ಲಕ್ಷ ಲಕ್ಷ ನೋಡಿದ್ದ ರಮೇಶ್.. ಒಂದು ದಿನ ಬ್ಲೇಡ್ ತೆಗೆದುಕೊಳ್ಳಲು ಹಣವಿಲ್ಲದ ಪರಿಸ್ಥಿತಿಗೆ ಹೋಗಿದ್ದೇಕೆ ಗೊತ್ತಾ?

ಸಿನಿಮಾ ನಟರು ಎಂದ ಕೂಡಲೇ ಸಿಕ್ಕಾಪಟ್ಟೆ ಶ್ರೀಮಂತರು.. ದೊಡ್ಡ ದೊಡ್ಡ ಕಾರ್ ಗಳು.. ಲಕ್ಸುರಿ ಲೈಫ್.‌ ಹೀಗೆ ನಮ್ಮಗಳ ಮನಸ್ಸಿನಲ್ಲಿ ನಾನಾ ಕಲ್ಪನೆಗಳು ಇವೆ.. ಇವು ಎಲ್ಲರ ವಿಚಾರದಲ್ಲಿಯೂ ಸತ್ಯವಲ್ಲವೆಂಬುದು ಅಕ್ಷರಶಃ ಸತ್ಯದ ಮಾತು..

ಹೌದು ಅವಕಾಶ ಇದ್ದರಷ್ಟೇ ಆತನ ಜೀವನ ಒಂದೇ ರೀತಿಯಲ್ಲಿರುತ್ತದೆ.. ಒಮ್ಮೆ ಅವಕಾಶ ತಪ್ಪಿ ಹೋದರೆ ಆತ ಸೀದಾ ಪಾತಾಳಕ್ಕೆ ಕುಸಿಯುತ್ತಾನೆ.. ಈ ರೀತಿ ಅದೆಷ್ಟೋ ದೊಡ್ಡ ಸ್ಟಾರ್ ಗಳಿಂದ ಹಿಡಿದು ಸಣ್ಣ ಕಲಾವಿದರ ಅನುಭವಕ್ಕೂ ಬಂದಿದೆ..

ಆದರೆ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದ ರಮೇಶ್ ಅರವಿಂದ್ ಅವರೂ ಸಹ ಕಷ್ಟದ ಪರಿಸ್ಥಿತಿಯನ್ನು ಅದರಲ್ಲೂ ಒಂದು ಬ್ಲೇಡ್ ಕೊಳ್ಳಲು ಸಹ ಹಣವಿಲ್ಲದ ಪರಿಸ್ಥಿತಿಗೆ ಬಂದಿದ್ದರು ಎಂದರೆ ನಿಜಕ್ಕೂ ಅದರಂತ ಕೆಟ್ಟ ಪರಿಸ್ತಿತಿ‌ ಮತ್ತೊಂದಿಲ್ಲ..

ಹೌದು ರಮೇಶ್ ಅರವಿಂದ್ ಅವರೇ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು.. ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದರು.. ಆದರೆ ಒಮ್ಮೆ ಅವಕಾಶಗಳು ಸಂಪೂರ್ಣವಾಗಿ ನಿಂತು ಹೋಯಿತು.. ಆ ಸಮಯದಲ್ಲಿ ಬ್ಯಾಂಕ್‌ ಬ್ಯಾಲೆನ್ಸ್ ಕಡಿಮೆ ಆಗುತ್ತಾ ಆಗುತ್ತಾ ಕೊನೆಗೆ ಶೇವ್ ಮಾಡಿಕೊಳ್ಳಲು ಒಂದು ಬ್ಲೇಡ್ ತೆಗೆದುಕೊಳ್ಳಲು ಸಹ ಹಣವಿಲ್ಲದ ರೀತಿಯಲ್ಲಿ ಆಗಿ ಹೋಯಿತು..

ಕನಿಷ್ಠ ಒಂದು ಬ್ಲೇಡ್ ತೆಗೆದುಕೊಳ್ಳಲು ಆಗ್ತಾ ಇಲ್ಲ.. ಇನ್ನು ನಾನು ಸಂಸಾರವನ್ನ ಹೇಗ್ ಸಾಕ್ತೀನಿ? ನಾನು ಇಂಜಿನಿಯರಿಂಗ್ ಓದಿದ್ದೀನಿ.. ಒಂದ್ ಕೆಲಸ ತೆಗೆದುಕೊಂಡು ನನ್ನ ಸಂಸಾರ ಸಾಕೋ ಯೋಗ್ಯತೆಯೂ ಇಲ್ವಾ ನನಗೆ ಅನ್ನಿಸೋಕೆ ಶುರು ಆಯ್ತು.. ಏನಾದ್ರೂ ಬ್ಯುಸಿನೆಸ್ ಮಾಡೋಣ ಅಂದ್ರೆ ಬಂಡವಾಳ ಇಲ್ಲ.. ಹೀಗೆ ಸಾಕಷ್ಟು ಕಷ್ಟಗಳನ್ನ ಅನುಭವಿಸಿದೆ.. ಆಗ ನನಗಿನ್ನು 28- 29 ವರ್ಷವಷ್ಟೇ.. ಆನಂತರ ಮತ್ತೆ ಸಿನಿಮಾದಲ್ಲಿ ಅವಕಾಶಗಳು ಬಂದವು.. ನಂತರ ಮತ್ತೆ ಜೀವನ ಒಂದು ಹಂತಕ್ಕೆ ಬಂತು ಎಂದು ತಮ್ಮ ಕಷ್ಟದ ದಿನಗಳನ್ನು‌ ನೆನೆದರು..

ನಿಜಕ್ಕೂ ಬದುಕು ಎಲ್ಲರಿಗೂ ಪಾಠವನ್ನು ಕಲಿಸುತ್ತದೆ.. ಆ ಪಾಠಗಳನ್ನು ಕಲಿತು ಮುಂದೆ ಸಾಗುತಲಿರಬೇಕಷ್ಟೇ..