ಮೂವತ್ತೊಂಭತ್ತು ವರ್ಷಕ್ಕೆ ಸಿಹಿಸುದ್ದಿ ಕೊಟ್ಟ ಮೋಹಕ ತಾರೆ ರಮ್ಯ..

ಮೋಹಕ ತಾರೆ ರಮ್ಯಾ ಫಾರ್‌ ಎವರ್‌ ಸ್ಯಾಂಡಲ್‌ವುಡ್‌ ಕ್ವೀನ್‌ ಎಂದರೆ ತಪ್ಪಾಗಲಾರದು.. ರಮ್ಯಾ ಸಿನಿಮಾದಿಂದ ದೂರ ಉಳಿದಿದ್ದರೂ ಅವರಿಗೆ ಅಭಿಮಾನಿಗಳು ಮಾತ್ರ ಕಡಿಮೆಯಾಗಿಲ್ಲ. ರಮ್ಯಾ ಸಿನಿಮಾಗಳಿಗೆ ಕಮ್‌ಬ್ಯಾಕ್‌ ಆಗಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ರಮ್ಯಾ ಸದ್ಯಕ್ಕೆ ಸಿನಿಮಾ ಅಷ್ಟೇ ಅಲ್ಲದೆ ರಾಜಕೀಯದಿಂದಲೂ ದೂರ ಇದ್ದಾರೆ. ಆದರೆ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಆಕ್ಟೀವ್‌ ಆಗಿದ್ದಾರೆ. ಪ್ರತೀ ವಿಚಾರಗಳನ್ನು ಇವರು ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಹಂಚಿಕೊಳ್ಳುತ್ತಿರುವುದು ವಿಶೇಷವಾಗಿದೆ..

ಸಧ್ಯ ಮೊನ್ನೆಮೊನ್ನೆಯಷ್ಟೇ ತಮ್ಮ ಮೂವತ್ತೊಂಭತ್ತನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ನಟಿ ರಮ್ಯಾ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.. ಹೌದು ಸಧ್ಯ ರಮ್ಯಾ ಕೊರೊನಾ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ರಮ್ಯಾ ಕೊರೊನಾ ಬಗ್ಗೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಹಾಗು ಮುನ್ನೆಚ್ಚರಿಕೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು… ಅದರ ಜೊತೆಯೇ ಇದೀಗ ಅಭಿಮಾನೊಗಳಿಗೆ ಮತ್ತೊಂದು ಸಿಹಿ ವಿಚಾರವನ್ನು ಹಂಚಿಕೊಂಡಿದ್ದಾರೆ..

ಹೌದು ನಟಿ ರಮ್ಯಾ ಬೆಂಗಳೂರಿಗೆ ಮರಳಿದ್ದಾರೆ.. ಇಷ್ಟು ದಿನ ಹೊರ ದೇಶಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಅಲ್ಲಿಯೇ ನೆಲೆಸಿದ್ದ ರಮ್ಯಾ ಅವರು ಇದೀಗ ತವರಿಗೆ ಮರಳಿದ್ದಾರೆ.. ಸಧ್ಯ ಇವರು ಬೆಂಗಳೂರಿಗೆ ಬಂದಿದ್ದು ಯಾಕೆ ಅನ್ನೋದು ಎಲ್ಲರಲ್ಲೂ ತುಂಬಾನೇ ಕುತೂಹಲ ಮೂಡಿಸಿದೆ. ಆದರೆ ಇನ್ನು ಮುಂದೆ ರಮ್ಯಾ ಅವರು ಬೆಂಗಳೂರಿನಲ್ಲಿಯೇ ಉಳಿಯಲಿದ್ದು ಮುಂದೆ ಸಿನಿಮಾಗೂ ಮರಳಬಹುದಾಗಿದೆ.. ಹೌದು ವಿಮಾನದ ಮೂಲಕ ರಮ್ಯಾ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.. ರಮ್ಯಾ ತಾವು ಬೆಂಗಳೂರಿಗೆ ಬಂದಿಳಿದಾಗ ನಡೆದ ಘಟನೆಯ ಬಗ್ಗೆಯೂ ಸಾಮಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..

ಕೊರೊನಾ ರೂಪಾಂತರಿ ವೈರಸ್‌ ಎಲ್ಲೆಡೆ ದಿನೇ ದಿನೇ ಹಬ್ಬುತ್ತಿದೆ. ಹೀಗಾಗಿ ಹೊರ ದೇಶಗಳಿಂದ ಬಂದ ಪ್ರಯಾಣಿಕರಿಗೆ ಏರ್‌ಪೋರ್ಟ್‌ನಲ್ಲಿ ಕೋವಿಡ್‌ ಪರೀಕ್ಷೆ ಕಡ್ಡಾಯವಾಗಿ ಮಾಡುತ್ತಿದ್ದಾರೆ. ರಮ್ಯಾ ಕೂಡ ವಿದೇಶ ಪ್ರಯಾಣ ಮಾಡಿಕೊಂಡು ಡಿಸೆಂಬರ್‌ 3ರಂದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಎಲ್ಲರಂತೆ ಇವರಿಗೂ ಕೋವಿಡ್‌ ಟೆಸ್ಟ್‌ ಮಾಡಿದ್ದಾರೆ. ಈ ಕುರಿತಾಗಿ ರಮ್ಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ರಮ್ಯಾ ಅಲ್ಲಿ ತಮಗೆ ನಡೆಸಿದ ಕೋವಿಡ್‌ ಟೆಸ್ಟ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. “ಏರ್‌ಪೋರ್ಟ್‌ನಲ್ಲಿ ನಡೆದ ಕೋವಿಡ್‌ ಪರೀಕ್ಷೆ ಸುಲಭವಾಗಿತ್ತು. ಯಾವುದೇ ಗೊಂದಲ ಇರಲಿಲ್ಲ. ವೈದ್ಯರು, ನರ್ಸ್‌ಗಳು, ಅಧಿಕಾರಿಗಳು ಮತ್ತು ಅಲ್ಲಿನ ಉದ್ಯೋಗಿಗಳು ಕೋವಿಡ್‌ ಪರೀಕ್ಷೆಗಾಗಿ ಉತ್ತಮ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಅಲ್ಲಿ ಪ್ರತಿಯೊಬ್ಬರ ಕೆಲಸವೂ ಪ್ರಶಂಸೆಗೆ ಕಾರಣ ಆಗಿದೆ. ಧನ್ಯವಾದಗಳು.. ಎಂದು ರಮ್ಯಾ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ ಕೆಲವು ಜನ ಏರ್‌ಪೋರ್ಟ್‌ನ ಈ ವ್ಯವಸ್ಥೆಯ ಬಗ್ಗೆ ಅದೇ ಸೋಷಿಯಲ್‌ ಮೀಡಿಯಾದಲ್ಲಿ ದೂರಿದ್ದರು. ನಟಿ ರಮ್ಯಾ ಮಾತ್ರ ಮೆಚ್ಚುಗೆ ವ್ಯಕ್ತಪಡಿದ್ದಾರೆ.

ಇನ್ನು ರಮ್ಯಾ ಧಿಡೀರನೇ ಬೆಂಗಳೂರಿಗೆ ಬರಲು ಕಾರಣ ಏನು ಅನ್ನೋದು ಎಲ್ಲರಲ್ಲೂ ತುಂಬಾ ಕುತೂಹಲ ಮೂಡಿಸಿದೆ. ಸಿನಿಮಾ, ರಾಜಕೀಯದಿಂದ ದೂರವಿದ್ದ ರಮ್ಯಾ ಹೊರ ದೇಶವೊಂದರಲ್ಲಿ ಬೀಡುಬಿಟ್ಟಿದ್ದರು. ಈಗ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಮಾಡಿರುವ ರಮ್ಯಾ ಚಿತ್ರರಂಗಕ್ಕೆ ಮರಳುವ ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ.. ಇಷ್ಟು ದಿನ ರಮ್ಯಾ ಎಲ್ಲಿದ್ದರು ಏನು ಮಾಡುತ್ತಿದ್ದರು ಎನ್ನುವ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲವಿದ್ದು ಸಧ್ಯ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕೆಂಬ ಇಂಗಿತ ಅವರಿಗಿದೆ. ಆದರೆ ಅಪ್ಪು ಅವರ ಜೊತೆ ಕಮ್‌ಬ್ಯಾಕ್‌ ಮಾಡುವ ಆಸೆ ಅವರಿಗಿತ್ತು ಎಂದು ಹೇಳಿಕೊಂಡಿದ್ದ ರಮ್ಯಾ ಸದ್ಯ ಬೆಂಗಳೂರಿಗೆ ಬಂದಿದ್ದು ಮುಂದಿನ ನಡೆ ಏನು ಎಂಬುದು ಸಧ್ಯದಲ್ಲಿಯೇ ತಿಳಿಯಲಿದೆ..