇಷ್ಟ ಪಡುವ ಅಭಿಮಾನಿಗಳು ಮಾತ್ರ ರಮ್ಯಾ ಅವರನ್ನು ಮದುವೆಯಾಗಿ ಒಂದು ಸುಂದರ ಸಂಸಾರವನ್ನು ಕಟ್ಟಿಕೊಳ್ಳಿ ಎಂದೇ ಮನವಿ ಮಾಡೋದುಂಟು.. ಆಗಾಗ ಅವರ ಮದುವೆ ಕುರಿತ ಗಾಸಿಪ್ ಗಳೂ ಸಹ ಹರಿದಾಡೋದುಂಟು.. ರಕ್ಷಿತ್ ಶೆಟ್ಟಿ ಅವರ ಜೊತೆ ಮದುವೆ ಅವರ ಜೊತೆ ಮದುವೆ ಇವರ ಜೊತೆ ಮದುವೆ.. ಹೀಗೆ ಸಾಕಷ್ಟು ಸುದ್ದಿ ಆಗೋದುಂಟು. ಆದರೆ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ರಮ್ಯಾ ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಸುಮ್ಮನಾಗುತ್ತಾರೆ..

ಆದರೆ ಇದೀಗ ಇದ್ದಕಿದ್ದ ಹಾಗೆ ತಮ್ಮ ಗಂಡನ ಬಗ್ಗೆ ಮಾತನಾಡಿ ಅವರು ಜೀವಂತ ಇಲ್ಲ ಎನ್ನುವ ಮಾತುಗಳನ್ನಾಡಿದ್ದು ಅಭಿಮಾನಿಗಳು ಶಾಕ್ ಆಗಿರೋದಂತೂ ಸತ್ಯ.. ಹೌದು ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರು.. ಆಗಾಗ ತಮ್ಮ ಜೀವನದ ಆಗುಹೋಗುಗಳನ್ನು ಹಂಚಿಕೊಂಡು ಪೋಸ್ಟ್ ಗಳನ್ನು ಹಾಕುತ್ತಲಿರುತ್ತಾರೆ.. ಅವರ ಫೋಟೋಗಳು ವೀಡಿಯೋಗಳು ಅಭಿಮಾನಿಗಳನ್ನು ಕುತೂಹಲ ಮೂಡಿಸೋದು ಉಂಟು..

ಅದೇ ರೀತಿ ಇಂದು ರಮ್ಯಾ ಅವರು ರೀಲ್ಸ್ ಒಂದಕ್ಕೆ ಲಿಪ್ ಸಿಂಕ್ ಮಾಡಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಹೌದು ರಮ್ಯಾ ಅವರು ಮೇ ಬಿ ಮೈ ಸೋಲ್ಮೇಟ್ ಡೆಡ್ ಎನ್ನುವ ಹಾಡಿಗೆ ರೀಲ್ಸ್ ಮಾಡಿ ಅದನ್ನು ಹಾಕಿಕೊಂಡಿದ್ದಾರೆ ಸರಿ.. ಆದರೆ ಅದಕ್ಕೊಂದು ಕ್ಯಾಪ್ಶನ್ ಕೊಟ್ಟು “ನಾನು ಯಾಕೆ ಮದುವೆಯಾಗಿಲ್ಲ.. ಬಹುಶಃ ನನ್ನ ಮದುವೆಯಾಗುವ ಹುಡುಗ ತೀರಿಕೊಂಡಿರಬಹುದು‌” ಎಂದು ಪೋಸ್ಟ್ ಮಾಡಿದ್ದು ಇದನ್ನು ನೋಡಿ ಅಭಿಮಾನಿಗಳು ಕೆಲವರು ತಮಾಷೆಯಾಗಿ ತೆಗೆದುಕೊಂಡರೆ ಮತ್ತೆ ಕೆಲವರು ಬೇಸರ ಪಟ್ಟುಕೊಂಡು ಈ ರೀತಿ ಹೇಳಬೇಡಿ.. ನೀವು ಒಬ್ಬ ಒಳ್ಳೆಯ ಹುಡುಗನ ಜೊತೆ ಮದುವೆಯಾಗಿ ಒಂದೊಳ್ಳೆ ಸಂಸಾರ ಕಟ್ಟಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ..

ಒಟ್ಟಿನಲ್ಲಿ ಮೂವತ್ತೊಂಭತ್ತು ವರ್ಷದ ರಮ್ಯಾ ಅವರು ಮುಂದೆಯೂ ಮದುವೆಯಾಗದೇ ಹಾಗೇ ಉಳಿಯುವ ನಿರ್ಧಾರ ಮಾಡಿದಂತೆ ಕಾಣುತ್ತಿದ್ದು ಒಬ್ಬಂಟಿಯಾಗಿಯೇ ಜೀವನ ಕಳೆಯುವ ನಿರ್ಧಾರಕ್ಕೆ ಬಂದಂತಿದೆ.. ಇನ್ನು‌ ಇತ್ತ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಸಲುವಾಗಿ ರಾಜ್ ಬಿಶೆಟ್ಟಿ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಆ ಸಿನಿಮಾಗಾಗಿ ತಮ್ಮ ತೂಕವನ್ನು ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.. ಎಲ್ಲವೂ ಅಂದುಕೊಂಡಂತಾದರೆ ಇದೇ ವರ್ಷದ ಕೊನೆಯಲ್ಲಿ ಸಿನಿಮಾ ತೆರೆ ಕಾಣಲಿದ್ದು ಮತ್ತೊಮ್ಮೆ ರಮ್ಯಾ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ..