ರಾಮಾಚಾರಿ ಧಾರಾವಾಹಿಯ ಹೀರೋ ನಿಜಕ್ಕೂ ಯಾರು ಗೊತ್ತಾ..

ಇತ್ತೀಚಿನ ವರ್ಷಗಳಲ್ಲಿ ವೀಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಮೇಲುಗೈ ಸಾಧಿಸಿರುವುದು ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು. ವಾರದ ಐದು ದಿನಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಕಥೆಗಳಿರುವ ಸದಭಿರುಚಿಯ ಧಾರಾವಾಹಿಗಳು ಹಾಗೂ ವಾರಾಂತ್ಯದಲ್ಲಿ ಮೈ ನವಿರೇಳಿಸುವ ರಿಯಾಲಿಟಿ ಶೋಗಳು, ಹೀಗೆ ಪ್ರತಿದಿನ ವೀಕ್ಷಕರು ಟಿವಿ ಮುಂದೆ ಕುಳಿತುಕೊಳ್ಳುವ ಹಾಗೆ ಮಾಡಲು ಸಾಕಷ್ಟು ಕಾರ್ಯಕ್ರಮಗಳಿವೆ. ಡ್ಯಾನ್ಸ್ ಶೋಗಳು, ಹಾಡಿನ ಕಾರ್ಯಕ್ರಮಗಳು, ಗೇಮ್ ಶೋಗಳು ಹೀಗೆ ಒಂದಾ ಎರಡಾ ವಿಭಿನ್ನವಾದ ಕಾನ್ಸೆಪ್ಟ್ ಗಳಿರುವ ಹಲವು ಶೋಗಳು. ನಮ್ಮ ಕುಟುಂಬಕ್ಕೆ ಹತ್ತಿರವಾಗಿರುವ ಅನೇಕ ಧಾರಾವಾಹಿಗಳು ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ಟಿವಿಯಲ್ಲಿ ಪ್ರಸಾರವಾಗುತ್ತದೆ. ಕನ್ನಡದಲ್ಲಿ ಕಲರ್ಸ್ ಕನ್ನಡ ಮತ್ತು ಜೀಕನ್ನಡ ಒಳ್ಳೆಯ ಧಾರಾವಾಹಿಗಳನ್ನು ವೀಕ್ಷಕರಿಗೆ ನೀಡುವಲ್ಲಿ ಮೇಲುಗೈ ಸಾಧಿಸದೆ ಎಂದೇ ಹೇಳಬಹುದು.

ಕೆಲ ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿ ಮನರಂಜನೆ ನೀಡುವಲ್ಲಿ ಟಾಪ್ ಸ್ಥಾನದಲ್ಲಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಜೀಕನ್ನಡ ವಾಹಿನಿ ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಮೊದಲ ಸ್ಥಾನದಲ್ಲಿದೆ. ಜೀಕನ್ನಡದಲ್ಲಿ ಒಳ್ಳೆಯ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಲಿ ಮೂಡಿಬರುತ್ತಿವೆ. ಮತ್ತೊಂದು ಕಲರ್ಸ್ ಕನ್ನಡ ವಾಹಿನಿ ಕೂಡ ಮತ್ತೊಮ್ಮೆ ನಂಬರ್ ಒನ್ ಸ್ಥಾನಕ್ಕೆ ಬರಲು ಪ್ರಯತ್ನ ಮಾಡುತ್ತಿದೆ. ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಧಾರಾವಾಹಿ ದೊಡ್ಡ ಸೆನ್ಸೇಷನ್ ಸೃಷ್ಟಿಸಿದೆ, ಈ ಧಾರಾವಾಹಿಯ ಕ್ರೇಜ್ ಸೋಷಿಯಲ್ ಮೀಡಿಯಾದಲ್ಲಿ ಮತ್ತು ರಾಜ್ಯದ ಜನರಲ್ಲಿ ಎಷ್ಟರ ಮಟ್ಟಿಗೆ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕನ್ನಡತಿ ಧಾರಾವಾಹಿಯಲ್ಲಿನ ಸ್ವಚ್ಛ ಕನ್ನಡ ಭಾಷೆಯ ಸಂಭಾಷಣೆ ಕೇಳಲು ಅದೆಷ್ಟೋ ಜನ ಸಂಜೆ 7:30ಕ್ಕೆ ಸರಿಯಾಗಿ ಟಿವಿ ಪರದೆಯ ಮುಂದೆ ಬಂದು ಕೂರುತ್ತಾರೆ. ಇದೊಂದೇ ಅಲ್ಲದೆ, ಗಿಣಿರಾಮ, ನನ್ನರಸಿ ರಾಧೆ ಧಾರಾವಾಹಿಗಳು ಕೂಡ ವೀಕ್ಷಕರ ಮನಗೆದ್ದಿವೆ, ವೀಕೆಂಡ್ ನಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮೂಡಿ ಬರುತ್ತಿತ್ತು, ನಂತರ ರಾಜಾ ರಾಣಿ, ಈಗ ನನ್ನಮ್ಮ ಸೂಪರ್ ಸ್ಟಾರ್ ಮತ್ತು ಡ್ಯಾನ್ಸಿಂಗ್ ಚಾಂಪಿಯನ್ಸ್, ಹೀಗೆ ಒಳ್ಳೆಯ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಏರುವ ಪ್ರಯತ್ನ ಮಾಡುತ್ತಿದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ, ಮುಂದಿನ ದಿನಗಳಲ್ಲಿ ನಂಬರ್1 ಸ್ಥಾನಕ್ಕೆ ಏರಿದರೆ ಅಚ್ಚರಿ ಪಡಬೇಕಾಗಿಲ್ಲ.

ಹೊಸ ಹೊಸ ಕಾರ್ಯಕ್ರಮಗಳನ್ನು ಧಾರಾವಾಹಿಗಳನ್ನು ಕಲರ್ಸ್ ಕನ್ನಡ ವಾಹಿನಿ ಹೊರತರುತ್ತಿದೆ. ಈ ವಾರವಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಶುರುವಾಗಿದೆ, ಅದುವೇ ರಾಮಾಚಾರಿ. ಆರಂಭವಾಗುವ ಮೊದಲು ಈ ಧಾರಾವಾಹಿ ಟೈಟಲ್ ಇಂದ ಸ್ವಲ್ಪ ಸುದ್ದಿಯಾಗಿತ್ತು, ಹಳೆಯ ಕ್ಲಾಸಿಕ್ ಹೆಸರು ಮತ್ತು ಟೈಟಲ್ ಅನ್ನು ಧಾರಾವಾಹಿಗೆ ಇಟ್ಟಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಧಾರಾವಾಹಿ ಶುರುವಾದ ನಂತರ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ. ಕೌಟುಂಬಿಕ ಕಥೆ ಇರುವ ಈ ಧಾರಾವಾಹಿ ಹಲವು ಕಾರಣಗಳಿಂದ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ.

ಈ ಧಾರಾವಾಹಿಯಲ್ಲಿ ಹೊಸ ಯುವನಟ ರಾಮಾಚಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅರುಂಧತಿ ಸೀರಿಯಲ್ ನಟಿ, ಹಿರಿಯನಟ ಗುರುದತ್, ನಟಿ ಭಾವನಾ, ನಟಿ ಸಿರಿ, ನಟಿ ಅಂಜಲಿ, ಶಂಕರ್ ಅಶ್ವತ್ಥ್ ಹೀಗೆ ಒಳ್ಳೆಯ ಕಲಾವಿದರ ದಂಡು ಈ ಸೀರಿಯಲ್ ನಲ್ಲಿದೆ. ಈ ಧಾರಾವಾಹಿ ಶುರುವಾದ ನಾಯಕ ರಾಮಾಚಾರಿಯ ಪಾತ್ರ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ, ರಾಮಾಚಾರಿ ಮಾತನಾಡುವ ಅರ್ಥಗರ್ಭಿತವಾದ ಕನ್ನಡ ಸಂಭಾಷಣೆ, ಯಾವಾಗಲೂ ಪಾಸಿಟಿವ್ ಆಗಿ ಯೋಚನೆ ಮಾಡುವ ರೀತಿ, ಹಿರಿಯರಿಗೆ ವಿಧೇಯವಾಗಿ ಸದಾ ನಗುಮೊಗದಿಂದ ಕಾಣಿಸಿಕೊಳ್ಳುವ ರಾಮಾಚಾರಿ, ಮೂರೇ ಎಪಿಸೋಡ್ ಗಳಲ್ಲಿ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ. ಈ ಹುಡುಗನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಶುರುವಾಗಿದೆ. ರಾಮಾಚಾರಿ ಪಾತ್ರದಲ್ಲಿ ನಟಿಸಿರುವ ಕಲಾವಿದ ನಿಜಕ್ಕೂ ಯಾರು ಗೊತ್ತಾ?

ರಾಮಾಚಾರಿ ಪಾತ್ರದಲ್ಲಿ ನಟಿಸಿರುವ ಹೊಸ ಹುಡುಗನ ಹೆಸರು ರಿತ್ವಿಕ್ ಕೃಪಾಕರ್. ಇವರು ಮೂಲತಃ ಮೈಸೂರಿನವರು, ಯುವರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಮಾಡಿದ್ದಾರೆ. ನಟನೆ ಮೇಲಿನ ಆಸಕ್ತಿಯಿಂದ ಮೈಸೂರಿನಲ್ಲಿರುವ ನಟ ಮಂಡ್ಯ ರಮೇಶ್ ಅವರ ನಟನಾರಂಗಶಾಲೆ ಸೇರಿಕೊಂಡರು, ಅಲ್ಲಿಂದ ನಟನೆಯ ತರಬೇತಿ ಪಡೆದು, ಹಲವು ನಾಟಕಗಳಲ್ಲಿ ಅಭಿನಯಿಸಿದರು ರಿತ್ವಿಕ್. ಕೆಲವು ಆಲ್ಬಮ್ ಸಾಂಗ್ ಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಹುಡುಗ ರಾಮಾಚಾರಿ ಸೀರಿಯಲ್ ಗೆ ಆಯ್ಕೆಯಾಗಿದ್ದರ ಹಿಂದೆ ಒಂದು ಕುತೂಹಲವಾದ ಕಥೆಯಿದೆ.

ರಿತ್ವಿಕ್ ಆಡಿಷನ್ ಕೊಡಲು ಹೋಗಿದ್ದು ಬೇರೆ ಒಂದು ಸೀರಿಯಲ್ ನ ಸಣ್ಣ ಪಾತ್ರಕ್ಕಾಗಿ, ಆದರೆ ಇವರ ನಟನೆ ಮೆಚ್ಚಿದ ನಿರ್ದೇಶಕ ಕೆ.ಎಸ್.ರಾಮ್ ಜಿ ಅವರು ಈ ಪಾತ್ರ ಬೇಡ, ಬೇರೆ ಒಂದು ದೊಡ್ಡ ಸೀರಿಯಲ್ ನಲ್ಲಿ ಪ್ರಮುಖ ಪಾತ್ರ ನಿನಗೆ ಕೊಡ್ತೀನಿ ಅದರಲ್ಲಿ ನಟಿಸು ಎಂದರಂತೆ. ಅದು ರಾಮಾಚಾರಿ ಸೀರಿಯಲ್ ನ ನಾಯಕನ ಪಾತ್ರವಾಗಿತ್ತು. ಇದೆಲ್ಲವೂ ನಡೆದಿದ್ದು 8 ತಿಂಗಳ ಹಿಂದೆ, ಆಗ ರಿತ್ವಿಕ್ 125 ಕೆಜಿ ತೂಕವಿದ್ದರು, 6 ತಿಂಗಳಲ್ಲಿ ತೂಕ ಇಳಿಸಬೇಕು ಎನ್ನುವ ಕಂಡೀಷನ್ ರಿತ್ವಿಕ್ ಅವರಿಗೆ ಬಂತು. ಕೆ.ಎಸ್.ರಾಮ್ ಜಿ ಅವರ ಸಪೋರ್ಟ್ ಕೂಡ ಇತ್ತು. ಪ್ರತಿದಿನ 2 ಬಾರಿ ವರ್ಕೌಟ್, ಯೋಗ, ಮಾರ್ಶಿಯಲ್ ಆರ್ಟ್ಸ್ , ಸ್ಟ್ರಿಕ್ಟ್ ಡಯೆಟ್ ಹೀಗೆ ಕಠಿಣ ಪರಿಶ್ರಮದಿಂದ ರಿತ್ವಿಕ್ ಕೃಪಾಕರ್ ಅವರು 125 ಕೆಜಿ ಇಂದ ಇಂದು 85 ಕೆಜಿಗೆ ತೂಕ ಇಳಿಸಿದ್ದಾರೆ. ರಾಮಾಚಾರಿಯಾಗಿ ವೀಕ್ಷಕರ ಎದುರು ಬಂದಿದ್ದಾರೆ. ತಮಗೆ ಸಪೋರ್ಟ್ ಮಾಡಿರುವ ಎಲ್ಲರಿಗೂ ಧನ್ಯವಾದ ತಿಳಿಸಿ, ಸೀರಿಯಲ್ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ ರಿತ್ವಿಕ್. ಮೊದಲ ಸಂಚಿಕೆಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿರುವ ರಾಮಾಚಾರಿ ಸೀರಿಯಲ್ ರೇಟಿಂಗ್ ಮುಂದಿನ ವಾರ ಹೊರಬರಲಿದೆ.