ಮದುವೆಯ ದಿನವೂ ಕೂಡ ಓಡಿ ಹೋಗಿಬಿಡು ಎಂದಿದ್ದ ರಕ್ಷಿತಾ ತಾಯಿ..

ಸ್ಯಾಂಡಲ್ವುಡ್ ನ ಕ್ರೇಜಿ ಜೋಡಿ ಎಂದೇ ಖ್ಯಾತವಾಗಿರುವ ರಕ್ಷಿತಾ ಪ್ರೇಮ್ ಅವರ ಜೀವನ ಶೈಲಿ ನೋಡುಗರಿಗೆ ಆಶ್ಚರ್ಯ ತರಿಸುತ್ತದೆ.. ಹಳ್ಳಿ ಹುಡುಗ ಸಿಟಿ ಹುಡುಗಿ ಪ್ರೀತಿಸಿ ಮದುವೆಯಾದರೂ ಕೂಡ ಸಖತ್ ಎಂಜಾಯ್ ಮಾಡಿಕೊಂಡಿರುವ ಈ ಜೋಡಿ ಯಾರೇ ಇರಲಿ‌.. ಇಲ್ಲದಿರಲಿ ಒಬ್ಬರನೊಬ್ಬರು ಕಾಲೆಳೆಯುತ್ತಾ ಸಖತ್ ಎಂಜಾಯ್ ಮಾಡುತ್ತಾರೆ.. ವೇದಿಕೆಗಳಲ್ಲಿಯೂ ಸ್ನೇಹಿತರು ಇವರ ಬಗ್ಗೆ ತಮಾಷೆ ಮಾಡಿದರೂ ಸಹ ಯಾವುದನ್ನು ಸೀರಿಯಸ್ ಆಗಿ ತೆಗೆದುಕೊಳ್ಳದ ಈ ಜೋಡಿ ಇರೋದೊಂದು ಲೈಫ್ ಯಾರ ಮನಸ್ಸಿಗೂ ನೋವಾಗಬಾರದು ಸದಾ ಹ್ಯಾಪಿ ಆಗಿರಬೇಕು ಎನ್ನುತ್ತಾರೆ..

ಇನ್ನು ರಕ್ಷಿತಾ ಪ್ರೇಮ್ ಅವರ ಮದುವೆ ಸ್ಯಾಂಡಲ್ವುಡ್ ಮಂದಿಗೆ ಮಾತ್ರವಲ್ಲ ಅಭಿಮಾನಿಗಳಿಗೂ ಆಶ್ಚರ್ಯ ಮೂಡಿಸಿತ್ತು.. ಹೌದು ಸಾಮಾನ್ಯವಾಗಿ ಪೀಕ್ ನಲ್ಲಿ ಹೆಸರು ಮಾಡಿದ್ದ ನಟಿಯರು ಅಷ್ಟು ಬೇಗ ಮದುವೆಗೆ ಮನ್ನಣೆ ಕೊಡೋದಿಲ್ಲ‌. ಆದರೆ ರಕ್ಷಿತಾ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾಗಲೇ ಮದುವೆ ಜೀವನಕ್ಕೆ ಕಾಲಿಡುತ್ತಾರೆ..

ಪ್ರೇಮ್ ಪಕ್ಕಾ ಹಳ್ಳಿ ಹುಡುಗ.. ಮಾಡ್ರನ್ ಜೀವನಕ್ಕೂ ಅವರಿಗೂ ಅಜಗಜಾಂತರ.. ಇನ್ನು ರಕ್ಷಿತಾ ಅವರಿಗೆ ಹಳ್ಳಿ ಎಂದರೆ ಸಿನಿಮಾಗಳಲ್ಲಿ ನೋಡಿದ್ದಷ್ಟೇ.. ಆದರೆ ಇವರಿಬ್ಬರು ಒಂದಾಗಿದ್ದು ಮಾತ್ರ ಪ್ರೇಮ್ ಅವರ ನಿಷ್ಕಲ್ಮಶ ಪ್ರೀತಿಯಿಂದ.. ಅದಾಗಲೇ ತನ್ನ ತಂದೆ ತನ್ನ ತಾಯಿಗೆ ನೀಡುತ್ತಿದ್ದ ಚಿತ್ರಹಿಂಸೆಯಿಂದ ಬೇಸತ್ತಿದ್ದ ಪ್ರೇಮ್ ತಾನು‌ ಮದುವೆ ಆಗುವ ಹುಡುಗಿಯನ್ನು ಫ್ರೆಂಡ್ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ತೀರ್ಮಾನಿಸಿದ್ದರು..

ಇತ್ತ ಚಿಕ್ಕ ವಯಸ್ಸಿನಿಂದಲೇ ಅಪ್ಪನ ಪ್ರೀತಿ ಕಾಣದ ರಕ್ಷಿತಾಗೆ ಪ್ರೇಮ್ ಅವರ ಪ್ರೀತಿಯಲ್ಲಿ ತಂದೆಯ ರೀತಿಯ ಕಾಳಜಿ ಕಂಡರು.. ಇಬ್ಬರು ತಮ್ಮ ನಿರ್ಧಾರದಲ್ಲಿ ಬಹಳ ಧೃಡವಾಗಿದ್ದರು.. ಮನೆಯವರನ್ನು ಒಪ್ಪಿಸಿ ಮದುವೆಯಾದರು.. ಆದರೆ ರಕ್ಷಿತಾ ಅವರ ತಾಯಿಗೆ ಮಾತ್ರ ಬಹಳ ಕನ್ಫ್ಯೂಷನ್ ನಲ್ಲಿಯೇ ಇದ್ದರು..

ಮದುವೆಯ ದಿನವೂ ಕೂಡ.. ನೀನು ನಿಜವಾಗಲೂ ಕಾನ್ಫಿಡೆಂಟ್ ಆಗಿದ್ದೀಯಾ? ಚೆನ್ನಾಗಿ ಯೋಚಿಸಿದ್ದೀಯಾ? ಇಷ್ಟ ಆಗಿಲ್ಲ ಅಂದ್ರೆ ಓಡಿ ಹೋಗಿಬಿಡು ಎಂದಿದ್ದರಂತೆ.. ಆದರೆ ಆನಂತರ ಪ್ರೇಮ್ ಅವರು ರಕ್ಷಿತಾ ಅವರನ್ನು ನೋಡಿಕೊಳ್ಳುವ ರೀತಿ ನೋಡಿ ಮಗಳ ನಿರ್ಧಾರ ಸರಿಯಾಗಿದೆ ಎಂದಿದ್ದರಂತೆ.. ಈ ಬಗ್ಗೆ ಅನೇಕ ಬಾರಿ ವೇದಿಕೆಗಳಲ್ಲಿ ಹಂಚಿಕೊಂಡಿರುವ ರಕ್ಷಿತಾ ಅವರು.. ಮದುವೆ ದಿನ ಓಡಿ ಹೋಗು ಅಂದಿದ್ರು.. ಆದರೆ ಈಗ ನನಗಿಂತ ಪ್ರೇಮ್ ಮೇಲೆನೇ ಪ್ರೀತಿ ಜಾಸ್ತಿ.. ಅವನೇ ನನ್ನ್ ಮಗ ಆಗಬೇಕಿತ್ತು ಎನ್ನುತ್ತಾರೆ ಎಂದು ಹೇಳಿಕೊಂಡಿದ್ದಾರೆ..