ಅಂತೂ ಕೂಡಿ ಬಂತಾ ಕಂಕಣ ಭಾಗ್ಯ.. ಸಿಹಿ ಸುದ್ದಿ ನೀಡಿದ ನಟಿ ರಮ್ಯಾ

ಮೋಹಕ ತಾರೆ ರಮ್ಯಾ ಚಂದನವನಕ್ಕೆ ನಾಯಕಿಯಾಗಿ ಕಾಲಿಟ್ಟು 20 ವರ್ಷ ಕಳೆಯಲಿದೆ. ಕೆಲ ವರ್ಷಗಳಿಂದ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ ರಮ್ಯಾ, ರಾಜಕೀಯದಿಂದಲೂ ದೂರವೇ ಉಳಿದಿದ್ದಾರೆ. ಆದರೆ ಈಗಲೂ ಅಭಿಮಾನಿಗಳಿಗೆ ರಮ್ಯಾ ಅವರ ಮೇಲಿರುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಸೋಷಿಯಲ್ ಮೀಡಿಯಾಗಳಲ್ಲಿ ರಮ್ಯಾ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಎಂದು ಮನವಿ ಮಾಡಿಕೊಳ್ಳುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ರಮ್ಯಾ ಅವರ ಹೆಸರಿನಲ್ಲಿ ಹಲವಾರು ಫ್ಯಾನ್ ಪೇಜ್ ಗಳು ಕೂಡ ಇದೆ. ಇದೆಲ್ಲವೂ ರಮ್ಯಾ ಅವರ ಅಭಿಮಾನಿ ಬಳಗ ಕಡಿಮೆ ಆಗಿಲ್ಲ ಎನ್ನುವುದಕ್ಕೆ ಸಾಕ್ಷಿ. ಈಗ ರಮ್ಯಾ ಅವರ ಕುರಿತಾಗಿ ಹೊಸ ಸುದ್ದಿಯೊಂದು, ತಿಳಿದುಬಂದಿದ್ದು, ಮಾರ್ಚ್ ತಿಂಗಳಿನಲ್ಲಿ ಗುಡ್ ನ್ಯೂಸ್ ಒಂದನ್ನು ಕೊಡಲಿದ್ದಾರಂತೆ ಸ್ಯಾಂಡಲ್ ವುಡ್ ಕ್ವೀನ್.

2003 ರಲ್ಲಿ ಅಭಿ ಸಿನಿಮಾ ತೆರೆಕಂಡಾಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಮ್ಯಾ ಮೇಲೆ ಎಲ್ಲರಿಗು ಎಷ್ಟು ಕ್ರೇಜ್ ಇತ್ತು ಎನ್ನುವುದನ್ನು ಪದಗಳಲ್ಲಿ ಸಾಧ್ಯವಿಲ್ಲ. ಇವರಿಬ್ಬರ ಜೋಡಿಯನ್ನು ಕರ್ನಾಟಕದ ಜನ ಮೆಚ್ಚಿ ಕೊಂಡಾಡಿದ್ದರು. ಅಪ್ಪು ಅವರ ಜೊತೆ ಮೂರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಏಕೈಕ ನಟಿ ರಮ್ಯಾ ಅವರು ಮಾತ್ರವೇ. ಇನ್ನು ನಟನೆ ಮೂಲಕ ಇಡೀ ದಕ್ಷಿಣ ಭಾರತದಲ್ಲಿ ಛಾಪನ್ನು ಮೂಡಿಸಿದವರು ರಮ್ಯಾ. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟು, ಅಲ್ಲಿನ ಸ್ಟಾರ್ ನಟರ ಜೊತೆ ನಟಿಸಿ ಯಶಸ್ವಿ ನಟಿಯಾದರು.

ನಟನೆಯ ಜೊತೆಗೆ ಜನಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೂ ಎಂಟ್ರಿ ಕೊಟ್ಟು ಯಶಸ್ವಿಯಾದರು ರಮ್ಯಾ. ಮಂಡ್ಯ ಕ್ಷೇತ್ರದಿಂದ ಚುನಾವಣೆಯಲ್ಲಿ ನಿಂತು ಗೆದ್ದರು. ಸಿನಿಮಾ ರಾಜಕೀಯ ಎರಡರಲ್ಲೂ ಸಕ್ರಿಯವಾಗಿ ಯಶಸ್ಸು ಪಡೆದ ಕೆಲವೆ ನಟಿಯರಲ್ಲಿ ರಮ್ಯಾ ಒಬ್ಬರು. ಆದರೆ ಇದ್ದಕ್ಕಿದ್ದ ಹಾಗೆ ಸಿನಿಮಾ ಮತ್ತು ರಾಜಕೀಯ ಎರಡರಿಂದಲೂ ನಟಿ ರಮ್ಯ ದೂರವಾಗಿಬಿಟ್ಟರು. ಇದಕ್ಕೆ ಕಾರಣವನ್ನು ಅವರು ತಿಳಿಸಲಿಲ್ಲ. 2016 ರಲ್ಲಿ ತೆರೆಕಂಡ ನಾಗರಹಾವು, ರಮ್ಯಾ ಅವರು ಕೊನೆಯದಾಗಿ ನಟಿಸಿದ ಸಿನಿಮಾ, ಅದಾದ ಬಳಿಕ ಅವರು ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ.

ಭಾರತದಿಂದಲೇ ದೂರ ಹೋಗಿ ಹೊರ ರಾಷ್ಟ್ರದಲ್ಲಿ ನೆಲೆಸಿದ್ದ ರಮ್ಯಾ ಅವರು, ಸೋಷಿಯಲ್ ಮೀಡಿಯದಿಂದಲೂ ಕೆಲ ಸಮಯ ಮಾಯವಾಗಿದ್ದರು. ಕೋವಿಡ್ ಪ್ಯಾಂಡೆಮಿಕ್ ಶುರುವಾದ ನಂತರ 2020ರ ಏಪ್ರಿಲ್ ಮೇ ತಿಂಗಳ ಸಮಯದಲ್ಲಿ ಸೋಷಿಯಲ್ ಮೀಡಿಯಾಗೆ ಕಂಬ್ಯಾಕ್ ಮಾಡಿ, ಆಕ್ಟಿವ್ ಆಗಿದ್ದಾರೆ. ಅನೇಕ ವಿಚಾರಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ರಮ್ಯಾ ಅವರ ಮನಸ್ಸಿಗೆ ಬಹಳ ನೋವು ನೀಡಿತು. ರಸ್ತೆಯಲ್ಲಿ ಮಲಗಿದ್ದ ಲಾರಾ ಎನ್ನುವ ಒಂದು ಶ್ವಾನದ ಮೇಲೆ ಕಾರ್ ಹರಿದು, ಅದು ಪ್ರಾಣ ಬಿಟ್ಟಿತು. ತನ್ನ ತಾನಿದ್ದ ಶ್ವಾನಕ್ಕೆ ಈ ರೀತಿ ಮಾಡಿದ್ದು ಅಮಾನವೀಯವಾದ ವಿಚಾರ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು.

ಪ್ರಾಣಿಪ್ರಿಯೆ ಆಗಿರುವ ರಮ್ಯಾ ಅವರಿಗೆ ಈ ಘಟನೆ ಬಹಳ ನೋವನ್ನುಂಟು ಮಾಡಿದ ಕಾರಣ, ಅದರ ಅಂತ್ಯಕ್ರಿಯೆಗೆ ರಮ್ಯಾ ಅವರು ಬೆಂಗಳೂರಿಗೆ ಆಗಮಿಸಿದ್ದರು. ಇಂತಹ ಕೆಲಸ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು, ಪ್ರಾಣಿಗಳಿಗೂ ರಕ್ಷಣೆ ಸಿಗಬೇಕು ಎಂದು ಮಾಧ್ಯಮದ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡರು ನಟಿ ರಮ್ಯಾ. ಜೊತೆಗೆ ತಮ್ಮ ಬಗ್ಗೆ ಹೊಸ ಅಪ್ಡೇಟ್ ಒಂದನ್ನು ಕೂಡ ನೀಡಿದರು. ಅದೇನೆಂದರೆ ರಮ್ಯಾ ಅವರು ಈ ವರ್ಷ ಮಾರ್ಚ್ ತಿಂಗಳಲ್ಲಿ ಎಲ್ಲರಿಗೂ ಒಂದು ಗುಡ್ ನ್ಯೂಸ್ ನೀಡುವುದಾಗಿ ಮಾಧ್ಯಮದ ಮುಂದೆ ತಿಳಿಸಿದ್ದಾರೆ.

ಆ ಗುಡ್ ನ್ಯೂಸ್ ಏನು ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ಮೂಲಗಳ ಪ್ರಕಾರ, ರಮ್ಯಾ ಅವರು ಮತ್ತೆ ಚಿತ್ರರಂಗಕ್ಕೆ ರೀಎಂಟ್ರಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಲೂ ಕೂಡ ರಮ್ಯಾ ಅವರಿಗೆ ಚಂದನವನದಲ್ಲಿ ಭಾರಿ ಡಿಮ್ಯಾಂಡ್ ಇದೆ. ರಮ್ಯಾ ಅವರನ್ನು ಮತ್ತೊಮ್ಮೆ ಬಣ್ಣದ ಲೋಕಕ್ಕೆ ಕರೆತರುವ ಪ್ರಯತ್ನಗಳು ಆಗಾಗ ನಡೆಯುತ್ತಲೇ ಇರುತ್ತದೆ. ಹಾಗಾಗಿ ರಮ್ಯಾ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ವಿಚಾರವನ್ನೇ ಗುಡ್ ನ್ಯೂಸ್ ಆಗಿ ತಿಳಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.