ರಾಮಾಚಾರಿ ಧಾರಾವಾಹಿಯ ನಟಿ ಚಾರು ನಿಜಕ್ಕೂ ಯಾರು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿ, ಅಭಿಮಾನಿಗಳ ಮತ್ತು ಕಿರುತೆರೆಯ ವೀಕ್ಷಕರ ಗಮನ ಸೆಳೆಯುತ್ತಿರುವ ಧಾರವಾಹಿ ರಾಮಾಚಾರಿ. ಚಾರು ಮತ್ತು ಚಾರಿಯ ಜಗಳವನ್ನ ಕಿರುತೆರೆ ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಈಗ ಧಾರವಾಹಿ ರೋಚಕವಾಗಿ ಸಾಗುತ್ತಿದೆ, ರಾಮಾಚಾರಿಯಿಂದ ಸರ್ಟಿಫಿಕೇಟ್ ಪಡೆಯುವುದಕ್ಕಾಗಿ, ದೊಡ್ಡ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾಳೆ ಚಾರು. ಅದು ರಾಮಾಚಾರಿಗೆ ತೊಂದರೆ ಕೊಡುತ್ತಿದೆ.

ಚಾರು ಪಾತ್ರ ಧಾರವಾಹಿಯಲ್ಲಿ ಬಹಳ ಆರೋಗೆಂಟ್ ಆದಂತಹ ಪಾತ್ರ. ಅಹಂಕಾರಿ ಆಗಿರುವ ಚಾರು ತಾನೇ ಶ್ರೇಷ್ಠ ಎಂದುಕೊಂಡ ಭ್ರಮೆಯಲ್ಲಿ ಇರುತ್ತಾಳೆ. ಸದಾ ಮಾಡರ್ನ್ ಆಗಿ, ದಬ್ಬಾಳಿಕೆ ನಡೆಸುವ ಪಾತ್ರವಾಗಿದೆ, ಇದಕ್ಕೆ ವಿರುದ್ಧವಾಗಿರುವ ಪಾತ್ರ ರಾಮಾಚಾರಿಯದ್ದು, ಈ ಎರಡು ವಿರುದ್ಧ ಸ್ವಭಾವ ಪಾತ್ರಗಳು ಜೊತೆಯಾದರೆ ಹೇಗೆ ರಿಯಾಕ್ಟ್ ಆಗುತ್ತಾರೆ ಏನೆಲ್ಲಾ ಮಾಡುತ್ತಾರೆ ಎನ್ನುವ ದಿಕ್ಕಿನಲ್ಲಿ ರಾಮಾಚಾರಿ ಧಾರವಾಹಿ ಸಾಗಿದೆ. ರಾಮಾಚಾರಿ ಧಾರವಾಹಿಯ ಚಾರು ಪಾತ್ರಕ್ಕೆ ದೊಡ್ಡ ಫ್ಯಾನ್ ಬೇಸ್ ಇದೆ ಎಂದರೆ ತಪ್ಪಾಗುವುದಿಲ್ಲ.

ಚಾರು ಪಾತ್ರವನ್ನ ಜನರು ಇಷ್ಟಪಟ್ಟಿದ್ದಾರೆ. ಈ ನಟಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಚಾರು ಪಾತ್ರದಲ್ಲಿ ನಟಿಸಿರುವವರು, ಮೌನ ಗುಡ್ಡೆಮನೆ. ಇವರಿಗೆ ರಾಮಾಚಾರಿ ಮೊದಲ ಧಾರವಾಹಿ ಆಗಿದೆ. ಮೌನ ಮೂಲತಃ ಮಂಗಳೂರಿನ ಹುಡುಗಿ. ಈಗ ಡಿಗ್ರಿ ಓದುತ್ತಿದ್ದಾರೆ. ನಟನೆಯ ಲೋಕಕ್ಕೆ ಬರಬೇಕು ಎನ್ನುವ ಕನಸು ಇವರಿಗೆ ಇರಲಿಲ್ಲ. ಪಿಯುಸಿ ಓದುವಾಗ, ಮಂಗಳೂರಿನಲ್ಲೇ ಮಾಡೆಲಿಂಗ್ ಮಾಡುತ್ತಿದ್ದರಂತೆ ಮೌನ. ಡಿಗ್ರಿ ಮೊದಲ ವರ್ಷದಲ್ಲಿದ್ದಾಗ ರಾಮಾಚಾರಿ ಧಾರವಾಹಿಯಲ್ಲಿ ನಟಿಸುವ ಅವಕಾಶ ಮೌನ ಅವರಿಗೆ ಸಿಕ್ಕಿತು.

ರಾಮಾಚಾರಿ ಧಾರವಾಹಿಯಿಂದ ಇವರ ಜೀವನವೇ ಬದಲಾಯಿತು ಎಂದು ಹೇಳುತ್ತಾರೆ ಮೌನ. ಇನ್ನು ಮೌನ ಅವರ ಕುಟುಂಬದಲ್ಲಿ ಇವರ ತಂದೆಗೆ ಮಗಳು ನಟನೆಯ ಲೋಕಕ್ಕೆ ಬರುವುದು ಇಷ್ಟ ಇರಲಿಲ್ಲವಂತೆ, ಆದರೆ ಈಗ ಮಗಳ ಅಭಿನಯವನ್ನು ತಪ್ಪದೇ ನೋಡುತ್ತಾರಂತೆ ಮೌನ ಅವರ ತಂದೆ. ಇನ್ನು ಮೌನ ಅವರ ತಾಯಿ ಚಾರು ಪಾತ್ರ ನೋಡಿ ಮೊದಲಿಗೆ ಭಯ ಪಟ್ಟಿದ್ದರಂತೆ. ಪ್ರಸ್ತುತ ಡಿಗ್ರಿ ಓದುತ್ತಿರುವ ಮೌನ, ಓದು ಮತ್ತು ಧಾರವಾಹಿಯಲ್ಲಿ ನಟನೆ ಎರಡನ್ನು ಸಹ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

ಮೌನ ಗುಡ್ಡೆಮನೆ ಚಿಕ್ಕ ವಯಸ್ಸಿನಲ್ಲಿ ವೈದ್ಯೆ ಆಗಬೇಕು ಎಂದುಕೊಂಡಿದ್ದರಂತೆ. ನಟನೆಯ ಕ್ಷೇತ್ರಕ್ಕೆ ಬರಬೇಕು ಎಂದು ಇವರು ಅಂದುಕೊಂಡಿರಲಿಲ್ಲವಂತೆ. ಬಿಗ್ ಬಾಸ್ ಶೋ ಸ್ಪರ್ಧಿ ವಿಶ್ವನಾಥ್ ಅವರ ಜೊತೆ ಒಂದು ಮ್ಯೂಸಿಕ್ ಆಲ್ಬಂ ವಿಡಿಯೋ ನಲ್ಲಿ ಸಹ ಮೌನ ಕಾಣಿಸಿಕೊಂಡಿದ್ದರು. ನಟನೆಗೆ ಬಂದ ಬಳಿಕ ಇವರ ಲೈಫ್ ಸ್ಟೈಲ್ ಎಲ್ಲವೂ ಬದಲಾಗಿದೆ. ಮೊದಲಿಗೆ ಮಾಡೆಲ್ ಆಗಿದ್ದ ಮೌನ, ಆಗಾಗ ವಿಭಿನ್ನವಾದ ಫೋಟೋಶೂಟ್ ಮಾಡಿಸಿ, ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.