ಮದುವೆ ಸಮಾರಂಭಕ್ಕೆ ಬಂದ ರಮ್ಯಾಗೆ ಬೇಕಿತ್ತಾ ಇದೆಲ್ಲಾ..

ಕನ್ನಡದ ಎವರ್ ಗ್ರೀನ್ ನಟಿ ಎನಿಸಿಕೊಳ್ಳುವ.. ಸ್ಯಾಂಡಲ್ವುಡ್ ನ ಮೋಹಕ ತಾರೆ ಎಂದೂ ಕರೆಯುವ ನಟಿ ರಮ್ಯಾ ನಿನ್ನೆಯಷ್ಟೇ ಮದುವೆ ಸಮಾರಂಭ ಒಂದರಲ್ಲಿ‌ ಪಾಲ್ಗೊಂಡಿದ್ದು ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ.. ಅದರಲ್ಲೂ ಮದುವೆಗೆ ಬಂದ ನಟಿಗೆ ಈ ಗತಿಯಾಗಿದ್ದ ಕಂಡು ಇದೆಲ್ಲಾ ಬೇಕಿತ್ತಾ ಎನ್ನುತ್ತಿದ್ದಾರೆ ಜನರು.. ಹೌದು ನಿನ್ನೆಯಷ್ಟೇ ಕನ್ನಡ ಹಾಗೂ ತಮಿಳು ಕಿರುತೆರೆಯ ಖ್ಯಾತ ನಟಿ ಹಾಗೂ ನಿರೂಪಕಿ ಕಾವ್ಯಾ ಶಾ ಅವರ ಮದುವೆ ನೆರವೇರಿತ್ತು.. ಜೀ ಕನ್ನಡದ ಶೋಗಳ ನಿರ್ಮಾಪಕ ಹಾಗೂ ಸ್ಯಾಂಡಲ್ವುಡ್ ನ ನಿರ್ಮಾಪಕ ವರುಣ್ ಅವರ ಜೊತೆ ಮದುವೆ ನೆರವೇರಿದ್ದು ಈ ಮದುವೆಗೆ ಬಂದ ನಟಿ ರಮ್ಯಾ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ..

ಹೌದು ನಟಿ ಕಾವ್ಯಾ ಶಾ ಹಾಗೂ ನಿರ್ಮಾಪಕ ವರುಣ್ ಅವರ ಮದುವೆ ಈ ಹಿಂದೆಯೇ ನಿಶ್ವಯವಾಗಿ ಮದುವೆ ದಿನವೇ ಬೆಳಗಿನ ಜಾವ ವರುಣ್ ಅವರ ತಂದೆಯ ಅಗಲಿಕೆಯಿಂದಾಗಿ ಮದುವೆ ರದ್ದಾಗಿತ್ತು.. ಆ ಮದುವೆ ಮತ್ತೆ ನಿನ್ನೆ ನಿಶ್ಚಯಗೊಂಡು ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ನೆರವೇರಿತು.. ಇನ್ನು ಮದುವೆ ಸಮಾರಂಭಕ್ಕೆ ಚಿತ್ರರಂಗದ ಸಾಕಷ್ಟು ಮಂದಿ ಆಗಮಿಸಿದ್ದು ಕಾವ್ಯಾ ಹಾಗೂ ವರುಣ್ ಗೆ ಶುಭ ಕೋರಿದ್ದರು..

ಇನ್ನು ಇತ್ತ ಮದುವೆ ಮೋಹಕ ತಾರೆ ನಟಿ ರಮ್ಯಾ.. ಅನುಶ್ರೀ.. ಯುವ ರಾಜ್ ಕುಮಾರ್.. ನಿರ್ದೇಶಕ ಸಂತೋಷ್ ಆನಂದರಾಮ್ ಸೇರಿದಂತೆ ಸಾಕಷ್ಟು ಮಂದಿ ಆಗಮಿಸಿದ್ದರು.. ಇದೇ ಸಮಯದಲ್ಲಿ ಮಾದ್ಯಮದ ಜೊತೆ ಮಾತನಾಡಿದ ರಮ್ಯಾ ಅವರು ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ..

ಹೌದು ರಮ್ಯಾ ಸ್ಯಾಂಡಲ್ವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು ನಂಬರ್ ಒನ್ ನಟಿ ಎನಿಸಿಕೊಂಡಿದ್ದವರು.. ಆದರೆ ರಾಜಕೀಯದ ಎಂಟ್ರಿಯ ನಂತರ ತಮ್ಮ ಜೀವನವೇ ಬದಲಾಯಿತು.. ಅತ್ತ ಸಂಸದರೇನೋ ಆದರು.. ಆದರೆ ಇತ್ತ ತಮ್ಮ ಸಿನಿಮಾ ಜೀವನ ಮುಕ್ತಾಯವಾಗಿತ್ತು.. ಸಾಕಷ್ಟು ವರ್ಷಗಳ ಬ್ರೇಕ್ ನ ನಂತರ ಇದೀಗ ಮತ್ತೆ ಚಿತ್ರರಂಗಕ್ಕೆ ಬರುವ ಮನಸ್ಸಿದ್ದರೂ ಸಹ ಅಂತಹ ಒಳ್ಳೆಯ ಅವಕಾಶಗಳು ಇಲ್ಲ.. ಇನ್ನು ರಮ್ಯಾ ಅವರ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗೋದು ಹೊಸ ವಿಚಾರವೇನೂ ಅಲ್ಲ.. ಜನರು ಈಗಲೂ ಸಹ ರಮ್ಯಾ ರನ್ನು ಮೊದಲಿನಷ್ಟೇ ಇಷ್ಟ ಪಡುವುದು ಅವರ ವಿಚಾರಗಳ ಬಗ್ಗೆ ಆಸಕ್ತಿ ತೋರುವುದು ನಿಜಕ್ಕೂ ರಮ್ಯ ಇಂತಹ ಅಭಿಮಾನಿಗಳನ್ನು ಪಡೆಯಲು ಒಂದು ರೀತಿ ಅದೃಷ್ಟ ಮಾಡಿದ್ದರೆನ್ನಬಹುದು..

ಆದರೆ ರಮ್ಯಾ ಅವರು ನಿನ್ನೆ ಮದುವೆ ಮನೆಯಲ್ಲಿ ಮಾತನಾಡಿದ ರೀತಿಗೆ ಅದೇ ಅಭಿಮಾನಿಗಳು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.. ಹೌದು ರಮ್ಯಾ ಅವರನ್ನು ನಿನ್ನೆ ಮದುವೆ ಸಮಾರಂಭದಲ್ಲಿ ಮಾದ್ಯಮದವರು ಮಾತನಾಡಲು ಹೇಳಿದ ಸಮಯದಲ್ಲಿ ಮಾತು ಶುರು ಮಾಡಿದ ರಮ್ಯಾ ಅದ್ಯಾಕೋ ಗಂಟಲಲ್ಲಿ ಏನೋ ಸಿಕ್ಕಿಕೊಂಡವರ ಹಾಗೆ ಕನ್ನಡ ಮಾತನಾಡಿದ್ದು ನಿಜಕ್ಕೂ ಇಂತಹ ನಟಿಯರನ್ನ ನಾವು ಮೆಚ್ಚಿದ್ದು ಎನ್ನುವಂತಿತ್ತು..

ಹೌದು ಮದುವೆ ಬಗ್ಗೆ ಏನ್ ಹೇಳಲಿ.. ವರುಣ್ ಹಾಗೂ ಕಾವ್ಯಾಗೆ ಏನಾಂತಾರೆ.. ಅದೇ ಶುಭಾಶಯಗಳು.. ಎಂದು ಕನ್ನಡ ಮಾತನಾಡಲು ಹರಸಾಹಸ ಪಟ್ಟಿದ್ದ ಕಂಡು.. ನಿಜಕ್ಕೂ ಇರಬೇಕು ಆದ್ರೆ ಇಷ್ಟೊಂದಾ.. ಎನ್ನುವಂತಾಗಿತ್ತು.. ಇನ್ನು ಆ ವೀಡಿಯೋ ಬೈಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡ ಜನರು ರಮ್ಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.. ಹೌದು ಹುಟ್ಟಿದ್ದು ಕರ್ನಾಟಕದಲ್ಲಿ ಬೆಳೆದಿದ್ದು ಕರ್ನಾಟಕದಲ್ಲಿ ಎಲ್ಲಾ ಇಲ್ಲೇ.. ಆದರೆ ಕನ್ನಡ ಮಾತ್ರ ನೆಟ್ಟಗೆ ಮಾತನಾಡೋಕೆ ಬರೋದಿಲ್ವಾ ಎಂದು ತರಾಟೆಗೆ ತೆಗೆದುಕೊಂಡರು.. ಅಷ್ಟೇ ಅಲ್ಲದೇ.. ಇಂತವರನ್ನು ಬೆಳೆಸೋ ಬದಕು ಅದಿತಿ ಪ್ರಬುದೇವ ಅವರಂತ ಅಪ್ಪಟ ಕನ್ನಡತಿಯನ್ನು ಬೆಳೆಸಿದರೆ ಎಷ್ಟೋ ವಾಸಿ ಎಂದಿದ್ದೂ ಉಂಟು..

ಒಟ್ಟಿನಲ್ಲಿ ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದು ಇಲ್ಲಿಯೇ ಹೆಸರು ಮಾಡಿ.. ಸಿನಿಮಾದಲ್ಲಿ ಅವಕಾಶ ಪಡೆದು.. ದೊಡ್ಡ ಸ್ಟಾರ್ ನಟಿ ಎನಿಸಿಕೊಂಡು ಕೊನೆಗೆ ಇದೇ ನೆಲದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಂಸದೆಯೂ ಆಗಿ ಈಗ ಕನ್ನಡವನ್ನು ನೆಟ್ಟಗೆ ಮಾತನಾಡೋದಿಲ್ಲ ಅಂದ್ರೆ ನಾಚಿಕೆಗೇಡು ಎನ್ನುತ್ತಿದ್ದಾರೆ ಜನ.. ಒಟ್ಟಿನಲ್ಲಿ ನೆಟ್ಟಗೆ ಕನ್ನಡ ಮಾತನಾಡಿದ್ರೆ ಅವರ ಮೇಲಿನ ಅಭಿಮಾನ ಪ್ರೀತಿ ಎಲ್ಲವೂ ಸಹ ಮತ್ತಷ್ಟು ಜಾಸ್ತಿ ಆಗುತಿತ್ತು.. ಆದರೆ ರಮ್ಯಾಗೆ ಇದೆಲ್ಲಾ ಬೇಕಿತ್ತಾ ಎನ್ನುತ್ತಿದ್ದಾರೆ ನೆಟ್ಟಿಗರು..