ನಾಯಂಡಳ್ಳಿಯಲ್ಲಿ ಸ್ಯಾಂಡಲ್ವುಡ್ ಸ್ಟಾರ್ ನಟನ ಕಾರ್ ಮುಳುಗಡೆ..

ಪ್ರಸ್ತುತ ನಮ್ಮ ಕರ್ನಾಟಕ ರಾಜ್ಯ ಮಳೆಯಿಂದ ತತ್ತರಿಸಿ ಹೋಗಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ತೀವ್ರವಾದ ಮಳೆಯಿಂದ, ಜನಜೀವನ ಅಸ್ತವ್ಯಸ್ತವಾಗಿದೆ. ಮುಂಗಾರು ಮಳೆ ಶುರುವಾಗುವ ಮೊದಲೇ, ಈ ರೀತಿ ಮಳೆ ಬರಲು ಶುರುವಾಗಿದೆ. ಹಲವು ಕಡೆ ಮಳೆ ನೀರು ರಸ್ತೆಗಳಲ್ಲಿ ತುಂಬಿ, ಮನೆಗೂ ನುಗ್ಗಿ ಸಾರ್ವಜನಿಕರಿಗೆ ಭಾರಿ ತೊಂದರೆ ಹಾಗೂ ನಷ್ಟ ಉಂಟಾಗಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಮಳೆಯಿಂದಾಗಿ ಹಲವು ರಸ್ತೆಗಳು ಬಂದ್ ಆಗಿವೆ. ಇದರಿಂದಾಗಿ ಜನರು ಮತ್ತು ವಾಹನಗಳು ಎರಡು ಸಂಚರಿಸುವುದು ಬಹಳ ಕಷ್ಟ ಎನ್ನುವ ಪರಿಸ್ಥಿತಿ ಎದುರಾಗಿದೆ. ಮಳೆಯಿಂದಾಗಿ ಉಂಟಾಗಿರುವ ಈ ವಾತಾವರಣದಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಟನ ಕಾರು ರಸ್ತೆಯಲ್ಲಿ ಸಿಲುಕಿಕೊಂಡಿರುವ ವಿಚಾರ ಈಗ ಬೆಳಕಿಗೆ ಬಂದಿದೆ..

ಮೇ 17ರಂದು ನಿನ್ನೆ, ಬೆಂಗಳೂರಿನ ಬಸವನಗುಡಿ, ಯಲಹಂಕ, ಬೊಮ್ಮನಹಳ್ಳಿ ಲೇಔಟ್, ಕೋರಮಂಗಲ, ಮೈಸೂರು ರಸ್ತೆ ಸೇರಿದಂತೆ ಹಲವು ಏರಿಯಗಳು ಜಲಾವೃತವಾಗಿದ್ದು, ಜನರ ಸಂಚಾರಕ್ಕೆ ಬಹಳ ಕಷ್ಟವಾಗಿತ್ತು. ಈ ಏರಿಯಗಳು ಮಾತ್ರವಲ್ಲದೆ, ಬೆಂಗಳೂರಿನ ಇನ್ನು ಕೆಲವು ಏರಿಯಾಗಳು ಸಹ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಗುಡುಗು, ಸಿಡಿಲು, ಮಿಂಚು ಮಳೆ ಎಲ್ಲದರ ಹಾವಳಿಯಿಂದ ಬೆಂಗಳೂರು ನಗರದ ಹಲವು ಭಾಗಗಳು ಸ್ವಿಮಿಂಗ್ ಪೂಲ್ ಅಂತೆ ಆಗಿರುವುದನ್ನು ಮಾಧ್ಯಮಗಳಲ್ಲಿ ನೀವು ನೋಡಿರಬಹುದು. ರಸ್ತೆ ಕಾಮಗಾರಿಗಳು ಸರಿಯಾಗಿ ನಡೆಯದೆ ಇರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ, ಮಳೆಯ ಪ್ರಮಾಣ ಸಹ ಅಧಿಕವಾಗಿ ಇರುವುದರಿಂದ ಈ ಪರಿಣಾಮ ಎದುರಾಗಿದೆ.

ರಸ್ತೆಗಳು ಸ್ವಿಮಿಂಗ್ ಪೂಲ್ ಆಗಿ, ಒಬ್ಬ ಮನುಷ್ಯ ಓಡಾಡಲು ಆತನ ಹೊಟ್ಟೆಯ ಭಾಗದ ವರೆಗೂ ನೀರು ತುಂಬಿಕೊಂಡು, ಓಡಾಡಲು ಸಹ ಹಲವರು ಕಷ್ಟಪಡುತ್ತಿದ್ದಾರೆ. ನಿನ್ನೆ ಜೋರಾಗಿ ಬಂದ ಇದೇ ಮಳೆಯಿಂದ, ಮೈಸೂರು ರಸ್ತೆಯ ಸಮೀಪ ಇರುವ ನಾಯಂಡಹಳ್ಳಿಗೆ ನೀರು ನುಗ್ಗಿ ಅಲ್ಲಿನ ರಸ್ತೆಗಳು ಸಹ ಸ್ವಿಮಿಂಗ್ ಪೂಲ್ ಆಗಿದ್ದವು. ಕೆಲಸ ಮುಗಿಸಿ, ಮನೆಗೆ ತೆರಳುತ್ತಿದ್ದ ಜನರಿಗೆ ನಡೆದು ಹೋಗಲು ಅಥವಾ ವಾಹನಗಳಲ್ಲಾದರು ಸಹ ಓಡಾಡಲು ಬಹಳ ಕಷ್ಟವಾಗಿತ್ತು. ನಿನ್ನೆಯ ಪರಿಸ್ಥಿತಿ ಹೇಗಿತ್ತು, ಜನರಿಗೆ ಹೇಗೆಲ್ಲಾ ಕಷ್ಟ ಆಯಿತು ಎನ್ನುವುದನ್ನು ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ತೋರಿಸಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು.

ಸಾರ್ವಜನಿಕರೊಬ್ಬರು, ಮಳೆಯಿಂದಾಗಿ ರಸ್ತೆಯಲ್ಲಿ ಓಡಾಡಲು ಆಗುತ್ತಿರುವ ಕಷ್ಟವನ್ನು ವಿಡಿಯೋ ಚಿತ್ರೀಕರಿಸಿ, ರಸ್ತೆಗಳು ಸ್ವಿಮಿಂಗ್ ಪೂಲ್ ಆಗಿವೆ ಎಂದು ಕೋಪದಿಂದ ಮಾತನಾಡಿದರು, ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲ ಎಂದು ಅಲ್ಲೇ ಸ್ವಿಮಿಂಗ್ ಮಾಡಿ ತೋರಿಸಿದ್ದರು, ಅಷ್ಟೇ ಅಲ್ಲದೆ ಇದಕ್ಕೆಲ್ಲ ಕಾರಣ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಎಂದು ಅವರ ಮೇಲೆ ಆರೋಪಿಸಿ ಅಸಮಾಧಾನ ವ್ಯಕ್ತ ಪಡಿಸಿದ್ದೂ ಉಂಟು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಅದೇ ವಿಡಿಯೋದಲ್ಲಿ, ಮಳೆ ನೀರಿನಿಂದಾಗಿ ರಸ್ತೆಯಲ್ಲಿ ಚಲಿಸಲಾಗದೆ ಸಿಕ್ಕಿಹಾಕಿಕೊಂಡಿದ್ದ ಕಾರ್ ಒಂದನ್ನು ತೋರಿಸಿದ್ದು ಅದು ಕನ್ನಡದ ನಟನ ಕಾರ್ ಆಗಿದೆ‌‌..

ಹೌದು ಕನ್ನಡದ ನಟ ರಕ್ಷಿತ್ ಶೆಟ್ಟಿ ಅವರ ಕಾರ್ ಸಹ ಮುಂದಕ್ಕೆ ಚಲಿಸಲಾಗದೆ, ನೀರಿನಲ್ಲಿ ಮುಳಗಡೆಯಾಗಿ ರೋಡಿನಲ್ಲಿ ನಿಂತಿದೆ, ಇದು ಅವರದ್ದೇ ಕಾರ್ ಎಂದು ವಿಡಿಯೋದಲ್ಲಿ ತೋರಿಸಲಾಗಿತ್ತು. ರಕ್ಷಿತ್ ಶೆಟ್ಟಿ ಅವರು ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಹೊಸದಾದ ಐಷಾರಾಮಿ ಆಡಿ ಕಾರ್ ಖರೀದಿ ಮಾಡಿದ್ದರು. ರಸ್ತೆಯಲ್ಲಿ ನಿಂತಿದ್ದು ಅದೇ ಕಾರ್ ಎಂದು ಹೇಳಲಾಗುತ್ತಿದೆ. ರಸ್ತೆಯಲ್ಲಿ ನಿಂತಿದ್ದ ಕಾರ್ ರಕ್ಷಿತ್ ಶೆಟ್ಟಿ ಅವರ ಹೊಸ ಕಾರ್ ಆಗಿದ್ದು.. ಆದರೆ ರಕ್ಷಿತ್ ಶೆಟ್ಟಿ ಅವರಾಗಲಿ ಅಥವಾ ಅವರ ತಂಡವಾಗಲಿ ಈ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನು ರಕ್ಷಿತ್ ಶೆಟ್ಟಿ ಅವರ ಕೆರಿಯರ್ ವಿಚಾರಕ್ಕೆ ಬರುವುದಾದರೆ, ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಚಾರ್ಲಿ ಜೂನ್ 10ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಮೊನ್ನೆಯಷ್ಟೇ ಟ್ರೈಲರ್ ಬಿಡುಗಡೆಯಾಗಿ, ಜನರ ಮೆಚ್ಚುಗೆ ಪಡೆದಿದೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ 777 ಚಾರ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ, ಧರ್ಮ ಮತ್ತು ಚಾರ್ಲಿ ಕಥೆ ಹೇಗಿರಬಹುದು ಎನ್ನುವ ಝಲಕ್ ನೋಡಿ, ವೀಕ್ಷಕರು ಭಾವುಕರಾಗಿದ್ದಾರೆ. ಈ ಸಿನಿಮಾ ರಕ್ಷಿತ್ ಶೆಟ್ಟಿ ಅವರಿಗೆ ದೊಡ್ಡ ಸಕ್ಸಸ್ ತಂದುಕೊಡುವುದು ಪಕ್ಕಾ ಎನ್ನುತ್ತಿದೆ ಮೂಲಗಳು.