ಮತ್ತೆ ಒಂದಾಗುತ್ತಿದ್ದಾರೆ ರಕ್ಷಿತ್ ರಶ್ಮಿಕಾ.. ಸದ್ಯದಲ್ಲಿಯೇ ಸಿಹಿಸುದ್ದಿ..

ರಕ್ಷಿತ್ ಹಾಗೂ ರಶ್ಮಿಕಾ ಮಂದಣ್ಣ ಸ್ಯಾಂಡಲ್ವುಡ್ ನ ಅತ್ಯುತ್ತಮ ಜೋಡಿಗಳಲ್ಲಿ ಒಂದೆಂದರೂ ತಪ್ಪಿಲ್ಲ.. ಇಬ್ಬರು ಒಟ್ಟಿಗೆ ಕಾಣಿಸಿಕೊಂಡದ್ದು ಒಂದೇ ಸಿನಿಮಾವಾದರೂ ಆ ಒಂದೇ ಸಿನಿಮಾದಲ್ಲಿ ಈ ಜೋಡಿ ಮೋಡಿ ಮಾಡಿಬಿಟ್ಟರು.. ರಾತ್ರೋ ರಾತ್ರಿ ರಶ್ಮಿಕಾ ಸ್ಟೇಟ್ ಕ್ರಶ್ ಎನಿಸಿಕೊಂಡರು.. ನಂತರದ ದಿನಗಳಲ್ಲಿ ರಶ್ಮಿಕಾ ಹಾಗೂ ರಕ್ಷಿತ್ ಅವರ ಲವ್ ವಿಚಾರ ಬಹಿರಂಗವಾಯಿತು..

ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವುದಾಗಿ ಬಹಿರಂಗವಾಗಿ ಹೇಳಿಕೊಂಡರು.. ಎರಡೂ ಮನೆಯವರು ಈ ಜೋಡಿಯ ಪ್ರೀತಿಗೆ ಒಪ್ಪಿಗೆ ಕೊಟ್ಟು ಅದ್ಧೂರಿಯಾಗಿ ನಿಶ್ಚಿತಾರ್ಥವನ್ನೂ ನೆರವೇರಿಸಿದರು.. ಸಾಕಷ್ಟು ಮಾದ್ಯಮದ ಸಂದರ್ಶನದಲ್ಲಿ ಒಟ್ಟಾಗಿ ಕಾಣಿಸಿಕೊಂಡರು..

ಆದರೆ ಆ ಬಳಿಕ ಇಬ್ಬರ ನಡುವಿನ ಮನಸ್ತಾಪ.. ಎರಡೂ ಕುಟುಂಬಗಳ ನಡುವೆ ಹೊಂದಾಣಿಕೆ ಸರಿ ಬಾರದ ಕಾರಣ ಈ ಜೋಡಿಯ ನಿಶ್ಚಿತಾರ್ಥ ಮುರಿದುಬಿದ್ದಿತ್ತು.. ರಶ್ಮಿಕಾ ಅವರ ಅಮ್ಮ ಈ ಬಗ್ಗೆ ಮಾದ್ಯಮದ ಬಳಿ ಈ ಸಂಬಂಧ ಕ್ಯಾನ್ಸಲ್ ಮಾಡಿರುವುದಾಗಿಯೂ ತಿಳಿಸಿದ್ದರು.. ಆನಂತರ ನಿಶ್ಚಿತಾರ್ಥದ ದಿನ ತೊಡಿಸಿದ್ದ ಉಂಗುರಗಳನ್ನು ಇಬ್ಬರೂ ವಾಪಸ್ ನೀಡಿದ್ದಾರೆ ಎಂಬ ಮಾಹಿತಿಯೂ ಬಂತು.. ಆದರೆ ರಕ್ಷಿತ್ ಮಾತ್ರ ಕೆಲ ದಿನಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.. ತನ್ನ ಪ್ರೀತಿ ಮತ್ತೆ ಸಿಗಲಿದೆ ಎಂದು ಭಾವಿಸಿ.. ಮಾದ್ಯಮವೊಂದಕ್ಕೆ ಮಾತ್ರ ಈ ಬಗ್ಗೆ ಒಮ್ಮೆ ಫೋನ್ ನಲ್ಲಿ ಮಾತನಾಡಿ ನಿಶ್ಚಿತಾರ್ಥ ಮುರಿಯಿತು ಅಂತ ರಶ್ಮಿಕಾ ಏನಾದರು ಹೇಳಿದ್ರಾ? ಇಲ್ಲವಲ್ಲ.. ಎಂದಿದ್ದರು..

ಆದರೆ ಆ ಬಳಿಕ ಇಬ್ಬರು ದೂರಾದರು.. ಇತ್ತ ಆ ನೋವಿನಿಂದ ಹೊರ ಬರಲು ರಕ್ಷಿತ್ ಅವರಿಗೆ ಎರಡು ವರ್ಷಗಳು ಬೇಕಾಯಿತು.. ಆನಂತರ ಶ್ರೀಮನ್ನಾರಾಯಣ ಸಿನಿಮಾ ತಯಾರಾಯಿತು.. ಅತ್ತ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬಾಕ್ ತೆಲುಗು ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಆದರು..

ಆದರೀಗ ಮತ್ತೊಮ್ಮೆ ಕನ್ನಡದ ಈ ಕಿರಿಕ್ ಪಾರ್ಟಿ ಜೋಡಿ ಒಂದಾಗುತ್ತಿದೆ.. ಆದರೆ ನಿಜ ಜೀವನದಲ್ಲಿ ಬಾಳ ಸಂಗಾತಿಯಾಗಲ್ಲ. ಬದಲಾಗಿ ತೆರೆಯ ಮೇಲೆ ಮತ್ತೊಮ್ಮೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.‌ ಹೌದು ಕನ್ನಡದಲ್ಲಿನ ಕಿರಿಕ್ ಪಾರ್ಟಿ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದಿತ್ತು.. ಯುವ ಜನತೆಯ ನೆಚ್ಚಿನ ಸಿನಿಮಾವಾಗಿ ಹೊರಹೊಮ್ಮಿತು.. ಇದೀಗ ಅದೇ ಸಿನಿಮಾದ ಎರಡನೇ ಭಾಗ ಕಿರಿಕ್ ಪಾರ್ಟಿ 2 ಸಿನಿಮಾ ಮಾಡಲು ಸಂಪೂರ್ಣ ತಂಡ ತಯಾರಾಗುತ್ತಿದೆ..

ಇದೀಗ ನಿರ್ಮಾಪಕರು ರಶ್ಮಿಕಾ ಮಂದಣ್ಣ ಅವರೇ ಹೀರೋಯಿನ್ ಆಗಲಿ ಎಂದಿದ್ದಾರಂತೆ.. ಅತ್ತ ಕಿರಿಕ್ ಪಾರ್ಟಿ 2 ಸಿನಿಮಾದಲ್ಲಿ ಅಭಿನಯಿಸಲು ಯಾವುದೇ ಅಭ್ಯಂತರವಿಲ್ಲ ಎನ್ನುವ ಮಾತು ರಶ್ಮಿಕಾ ಕಡೆಯಿಂದಲೂ ಕೇಳಿ ಬಂದಿದೆ ಎನ್ನುತ್ತಿವೆ ಸುದ್ದಿ ಮೂಲಗಳು.. ಎಲ್ಲವೂ ಅಂದುಕೊಂಡಂತೆ ಆದರೆ ಕಿರಿಕ್ ಪಾರ್ಟಿ 2 ಸಿನಿಮಾದಲ್ಲಿ‌ ಮತ್ತೊಮ್ಮೆ ಈ ಜೋಡಿಯನ್ನು ತೆರೆಯ ಮೇಲೆ ನೋಡಬಹುದಾಗಿದೆ.. ಪ್ರೊಫೆಷನ್ ಅನ್ನು ಬರಿ ಪ್ರೊಫೆಷನ್ ರೀತಿಯೇ ನೋಡಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರಾ.. ಅಥವಾ ಅದು ಸಾಧ್ಯವಾಗದ ಮಾತು ಎಂದು ರಕ್ಷಿತ್ ಈ ನಿರ್ಧಾರದಿಂದ ಹೊರ ಬರುತ್ತಾರಾ ಕಾದು ನೋಡ ಬೇಕಿದೆ..‌