ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಶೈನ್ ಶೆಟ್ಟಿ ಕೊಟ್ಟ ವಿಶೇಷ ಉಡುಗೊರೆ ನೋಡಿ..

ನಿನ್ನೆಯಷ್ಟೇ ಸ್ಯಾಂಡಲ್ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬ ಆಚರಣೆಯಾಗಿದ್ದು, ಆಪ್ತರು ಸ್ನೇಹಿತರು ಸಿನಿಮಾ ರಂಗದವರು ಶುಭಾಶಯ ತಿಳಿಸಿದ್ದಾರೆ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಹ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತ್ ಶೆಟ್ಟಿ ಅವರ ಫೋಟೋ ಪೋಸ್ಟ್ ಮಾಡುವುದರ ಜೊತೆಗೆ ಶುಭಾಶಯ ತಿಳಿಸಿದ್ದಾರೆ..

ಇನ್ನು ಕೆಲ ಸ್ನೇಹಿತರು ರಕ್ಷಿತ್ ಅವರ ಮನೆಗೆ ಹೋಗಿ ವಿಶ್ ಮಾಡಿ ಬಂದಿದ್ದಾರೆ.. ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ಅವರೂ ಸಹ ರಕ್ಷಿತ್ ಶೆಟ್ಟಿ ಅವರ ಮನೆಗೆ ತೆರಳಿ ಶುಭಾಶಯ ತಿಳಿಸಿದ್ದು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ..

ಹೌದು ಶೈನ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರೂ ಸಹ ಉಡುಪಿ ಭಾಗದವರಾಗಿದ್ದು, ಅಲ್ಲಿನ ವಿಶೇಷ ಹುಲಿ ಕುಣಿತ ಎಲ್ಲರಿಗೂ ತಿಳಿದೇ ಇದೆ.. ರಕ್ಷಿತ್ ಶೆಟ್ಟಿ ಅವರು ತಮ್ಮ ಉಳಿದವರು ಕಂಡಂತೆ ಸಿನಿಮಾದಲ್ಲಿಯೂ ಹುಲಿ ಡ್ಯಾನ್ಸ್ ಅನ್ನು ಸಂಯೋಜಿಸಿದ್ಸು ಸಖತ್ ಟ್ರೆಂಡ್ ಆಗಿತ್ತು.. ರಕ್ಷಿತ್ ಶೆಟ್ಟಿ ಅವರು ಯಾವುದೆ ಕಾರ್ಯಕ್ರಮಕ್ಕೆ ಹೋದರೂ ಹುಲಿ ಡ್ಯಾನ್ಸ್ ಇದ್ದೇ ಇರುತ್ತಿತ್ತು.. ಅದೇ ರೀತಿ ಶೈನ್ ಶೆಟ್ಟಿ ಅವರು ಕೊಟ್ಟ ಉಡುಗೊರೆಯಲ್ಲೂ ವಿಶೇಷವಿದೆ..

ಹೌದು ಹುಲಿ ಡ್ಯಾನ್ಸ್ ಮಾಡುವಾಗ ನೃತ್ಯಗಾರರು ಮೈಗೆ ಹಾಕಿಕೊಳ್ಳುವ ಪೇಂಯ್ಟಿಂಗ್ ರೀತಿಯ ಕೇಕ್ ಅನ್ನು ವಿಶೇಷವಾಗಿ ಮಾಡಿಸಿಕೊಂಡು ಹುಟ್ಟು ಹಬ್ಬದ ಶುಭಾಶಯಗಳು ರಕ್ಷಿತ್ ಅಣ್ಣ ಎಂದು ಬರೆದು ರಕ್ಷಿತ್ ಶೆಟ್ಟಿ ಅವರಿಗೆ ನೀಡಿದ್ದಾರೆ.., ಈ ಬಗ್ಗೆ ಶೈನ್ ಶೆಟ್ಟಿ ತಮ್ಮ ಫೇಸ್ಬುಕ್ ನಲ್ಲಿ ಫೋಟೋ ಹಂಚಿಕೊಂಡು ರಕ್ಷಿತ್ ಶೆಟ್ರಿಗೆ ಶುಭಾಶಯ ತಿಳಿಸಿದ್ದಾರೆ..