ರಾಮಾಚಾರಿ ಧಾರಾವಾಹಿಯ ನಟಿ ನಿಜಕ್ಕೂ ಯಾರು ಗೊತ್ತಾ..

ಕಿರುತೆರೆ ವೀಕ್ಷಕರಿಗೆ ಒಳ್ಳೆಯ ಧಾರಾವಾಹಿ ಮೂಲಕ ಮನರಂಜನೆ ಕೊಡುತ್ತಿದೆ ಕಲರ್ಸ್ ಕನ್ನಡ ವಾಹಿನಿ. ಈ ಚಾನೆಲ್ ನಲ್ಲಿ ಮೂಡಿಬರುವ ಬಹುತೇಕ ಎಲ್ಲಾ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳನ್ನು ಜನರು ತಪ್ಪದೆ ವೀಕ್ಷಣೆ ಮಾಡುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಹೊಸದಾಗಿ ಶುರುವಾಗಿರುವ ಧಾರಾವಾಹಿ ರಾಮಾಚಾರಿ. ಈ ಧಾರಾವಾಹಿ ಶುರುವಾಗಿ ಒಂದು ವಾರವಷ್ಟೇ ಆಗಿದೆ, ಆದರೆ ಈಗಾಗಲೇ ರಾಮಾಚಾರಿ ಧಾರಾವಾಹಿ ಜನರಿಗೆ ತುಂಬಾ ಇಷ್ಟವಾಗಿದೆ. ಹಲವಾರು ಒಳ್ಳೆಯ ಅಂಶಗಳು ಈ ಧಾರಾವಾಹಿಯಲ್ಲಿದೆ. ಮುಖ್ಯವಾಗಿ ರಾಮಾಚಾರಿ ಧಾರಾವಾಹಿಯ ತಾರಾಗಣ ಅದ್ಭುತವಾಗಿದೆ ಎಂದರೆ ತಪ್ಪಾಗುವುದಿಲ್ಲ. ಹಿರಿಯನಟ ಗುರುದತ್, ನಟಿ ಭಾವನಾ, ನಟಿ ಸಿರಿ, ನಟ ಶಂಕರ್ ಅಶ್ವತ್ಥ್, ನಟಿ ಅಂಜಲಿ ಹಾಗೂ ಇನ್ನಷ್ಟು ಹೊಸ ಪ್ರತಿಭೆಗಳು. ರಾಮಾಚಾರಿ ಧಾರಾವಾಹಿಯಲ್ಲಿ ಎಲ್ಲರಿಗು ಇಷ್ಟ ಆಗಿರುವ ಒಂದು ಪಾತ್ರ ರಾಮಾಚಾರಿಯ ಅತ್ತಿಗೆಯ ಪಾತ್ರ. ಈ ಪಾತ್ರದಲ್ಲಿ ನಟಿಸಿರುವ ಕಲಾವಿದೆ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ?

ರಾಮಾಚಾರಿ ಧಾರಾವಾಹಿ ಶುರುವಾಗುವ ಮೊದಲು ಕೆಲವು ವಿವಾದಕ್ಕೆ ಕಾರಣವಾಗಿತ್ತು, ಕನ್ನಡ ಚಿತ್ರರಂಗಕ್ಕೆ ರಾಮಾಚಾರಿ ಅನ್ನುವ ಹೆಸರು ತುಂಬಾ ಸ್ಪೆಶಲ್. ಆ ಹೆಸರನ್ನು ಧಾರಾವಾಹಿಯೊಂದಕ್ಕೆ ಇಟ್ಟಿದ್ದು ಸರಿಯಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಅದೆಲ್ಲ ಏನೇ , ಶುರುವಾದ ಒಂದೇ ವಾರದಲ್ಲಿ ವೀಕ್ಷಕರಿಗೆ ಬಹಳ ಇಷ್ಟವಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ರಾಮಾಚಾರಿ ಸೀರಿಯಲ್. ಧಾರಾವಾಹಿಯಲ್ಲಿನ ಹೊಸತನ, ಅದ್ಧೂರಿ ಮೇಕಿಂಗ್, ಇದೆಲ್ಲವೂ ವೀಕ್ಷಕರನ್ನು ಬಹಳ ಆಕರ್ಷಿಸಿದೆ. ನಾಯಕಿ ಚಾರು ಮನೆಯ ರಿಚ್ನೆಸ್ ಒಂದು ಕಡೆಯಾದರೆ. ರಾಮಾಚಾರಿ ಮನೆಯ ಸಂಪ್ರದಾಯ ಮತ್ತೊಂದು ಕಡೆ.

ನಾಯಕ ರಾಮಾಚಾರಿಯದ್ದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ಇವರದ್ದು ಕೂಡು ಕುಟುಂಬವಾಗಿದೆ. ಮನೆಯಲ್ಲಿ ಎಲ್ಲರೂ ಅನ್ಯೋನ್ಯವಾಗಿ, ಸಂತೋಷದ ಜೀವನ ನಡೆಸುತ್ತಿದ್ದಾರೆ. ಮನೆಯ ಮಗನಾಗಿರುವ ರಾಮಾಚಾರಿ ಯಾವಾಗಲೂ ಪಾಸಿಟಿವ್ ಆಗಿ ಥಿಂಕ್ ಮಾಡುತ್ತಾ, ನಗುನಗುತ್ತಾ ಮನೆಯವರನ್ನು ಸಂತೋಷವಾಗಿ ನೋಡಿಕೊಳ್ಳುತ್ತಾನೆ. ರಾಮಾಚಾರಿಯ ಅಪ್ಪ ಅಮ್ಮ ಎಲ್ಲರೂ ಒಳ್ಳೆಯ ಮನಸ್ಸಿನವರು. ಕೂಡು ಕುಟುಂಬ ಅಂದ್ರೆ ಹೇಗಿರಬೇಕು ಎನ್ನುವುದನ್ನು ಇವರ ಕುಟುಂಬವನ್ನು ನೋಡಿ ಕಲಿಯಬೇಕು ಎನ್ನುವ ಹಾಗಿದೆ. ರಾಮಾಚಾರಿ ಮನೆಯಲ್ಲಿರುವ ಮತ್ತೊಬ್ಬ ಮುಖ್ಯ ವ್ಯಕ್ತಿ, ಆತನ ಅತ್ತಿಗೆ ಅಪರ್ಣಾ ಶಾಸ್ತ್ರಿ. ಈ ಪಾತ್ರವನ್ನು ನೋಡಿದ ತಕ್ಷಣವೇ ಎಷ್ಟು ಸುಂದರವಾದ ಹೆಣ್ಣುಮಗಳು ಎಂದು ಅನ್ನಿಸುತ್ತದೆ.

ಅಪರ್ಣಾ ಶಾಸ್ತ್ರಿ ಪಾತ್ರ ಎಲ್ಲರಿಗೂ ಇಷ್ಟ ಆಗುವಂಥದ್ದು. ಅತ್ತೆ ಮಾವ ಹೇಳಿದ ಹಾಗೆ ಕೇಳಿಕೊಂಡು, ಮನೆಯಲ್ಲಿ ಎಲ್ಲರ ಕ್ಷೇಮ ನೋಡಿಕೊಳ್ಳುತ್ತಾ, ಎಲ್ಲಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರೈಸುತ್ತಾ, ನಾದಿನಿಗೆ ಭರತನಾಟ್ಯ ಕಲಿಸುತ್ತಾ, ರಾಮಾಚಾರಿಗೆ ಎರಡನೇ ತಾಯಿಯ ಹಾಗೆ, ಪ್ರೀತಿ ಮತ್ತು ವಾತ್ಸಲ್ಯ ತೋರಿಸುವ ಅತ್ತಿಗೆಯ ಪಾತ್ರ ಇದು. ಈ ಪಾತ್ರ ಈಗಾಗಲೇ ಜನರಿಗೂ ತುಂಬಾ ಇಷ್ಟವಾಗಿದೆ. ಈ ಪಾತ್ರದಲ್ಲಿ ಅಭಿನಯ ಮಾಡಿರುವ ಕಲಾವಿದೆಯ ಹೆಸರು ಪುನೀತಾ ಗೌಡ. ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಪೂಜೆ ಪುನಸ್ಕಾರಗಳನ್ನು ಮಾಡುವ ಅಪರ್ಣಾ ಶಾಸ್ತ್ರಿ ನಿಜ ಜೀವನದಲ್ಲಿ ಹೇಗಿರುತ್ತಾರೆ ಎನ್ನುವುದನ್ನು ತಿಳಿಸುತ್ತೇವೆ ನೋಡಿ..

ಪುನೀತಾ ಗೌಡ ಅವರು ನಿಜ ಜೀವನದಲ್ಲಿ ತುಂಬಾ ಬೋಲ್ಡ್ ಮತ್ತು ಮಾಡರ್ನ್. ನಿಜ ಜೀವನದಲ್ಲಿ ಅವರು ಸೀರೆ ಧರಿಸುವುದಕ್ಕಿಂತ, ಮಾಡರ್ನ್ ಉಡುಪುಗಳನ್ನು ಧರಿಸುವುದೇ ಹೆಚ್ಚು. ಈಕೆ ನಿಜ ಜೀವನದಲ್ಲಿ ಭರತನಾಟ್ಯ ಡ್ಯಾನ್ಸರ್ ಆಗಿದ್ದು, ಡ್ಯಾನ್ಸ್ ನಲ್ಲೇ ತಮ್ಮ ಒದನ್ನು ಮುಂದುವರೆಸಿದ್ದಾರೆ. ಭರತನಾಟ್ಯ ಡ್ಯಾನ್ಸ್ ನಲ್ಲಿಯೇ ಪದವಿ ಪಡೆದು ಎಕ್ಸ್ಪರ್ಟ್ ಆಗಿದ್ದಾರೆ ಪುನೀತಾ ಗೌಡ. ಈ ನಟಿಗೆ ಭರತನಾಟ್ಯ ಅಂದ್ರೆ ಅಚ್ಚುಮೆಚ್ಚು, ಅದೇ ರೀತಿ ಧಾರಾವಾಹಿಯಲ್ಲೂ ಕೂಡ ಅವರಿಗೆ ಭರತನಾಟ್ಯ ಮಾಡುವ ಮತ್ತು ಹೇಳಿಕೊಡುವ ಪಾತ್ರವೇ ಸಿಕ್ಕಿದೆ. ಪುನೀತಾ ಗೌಡ ಅವರಿಗೆ ಅಪರ್ಣಾ ಶಾಸ್ತ್ರಿ ಪಾತ್ರದ ಜೊತೆ ಇರುವ ಹೋಲಿಕೆ ಇದೊಂದೇ ಎನ್ನಲಾಗಿದೆ..

ನಟಿ ಅಪರ್ಣಾ ಡ್ಯಾನ್ಸ್ ವಿಚಾರದಲ್ಲಿ ಚಿಕ್ಕ ವಯಸ್ಸಿಗೆ ಬಹಳಷ್ಟು ಸಾಧನೆ ಮಾಡಿದ್ದಾರೆ. ಕಲ್ಕತ್ತಾದ ಚಂದಮ ಸರಸ್ವತಿಯನ್ನು ಗೆದ್ದಿದ್ದಾರೆ, ನಾಟ್ಯ ಮಯೂರಿ ಎನ್ನುವ ಬಿರುದ್ಧು ಹಾಗೂ ಇನ್ನಷ್ಟು ಅವಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ. ವಯಸ್ಸಲ್ಲಿ ಇನ್ನು ಚಿಕ್ಕವರಾದ ಪುನೀತಾ ಗೌಡ, ಇಷ್ಟೆಲ್ಲಾ ಸಾಧನೆ ಮಾಡಿ ಕನ್ನಡ ಕಿರುತೆರೆಗೆ ಬಂದಿದ್ದಾರೆ. ಧಾರಾವಾಹಿಯಲ್ಲಿ ಇವರನ್ನು ನೋಡಿದರೆ, ಪ್ರತಿ ಮನೆಯಲ್ಲು ಇಂತಹ ಸೊಸೆಯರು ಇರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಒಂದೇ ವಾರದಲ್ಲಿ ಅಷ್ಟರ ಮಟ್ಟಿಗೆ ವೀಕ್ಷರಿಗೆ ಇಷ್ಟವಾಗಿದ್ದಾರೆ ನಟಿ ಪುನೀತಾ. ಮುಂದಿನ ದಿನಗಳಲ್ಲಿ ಇವರು ಇನ್ನು ಹೆಚ್ಚು ಯಶಸ್ಸು ಗಳಿಸಲಿ ಎಂದು ಹಾರೈಸೋಣ.