ಟಿ.ಆರ್.ಪಿ.ಯಲ್ಲಿ ಟಾಪ್ 5ನೇ ಸ್ಥಾನದಿಂದ ಹೊರಬಿದ್ದ ರಾಮಾಚಾರಿ.. ಈ ವಾರ ನಂಬರ್‌ ಒನ್‌ ಯಾವುದು ಗೊತ್ತಾ..

ಕಿರುತೆರೆಯ ಧಾರಾವಾಹಿಗಳು ಒಂದು ರೀತಿ ಮನೆಯಲ್ಲಿರುವ ಮಹಿಳೆಯರ ದೈನಂದಿನ ಬದುಕಿನಲ್ಲಿ ದಿನನಿತ್ಯದ ಚಟುವಟಿಕೆಗಳ ರೀತಿ ಆಗಿ ಹೋಗಿದೆ ಅಂದರೆ ತಪ್ಪಾಗುವುದಿಲ್ಲ. ಯಾಕಂದ್ರೆ ಧಾರಾವಾಹಿಗಳು ಅಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ. ಕನ್ನಡದ ಪ್ರಮುಖ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಒಳ್ಳೆಯ ಕಥೆಯೊಂದಿಗೆ ವೀಕ್ಷಕರಿಗೆ ಇಷ್ಟವಾಗುತ್ತದೆ. ಪ್ರತಿದಿನ ಸಂಜೆ ಎಲ್ಲಾ ಮನೆಗಳಲ್ಲೂ ಧಾರಾವಾಹಿಗಳನ್ನು ನೋಡುತ್ತಾರೆ. ಕೆಲವೊಂದು ಧಾರಾವಾಹಿಗಳನ್ನು ಹೆಂಗಸರು ಮಾತ್ರವಲ್ಲದೆ, ಇಡೀ ಕುಟುಂಬ ಜೊತೆಯಾಗಿ ಕುಳಿತು ನೋಡುತ್ತಾರೆ. ಆದರೆ ಪ್ರಸಾರವಾಗುವ ಎಲ್ಲಾ ಧಾರಾವಾಹಿಗಳು ಜನರಿಗೆ ಇಷ್ಟವಾಗುವುದಿಲ್ಲ. ಒಂದು ಧಾರಾವಾಹಿ ಎಷ್ಟರ ಮಟ್ಟಿಗೆ ಜನರನ್ನು ತಲುಪಿದೆ ಎಂದು ತಿಳಿಯುವುದು ಟಿ.ಆರ್.ಪಿ ರೇಟಿಂಗ್ ಮೂಲಕ. ಪ್ರತಿವಾರ ರೇಟಿಂಗ್ ಬದಲಾಗುತ್ತಾ ಇರುತ್ತದೆ. ಈ ವಾರ ಟಿ.ಆರ್.ಪಿ ಲಿಸ್ಟ್ ನಲ್ಲಿರುವ ಟಾಪ್ 5 ಧಾರಾವಾಹಿಗಳು ಯಾವುವು ಗೊತ್ತಾ..

ಮೊದಲನೆಯ ಸ್ಥಾನದಲ್ಲಿದೆ ಪುಟ್ಟಕ್ಕನ ಮಕ್ಕಳು..ಹಿರಿಯನಟಿ ಉಮಾಶ್ರೀ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಒಳ್ಳೆಯ ಕಥೆಯ ಜೊತೆಗೆ, ಪ್ರತಿ ಎಪಿಸೋಡ್ ನಲ್ಲಿ ರೋಚಕ ಟ್ವಿಸ್ಟ್ ಗಳನ್ನು ನೀಡುತ್ತಾ, ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಅದರಲ್ಲೂ ಈ ವಾರ ಮುಖ್ಯವಾದ ಮೂರು ಟ್ವಿಸ್ಟ್ ಗಳ ಜೊತೆ ನಿಂತಿದೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಸೋಮವಾರದ ಸಂಚಿಕೆಯಲ್ಲಿ ಏನಾಗಬಹುದು ಎಂದು ಕಿರುತೆರೆ ವೀಕ್ಷಕರು ಕಾತುರರಾಗಿದ್ದಾರೆ. ಆರಂಭದಿಂದಲೇ ಟಾಪ್ 1 ದಿಕ್ಕಿನತ್ತ ಸಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈ ವಾರಾವು ಮೊದಲನೇ ಸ್ಥಾನದಲ್ಲಿದೆ.

ಎರಡನೆಯ ಸ್ಥಾನದಲ್ಲಿದೆ ಗಟ್ಟಿಮೇಳ ಧಾರಾವಾಹಿ.. ವೇದಾಂತ್ ಮತ್ತು ಅಮೂಲ್ಯ ಕಥೆ ಜನರಿಗೆ ಪ್ರತಿ ಎಪಿಸೋಡ್ ನಲ್ಲೂ ಮನರಂಜನೆ ನೀಡುತ್ತದೆ. ಇನ್ನು ವೇದಾಂತ್ ನಿಜವಾದ ತಾಯಿಯ ಪಾತ್ರ ಎಂಟ್ರಿಯಾಗಿ ಆ ಟ್ರ್ಯಾಕ್ ಸಹ ಚೆನ್ನಾಗಿ ಸಾಗುತ್ತಿದೆ. ಇತ್ತ ಸುಹಾಸಿನಿ ವೇದಾಂತ್, ವಿಕ್ರಾಂತ್ ನಡುವೆ ಭಿನ್ನಾಭಿಪ್ರಾಯ ಮೂಡುವ ಹಾಗೆ ಮಾಡಿದ್ದಾಳೆ. ಹೀಗೆ ಟ್ವಿಸ್ಟ್ ಗಳ ಜೊತೆ ಸಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ಮುಂದಿನ ಎಪಿಸೋಡ್ ಗಳಲ್ಲಿ ಕಥೆ ಇನ್ನು ಚೆನ್ನಾಗಿ ಸಾಗುತ್ತದೆ ಎನ್ನಲಾಗಿದೆ. ಮೂರನೆಯ ಸ್ಥಾನವನ್ನು ಹಿಟ್ಲರ್ ಕಲ್ಯಾಣ ಸೀರಿಯಲ್ ಅಲಂಕರಿಸಿದೆ, ಈ ಧಾರಾವಾಹಿ ಆರಂಭವಾದಾಗಿನಿಂದಲೂ ಟಾಪ್ 5 ಸ್ಥಾನವನ್ನು ಉಳಿಸಿಕೊಂಡು ಬಂದಿದೆ..

ಪ್ರಸ್ತುತ ಮನೆಯ ಜವಾಬ್ದಾರಿ ಲೀಲಾಗೆ ಸಿಕ್ಕಿದೆ, ಪವಿತ್ರಾ ಸ್ಥಿತಿ ಹಾಸಿಗೆ ಹಿಡಿಯುವ ಹಾಗೆ ಆಗಿದೆ, ಇದಕ್ಕೆಲ್ಲ ಕಾರಣ ದೇವ್ ಎನ್ನುವ ಸತ್ಯ ಎಜೆಗೆ ಗೊತ್ತಾಗುತ್ತಾ ಎಂದು ಕಾದು ನೋಡಬೇಕಿದೆ. ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಇದೆ. ಆರಂಭದಲ್ಲಿ ಟಾಪ್ 1ಸ್ಥಾನದಲ್ಲಿ ಇರುತ್ತಿದ್ದ ಧಾರಾವಾಹಿ ಈಗ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಜೊತೆ ಜೊತೆಯಲಿ ಧಾರಾವಾಹಿ ಕೂಡ ಕುತೂಹಲಕಾರಿ ಘಟ್ಟದತ್ತ ಸಾಗುತ್ತಿದೆ. ಆರ್ಯವರ್ಧನ್ ನಿಜವಾದ ಹೆಸರು ಸುಭಾಷ್ ಪಾಟೀಲ್ ಎನ್ನುವ ಸತ್ಯ ಗೊತ್ತಾಗಿದೆ. ಹಾಗಾಗಿ ಆರ್ಯನ ಹಿನ್ನಲೆ ಏನು ಎಂದು ತಿಳಿದುಕೊಳ್ಳುವ ಕೆಲಸವನ್ನು ಅನು ಶುರು ಮಾಡಿದ್ದು ಆಗಿದೆ..

ಮತ್ತೊಂದು ಕಡೆ ಜಲಂಧರ್ ಕಥೆ ಮುಗಿಯಿತು ಎಂದು ಆರ್ಯ ಅಂದುಕೊಂಡಿದ್ದರೆ, ಮತ್ತೆ ಅನು ಮುಂದೆ ಪ್ರತ್ಯಕ್ಷನಾಗಿದ್ದಾನೆ ಜಲಂಧರ್. ಹಾಗೆಯೇ ಅನುಗೆ ಸೀಕ್ರೆಟ್ ರೂಮ್ ತೋರಿಸಲು ಆರ್ಯ ಕರೆದುಕೊಂಡು ಹೋಗುತ್ತಿದ್ದಾನೆ. ಇದೆಲ್ಲದರ ಜೊತೆಗೆ ಅನು ಸಿರಿಮನೆಗೆ ರಾಜನಂದಿನಿ ದರ್ಶನವು ಕೂಡ ಆಗಿದೆ. ಈ ರೀತಿ ಜೊತೆಜೊತೆಯಲಿ ಧಾರಾವಾಹಿ ಸಹ ರೋಚಕತೆಯಿಂದ ಸಾಗುತ್ತಿದೆ. ಐದನೇ ಸ್ಥಾನವನ್ನು ಪಾರು ಧಾರಾವಾಹಿ ಅಲಂಕರಿಸಿದೆ. ಪಾರು ಧಾರಾವಾಹಿಯಲ್ಲಿ ಮೂಡಿಬಂದಿರುವ ದೊಡ್ಡ ಟ್ವಿಸ್ಟ್ ಆದಿ ಪಾರು ಮದುವೆ ಆಗಿದೆ. ಈ ಸ್ಟೋರಿ ಲೈನ್ ಇಂದ ಈ ವಾರದ ಟಿ.ಆರ್.ಪಿಯಲ್ಲಿ ಟಾಪ್ 5ನೇ ಸ್ಥಾನ ಪಡೆದುಕೊಂಡಿದೆ ಪಾರು ಧಾರಾವಾಹಿ.

ಕಳೆದ ಎರಡು ಮೂರು ವಾರಗಳಿಂದ ಟಿ.ಆರ್.ಪಿ ರೇಟಿಂಗ್ ನಲ್ಲಿ ಟಾಪ್ 5ರ ಸ್ಥಾನದಲ್ಲಿ ಇರುತ್ತಿದ್ದ ರಾಮಾಚಾರಿ ಧಾರಾವಾಹಿ ಈ ವಾರ ಟಾಪ್ 5 ಲಿಸ್ಟ್ ಇಂದ ಹೊರಬಂದಿದೆ. ರಾಮಾಚಾರಿ ಧಾರಾವಾಹಿ ಇನ್ನುಳಿದ ಧಾರಾವಾಹಿಗಳಿಗೆ ಟಕ್ಕರ್ ಕೊಟ್ಟಿತ್ತು, ಈಗ ಟಾಪ್5 ಲಿಸ್ಟ್ ಇಂದ ಹೊರಬಂದಿದೆ. ಜೊತೆಗೆ ಈ ವಾರದ ಟಾಪ್ 5 ಲಿಸ್ಟ್ ನಲ್ಲಿರುವ ಐದು ಧಾರಾವಾಹಿಗಳು ಜೀಕನ್ನಡ ವಾಹಿನಿಯದ್ದಾಗಿದ್ದು, ಮತ್ತೊಮ್ಮೆ ಮನರಂಜನೆಯಲ್ಲಿ ಟಾಪ್ ಸ್ಥಾನದಲ್ಲಿದೆ ಜೀವಾಹಿನಿ. ಕಲರ್ಸ್ ಕನ್ನಡ ವಾಹಿನಿ ಎಷ್ಟೇ ಪ್ರಯತ್ನ ಪಟ್ಟರು ಟಾಪ್ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ.