ಪ್ರೀತಿಸಿ ಮದುವೆಯಾದಳು.. ಆದರೆ ಒಂದೇ ರಾತ್ರಿಗೆ ಎಂತಹ ಕೆಲಸ ಮಾಡಿದ್ದಾನೆ ನೋಡಿ.. ಇವನ ಜನ್ಮಕ್ಕಿಷ್ಟು..

ಗಂಡಾಗಲಿ ಹೆಣ್ಣಾಗಲಿ‌ ಮದುವೆ ಬಗ್ಗೆ ಬಾಳ ಸಂಗಾತಿಯ ಬಗ್ಗೆ ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ದಾಂಪತ್ಯ ಜೀವನವನ್ನು ಆರಂಭ ಮಾಡಿರುತ್ತಾರೆ.. ಆದರೆ ಮದುವೆಯ ನಂತರದ ಸಣ್ಣ ಪುಟ್ಟ ವಿಚಾರಗಳಿಗೆ ಮನನೊಂದಾಗ ತಮ್ಮ ಮದುವೆಯ ಬಗ್ಗೆಗಿನ ಕನಸುಗಳೆಲ್ಲ ಕನಸುಗಳಾಗಿಯೇ ಉಳಿಯುವುದೆಂಬ ಆ ನೋವ ತಡೆಯಲಾಗದೇ ಜೀವನದಲ್ಲಿ ದುಡುಕಿನ ನಿರ್ಧಾರ ಮಾಡಿ ಬಿಡುತ್ತಾರೆ.. ಅಂತಹುದೇ ಮನಕಲಕುವ ಘಟನೆಯೊಂದು ತಮಿಳುನಾಡಿನಲ್ಲಿ‌ ನಡೆದಿದ್ದು ಮದುವೆಯಾದ ಒಂದೇ ದಿನಕ್ಕೆ ತವರಿಗೆ ಮರಳಿ ಬಂದ ರಮ್ಯಾ ಎಂಬ ಹೆಣ್ಣು ಮಗಳು ಒಂದೇ ತಿಂಗಳಿಗೆ ತನ್ನ ಜೀವವನ್ನೇ ಕಳೆದುಕೊಂಡು ಬಿಟ್ಟಿದ್ದಾಳೆ..

ಹೌದು ಈಕೆಯ ಹೆಸರು ರಮ್ಯಾ.. ವಯಸ್ಸು ಇಪ್ಪತ್ತೇಳು.. ಈಕೆ ತಮಿಳುನಾಡಿನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.. ಅದೇ ಸಮಯದಲ್ಲಿ ಕಾರ್ತಿಕೇಯನ್ ಎಂಬಾತನ‌ ಜೊತೆ ಪ್ರೀತಿಯಲ್ಲಿ ಬಿದ್ದ ರಮ್ಯಾ ಮನೆಯವರನ್ನು‌ ಒಪ್ಪಿಸಿ ಕಳೆದ ಏಪ್ರಿಲ್ ಆರರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಆದರೆ ಪ್ರೀತಿಸಿ ಮದುವೆಯಾಗಿದ್ದ ರಮ್ಯಾ ಗಂಡನ ಬಗ್ಗೆ ಗಂಡನ‌ ಮನೆಯ ಬಗ್ಗೆ ಸಾಕಷ್ಟು ಕನಸು ಕಂಡಿದ್ದಳು.. ಆದರೆ ಮದುವೆಯಾಗಿ ಹೋದ ಕ್ಷಣವೇ ಆ ಕನಸುಗಳೆಲ್ಲಾ ನುಚ್ಚು ನೂರಾಯಿತು..

ಹೌದು ಹೆಣ್ಣಿಗೆ ಅತ್ಯಂತ ಅವಶ್ಯಕವಾದ ಶೌಚಾಲಯವೇ ಕಾರ್ತಿಕೇಯನ್ ಮನೆಯಲ್ಲಿ ಇರಲಿಲ್ಲ.. ಮದುವೆಯಾಗುವ ನಿರ್ಧಾರ ಮಾಡಿದ ನಂತರವಾದರೂ ಮನೆಗೆ ಹೆಂಡತಿ ಬರುವಳೆಂದು ಸಹ ಆಲೋಚನೆ ಮಾಡಿ ಶೌಚಾಲಯವನ್ನು ಕಟ್ಟಿಸುವ ಪ್ರಯತ್ನವನ್ನೂ ಸಹ ಕಾರ್ತಿಕೇಯನ್ ಮಾಡಿರಲಿಲ್ಲ.. ಇದರಿಂದ ಬಹಳ ಬೇಸರಗೊಂಡ ರಮ್ಯಾ ತನ್ನ ಗಂಡನಿಗೆ ಶೌಚಾಲಯ ಕಟ್ಟಿಸುವಂತೆ ಹೇಳಿ ಅಲ್ಲಿಯವರೆಗೂ ತವರು ಮನೆಯಲ್ಲಿ ಇರುವುದಾಗಿ ತಿಳಿಸಿ ಮರುದಿನವೇ ತವರು ಮನೆಗೆ ಬಂದಿದ್ದಳು..

ಆದರೆ ಒಂದು ತಿಂಗಳು ಕಳೆದರೂ ಸಹ ಕಾರ್ತಿಕೇಯನ್ ಮಾತ್ರ ಮನೆಯಲ್ಲಿ ಶೌಚಾಲಯ ಕಟ್ಟಿಸುವ ಪ್ರಯತ್ನವಿರಲಿ ಆಲೋಚನೆಯನ್ನೂ ಸಹ‌ ಮಾಡಿರಲಿಲ್ಲ.. ಇದರಿಂದ ತವರು ಮನೆಯಲ್ಲಿದ್ದ ರಮ್ಯಾ ಹಾಗೂ ಕಾರ್ತಿಕೇಯನ್ ನಡುವೆ ಅಸಮಾಧಾನ ಉಂಟಾಗಿ ವಾಗ್ವಾದ ನಡೆದಿತ್ತು.. ಕಾರ್ತಿಕೇಯನ್ ರಮ್ಯಾಳನ್ನು ಕೆಟ್ಟದಾಗಿ ಮಾತನಾಡಿದ್ದಾನೆ.. ಪ್ರೀತಿಸಿ ಮದುವೆಯಾದ ಗಂಡನೇ ತನ್ನ ಬಗ್ಗೆ ಈ ರೀತಿ ಮಾತನಾಡಿದ್ದನ್ನು ಕಂಡ ರಮ್ಯಾ ತೀವ್ರವಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು.. ಗಂಡನ ಆ ಮಾತುಗಳನ್ನು ಸಹಿಸಿಕೊಳ್ಳಲಾಗದೇ ರಮ್ಯಾ ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿಯೇ ಬಿಟ್ಟಳು..

ಹೌದು ತನ್ನ ಕೋಣೆಯಲ್ಲಿನ ಫ್ಯಾನ್ ಗೆ ಹಾಕಿಕೊಂಡು ಬಿಟ್ಟಳು.. ತಕ್ಷಣ ರಮ್ಯಾಳನ್ನು ಆಕೆಯ ತಾಯಿ ಮಂಜುಳ ಹಾಗೂ ಅಕ್ಕ ಪಕ್ಕದ ಮನೆಯವರು ರಕ್ಷಣೆ ಮಾಡಿ ಆಕೆಯನ್ನು ಕಡಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು.. ನಂತರ ಪುಚೆರಿಯ ಜಿಪ್ಮರ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.. ಆದರೆ ವಿಧಿಯ ನಿರ್ಣಯ ಬೇರೆಯೇ ಇತ್ತು.‌ ಚಿಕಿತ್ಸೆ ಫಲಕಾರಿಯಾಗದೇ ರಮ್ಯಾ ಕೊನೆಯುಸಿರೆಳೆದು ಬಿಟ್ಟಳು..

ನೂರಾರು ಕನಸು ಕಂಡು ಮದುವೆಯಾದಳು.. ಆದರೆ ಒಂದೇ ದಿನಕ್ಕೆ ತನ್ನ ದಾಂಪತ್ಯ ಜೀವನವೇ ಅಂತ್ಯವಾಗಿ ಹೋಯ್ತು.. ಹೆಣ್ಣಿನ ಮೂಲ ಅವಶ್ಯಕತೆಗಳು.. ಆಕೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ ಕೆಟ್ಟದಾಗಿ ಮಾತನಾಡಿ ಪ್ರೀತಿಸಿದವಳ ಜೀವವೇ ಹೋಗುವಂತೆ ಮಾಡಿದ ಕಾರ್ತಿಕೇಯನ್ ನಿಜಕ್ಕೂ ಗಂಡಸಿನ ಜಾತಿಗೆ ಕಳಂಕವೆನ್ನಬೇಕು.. ಸಧ್ಯ ಇದೀಗ ರಮ್ಯಾಳ ತಾಯಿ ಮಂಜುಳ ಪೊಲೀಸ್ ಠಾಣೆಗೆ ದೂರು‌ ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..